ಕ್ಯಾಪ್ಸಿಕಮ್ ವೈವಿಧ್ಯ
Team Udayavani, Nov 15, 2019, 5:26 AM IST
ಕ್ಯಾಪ್ಸಿಕಮ್, ದೊಣ್ಣೆಮೆಣಸು, ದಪ್ಪಮೆಣಸು ಇತ್ಯಾದಿ ಹೆಸರುಗಳಿಂದ ಕರೆಯುವ ಈ ಮೆಣಸಿನಕಾಯಿಯಿಂದ ಹಲವಾರು ವೈವಿಧ್ಯಗಳನ್ನು ತಯಾರಿಸಬಹುದು.
ಕ್ಯಾಪ್ಸಿಕಮ್ ರಾಯತ
ಬೇಕಾಗುವ ಸಾಮಗ್ರಿ: ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಮ್- ಅರ್ಧ ಕಪ್, ಮ್ಯಾಶ್‌ಮಾಡಿದ ಆಲೂಗಡ್ಡೆ- ಒಂದು ಕಪ್, ಸಣ್ಣಗೆ ಹೆಚ್ಚಿದ ಈರುಳ್ಳಿ- ಅರ್ಧ ಕಪ್, ಹೆಚ್ಚಿದ ಟೊಮೆಟೋ- ನಾಲ್ಕು ಚಮಚ, ಸಿಪ್ಪೆತೆಗೆದು ಚಿಕ್ಕದಾಗಿ ಹೆಚ್ಚಿದ ನೀರುಸೌತೆ- ಒಂದು, ದಾಳಿಂಬೆ- ಎಂಟು ಚಮಚ, ಮೊಸರು- ಎರಡು ಕಪ್, ಕೊತ್ತಂಬರಿಸೊಪ್ಪು- ನಾಲ್ಕು ಚಮಚ, ತೆಂಗಿನತುರಿ- ಎಂಟು ಚಮಚ, ಹಸಿಮೆಣಸು ಮತ್ತು ಉಪ್ಪು ರುಚಿಗೆ ಬೇಕಷ್ಟು.
ತಯಾರಿಸುವ ವಿಧಾನ: ಬಾಣಲೆಗೆ ನಾಲ್ಕು ಚಮಚ ಎಣ್ಣೆ ಹಾಕಿ ಬಿಸಿಯಾದ ಕೂಡಲೇ ಹೆಚ್ಚಿಟ್ಟ ಕ್ಯಾಪ್ಸಿಕಮ್ ಹಾಕಿ, ರುಚಿಗೆ ಬೇಕಷ್ಟು ಉಪ್ಪು ಸೇರಿಸಿ ಬಾಡಿಸಿಕೊಳ್ಳಿ. ತೆಂಗಿನತುರಿಗೆ ಉಪ್ಪು, ಹಸಿಮೆಣಸು ಮತ್ತು ಬೇಕಷ್ಟು ನೀರು ಸೇರಿಸಿ ನುಣ್ಣಗೆ ರುಬ್ಬಿ, ಮಿಕ್ಸಿಂಗ್ ಬೌಲ್‌ಗೆ ಹಾಕಿ. ಇದಕ್ಕೆ ಈರುಳ್ಳಿ, ಸೌತೆಕಾಯಿ, ಆಲೂಗಡ್ಡೆ, ದಾಳಿಂಬೆ, ಟೊಮೆಟೋ, ಬಾಡಿಸಿಟ್ಟ ಕ್ಯಾಪ್ಸಿಕಂ ಹಾಗು ಮೊಸರು ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ನಂತರ, ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಸರ್ವ್ ಮಾಡಬಹುದು.
ಕ್ಯಾಪ್ಸಿಕಮ್ ವಾಂಗಿಬಾತ್
ಬೇಕಾಗುವ ಸಾಮಗ್ರಿ: ಸಪೂರವಾಗಿ ಉದ್ದಕ್ಕೆ ಹೆಚ್ಚಿದ ಕ್ಯಾಪ್ಸಿಕಮ್- ಒಂದು ದೊಡ್ಡದು, ಗೋಡಂಬಿ- ಎಂಟು, ಹಸಿಮೆಣಸಿನಕಾಯಿ- ಎರಡು, ಅರಸಿನ- ಅರ್ಧ ಚಮಚ, ವಾಂಗಿಬಾತ್ ಪುಡಿ- ಎರಡು ಚಮಚ, ತೆಂಗಿನತುರಿ- ಆರು ಚಮಚ, ನೀರುಳ್ಳಿ- ಎಂಟು ಚಮಚ, ಟೊಮೆಟೋ- ಆರು ಚಮಚ, ಉದುರಾಗಿರುವ ಬೆಳ್ತಿಗೆ ಅನ್ನ- ಮೂರು ಕಪ್, ಲಿಂಬೆರಸ ಮತ್ತು ಉಪ್ಪು ರುಚಿಗೆ ಬೇಕಷ್ಟು.
ತಯಾರಿಸುವ ವಿಧಾನ: ಬಾಣಲೆಗೆ ಎರಡು ಚಮಚ ತುಪ್ಪ ಮತ್ತು ಎರಡು ಚಮಚ ಎಣ್ಣೆ ಹಾಕಿ ಬಿಸಿಯಾದ ಕೂಡಲೇ ಉದ್ದಿನಬೇಳೆ, ಸಾಸಿವೆ, ಕಡ್ಲೆಬೇಳೆಯ ಒಗ್ಗರಣೆ ಕರಿಬೇವಿನ ಜೊತೆ ಸಿಡಿಸಿ. ನಂತರ, ಇದಕ್ಕೆ ನೀರುಳ್ಳಿ, ಟೊಮೆಟೋ, ಹಸಿಮೆಣಸಿನಕಾಯಿ, ಕ್ಯಾಪ್ಸಿಕಮ್ ಇತ್ಯಾದಿಗಳನ್ನು ಒಂದಾದ ಮೇಲೆ ಒಂದರಂತೆ ಹಾಕಿ ಬಾಡಿಸಿಕೊಳ್ಳಿ. ನಂತರ, ಇದಕ್ಕೆ ಅರಸಿನ ಮತ್ತು ವಾಂಗಿಬಾತ್ ಪುಡಿ ಹಾಕಿ ಚೆನ್ನಾಗಿ ಮಿಶ್ರಮಾಡಿ, ಸ್ವಲ್ಪ ನೀರು ಚಿಮುಕಿಸಿ ಬೇಯಿಸಿ. ಬೇಯುತ್ತಿರುವಾಗ ಉಪ್ಪು ಮತ್ತು ತೆಂಗಿನತುರಿ ಸೇರಿಸಿ. ಬೆಂದ ನಂತರ ಮೊದಲೇ ತಯಾರಿಸಿಟ್ಟ ಅನ್ನವನ್ನು ಇದಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಮಾಡಿ, ಒಲೆಯಿಂದ ಇಳಿಸಿ. ಕೊತ್ತಂಬರಿಸೊಪ್ಪು ಮತ್ತು ಹುರಿದ ಗೋಡಂಬಿಯನ್ನು ಹರಡಿ ಅಲಂಕರಿಸಿ ಸರ್ವ್ ಮಾಡಬಹುದು.
ಕ್ಯಾಪ್ಸಿಕಮ್ ವಿದ್ ಆಲೂ ಕಟ್ಲೆಟ್
ಬೇಕಾಗುವ ಸಾಮಗ್ರಿ: ಮ್ಯಾಶ್‌ಮಾಡಿದ ಆಲೂಗಡ್ಡೆ- ಒಂದು ಕಪ್, ಶುಂಠಿ-ಬೆಳ್ಳುಳ್ಳಿ ಮತ್ತು ಹಸಿಮೆಣಸಿನ ಪೇಸ್ಟ್- ಎರಡು ಚಮಚ, ಗರಂ ಮಸಾಲಪುಡಿ- ಒಂದು ಚಮಚ, ಅರಸಿನ- ಅರ್ಧ ಚಮಚ, ಕ್ಯಾರೆಟ್‌ತುರಿ- ಆರು ಚಮಚ, ಕೊತ್ತಂಬರಿಸೊಪ್ಪು- ಆರು ಚಮಚ, ಉಪ್ಪು ರುಚಿಗೆ, ಬ್ರೆಡ್ ಕ್ರಂಪ್ಸ್ – ಅರ್ಧ ಕಪ್, ಕ್ಯಾಪ್ಸಿಕಮ್- ಎರಡು.
ತಯಾರಿಸುವ ವಿಧಾನ: ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ, ಬಾಡಿಸಿ. ನಂತರ, ಇದಕ್ಕೆ ಕ್ಯಾರೆಟ್ ಸೇರಿಸಿ ಬಾಡಿಸಿ. ನಂತರ, ಮ್ಯಾಶ್‌ಮಾಡಿದ ಆಲೂ ಹಾಗು ಗರಂಮಸಾಲ, ಅರಸಿನ, ಕೊತ್ತಂಬರಿಸೊಪ್ಪು ಮತ್ತು ಉಪ್ಪು ಸೇರಿಸಿ, ಮಿಶ್ರಮಾಡಿ, ಒಲೆಯಿಂದ ಇಳಿಸಿ. ಕ್ಯಾಪ್ಸಿಕಮ್‌ನ್ನು ಸುಮಾರು ಒಂದು ಇಂಚು ದಪ್ಪಕ್ಕೆ ರೌಂಡ್ ಶೇಪ್‌ನಲ್ಲಿ ಕತ್ತರಿಸಿ ಒಳಗಿರುವ ಬೀಜಗಳನ್ನು ತೆಗೆದು, ಇದರ ಒಳಗೆ ಮ್ಯಾಶ್‌ಮಾಡಿದ ಆಲೂ ಮಿಶ್ರಣವನ್ನು ತುಂಬಿಸಿ ಎರಡೂ ಬದಿಗಳನ್ನು ಬ್ರೆಡ್‌ಕ್ರಂಪ್ಸ್‌ನಲ್ಲಿ ಮುಳುಗಿಸಿ ಕಾದ ತವಾದಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ, ಎರಡೂ ಬದಿ ಬೇಯಿಸಿ. ಟೊಮೆಟೋ ಚಟ್ನಿಯೊಂದಿಗೆ ಸರ್ವ್ ಮಾಡಬಹುದು.
ಕ್ಯಾಪ್ಸಿಕಮ್ ಪಾಪಡ್ ರೋಲ್
ಬೇಕಾಗುವ ಸಾಮಗ್ರಿ: ಹೆಚ್ಚಿದ ಕ್ಯಾಪ್ಸಿಕಮ್- ಆರು ಚಮಚ, ಸ್ವೀಟ್‌ಕಾರ್ನ್- ಎಂಟು ಚಮಚ, ಕ್ಯಾರೆಟ್‌ತುರಿ- ಆರು ಚಮಚ, ದಾಳಿಂಬೆ- ಎಂಟು ಚಮಚ, ಹೆಚ್ಚಿದ ಈರುಳ್ಳಿ, ಸೇಬು ಮತ್ತು ಟೊಮೆಟೋ- ನಾಲ್ಕು ಚಮಚ, ಕೊತ್ತಂಬರಿಸೊಪ್ಪು- ನಾಲ್ಕು ಚಮಚ, ಹುರಿದ ಶೇಂಗಾ- ಆರು ಚಮಚ, ಕಾಳುಮೆಣಸಿನಪುಡಿ- ಒಂದು ಚಮಚ, ಉಪ್ಪು ಮತ್ತು ಚಾಟ್‌ಮಸಾಲ- ರುಚಿಗೆ ಬೇಕಷ್ಟು, ಮಸಾಲ ಹಪ್ಪಳ- ನಾಲ್ಕು.
ತಯಾರಿಸುವ ವಿಧಾನ: ಬಾಣಲೆಗೆ ಸ್ವಲ್ಪ ಬೆಣ್ಣೆ ಹಾಕಿ ಸ್ವೀಟ್‌ಕಾರ್ನ್ ಮತ್ತು ಕ್ಯಾಪ್ಸಿಕಮ್‌ನ್ನು ಸ್ವಲ್ಪ ಉಪ್ಪು ಹಾಗೂ ಮೆಣಸಿನಪುಡಿ ಸೇರಿಸಿ ಬಾಡಿಸಿ, ಆರಿದ ಮೇಲೆ ಮಿಕ್ಸಿಂಗ್ ಬೌಲ್‌ಗೆ ಹಾಕಿ. ನಂತರ, ಇದಕ್ಕೆ ಹಪ್ಪಳವನ್ನು ಹೊರತುಪಡಿಸಿ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಮಿಶ್ರಮಾಡಿ. ಹಪ್ಪಳವನ್ನು ಸುಟ್ಟು ಬಿಸಿ ಇರುವಾಗಲೇ ರೋಲ್ ಮಾಡಿ. ನಂತರ, ಇದರ ಒಳಗೆ ಮಿಶ್ರಣವನ್ನು ತುಂಬಿ ಸರ್ವ್ ಮಾಡಬಹುದು.
ಗೀತಸದಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.