ದೀಪಿಕಾ ರಾಗ
Team Udayavani, Oct 25, 2019, 4:13 AM IST
ಚಿತ್ರರಂಗದಲ್ಲಿ ಸಾಮಾನ್ಯವಾಗಿ ಸ್ಟಾರ್ ನಟ-ನಟಿಯರ ಖಾಸಗಿ ಬದುಕಿನ ಬಗ್ಗೆ ಒಂದಷ್ಟು ಗುಸು ಗುಸು ಯಾವಾಗಲೂ ಹರಿದಾಡುತ್ತಲೇ ಇರುತ್ತದೆ. ಅದರಲ್ಲೂ ಸ್ಟಾರ್ ಕಲಾವಿದರ ವೈಯಕ್ತಿಕ ಸಂಬಂಧಗಳ ಬಗ್ಗೆ ಅವರ ಅಭಿಮಾನಿಗಳಿಗೆ, ಮಾಧ್ಯಮಗಳಿಗೆ ಕೊಂಚ ಹೆಚ್ಚಾಗಿಯೇ ಕುತೂಹಲವಿರುತ್ತದೆ. ಇನ್ನು ಬಾಲಿವುಡ್‌ನ ಸ್ಟಾರ್ ಬಗ್ಗೆಯಂತೂ ಹೇಳ್ಳೋದೇ ಬೇಡ. ಕೆಲವೊಮ್ಮೆ ಅತಿರೇಕವೆನಿಸುವಷ್ಟು ಅವರ ಖಾಸಗಿ ಬದುಕಿನ ಸಂಗತಿಗಳ ಬಗ್ಗೆ ಚರ್ಚೆಯಾಗುತ್ತದೆ. ಆದರೆ, ಕೆಲವು ಸ್ಟಾರ್‌ಗಳು ಇವೆಲ್ಲ ಗಾಸಿಪ್, ರೂಮರ್ ಅನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತಾರೆ. ಅವುಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ತಮ್ಮ ಬಗ್ಗೆ ಹರಿದಾಡುತ್ತಿರುವ ಎಲ್ಲಾ ಅಂತೆ-ಕಂತೆ, ವದಂತಿಗಳ ಬಗ್ಗೆ ಬಿಚ್ಚು ಮಾತಾಡುತ್ತಾರೆ.
ಈಗ ಬಾಲಿವುಡ್‌ನ ಗುಳಿಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ಅಂಥದ್ದೇ ಕೂಡ ಒಂದು ನಿದರ್ಶನಕ್ಕೆ ಕಾರಣರಾಗಿದ್ದಾರೆ. ಅದರಲ್ಲೂ ತಮ್ಮ ಖಾಸಗಿ ಬದುಕಿನ ಬಗ್ಗೆ ಮಾತನಾಡಿರುವ ದೀಪಿಕಾ, ಮದುವೆಗೂ ಮುನ್ನ ರಣವೀರ್ ಸಿಂಗ್ ಜತೆ ಯಾಕೆ ಲೀವ್-ಇನ್ ಸಂಬಂಧ ಇಟ್ಟುಕೊಳ್ಳಲಿಲ್ಲ ಎಂಬುದನ್ನು ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ದೀಪಿಕಾ, “ಒಂದು ವೇಳೆ ಮದುವೆಗೂ ಮುಂಚೆ ನಾವಿಬ್ಬರೂ ಆ ರೀತಿ ಇದ್ದಿದ್ದರೆ ಒಬ್ಬರ ಬಗ್ಗೆ ಇನ್ನೊಬ್ಬರು ತಿಳಿದುಕೊಳ್ಳಲು ಏನು ಉಳಿದಿರುತ್ತಿತ್ತು’ ಎಂದಿದ್ದಾರೆ. ಈ ಮೂಲಕ ಮದುವೆಗೂ ಮುನ್ನವೇ ಸಹಜೀವನ ನಡೆಸಿದರೆ ಮದುವೆ ಬಳಿಕ ಒಬ್ಬರ ಬಗ್ಗೆ ಇನ್ನೊಬ್ಬರು ತಿಳಿದುಕೊಳ್ಳಲು ಏನೂ ಉಳಿದಿರಲ್ಲ ಎಂದು ದೀಪಿಕಾ ಪಡುಕೋಣೆ ಅಭಿಪ್ರಾಯಪಟ್ಟಿದ್ದಾರೆ.
“ಪ್ರೀತಿಯಲ್ಲಿ ಬಿದ್ದ ಕೂಡಲೆ ಸಹಜೀವನ ನಡೆಸಿದರೆ, ಬಳಿಕ ಒಬ್ಬರ ಬಗ್ಗೆ ಇನ್ನೊಬ್ಬರು ತಿಳಿದುಕೊಳ್ಳಲು ಏನಿರುತ್ತದೆ? ಸಾಮಾನ್ಯವಾಗಿ ಇಷ್ಟಪಟ್ಟವರ ಬಗ್ಗೆ ಮದುವೆಗೂ ಮುನ್ನ ತಿಳಿದುಕೊಳ್ಳಬೇಕೆಂಬ ಉದ್ದೇಶದಿಂದ ಈ ರೀತಿ ಮಾಡುತ್ತಿರುತ್ತಾರೆ. ಆದರೆ ನನಗೆ ಆ ಪದ್ಧತಿ ಇಷ್ಟವಾಗಲಿಲ್ಲ. ನಾವಿಬ್ಬರೂ ಸೂಕ್ತ ನಿರ್ಧಾರ ತೆಗೆದುಕೊಂಡಿರುವುದಾಗಿ ಭಾವಿಸಿದ್ದೇವೆ. ಮದುವೆ ಎಂದರೆ ಇಷ್ಟಪಡದವರು ಬಹಳಷ್ಟು ಮಂದಿ ಇದ್ದಾರೆ. ಆದರೆ, ನಾವು ಆ ರೀತಿಯ ವ್ಯಕ್ತಿಗಳಲ್ಲ. ನಮಗೆ ವಿವಾಹ ವ್ಯವಸ್ಥೆ ಬಗ್ಗೆ ನಂಬಿಕೆ ಇದೆ. ಈಗ ಗಂಡ ಹೆಂಡತಿಯಾಗಿ ಪ್ರತಿ ಕ್ಷಣವನ್ನೂ ಆಸ್ವಾದಿಸುತ್ತಿದ್ದೇವೆ’ ಎಂದಿದ್ದಾರೆ.
ಇನ್ನು ದೀಪಿಕಾ ಅವರ ಮಾತು ಕೇಳಿರುವ ಅವರ ಅಭಿಮಾನಿಗಳು, ತಮ್ಮ ನೆಚ್ಚಿನ ನಟಿಯ ಮಾತಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.