ರಾ ರಾ ಗಿಣಿ
Team Udayavani, Dec 15, 2017, 1:59 PM IST
ಬಾಲಿವುಡ್‌ನಲ್ಲಿ ನಾಮದ ಬಲವೊಂದಿದ್ದರೆ ತಾರೆಯಾಗಬಹುದು ಎನ್ನುವುದಕ್ಕೆ ಹಲವಾರು ಉದಾಹರಣೆಗಳು ಸಿಗುತ್ತವೆ. ಆದರೆ, ನಾಮದ ಬಲವಿದ್ದರೂ ಅದನ್ನು ಉಪಯೋಗಿಸದೆ ಅವಕಾಶಗಳಿಗಾಗಿ ಅಲೆದಾಡುತ್ತಿರುವ ನಟಿಯೊಬ್ಬಳಿದ್ದರೆ ಅವಳು ರಾಗಿಣಿ ಖನ್ನ. ರಾಗಿಣಿಯ ಬಾಲಿವುಡ್ ಕನೆಕ್ಷನ್‌ಗಳ ಕುರಿತು ಹೇಳಿದರೆ ದಂಗಾಗಬಹುದು. ಈಕೆ ಒಂದು ಕಾಲದ ಸೂಪರ್‌ಸ್ಟಾರ್ ಗೋವಿಂದನಿಗೆ ಸಂಬಂಧದಲ್ಲಿ ಸೊಸೆಯಾಗಬೇಕು. ನಟ ಹಾಗೂ ಸ್ಟಾಂಡ್ ಅಪ್ ಕಾಮಿಡಿಯನ್ ಕೃಷ್ಣ ಅಭಿಷೇಕ್‌ಗೆ ಸೋದರ ಸಂಬಂಧಿ. ಸ್ವಂತ ಅಣ್ಣನೂ ಕಿರುತೆರೆ ನಟ. ತಾಯಿ ಸಂಗೀತ ನಿರ್ದೇಶಕಿ, ಲೇಖಕಿ ಮತ್ತು ಗಾಯಕಿ.
ಶಾಸ್ತ್ರೀಯ ಗಾಯಕಿ ನಿರ್ಮಲಾ ದೇವಿಯ ಮೊಮ್ಮಗಳು ಎನ್ನುವ ವಿಚಾರ ಹೆಚ್ಚಿನವರಿಗೆ ಗೊತ್ತಿಲ್ಲ. ಹೀಗೆ ಸಮೃದ್ಧ ಕಲಾ ಹಿನ್ನೆಲೆಯಿಂದ ಬಂದ ರಾಗಿಣಿ ಬಹುಮುಖ ಪ್ರತಿಭಾವಂತಳಾಗಿರುವುದರಲ್ಲಿ ವಿಶೇಷವೇನೂ ಇಲ್ಲ. ಆದರೆ, ಇಷ್ಟೆಲ್ಲ ಬಾಲಿವುಡ್ ಹಿನ್ನೆಲೆಯಿದ್ದರೂ ರಾಗಿಣಿ ಮೊದಲು ಬಣ್ಣ ಹಚ್ಚಿದ್ದು ಕಿರುತೆರೆಯಲ್ಲಿ. ಒಂದು ಡಜನ್‌ಗೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ ಬಳಿಕ ಒಂದೇ ರೀತಿಯ ಪಾತ್ರಗಳು ಬೋರಾಗತೊಡಗಿದಾಗ ರಿಯಾಲಿಟ್ ಶೋಗಳ ಆ್ಯಂಕರ್ ಆದಳು. ಅನಂತರ ವಿವಿಧ ಟಿವಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಳು. ರಾಗಿಣಿ ಹಿರಿತೆರೆಗೆ ಪದಾರ್ಪಣೆ ಮಾಡಿದ್ದು ಆರು ವರ್ಷಗಳ ಹಿಂದೆ ರಾಕೇಶ್ ಓಂಪ್ರಕಾಶ್ ನಿರ್ದೇಶಿಸಿದ ಕಾಮೆಡಿ ಚಿತ್ರ ತೀನ್ ಥೇ ಭಾಯಿ ಮೂಲಕ. ಅವಳ ದುರಾದೃಷ್ಟಕ್ಕೆ ಚಿತ್ರ ಸೋತು ಹೋಯಿತು.
ಅನಂತರ ಭಜಿ ಇನ್ ಪ್ರಾಬ್ಲೆಮ್ ಎಂಬ ಪಂಜಾಬಿ ಚಿತ್ರದಲ್ಲಿ ಸಖತ್ ಆಗಿ ಮಿಂಚಿದ ರಾಗಿಣಿ ಈಗ ಬಾಲಿವುಡ್‌ನಲ್ಲಿ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಲು ತಯಾರಾಗಿದ್ದಾಳೆ. ಈ ವರ್ಷ ಅವಳು ನಟಿಸುತ್ತಿರುವ ಎರಡು ಚಿತ್ರಗಳು ಸೆಟ್ಟೇರಿವೆ. ಈ ಪೈಕಿ ಘೂಮಕೇತು ಚಿತ್ರದಲ್ಲಿ ಆಕೆ ನವಾಜುದ್ದೀನ್ ಸಿದ್ದಿಕಿ ಎದುರು ನಟಿಸುತ್ತಿದ್ದಾಳೆ. ಗುರ್ಗಾಂವ್ ಎಂಬ ಇನ್ನೊಂದು ಚಿತ್ರದ ಶೂಟಿಂಗ್ ಈಗಾಗಲೇ ಶುರುವಾಗಿದೆ. ಈ ಎರಡು ಚಿತ್ರಗಳಿಂದ ತನ್ನ ಅದೃಷ್ಟ ಬದಲಾಗುವ ನಿರೀಕ್ಷೆಯಲ್ಲಿದ್ದಾಳೆ ರಾಗಿಣಿ. ಅವಕಾಶ ಸಿಗದಿದ್ದರೂ ಪರವಾಗಿಲ್ಲ ಬಾಲಿವುಡ್ ಕನೆಕ್ಷನ್ ಉಪಯೋಗಿಸುವುದಿಲ್ಲ ಎನ್ನುವುದು ಅವಳ ಗಟ್ಟಿ ನಿರ್ಧಾರ. ನಾಮದ ಬಲ ಅಗತ್ಯವಿರುವುದು ಪ್ರತಿಭೆಯಿಲ್ಲದವರಿಗೆ. ಪ್ರತಿಭಾವಂತರಿಗೆ ಎಂದಾದರೂ ಒಂದು ದಿನ ಮಿಂಚಲು ಅವಕಾಶ ಸಿಕ್ಕಿಯೇ ಸಿಗುತ್ತದೆ ಎನ್ನುವುದು ಅವಳ ನಂಬಿಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.