ಹಿರಿಯರು, ಜಾಕಲೀನ್ ಫೆರ್ನಾಂಡೀಸರು, ಗ್ಲಾಮರು, ಪಿಕ್ಚರು …
Team Udayavani, Sep 1, 2017, 6:35 AM IST
ಬೇರೆ ಯಾವುದೇ ವೃತ್ತಿಯಲ್ಲಾದರೆ ಎಂಟು ವರ್ಷ ಎನ್ನುವುದು ದೊಡ್ಡ ಸಂಖ್ಯೆಯೇನೂ ಅಲ್ಲ. ಆದರೆ, ಸಿನೆಮಾ ಕ್ಷೇತ್ರದಲ್ಲಿ ಮಾತ್ರ ಪ್ರತಿ ವರ್ಷವೂ ಲೆಕ್ಕಕ್ಕೆ ಸಿಗುತ್ತದೆ. ಅದರಲ್ಲೂ ನಟಿಯಾಗಿದ್ದರೆ ವರ್ಷಗಳು ಬಹಳ ಬೇಗ ಮುಂದೆ ಹೋಗುತ್ತಿರುತ್ತದೆ. ಎಂಟು ವರ್ಷ ಎಂದರೆ ನಟಿ ಹಿರಿಯ ನಟಿಯಾಗಿ ಭಡ್ತಿ ಪಡೆದಿರುತ್ತಾಳೆ. ಈ ಹಿರಿತನದಿಂದ ಕೆಲವರಿಗೆ ಮಾತ್ರ ಅನುಕೂಲವಾಗುತ್ತದೆ. ಅವರು ಕಿರಿಯರ ಸ್ಪರ್ಧೆಯ ನಡುವೆಯೂ ಮಿಂಚುತ್ತಿರುತ್ತಾರೆ. ಆದರೆ, ಉಳಿದವರಿಗೆ ಹಿರಿತನವೇ ಶಾಪವಾಗುತ್ತದೆ. ಹಿರಿಯರಾದ ಕಾರಣಕ್ಕೆ ಅವರು ಬದಿಗೆ ಸರಿದಿರುತ್ತಾರೆ.
ಈ ಪೈಕಿ ಮೊದಲನೇ ಸಾಲಿನಲ್ಲಿ ಬರುವವಳು ಜಾಕಲಿನ್ ಫೆರ್ನಾಂಡಿಸ್. ಬಾಲಿವುಡ್‌ಗೆ ಬಂದು ಆಗಲೇ ಎಂಟು ವರ್ಷ ಆಯಿತು ಎನ್ನುವುದನ್ನು ಉಳಿದವರಿಗೆ ಬಿಡಿ ಜಾಕಲಿನ್‌ಗೆ ನಂಬಲು ಸಾಧ್ಯವಾಗುವುದಿಲ್ಲವಂತೆ. ಎಲ್ಲೋ ನಿನ್ನೆ ಮೊನ್ನೆ ಬಂದ ಹಾಗಿದೆ ಎನ್ನುತ್ತಿದ್ದಾಳೆ ಜಾಕಲಿನ್ ಗತಕಾಲವನ್ನು ಮೆಲುಕು ಹಾಕುವಾಗ. ಈ ಎಂಟು ವರ್ಷಗಳಲ್ಲಿ ಸಲ್ಮಾನ್, ಅಕ್ಷಯ್ ಕುಮಾರ್ ಸೇರಿದಂತೆ ಸೂಪರ್‌ಸ್ಟಾರ್‌ಗಳ ಜತೆಗೆ ಹಾಗೂ ರಿತೇಶ್ ದೇಶ್‌ಮುಖ್, ಸಿದ್ಧಾರ್ಥ ಮಲ್ಹೋತ್ರ ಅವರಂತಹ ಕಿರಿಯರಿಗೆ ನಾಯಕಿಯಾಗಿ ನಟಿಸಿದ್ದಾಳೆ. ಬರೀ ಗ್ಲಾಮರ್ ಪಾತ್ರಗಳನ್ನು ಮಾಡುತ್ತಾಳೆ ಎನ್ನುವುದು ಜಾಕಲಿನ್ ಕುರಿತಾಗಿರುವ ದೂರು. ಇದು ನಿಜವೂ ಹೌದು. ಎಂಟು ವರ್ಷಗಳಲ್ಲಿ ಸುಮಾರು 15 ಚಿತ್ರಗಳಲ್ಲಿ ನಟಿಸಿದ್ದರೂ ಎಲ್ಲದರಲ್ಲೂ ಜಾಕಲಿನ್ ಕಾಣಿಸಿಕೊಂಡಿರುವುದು ಗ್ಲಾಮರ್ ಬೊಂಬೆಯಾಗಿ. ಹಾಗೆಂದು ಅವಳಿಗೆ ನಟಿಸಲು ಗೊತ್ತಿಲ್ಲ ಎಂದಲ್ಲ ಆದರೆ ಅವಳ ಒಳಗಿರುವ ನಟಿಯನ್ನು ಹೊರ ತರುವಂತಹ ಪಾತ್ರಗಳು ಇನ್ನೂ ಸಿಕ್ಕಿಲ್ಲ. ಹಾಗೆಂದು ಜಾಕಲಿನ್ ಇದಕ್ಕೆಲ್ಲ ಬೇಸರಿಸುವುದಿಲ್ಲ.
“”ಬಾಲಿವುಡ್‌ನಲ್ಲಿ ನಾನು ಸ್ವಂತ ಪರಿಶ್ರಮದಿಂದ ನೆಲೆ ಕಂಡು ಕೊಂಡಿದ್ದೇನೆ. ಇದು ನನ್ನ ಬದುಕು. ಹೇಗೆ ಬದುಕಬೇಕೆಂದು ನಿರ್ಧರಿಸುವ ಹಕ್ಕು ನನಗಿದೆ. ಆ ಪಾತ್ರ ಸಿಕ್ಕಿಲ್ಲ, ಈ ಪಾತ್ರ ಸಿಕ್ಕಿಲ್ಲ ಎಂದು ಕೊರಗುವುದಕ್ಕಿಂತ ಸಿಕ್ಕಿದ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುವುದು ಜಾಣತನ. ಗಂಭೀರ ಪಾತ್ರಗಳಲ್ಲಿ ನಟಿಸುವಷ್ಟು ವಯಸ್ಸು ನನಗಿನ್ನೂ ಆಗಿಲ್ಲ. ಆ ಕಾಲ ಬಂದಾಗ ಬದಲಾವಣೆ ಮಾಡಿಕೊಂಡರಾಯಿತು” ಎನ್ನುವುದು ಜಾಕಲಿನ್ ತನ್ನನ್ನು ಟೀಕಿಸುವವರ ಮುಖಕ್ಕೆ ಹೊಡೆದಂತೆ ನೀಡಿರುವ ಉತ್ತರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Delhi; ಸಹಪಾಠಿಗಳೊಂದಿಗೆ ವಾಗ್ವಾದ; 7ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಹತ್ಯೆ
Thane; ಕ್ರಿಮಿನಲ್ ಕೇಸ್ ನ ಮುಖ್ಯ ಸಾಕ್ಷಿ, ಉದ್ಯಮಿಯನ್ನು ಗುಂಡಿಕ್ಕಿ ಹತ್ಯೆ
Road Mishap: ಎಚ್ಚರ! ಬೆಂಗ್ಳೂರಲ್ಲಿದೆ 64 ಆಕ್ಸಿಡೆಂಟ್ ಡೇಂಜರ್ ಸ್ಪಾಟ್
Brijesh Chowta: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಕ್ಯಾ. ಬ್ರಿಜೇಶ್ ಚೌಟ
Royal Movie; ಜ.24ರಿಂದ ʼರಾಯಲ್ʼ; ಟ್ರೇಲರ್ ರಿಲೀಸ್‌ಗೆ ತಂಡ ರೆಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.