ವೆಡ್ಡಿಂಗ್‌ ಮಾರ್ಕೆಟ್‌

Team Udayavani, Jun 29, 2018, 6:00 AM IST

x-22.jpg

ಡಿಂಗ್‌ ಡಾಂಗ್‌, ಮನೆಯ ಕಾಲಿಂಗ್‌ ಬೆಲ್‌ ಸದ್ದು  ಅಡುಗೆಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದ ಮರಿಯಾ ಕೈ ಒರೆಸಿಕೊಂಡು ಬಾಗಿಲು ತೆರೆದರೆ ಕೊರಿಯರ್‌ ಹುಡುಗ. ಆನ್‌ಲೈನಿನಲ್ಲಿ  ಆರ್ಡರ್‌ ಮಾಡಿದ್ದ ದಿರಿಸು ಯಾವಾಗ ಬರುತ್ತದೆಂದು ತುದಿಗಾಲಲ್ಲಿ ನಿಂತು ಕಾದಿದ್ದಳವಳು. ಮರಿಯಾ ಹೊಸ ಉಡುಪನ್ನು ತೊಟ್ಟುಕೊಂಡು ಕನ್ನಡಿಯ ಮುಂದೆ ಕುಣಿಯುತ್ತಿದ್ದರೆ, ಅಮ್ಮನಿಗೆ ಸಂಭ್ರಮವೋ ಸಂಭ್ರಮ. ಹೊಸ ಬಟ್ಟೆ ಬಂದದ್ದಕ್ಕೆ ಮರಿಯಾಳಿಗಿಂತ ಹೆಚ್ಚು ಖುಷಿ ಪಟ್ಟವಳು ಅವಳು. ಇನ್ನು ಸ್ವಲ್ಪ ಹೊತ್ತಿನಲ್ಲೇ ಅವಳು ತಯಾರಾಗಿ ಅದೇ ಉಡುಪನ್ನು ತೊಟ್ಟು ಹೊರಗೆ ಹೋಗಬೇಕಿದೆ. ವರ್ಷಗಳಿಂದ ಮನೆಯವರೆಲ್ಲರೂ, ಮರಿಯಾ ಹುಟ್ಟಿದ್ದೇ ಆ ದಿನಕ್ಕಾಗಿ ಎನ್ನುವಷ್ಟು ಉತ್ಸುಕರಾಗಿದ್ದಾರೆ. ಮನದ ಮೂಲೆಯಲ್ಲಿ ಆತಂಕವೂ ಇದೆ. ಇಷ್ಟಕ್ಕೂ ಮರಿಯಾಳನ್ನು ಕರೆದೊಯ್ಯುತ್ತಿರುವುದು ಎಲ್ಲಿಗೆ ಅಂದುಕೊಂಡಿದ್ದೀರಾ? ವಧುಗಳ ಮಾರುಕಟ್ಟೆಗೆ !

ವಧುದಕ್ಷಿಣೆ ಎಂಬ ಆಮಿಷ
ಪಾಶ್ಚಾತ್ಯ ದೇಶದವರು ನಮಗಿಂತ ಆಧುನಿಕರು, ಮುಂದುವರಿದಿರುವವರು ಎಂದೆಲ್ಲಾ ತಿಳಿಯುತ್ತೇವೆ. ಆದರೆ, ಅಂಥ ಐರೋಪ್ಯ ರಾಷ್ಟ್ರಗಳಲ್ಲೊಂದಾಗಿರುವ ಬಲ್ಗೇರಿಯಾದಲ್ಲೇ ಈ ವಧುಗಳ ಮಾರುಕಟ್ಟೆ ಇರೋದು ಎನ್ನುವ  ಸಂಗತಿ ಹಲವರಿಗೆ ಅಚ್ಚರಿಯಾಗಬಹುದು. ಸುಮಾರು 18,000 ಮಂದಿಯಿರುವ ಆಥೋìಡಾಕ್ಸ್‌ ಧರ್ಮಕ್ಕೆ ಸೇರಿದ ಉಪ ಪಂಗಡ ‘ಕಲೈಡಿ’ ವಧುಗಳನ್ನು ತರಕಾರಿಯಂತೆ ಮಾರುಕಟ್ಟೆಯಲ್ಲಿ ಮಾರುವ ಪದ್ಧತಿ ಚಾಲ್ತಿಯಲ್ಲಿರುವುದು ಇದೇ ಸಮುದಾಯಲ್ಲಿ! ಆಧುನಿಕತೆ, ಜಾಗತೀಕರಣ ಇವೆಲ್ಲದರ ಪ್ರಭಾವದ ನಡುವೆಯೂ “ಕಲೈಡಿ’ ಸಮುದಾಯದವರು ತಮ್ಮ ಪರಂಪರೆಯನ್ನು ರೀತಿ ರಿವಾಜುಗಳನ್ನು ಕಟ್ಟುನಿಟ್ಟಾಗಿ ಕಾಪಾಡಿಕೊಂಡು ಬರುತ್ತಿದ್ದಾರೆ. ಈಗೀಗ ಸಮುದಾಯದ ಕೆಲವು ಹುಡುಗಿಯರು  ಪದ್ಧತಿಯ ವಿರುದ್ಧ ದನಿಯೆತ್ತುತ್ತಿದ್ದರಾದರೂ ಮನೆಯವರ ಮತ್ತು ಸಮಾಜದ ವಿರೋಧಕ್ಕೆ ಹೆದರಿ ಕಮಕ್‌ ಕಿಮಕ್‌ ಎನ್ನದೆ ಹರಾಜಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದನ್ನು ಮಾರುಕಟ್ಟೆ ಎಂದೇಕೆ ಕರೆಯುತ್ತಾರೆ ಎಂದರೆ, ಇಲ್ಲಿ ಗಂಡು ಹೆಣ್ಣಿನ ಮನೆಯವರು ಡೌರಿ ತರಬೇಕು. ಹೀಗಾಗಿ ತಮ್ಮ ಮಗಳು ಅತಿ ಹೆಚ್ಚು ಡೌರಿ ತೆರಲು ಸಿದ್ಧರಿರುವ ಶ್ರೀಮಂತ ಮನೆತನದ ಸೊಸೆಯಾಗಲಿ ಎನ್ನುವುದು ಇಲ್ಲಿನ ಎಲ್ಲಾ ತಾಯಂದಿರ ಬಯಕೆ.

ರೇಟ್‌ ಹೇಗೆ ಫಿಕ್ಸ್‌ ಮಾಡ್ತಾರೆ?
ಮಾರುಕಟ್ಟೆಯಲ್ಲಿ ಹೇಗೆ ಗುಣಮಟ್ಟದ ಆಧಾರದ ಮೇಲೆ ವಸ್ತುಗಳಿಗೆ ದರ ನಿಗದಿ ಪಡಿಸುತ್ತಾರೋ, ಅದೇ ರೀತಿ ಇಲ್ಲಿ ಹೆಣ್ಮಕ್ಕಳನ್ನು ಅಳೆಯಲು ‘ತೆಳ್ಳಗೆ ಬೆಳ್ಳಗೆ’ಎನ್ನುವ ಅನೇಕ ಮಾನದಂಡಗಳಿವೆ. ಸಮುದಾಯದ ಬಹುತೇಕ ಹೆಣ್ಮಕ್ಕಳು ಶಾಲೆ ಮೆಟ್ಟಿಲು ಹತ್ತಿರುವುದೇ ಅಪರೂಪವಾಗಿರುವುದರಿಂದ ಅವರ ವಿದ್ಯಾಭ್ಯಾಸದ ಕುರಿತು ಹೆಚ್ಚಿನ ನಿರೀಕ್ಷೆಗಳೇನೂ ಇರುವುದಿಲ್ಲ. ಹೀಗಾಗಿ ಮನೆಕೆಲಸ ಮಾಡಲು ಬಂದರಷ್ಟೆ ಸಾಕು ಎನ್ನುವ ಭಾವನೆ ಇರುತ್ತದೆ. ಇನ್ನೊಂದು ಮುಖ್ಯ ಮಾನದಂಡವಿದೆ. ಅದು ‘ಕನ್ಯತ್ವ’. ಹುಡುಗಿ ಕನ್ಯೆಯಾಗಿದ್ದರೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ನಿಗದಿಯಾಗುತ್ತೆ.

ನೀನು ಒಂಟಿಯಲ್ಲ ಮಗಳೇ…
ಜೀವನದಲ್ಲಿ  ಆ ಹುಡುಗಿಯರು ಏನೇನು ಕನಸು ಕಂಡಿರುತ್ತಾರೋ? ತಮ್ಮನ್ನು ಮದುವೆಯಾಗುವವನ ಕುರಿತು ಯಾವ್ಯಾವ ಆಸೆಗಳನ್ನು ಇಟ್ಟುಕೊಂಡಿರುತ್ತಾರೋ? ತಮ್ಮ ಇಷ್ಟಾನಿಷ್ಟಗಳನ್ನು ಒತ್ತಟ್ಟಿಗಿಟ್ಟು ಮುಖದ ಮೇಲೆ ನಗು ತಂದುಕೊಂಡು ಪುರುಷರ ಮುಂದೆ ನಿಲ್ಲುವುದೆಂದರೆ ಸುಮ್ಮನೆ ಅಲ್ಲ, ಮಾರುಕಟ್ಟೆಗೆ ಕಾಲಿಡುವ ಬಹುತೇಕ ಹೆಣ್ಣುಮಕ್ಕಳು ತಮ್ಮನ್ನು ಎಂಥವನು ಕೊಂಡುಕೊಳ್ಳುವನೋ ಎಂಬ ಭಯದಿಂದಲೇ ತತ್ತರಿಸಿ ಹೋಗಿರುತ್ತಾರೆ. ಭಾವಿ ಗಂಡ ಮತ್ತವನ ಮನೆಯವರ ಮುಂದೆ ಹುಡುಗಿ ಎಲ್ಲಿ ತಿರಸ್ಕೃತಳಾಗುತ್ತಾಳ್ಳೋ ಎಂಬ ಆತಂಕದಿಂದ ಹುಡುಗಿಯ ತಾಯಿಯೂ ಮಗಳ ಹಿಂದೆ ನಿಂತಿರುತ್ತಾಳೆ. ಹುಡುಗಿಗೆ ದುಃಖ ಒತ್ತರಿಸಿ ಬಂದಾಗ, ಕಣ್ಣೀರು ತುಳುಕಿದಾಗ ‘ನೀನೊಬ್ಬಳೇ ಅಲ್ಲ ಕಂದಾ. ಹಿಂದೊಮ್ಮೆ ನಾನೂ ಇಲ್ಲಿ ನಿಂತವಳೇ. ಎಲ್ಲಾ ಒಳ್ಳೆಯದಾಗುತ್ತೆ ಸಹಿಸಿಕೋ’ ಎಂದು ತಾಯಿ ಮಗಳಿಗೆ ಧೈರ್ಯ ಹೇಳುತ್ತಾಳೆ.

ಟಾಪ್ ನ್ಯೂಸ್

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

6-spcl

Story Of Generations: ಪೀಳಿಗೆಗಳ ವೃತ್ತಾಂತ

train

Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

7-dhaka

Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್‌!

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.