ತಂಪು ತಂಪು ಕರಬೂಜ ಸವಿ
Team Udayavani, Apr 26, 2019, 5:45 AM IST
ಹೇರಳವಾದ ನೀರಿನಂಶದಿಂದ ಕೂಡಿರುವ ಕರಬೂಜದ ಸೇವನೆ ಬಿರುಬಿಸಿಲಿಗೆ ದೇಹವನ್ನು ತಂಪಾಗಿಸುವುದರ ಜೊತೆಗೆ ಉರಿಮೂತ್ರ, ಕಟ್ಟುಮೂತ್ರ, ಕಿಡ್ನಿಸ್ಟೋನ್ ಇತ್ಯಾದಿಗಳನ್ನು ಶಮನಗೊಳಿಸಿ ಹೊಸಚೈತನ್ಯವನ್ನು ನೀಡಬಲ್ಲದು.
ಕರಬೂಜ ವಿದ್ ಟೂಟಿಫ್ರೂಟಿ ರಸಾಯನ
ಬೇಕಾಗುವ ಸಾಮಗ್ರಿ: ತಂಪಾದ ದಪ್ಪಹಾಲು- ಎರಡು ಕಪ್, ಬಾಳೆಹಣ್ಣು- ಅರ್ಧ ಕಪ್, ಸಣ್ಣಗೆ ಹೆಚ್ಚಿದ ಕರಬೂಜ- ಒಂದು ಕಪ್, ಹೆಚ್ಚಿದ ಖರ್ಜೂರ ಮತ್ತು ಸೇಬು- ನಾಲ್ಕು ಚಮಚ, ತೆಳು ಅವುಲಕ್ಕಿ- ಆರು ಚಮಚ, ತಂಪಿನ ಬೀಜ- ಒಂದು ಚಮಚ, ಅಗಸೆ ಬೀಜ- ಒಂದು ಚಮಚ, ಬೇಕಿದ್ದರೆ ಸಕ್ಕರೆ- ರುಚಿಗೆ ಬೇಕಷ್ಟು, ಹಸಿರು ಬಣ್ಣದ ಟೂಟಿಫ್ರೂಟಿ- ನಾಲ್ಕು ಚಮಚ, ಏಲಕ್ಕಿ ಸುವಾಸನೆಗೆ.
ತಯಾರಿಸುವ ವಿಧಾನ: ಎಲ್ಲಾ ಹಣ್ಣುಗಳಿಗೆ ಸಕ್ಕರೆ ಮತ್ತು ಚಿಟಿಕಿ ಏಲಕ್ಕಿ ಸೇರಿಸಿಕೊಂಡು ಚೆನ್ನಾಗಿ ಹಿಚುಕಿ ಮಿಶ್ರಮಾಡಿಡಿ. ನಂತರ ಇದಕ್ಕೆ ಹಾಲು ಸೇರಿಸಿ ಪುನಃ ಮಿಶ್ರಮಾಡಿ ಸರ್ವಿಂಗ್ ಕಪ್‌ಗೆ ಹಾಕಿ ಮೇಲಿನಿಂದ ಟೂಟಿಫ್ರೂಟಿ ಮತ್ತು ಅವಲಕ್ಕಿ ಹರಡಿ ಸರ್ವ್ ಮಾಡಬಹುದು.
ಕರಬೂಜ ವಿದ್ ಚಿಕ್ಕು ಸ್ಮೋದಿ
ಬೇಕಾಗುವ ಸಾಮಗ್ರಿ: ಸಣ್ಣಗೆ ಹಚ್ಚಿದ ಕರಬೂಜ- ಒಂದು ಕಪ್, ಚಿಕ್ಕು ಹಣ್ಣು- ಒಂದು, ಬಾಳೆಹಣ್ಣು- ಒಂದು, ಹಾಲು- ಒಂದೂವರೆ ಕಪ್, ಖರ್ಜೂರ- ಎರಡು, ಬೆಲ್ಲದಪುಡಿ- ಒಂದು ಚಮಚ, ಸಕ್ಕರೆ- ರುಚಿಗೆ ಬೇಕಷ್ಟು, ಏಲಕ್ಕಿ ಚಿಟಿಕಿ, ಹುರಿ ಅಗಸೆಬೀಜ- ಎರಡು ಚಮಚ.
ತಯಾರಿಸುವ ವಿಧಾನ: ಕರಬೂಜದ ಜೊತೆ ಚಿಕ್ಕು, ಬಾಳೆಹಣ್ಣು, ಸಕ್ಕರೆ, ಬೆಲ್ಲ, ಖರ್ಜೂರ ಇತ್ಯಾದಿಗಳನ್ನು ಸೇರಿಸಿ ಸ್ವಲ್ಪ ಹಾಲು ಹಾಕಿ ಮಿಕ್ಸಿಯಲ್ಲಿ ರುಬ್ಬಿ. ಪುನಃ ಉಳಿದ ಹಾಲು ಸೇರಿಸಿ ರುಬ್ಬಿ ಸರ್ವಿಂಗ್ ಕಪ್‌ಗೆ ಹಾಕಿ ಐಸ್‌ಪೀಸ್ ಮತ್ತು ಅಗಸೆ ಬೀಜ ಉದುರಿಸಿ ಸರ್ವ್ ಮಾಡಿ.
ಕರಬೂಜ ವಿದ್ ನೆಲ್ಲಿಕಾಯಿ ಜ್ಯೂಸ್
ಬೇಕಾಗುವ ಸಾಮಗ್ರಿ: ನೆಲ್ಲಿಕಾಯಿ- ಎರಡು, ಕರಬೂಜ- ಒಂದು ಕಪ್, ಜೇನುತುಪ್ಪ- ಎರಡು ಚಮಚ, ಸಕ್ಕರೆ ರುಚಿಗೆ ಬೇಕಷ್ಟು.
ತಯಾರಿಸುವ ವಿಧಾನ: ನೆಲ್ಲಿಕಾಯಿ, ಜೇನುತುಪ್ಪ, ಸಕ್ಕರೆ ಇವುಗಳನ್ನು ನುಣ್ಣಗೆ ರುಬ್ಬಿ. ನಂತರ ಇದಕ್ಕೆ ಕರಬೂಜ ಸೇರಿಸಿ ರುಬ್ಬಿ ಮಿಕ್ಸಿಂಗ್‌ಬೌಲ್‌ಗೆ ಹಾಕಿ ಬೇಕಷ್ಟು ನೀರು ಸೇರಿಸಿ ಹದ ಮಾಡಿಕೊಂಡು ಐಸ್‌ಪೀಸ್ ಸೇರಿಸಿ ಸರ್ವ್ ಮಾಡಬಹುದು.
ಕರಬೂಜದ ಕುಲ್ಫಿ
ಬೇಕಾಗುವ ಸಾಮಗ್ರಿ: ಹೆಚ್ಚಿದ ಕರಬೂಜ- ಒಂದು ಕಪ್, ಹೆಚ್ಚಿದ ಖರ್ಜೂರ- ಎರಡು, ಸೇಬು- ನಾಲ್ಕು ಚಮಚ, ಬಾಳೆಹಣ್ಣು – ನಾಲ್ಕು ಚಮಚ, ಸಪೋಟಾ- ನಾಲ್ಕು ಚಮಚ, ಜೇನುತುಪ್ಪ- ಒಂದು ಚಮಚ, ಸಕ್ಕರೆ-ರುಚಿಗೆ ಬೇಕಷ್ಟು, ಹಾಲು-ಒಂದೂವರೆ ಕಪ್, ಕಾರ್ನ್ ಫ್ಲೋರ್- ಎರಡು ಚಮಚ, ಏಲಕ್ಕಿಪುಡಿ- ಚಿಟಿಕೆ, ತೆಂಗಿನತುರಿ- ಒಂದು ಚಮಚ.
ತಯಾರಿಸುವ ವಿಧಾನ: ಕಾರ್ನ್ ಫ್ಲೋರ್ ಕಾಲು ಕಪ್ ನೀರಿನಲ್ಲಿ ಕರಗಿಸಿ ಕುದಿಯಲು ಇಟ್ಟ ಹಾಲಿಗೆ ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ. ನಂತರ ಇದಕ್ಕೆ ಸಕ್ಕರೆ ಸೇರಿಸಿ ಕುದಿಸಿ ಒಲೆಯಿಂದ ಇಳಿಸಿ ಆರಲು ಬಿಡಿ. ನಂತರ ಇದಕ್ಕೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ನುಣ್ಣಗೆ ರುಬ್ಬಿ ಕುಲ್ಫಿ ಮೋಡ್‌ಗೆ ಸುರಿದ ಫ್ರೀಜರ್‌ನಲ್ಲಿ ಸೆಟ್‌ಮಾಡಿದರೆ ಸುಮಾರು ನಾಲ್ಕು ಗಂಟೆಯ ನಂತರ ಸರ್ವ್ ಮಾಡಬಹುದು.
ಗೀತಸದಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.