ಗೆಳತಿಗೆ ಆಪ್ತ ಸಲಹೆ
Team Udayavani, Aug 25, 2017, 6:50 AM IST
. ಬಿಸಿ ಹಾಲಿಗೆ ಬೆಲ್ಲ ಸೇರಿಸಿ ಸೇವಿಸಿದರೆ ಸ್ಥೂಲಕಾಯ ನಿವಾರಣೆಯಾಗುತ್ತದೆ. ಬೆಲ್ಲದಲ್ಲಿರುವ ಔಷಧೀಯ ಗುಣಗಳಿಂದ ಶರೀರದಲ್ಲಿರುವ ಕೊಬ್ಬು ಕಡಿಮೆಯಾಗುತ್ತದೆ. ಹೀಗಾಗಿ ದೇಹದ ತೂಕ ಕಡಿಮೆಯಾಗುತ್ತದೆ. ನಿತ್ಯವೂ ಹೀಗೆ ಸೇವಿಸುವುದರಿಂದ ಶರೀರದ ತೂಕ ಸಮತೋಲನದಲ್ಲಿರುತ್ತದೆ.
.ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಂದಿ ರಕ್ತಹೀನತೆಯಿಂದ ನರಳುತ್ತಿ¨ªಾರೆ. ಇದರ ಪರಿಣಾಮವಾಗಿ ಆರೋಗ್ಯ ಏರುಪೇರಾಗುತ್ತದೆ. ಶರೀರಕ್ಕೆ ಪೋಷಕಾಂಶಗಳು ಸೇರ್ಪಡೆಯಾಗುವುದಿಲ್ಲ. ಆದರೆ, ಬಿಸಿ ಹಾಲಿಗೆ ಬೆಲ್ಲ ಬೆರೆಸಿ ಸೇವಿಸುವುದರಿಂದ ರಕ್ತಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ. ಮುಖ್ಯವಾಗಿ ಮಹಿಳೆಯರಿಗೆ ಇದು ವರದಾನವಾಗಿದೆ.
.ಬಿಸಿಹಾಲಿಗೆ ಬೆಲ್ಲ ಬೆರೆಸಿ ಸೇವಿಸಿದರೆ, ಅದರಲ್ಲಿರುವ ಪೋಷಕಾಂಶಗಳಿಂದ ತಲೆ ಕೂದಲು ಹೊಳಪಾಗುತ್ತವೆ. ಕೂದಲು ಉದುರುವುದು ನಿಂತು ಹೋಗುತ್ತದೆ, ತಲೆಹೊಟ್ಟು ನಿವಾರಣೆಯಾ ಗುತ್ತದೆ.
.ಹಾಲು ಉಕ್ಕಿ, ಸಾರು ಚೆಲ್ಲಿ ನಿಮ್ಮ ಅಡುಗೆ ಸ್ಟವ್ ಕಲೆಯಾಗಿದೆಯೇ? ಈ ಹಠಮಾರಿ ಕೊಳೆಯನ್ನು ಬಿಡಿಸಲು ಸ್ಟವ್ ಮೇಲೆ ನೀರು ಚಿಮುಕಿಸಿ, ಅದರ ಮೇಲೆ ಸೋಪಿನ ಪುಡಿ ಹಾಗೂ ಅಡುಗೆಸೋಡಾವನ್ನು ಹಾಕಿ 10-15 ನಿಮಿಷದ ನಂತರ ಶುಚಿಗೊಳಿ ಕೊನೆಗೆ ಒಣಗಿದ ಬಟ್ಟೆಯಿಂದ ಒರೆಸಿದಾಗ ಸ್ಟವ್ ಮಿರಮಿರ ಮಿಂಚುತ್ತದೆ.
.ಚಿಕ್ಕ ವಸ್ತುಗಳಾದ ಚಮಚ, ಸೌಟು, ಚಾಕುಗಳನ್ನಿಡಲು ಪ್ರತ್ಯೇಕವಾದ ಸ್ಟಾಂಡ್‌ಗಳನ್ನು ಖರೀದಿಸಿ. ಇದರಿಂದ ಚಿಕ್ಕದಾಗಿರುವ ಇವುಗಳು ಪಾತ್ರೆಗಳ ಮಧ್ಯೆ ಸೇರಿ ಹುಡುಕುವ ಕೆಲಸದಿಂದ ತಪ್ಪಿಸುತ್ತದೆ.
.ಜ್ಯೂಸ್ ಯಾವ ಬಣ್ಣದಿಂದಿರುತ್ತದೋ ಅದಕ್ಕೆ ಹೊಂದುವಂಥ ಅಥವಾ ಅದಕ್ಕೆ ವಿರುದ್ಧ ಬಣ್ಣದ ಟ್ರೇಯನ್ನು ಆಯ್ಕೆ ಮಾಡಿಕೊಳ್ಳಿ. ಇದರಿಂದ ಅತಿಥಿಗಳು ನಿಮ್ಮ ಕಲಾತ್ಮಕತೆಯನ್ನು ಹಾಗೂ ಜಾಣ್ಮೆಯನ್ನು ಮೆಚ್ಚಿ ಹೊಗಳದಿದ್ದರೆ ಕೇಳಿ!
.ತೆಂಗಿನಕಾಯಿ ಕೆಡದಂತೆ ಇಡಬೇಕಾದರೆ ಅದರ ಕಣ್ಣು ಇರುವ ಭಾಗದಲ್ಲಿ ಜುಟ್ಟು ಇಟ್ಟು ಸುಲಿಯಬೇಕು. ಅಂದರೆ ಕಲಶದಲ್ಲಿ ಇಡುವ ಕಾಯಿಯಂತೆ ಇದ್ದರೆ ಅಷ್ಟು ಬೇಗ ಹಾಳಾಗುವುದಿಲ್ಲ. ಖರೀದಿಸುವಾಗ ನೀರಾಡುವ ಕಾಯಿಯನ್ನು ಖರೀದಿಸಿ. ಇಬ್ಭಾಗ ಆದ ತೆಂಗಿನಕಾಯಿಯನ್ನು ಉಪ್ಪಿನ ಭರಣಿಯಲ್ಲಿಟ್ಟರೆ ಹಾಳಾಗುವುದಿಲ್ಲ. ಬಾಲ್ದಿಯಲ್ಲಿ ನೀರು ಹಾಕಿ ಅದರೊಳಗೆ ಹಾಕಿದರೂ ಕೆಡುವುದಿಲ್ಲ.
.ಉಗುರಿನ ಸುತ್ತಲಿನ ಚರ್ಮ ಕಪ್ಪು ಬಣ್ಣಕ್ಕೆ ತಿರುಗಿದ್ದು, ಉಗುರು ಕಾಂತಿಹೀನವಾಗಿದ್ದರೆ, ನಿಂಬೆಹಣ್ಣಿನ ರಸಕ್ಕೆ ಅಡುಗೆಸೋಡಾ ಬೆರೆಸಿ ಹತ್ತಿಯ ಉಂಡೆಯನ್ನು ಅದ್ದಿ ತಿಕ್ಕಬೇಕು. ಇದರಿಂದ ಕ್ರಮೇಣ ಚರ್ಮದ ಕಪ್ಪು ಬಣ್ಣ ತಿಳಿಯಾಗುತ್ತದೆ ಹಾಗೂ ಉಗುರಿನ ಹೊಳಪು ಹೆಚ್ಚುತ್ತದೆ.
.ಜೇನುತುಪ್ಪ ಶುದ್ಧವೋ ಅಥವಾ ಕಲಬೆರಕೆಯಿಂದ ಕೂಡಿದೆಯೋ ಎಂದು ಅರಿಯುವ ಸುಲಭ ಉಪಾಯ ಇಂತಿದೆ. ಜೇನುತುಪ್ಪದಲ್ಲಿ ಒಂದು ಚಮಚವನ್ನು ಅದ್ದಿ ಬಳಿಕ ಕೇವಲ ನೀರಿನಿಂದ ತೊಳೆಯಬೇಕು. ಶುದ್ಧ ಜೇನಾದರೆ ಚಮಚ ಕೂಡಲೇ ಸ್ವತ್ಛವಾಗುತ್ತದೆ. ಬೆಲ್ಲದ ಪಾಕ ಮುಂತಾದವುಗಳಿಂದ ಮಿಶ್ರಿತವಾಗಿದ್ದ ಜೇನಾಗಿದ್ದರೆ, ಚಮಚ ಜಿಗುಟಾಗಿರುತ್ತದೆ.
– ಎಸ್‌ಎನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.