ದಾಲ್ಚಿನ್ನಿ ದರ್ಬಾರ್
Team Udayavani, Oct 25, 2019, 4:57 AM IST
ಪ್ರಾಚೀನ ಕಾಲದಿಂದಲೂ ದಾಲ್ಚಿನ್ನಿಯನ್ನು ಮಸಾಲೆ ಪದಾರ್ಥವನ್ನಾಗಿ ಉಪಯೋಗಿಸುತ್ತಿದ್ದೇವೆ. 20-40 ಅಡಿ ಎತ್ತರ ಬೆಳೆಯುವ ಈ ಮರದ ತವರೂರು ಕೇರಳ ಮತ್ತು ಶ್ರೀಲಂಕಾ ಎನ್ನುತ್ತಾರೆ. ಎಲೆಯನ್ನು ಪಲಾವ್ ಎಲೆ ಎಂದೂ, ಮರದ ತೊಗಟೆಯನ್ನು ಚಕ್ಕೆ ಎಂದೂ ಉಪಯೋಗಿಸುವ ಅನೇಕರಿಗೆ, ದಾಲಿcನ್ನಿ ಚಕ್ಕೆಯ ಔಷಧೀಯ ಗುಣಗಳು ತಿಳಿದಿಲ್ಲ. ಈ ಮಸಾಲಾ ಪದಾರ್ಥಕ್ಕೆ ಕಾಯಿಲೆಗಳನ್ನು ದೂರ ಮಾಡುವ ಶಕ್ತಿಯೂ ಇದೆ.
ಒಂದು ಬಟ್ಟಲು ನೀರಿಗೆ, ಅರ್ಧ ಚಮಚ ದಾಲಿcನ್ನಿ ಚಕ್ಕೆಪುಡಿ, ಕಾಳುಮೆಣಸಿನ ಪುಡಿ ಬೆರೆಸಿ ಕುದಿಸಿ, ನಂತರ ಜೇನು ಬೆರೆಸಿ ದಿನಕ್ಕೆ ಮೂರು ಬಾರಿ ಕುಡಿದರೆ- .ಶೀತ, ಕೆಮ್ಮು, ನೆಗಡಿ ಗುಣವಾಗುತ್ತದೆ.
.ಹೊಟ್ಟೆಹುಣ್ಣಿಗೆ ರಾಮಬಾಣ.
.ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
.ಮೂತ್ರಕೋಶದ ಸೋಂಕು ಕಡಿಮೆಯಾಗುತ್ತದೆ.
ದಾಲಿcನ್ನಿ ಚಕ್ಕೆಯನ್ನು ಲಿಂಬೆರಸದಲ್ಲಿ ತೇಯ್ದು-
.ಗಂಟಲಿನ ಹೊರಭಾಗಕ್ಕೆ ಹಚ್ಚಿದರೆ ಟಾನ್ಸಿಲ್, ಗಂಟಲುನೋವು ಕಡಿಮೆ ಯಾಗುತ್ತದೆ.
.ಮುಖಕ್ಕೆ ಹಚ್ಚಿದರೆ ಮೊಡವೆ ಮತ್ತು ಕಲೆ ಮಾಯ ವಾಗುತ್ತದೆ.
ಒಂದು ಲೋಟ ಹಾಲಿಗೆ ಅರ್ಧ ಚಮಚ ದಾಲಿcನ್ನಿ ಪುಡಿ ಹಾಕಿ, ಕುದಿಸಿ ಕುಡಿದರೆ-
.ಜೀರ್ಣಶಕ್ತಿ ವೃದ್ಧಿಸುತ್ತದೆ.
.ವಾಯು ಪ್ರಕೋಪವನ್ನು ತಡೆಯುತ್ತದೆ.
.ತೂಕವಿಳಿಸಲು, ಕೊಬ್ಬು ಕರಗಿಸಲು ಸಹಕಾರಿ.
.ಚರ್ಮದ ಸೋಂಕು ನಿವಾರಿಸುತ್ತದೆ.
.ರಾತ್ರಿ ಮಲಗುವುದಕ್ಕೆ ಮುನ್ನ ಕುಡಿದರೆ ಚೆನ್ನಾಗಿ ನಿದ್ರೆ ಬರುತ್ತದೆ.
ದಾಲಿcನ್ನಿ ಪುಡಿ ಮತ್ತು ಜೇನುತುಪ್ಪವನ್ನು ಸಮಪ್ರಮಾಣದಲ್ಲಿ ಬೆರೆಸಿ ಸೇವಿಸಿದರೆ-
.ಉಬ್ಬಸ ರೋಗಿಗಳು ಪ್ರತಿನಿತ್ಯ ಮೂರು ಬಾರಿ ಸೇವಿಸುವುದರಿಂದ ಅಸ್ತಮಾ ಕಡಿಮೆಯಾಗುತ್ತದೆ.
ದಾಲಿcನ್ನಿ ತೈಲವನ್ನು-
.ವಸಡಿಗೆ ಹಚ್ಚಿದರೆ ಹಲ್ಲುನೋವು ಕಡಿಮೆಯಾಗುತ್ತದೆ.
.ಕ್ಷಯದ ಗಾಯಗಳಿಗೆ ಲೇಪಿಸಿದರೆ, ಶೀಘ್ರವಾಗಿ ಉಪಶಮನ ವಾಗುತ್ತದೆ.
ಗೀತಾ ಎಸ್. ಭಟ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.