ಇಲ್ಲೊಬ್ಬಳು ಡಯಾನಾ !
Team Udayavani, Nov 10, 2017, 6:35 AM IST
ಬಿಡುಗಡೆಯಾಗಿರುವುದು ಮೂರು ಚಿತ್ರ. ಇದರಲ್ಲಿ ಎರಡು ಹಿಟ್ ಮತ್ತು ಒಂದು ಫೇಲ್. ಎರಡು ಚಿತ್ರಗಳು ಕೈಯಲ್ಲಿವೆ. ಮೂರು ಸ್ಕ್ರಿಪ್ಟ್ಗಳು ಪರಿಶೀಲನೆಯಲ್ಲಿವೆ. ಇದು ಡಯಾನಾ ಪೆಂಟಿಯ ಬಾಲಿವುಡ್ ವೃತ್ತಿಯ ಕಿರು ಪರಿಚಯ. ಕಾಕ್‌ಟೈಲ್ ಚಿತ್ರ ಮೂಲಕ ಮಾಡೆಲ್ ಲೋಕದಿಂದ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಡಯಾನಾಳಿಗೆ ಇನ್ನೂ ಅತಂತ್ರ ಸ್ಥಿತಿಯಲ್ಲೇ ಇದ್ದಾಳೆ. ಕಾಕ್‌ಟೈಲ್ ಹಿಟ್ ಆದರೂ ಅದರ ಪೂರ್ತಿ ಯಶಸ್ಸು ಅವಳಿಗೆ ಸಿಗಲಿಲ್ಲ. ಅರ್ಧ ಯಶಸ್ಸನ್ನು ಸೈಫ್ ಅಲಿಖಾನ್ ಮತ್ತು ದೀಪಿಕಾ ಪಡುಕೋಣೆ ಬಾಚಿಕೊಂಡರು. ಅನಂತರ ಬಂದ ಹ್ಯಾಪಿ ಬಾಗ್ ಜಾಯೇಗಿ ಆ ಮಟ್ಟದಲ್ಲಿ ಹಿಟ್ ಆಗುತ್ತದೆ ಎಂದು ಉಳಿದವರು ಬಿಡಿ ಸ್ವತಹ ಚಿತ್ರತಂಡದವರೇ ನಿರೀಕ್ಷಿಸಿರಲಿಲ್ಲ.
ಕಾಕ್‌ಟೈಲ್‌ಗಳಿಗಿಂತಲೂ ಹ್ಯಾಪಿ ಬಾಗ್ ಜಾಯೇಗಿ ಚಿತ್ರವೇ ಡಯಾನಾಳ ವೃತ್ತಿ ಮುಖ್ಯವಾಗಿರುವುದಕ್ಕೆ ಒಂದು ಕಾರಣ. ಅಭಯ್ ದೇವಲ್, ಜಿಮ್ಮಿ ಶೇರ್‌ಗಿಲ್, ಅಲಿ ಫಜಲ್ ಅವರಂತಹ ಅನಾಮಿಕ ಹೀರೊಗಳಿದ್ದ ಚಿತ್ರದ ಹೀರೊಯಿನ್ ಆಗಿ ಡಯಾನಾ ಈ ಚಿತ್ರದಲ್ಲಿ ಸಖತ್ ಮಿಂಚಿದಳು.
ಅವಳ ಅಭಿನಯ ಪ್ರೇಕ್ಷಕರ ಮಾತ್ರವಲ್ಲದೆ ವಿಮರ್ಶಕರ ಮೆಚ್ಚುಗೆಯನ್ನೂ ಗಳಿಸಿತು. ಇದರ ಯಶಸ್ಸಿನಿಂದ ಪ್ರೇರಿತರಾಗಿರುವ ಚಿತ್ರತಂಡದವರು ಇದೀಗ ಎರಡನೇ ಭಾಗವನ್ನು ತಯಾರಿಸಲು ಮುಂದಾಗಿದ್ದು, ಇದಕ್ಕೂ ಡಯಾನಾ ಆಯ್ಕೆಯಾಗಿದ್ದಾಳೆ. ಆದರೆ ಜತೆಗೆ ಸೋನಾಕ್ಷಿ ಸಿನ್ಹಾ ಕೂಡ ಇದ್ದಾಳೆ ಎನ್ನುವುದು ಡಯಾನಾಳಿಗೆ ತುಸು ಬೇಸರವುಂಟು ಮಾಡಿರುವ ಸಂಗತಿ. ಇದರ ಜತೆಗೆ ಜಾನ್ ಅಬ್ರಹಾಂ ಹೀರೊ ಆಗಿರುವ ಪರಮಾಣು-ದ ಸ್ಟೋರಿ ಆಫ್ ಪೋಖಾÅನ್ ಚಿತ್ರದಲ್ಲೂ ಡಯಾನಾ ನಾಯಕಿಯಾಗಿ ನಟಿಸಿದ್ದಾಳೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಮಿಲಿಟರಿ ದಿರಿಸಿನಲ್ಲಿರುವ ಡಯಾನಾಳ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ವೈರಲ್ ಆಗಿತ್ತು. ಅಭಿಮಾನಿಗಳಿಗಾಗಿ ಮತ್ತಷ್ಟು ಚಿತ್ರಗಳನ್ನು ಅಪ್‌ಲೋಡ್ ಮಾಡಿ ಈಗಾಗಲೇ ಚಿತ್ರದ ಕುರಿತು ಕುತೂಹಲ ಹುಟ್ಟುವಂತೆ ಮಾಡಿದ್ದಾಳೆ.
ಅಣುಬಾಂಬ್ ಪರೀಕ್ಷೆ ಹಿನ್ನೆಲೆಯ ಕತೆ ಹೊಂದಿರುವ ಪರಮಾಣು ಬಾಲಿವುಡ್‌ನಲ್ಲೂ ಭಾರೀ ನಿರೀಕ್ಷೆ ಹುಟ್ಟಿಸಿದೆ. ಈ ಎರಡು ಚಿತ್ರಗಳು ಹಿಟ್ ಆದರೆ ಕೈತುಂಬ ಅವಕಾಶಗಳು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾಳೆ ಡಯಾನಾ. ಹಾಗೆಂದು ಸೋಲು ಅವಳನ್ನು ಕಂಗೆಡಿಸುವುದಿಲ್ಲ. ಸೋಲೇ ಗೆಲುವಿನ ಸೋಪಾನ ಎಂಬ ಮಾತಿನಲ್ಲಿ ಅವಳಿಗೆ ಪೂರ್ತಿ ನಂಬಿಕೆಯಿದೆಯೆಂತೆ. ಸೋಲು ಇನ್ನಷ್ಟು ಕಠಿಣವಾಗಿ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ ಎನ್ನುವುದು ಅವಳ ಫಿಲಾಸಫಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Belthangady: ಕೃಷಿ, ಕರಕುಶಲ ಕಲೆಗಳ ವೈಭವ
Channapatna: ಸ್ಮಶಾನಕ್ಕೆ ಜಾಗ ಬೇಕೆಂದು ತಾಲೂಕು ಕಚೇರಿಯೆದುರು ಶವವಿಟ್ಟು ಪ್ರತಿಭಟನೆ
Madanthyar: ಬಾಲಕಿಯರ ಹಾಸ್ಟೆಲ್ ಕಟ್ಟಡ ಅನಾಥ!
Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?
Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.