ಮಕ್ಕಳಾಟಿಕೆ


Team Udayavani, Jan 4, 2019, 12:30 AM IST

x-72.jpg

ಅಳುವ ಕಂದನ ಕೈಗೆ ಆಟಿಕೆ ಕೊಟ್ಟು ಸುಮ್ಮನಾಗಿಸುವ ಕಾಲ ಈಗಿಲ್ಲ. ಮಗು ಅತ್ತರೆ,  ಊಟ ಮಾಡದಿದ್ದರೆ, ಹಠ ಮಾಡುತ್ತಿದ್ದರೆ, ಮಲಗಲು ಕೇಳದಿದ್ದರೆ, ಎಲ್ಲದಕ್ಕೂ ಒಂದೇ ಪರಿಹಾರ. ಕೈಗೆ ಮೊಬೈಲ್‌ ಕೊಟ್ಟು , ಯಾವುದೋ ವಿಡಿಯೋ ಹಾಕಿ ಮಗುವನ್ನು ಸುಮ್ಮನಾಗಿಸುವುದು. ಹೀಗೆ ಅಮ್ಮನ ಪ್ರೋತ್ಸಾಹದಿಂದಲೇ ಮೊಬೈಲ್‌ ಸಾಂಗತ್ಯಕ್ಕೆ ಬೀಳುವ ಮಗುವಿಗೆ, ಮುಂದೆ ಬೇರೆಲ್ಲ ಆಟಿಕೆಗಳಿಗಿಂತ ಮೊಬೈಲೇ ಹೆಚ್ಚು ಆಕರ್ಷಕ ಎನಿಸುತ್ತದೆ. ಮುಂದೆ, ಬೇರೆಲ್ಲ ಆಟಿಕೆಗಳನ್ನು ಬದಿಗೊತ್ತಿ, ಮೊಬೈಲ್‌ ಗೀಳನ್ನು ಹತ್ತಿಸಿಕೊಳ್ಳುತ್ತದೆ ಮಗು. ಹೀಗಾಗಬಾರದು ಅಂತಾದರೆ, ಮಗುವಿಗೆ ಆಟಿಕೆಯೊಡನೆ ಸಮಯ ಕಳೆಯುವುದನ್ನು ಕಲಿಸಬೇಕು. ವಿಡಿಯೋ ಗೇಮ್‌ಗಳಿಂದ ಹೊರತಾದ ಪ್ರಪಂಚವನ್ನು ಮಕ್ಕಳ ಎದುರು ತೆರೆದಿಡಬೇಕು. ಯಾಕೆಂದರೆ, ಮಕ್ಕಳ ಭಾವನಾತ್ಮಕ, ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಆಟಿಕೆಗಳು ಸಹಕಾರಿ ಎನ್ನುತ್ತಾರೆ ತಜ್ಞರು. ಮಗುವಿಗೆ ಕೊಡಿಸುವ ಆಟಿಕೆಗಳು ಹೇಗಿರಬೇಕು ಎಂದರೆ…

.ಪುಟ್ಟ ಇಟ್ಟಿಗೆಗಳಂಥ (ಬಿಲ್ಡಿಂಗ್‌ ಬ್ಲಾಕ್ಸ್‌) ವಸ್ತುಗಳಿಂದ ಕಟ್ಟಡ ನಿರ್ಮಿಸುವ ಆಟ ಗೊತ್ತೇ ಇದೆ. ಈ ಆಟ, ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸೃಜನಶೀಲತೆ, ಚುರುಕುತನ, ಗಣಿತದ ಸಾಮರ್ಥ್ಯವನ್ನು ಬೆಳೆಸುವ ಈ ಆಟಿಕೆಗಳನ್ನು ಮಕ್ಕಳಿಗೆ ಕೊಡಿಸಿ, ಆಟವಾಡುವುದನ್ನು ಪ್ರೋತ್ಸಾಹಿಸಿ.

.ಭಾಷಾ ಜ್ಞಾನವನ್ನು ಹೆಚ್ಚಿಸುವ, ಕಲಿಕೆಗೆ ಸಹಾಯವಾಗುವಂಥ ಆಟಿಕೆಗಳನ್ನು ಕೊಡಿಸಿ. ಅಕ್ಷರಗಳನ್ನು ಜೋಡಿಸಿ ಪದ ರಚಿಸುವುದು, ವಸ್ತುಗಳನ್ನು, ಬಣ್ಣಗಳನ್ನು ಗುರುತಿಸುವುದು ಮುಂತಾದವು.

.ಶಾಲೆಗೆ ಹೋಗುವ ಮಕ್ಕಳಿಗೆ ಪದಬಂಧ, ಸುಡುಕೊ ಮುಂತಾದ ಜ್ಞಾನವರ್ಧಕ ಆಟಗಳನ್ನು ಆಡಿಸಬಹುದು. ಹೆತ್ತವರು ಜೊತೆಗಿದ್ದು, ಸಲಹೆ-ಸೂಚನೆಗಳನ್ನು ನೀಡುತ್ತಿದ್ದರೆ ಮಕ್ಕಳಲ್ಲೂ ಆಸಕ್ತಿ ಹೆಚ್ಚುತ್ತದೆ.

.ಕಲ್ಪನಾ ಶಕ್ತಿಯನ್ನು ಹೆಚ್ಚಿಸುವಂಥ ಆಟಿಕೆಗಳು ಮಕ್ಕಳ ಬೆಳವಣಿಗೆಗೆ ಸಹಕಾರಿ. ಚೌಕಾಕಾರದ ಖಾಲಿ ಪೆಟ್ಟಿಗೆಗಳು, ಅಡುಗೆ ಸೆಟ್‌, ಡಾಕ್ಟರ್‌ ಕಿಟ್‌… ಹೀಗೆ ಭವಿಷ್ಯದ ಕಲ್ಪನೆಗಳನ್ನು , ಕನಸುಗಳನ್ನು ಮೂಡಿಸುವ ಹಲವಾರು ಆಟಿಕೆಗಳಿವೆ.

.ನಾವೆಲ್ಲ ಸಣ್ಣವರಿದ್ದಾಗ ಆಡುತ್ತಿದ್ದ ಬುಗುರಿ, ಚನ್ನೆಮಣೆ, ಚದುರಂಗ, ಪಗಡೆ, ಹಾವು-ಏಣಿಯಂಥ ಆಟಗಳನ್ನು ಮಕ್ಕಳಿಗೆ ಕಲಿಸಬಹುದು. ಈ ಆಟಗಳು ಮೊಬೈಲ್‌ ಗೇಮ್‌ಗಳ ಸ್ವರೂಪ ಪಡೆದಿದ್ದರೂ, ಎಲ್ಲರೂ ಒಟ್ಟಾಗಿ ಕುಳಿತು ಆಡುವುದರಿಂದ ಮಕ್ಕಳ ಸಂವಹನ ಶಕ್ತಿ ಹೆಚ್ಚುತ್ತದೆ.

.ಜಿಗಿಯುವ ಗೊಂಬೆಗಳು, ಚೆಂಡು ಮುಂತಾದ ಆಟಿಕೆಗಳು ಮಕ್ಕಳನ್ನು ದೈಹಿಕವಾಗಿ ಫಿಟ್‌ ಆಗಿಸುತ್ತವೆ. ಮನೆಯ ಹೊರಗೆ, ಸಮವಯಸ್ಕರ ಜೊತೆ ಇಂಥ ಆಟಗಳನ್ನು ಆಡಿದಾಗ ಅವರಲ್ಲಿ ಕ್ರೀಡಾ ಮನೋಭಾವವೂ ಮೂಡುತ್ತದೆ.

.ಆ್ಯಕ್ಷನ್‌ ಗೇಮ್‌ಗಳು (ಸೈನಿಕರು, ಸಣ್ಣಪುಟ್ಟ ಆಯುಧಗಳ ಆಟಿಕೆ ಸೆಟ್‌ಗಳು) ಮಕ್ಕಳಲ್ಲಿ ಹಿಂಸಾತ್ಮಕ ಭಾವನೆ ಬೆಳೆಸುತ್ತವೆ ಎಂಬ ಆತಂಕ ಕೆಲವರದ್ದು. ಆದರೆ, ಅಂಥ ಆಟಿಕೆಗಳು ಕಲ್ಪನಾಶಕ್ತಿ ಮತ್ತು ಸಾಹಸ ಮನೋಭಾವವನ್ನು ಹೆಚ್ಚಿಸುತ್ತವೆ ಎಂಬುದೂ ಸುಳ್ಳಲ್ಲ.

ಪುಷ್ಪಲತಾ

ಟಾಪ್ ನ್ಯೂಸ್

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Shiggvi-Yatnal

Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್‌

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

16

Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್‌ಗೆ ದಂಡ

Shiggvi-Yatnal

Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್‌

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

4

Mangaluru: ಗಾಂಜಾ ಮಾರಾಟ; ಇಬ್ಬರು ಯುವಕರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.