ಮನ ಗೆಲ್ಲುವ ಡೆನಿಮ್ ಉಡುಪುಗಳು
Team Udayavani, Aug 25, 2017, 7:00 AM IST
ದಿನದಿನಕ್ಕೆ ಬರುತ್ತಿರುವ ವಿನೂತನ ಬಗೆಯ ಮಾದರಿಯ ದಿರಿಸುಗಳ ನಡುವೆಯೂ ಎವರ್‌ಗ್ರೀನ್ ಸ್ಟೈಲ್ ಎನಿಸುವ ಬಟ್ಟೆಗಳು ಡೆನಿಮ್ ಬಟ್ಟೆಗಳು. ಇವು ದಪ್ಪವಾದ ಕಾಟನ್ ಬಟ್ಟೆಗಳಾಗಿದ್ದು ಸಾಮಾನ್ಯವಾಗಿ ನೀಲಿಯ ಹಲವು ಶೇಡುಗಳಲ್ಲಿ ದೊರೆಯುವಂತಹುದಾಗಿದೆ. ಇಂತಹ ಡೆನಿಮ್ ಬಟ್ಟೆಗಳು ಇಂದು ಫ್ಯಾಷನ್ ಲೋಕವನ್ನು ಆಳುತ್ತಿವೆ ಎನ್ನಬಹುದಾಗಿದೆ. ಕ್ಯಾಶುವಲ್ ವೇರಾಗಿ ಬಹಳ ಪ್ರಚಲಿತ ಮತ್ತು ಟ್ರೆಂಡಿಯಾದ ಬಗೆ ಇವಾಗಿದ್ದು ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯರವರೆಗೆ ಬಳಸಲ್ಪಡುತ್ತವೆ. ಕಾರಣ ಇವುಗಳ ವಿಶೇಷತೆ. ಇವುಗಳು ಧರಿಸಲು ಆರಾಮದಾಯಕ ಮತ್ತು ಇವುಗಳ ನಿರ್ವಹಣೆ ಬಹಳ ಸುಲಭವಾದುದು. ಸಾಲದೆಂಬಂತೆ ಎಲ್ಲಾ ಋತುಮಾನಗಳಿಗೂ, ಎಲ್ಲಾ ವಯೋಮಾನದವರಿಗೂ ಹಿಡಿಸುವಂತಹ ಮತ್ತು ಹೊಂದುವಂತಹ ಬಗೆಯ ಮಾದರಿಯ ದಿರಿಸುಗಳು ಇವುಗಳಿಂದ ತಯಾರಾಗುತ್ತವೆ. ಜೀನ್ಸ್‌ಗಳೂ ಕೂಡ ಈ ಡೆನಿಮ್‌ಬಟ್ಟೆಗಳಿಂದಲೇ ತಯಾರಾಗುವಂಥವುಗಳು. ಒಂದು ಕಾಲದಲ್ಲಿ ಡೆನಿಮ್ ಬಟ್ಟೆಗಳು ಕೇವಲ ಜೀನ್ಸ್‌ಪ್ಯಾಂಟುಗಳಿಗೆ ಮಾತ್ರ ಸೀಮಿತವಾಗಿದ್ದವು. ಆದರೆ ಇಂದು ಕೌಶಲ್ಯಯುತವಾದ ಪ್ರಯೋಗಗಳಿಗೊಳಪಟ್ಟು ಈ ಬಗೆಯ ಬಟ್ಟೆಗಳಿಂದ ಹಲವು ಬಗೆಯ ಶೈಲಿಯ ದಿರಿಸುಗಳನ್ನು ತಯಾರಿಸಲಾಗುತ್ತಿದೆ. ಡೆನಿಮ್ ಬಟ್ಟೆಗಳಿಂದ ಕೇವಲ ದಿರಿಸುಗಳಷ್ಟೇ ಅಲ್ಲದೆ ವಿವಿಧ ಬಗೆಯ ಫ್ಯಾಷನ್ ಆಕ್ಸೆಸ್ಸರಿಗಳು ಕೂಡ ತಯಾರಾಗುತ್ತಿವೆ. ಮತ್ತು ಸದ್ಯದ ಟ್ರೆಂಡಿ ದಿರಿಸುಗಳಲ್ಲಿ ಇವೂ ಸೇರ್ಪಡೆಗೊಂಡಿವೆ. ಅವುಗಳಲ್ಲಿ ಕೆಲವು ಟ್ರೆಂಡಿ ಬಗೆಗಳ ಪರಿಚಯ ಇಲ್ಲಿದೆ.
1 ಡೆನಿಮ್ ಪ್ಯಾಂಟುಗಳು: ಜೀನ್ಸ್ ಪ್ಯಾಂಟುಗಳು ಸಾಮಾನ್ಯವಾಗಿ ಎಲ್ಲರ ಬಳಿಯೂ ಇರುತ್ತವೆ. ಅತ್ಯಂತ ಸ್ಟೈಲಿಶ್ ಆದ ಕ್ಯಾಶುವಲ್ ವೇರ್ ಇದಾಗಿದೆ. ಇವುಗಳಲ್ಲಿ ಹಲವು ಬಗೆಯ ಮಾದರಿಗಳನ್ನು ಕಾಣಬಹುದಾಗಿದೆ. ಸ್ಕಿನ್ ಟೈಟ… ಜೀನ್ಸುಗಳು, ಆಂಕಲ… ಲೆಂತ್ ಜೀನ್ಸುಗಳು, ಆಸಿಡ್‌ವಾಶ್ ಜೀನ್ಸುಗಳು, ಶೇಡೆಡ್ ಜೀನ್ಸುಗಳು, ಜಾಗರ್ ಜೀನ್ಸುಗಳು, ಪ್ಯಾರಲಲ್ ಜೀನ್ಸುಗಳು, ಹೈವೈ ಜೀನ್ಸುಗಳು ಇತ್ಯಾದಿ ಬಗೆಗಳಲ್ಲಿ ಮಾರುಕಟ್ಟೆಯಲ್ಲಿ ಲಭಿಸುತ್ತವೆ. ಕುರ್ತಾಗಳು, ಕುರ್ತಿಗಳು, ಟೀಶರ್ಟುಗಳು ಇತ್ಯಾದಿ ಟಾಪ್ ವೇರುಗಳೊಂದಿಗೆ ಬಹಳ ಚಂದವಾಗಿ ಒಪ್ಪುತ್ತವೆ. ಅಲ್ಲದೆ ಲಾಂಗ್ ಕುರ್ತಾಗಳಿಗೆ ನೀ ಲೆಂತ್ ಜೀನ್ಸನ್ನು ಧರಿಸುವ ಬಗೆ ಹೊಸ ಬಗೆಯ ಇಂಡೋ ವೆಸ್ಟೆರ್ನ್ ದಿರಿಸುಗಳಲ್ಲಿ ಒಂದಾಗಿದೆ.
2 ಡೆನಿಮ್ ಡಾಂಗ್ರಿಗಳು: ದಶಕಗಳ ಹಿಂದೊಮ್ಮೆ ಬಹಳ ಪ್ರಚಲಿತವಾಗಿ ನಂತರ ಕಣ್ಮರೆಯಾಗಿ ಮತ್ತೆ ಟ್ರೆಂಡ್‌ಗೆ ಬಂದಿರುವ ಬಗೆ ಈ ಡಾಂಗ್ರಿಗಳು. ಇವುಗಳು ಬಹಳ ಸ್ಟೈಲಿಶ್ ಮತ್ತು ಸ್ಟ್ಯಾಂಡರ್ಡ್ ಲುಕ್ಕನ್ನು ನೀಡುವಂತಹ ದಿರಿಸುಗಳಾಗಿವೆ. ಇವುಗಳು ಪ್ಯಾಂಟಿನೊಂದಿಗೆ ಬಾಡಿ ಪಾರ್ಟ್ ಕೂಡಿಕೊಂಡಿರುವ ಬಗೆಯಾಗಿದ್ದು, ಬ್ಯಾಗ್ರೌಂಡಿನಲ್ಲಿ ಕಾಂಟ್ರಾr… ಬಣ್ಣದ ಟೀಶರ್ಟುಗಳನ್ನು ಧರಿಸುವಂತಹುದಾಗಿದೆ. ಮತ್ತೆ ಇಲ್ಲಿಯೂ ಕೂಡ ಹಲವು ಶೇಡುಗಳುಳ್ಳ ಡೆನಿಮ್‌ಗಳು ದೊರೆಯುತ್ತವೆ. ಗಾಢ ನೀಲಿ, ಆಕಾಶ ನೀಲಿ, ಶೇಡೆಡ್ ನೀಲಿ ಇತ್ಯಾದಿ ಬಗೆಗಳಲ್ಲಿ ದೊರೆಯುತ್ತವೆ.
3 ಡೆನಿಮ್ ಕುರ್ತಾಗಳು ಮತ್ತು ಕುರ್ತಿಗಳು: ಇವು ಇಂಡೋ ವೆಸ್ಟರ್ನ್ ಲುಕ್ಕನ್ನು ಕೊಡುವಂತಹ ಕುರ್ತಾಗಳಾಗಿವೆ. ಕುರ್ತಾಗಳಲ್ಲಿ ಲೇಟೆ… ಫ್ಯಾಷನ್ ಆಗಿರುವ ಡೆನಿಮ್ ಕುರ್ತಾಗಳು ಎಲಿಗ್ಯಾಂಟ್ ಲುಕ್ಕನ್ನು ನೀಡುತ್ತವೆ. ಇವುಗಳಲ್ಲಿ ಫ್ರಂಟ್ ಸ್ಲಿಟ್ ಸೈಡ್ ಸ್ಲಿಟ್ ಎ ಲೈನ್ ಕುರ್ತಾಗಳು ದೊರೆಯುತ್ತವೆ. ಬಿಳಿಯ ಬಣ್ಣದ ಲೆಗ್ಗಿಂಗುಗಳೊಂದಿಗೆ ಧರಿಸಿದಾಗ ಸುಂದರವಾಗಿ ಕಾಣುವಂತಹ ಬಗೆಗಳಾಗಿವೆ.
4 ಡೆನಿಮ್ ಶರ್ಟುಗಳು ಮತ್ತು ಜಾಕೆಟ್ಟುಗಳು: ಡೆನಿಮ್ ಶರ್ಟುಗಳು ಸ್ತ್ರೀ ಪುರುಷರೆಂಬ ಭೆೇದವಿಲ್ಲದೆ ತೊಡಬಹುದಾದ ಬಗೆಯಾಗಿದೆ. ಈ ಬಗೆಯ ಶರ್ಟುಗಳನ್ನು ಪ್ರಿಂಟೆಡ್ ಜೆಗ್ಗಿಂಗುಗಳು ಅಥವಾ ಇತರೆ ಟ್ರಾಸರ್ಸುಗಳೊಂದಿಗೆ ತೊಡಬಹುದಾಗಿದೆ. ಡೆನಿಮ್ ಜಾಕೆಟ್ಟುಗಳು ಮಲ್ಟಿಪರ್ಪಸ್ ಜಾಕೆಟ್ಟುಗಳಾಗಿವೆ. ಮಾಡರ್ನ್ ಮತ್ತು ಕುರ್ತಾಗಳಿಗೆ, ಲಾಂಗ್ ಸ್ಕರ್ಟುಗಳಿಗೆ ಎಲ್ಲಾ ಬಗೆಯ ದಿರಿಸುಗಳಿಗೂ ಹೊಂದುವಂತವುಗಳಾಗಿವೆ.
5 ಶಾರ್ಟ್ಸ್ ಮತ್ತು ಮಿನಿಸ್ಕರ್ಟುಗಳು, ಮಿನಿ ಡ್ರೆಸ್ಸುಗಳು: ಡೆನಿಮ್‌ನಿಂದ ತಯಾರಾದ ಶಾರ್ಟ್ಸ್, ಮಿನಿಸ್ಕರ್ಟುಗಳು, ಲಾಂಗ್ ಸ್ಕರ್ಟುಗಳು, ಎಲ್ಲವೂ ದೊರೆಯುವುದಲ್ಲದೆ ಬಹಳ ಟ್ರೆಂಡಿಯಾಗಿರುತ್ತವೆ.
6 ಜಂಪ್ ಸೂಟುಗಳು: ಇತ್ತೀಚೆಗೆ ಬಹಳ ರನ್ನಿಂಗ್ ಟ್ರೆಂಡ್ ಎಂದರೆ ಜಂಪ್ ಸೂಟುಗಳು. ಇವು ಎಲ್ಲಾ ಬಗೆಯ ಬಟ್ಟೆಗಳಲ್ಲಿಯೂ ದೊರೆಯುತ್ತವೆ. ಅಂತೆಯೇ ಡೆನಿಮ್ ಬಟ್ಟೆಯಲ್ಲಿಯೂ ತಯಾರಾದ ಜಂಪ್ ಸೂಟುಗಳು ದೊರೆಯುತ್ತವೆ. ಬಹಳ ಸ್ಟೈಲಿಶ್ ಆದ ಬಗೆಗಳು ಇವಾಗಿದ್ದು ಇನ್ನೂ ಕೂಡ ಮಹಾ ನಗರಗಳಿಗೆ ಮಾತ್ರ ಸೀಮಿತವಾದುದಾಗಿದೆ.
7 ಡೆನಿಮ್ ಫ್ರಾಕುಗಳು: ಡೆನಿಮ್ ಮಿನಿ ಫ್ರಾಕುಗಳು ಅಥವಾ ಮಿನಿ ಡ್ರೆಸ್ಸುಗಳು ದೊರೆಯುತ್ತವೆ. ಇವುಗಳಲ್ಲಿ ಹಲವು ಶೇಡಿಂಗುಗಳು ದೊರೆಯುತ್ತವೆ ಮತ್ತು ಯುವಜನತೆಯನ್ನು ತುಂಬ ಆಕರ್ಷಿಸುತ್ತಿರುವ ಬಗೆಗಳು ಇವುಗಳಾಗಿವೆ.
8 ಮಾಕ್ಸಿ ಡ್ರೆಸ್ಸುಗಳು: ಮಿನಿ ಡ್ರೆಸ್ಸುಗಳಂತೆಯೇ ಮ್ಯಾಕ್ಸಿ ಡ್ರೆಸ್ಸುಗಳೂ ದೊರೆಯುತ್ತವೆ. ಸೈಡ್ ಸ್ಲಿಟ… ಮ್ಯಾಕ್ಸಿ ಡ್ರೆಸ್ಸುಗಳೂ ದೊರೆಯುತ್ತವೆ.
9 ಪಟಿಯಾಲ ಅಥವಾ ಡೆನಿಮ್ ಧೋತಿ ಪ್ಯಾಂಟುಗಳು: ಬಹಳ ಸ್ಟೈಲಿಶ್ ಆದ ಡೆನಿಮ್ ಪಟಿಯಾಲ ಮಾದರಿಯ ಅಥವಾ ಧೋತಿ ಪ್ಯಾಂಟ್ ಇತ್ತೀಚಿನ ಲೇಟೆÓr… ಮಾದರಿಯಾಗಿದೆ. ಇವುಗಳೊಂದಿಗೆ ಬಗೆ ಬಗೆಯ ಟಾಪ್ ವೇರುಗಳನ್ನು ಟ್ರೈಮಾಡಿ ಟ್ರೆಂಡಿ ಲುಕ್ಕನ್ನು ಪಡೆಯಬಹುದಾಗಿದೆ.
10 ಡೆನಿಮ್ ಶೂಗಳು: ಕೇವಲ ದಿರಿಸುಗಳಿಗಷ್ಟೇ ಸೀಮಿತವಾಗಿರದೆ ಡೆನಿಮ್‌ನಿಂದ ಸುಂದರವಾಗಿ ಅಂಲಂಕೃತಗೊಂಡ ಶೂಗಳೂ ಕೂಡ ದೊರೆಯುತ್ತವೆ. ಸೋಲ್ ಸಾಧಾರಣ ಶೂಗಳಂತೆಯೇ ಇದ್ದು ಮೇಲ್ಭಾಗ ಡೆನಿಮ್ ಬಟ್ಟೆಯಿಂದ ತಯಾರಿಸಲಾಗಿರುತ್ತದೆ. ಕ್ಯಾಷುವಲ್ ಸಂದರ್ಭಗಳಿಗೆ ಇವು ಹೆಚ್ಚು ಸೂಕ್ತವಾದುದಾಗಿವೆ.
11 ಡೆನಿಮ್ ಬ್ಯಾಗುಗಳು: ಕಾಲೇಜ್ ಬ್ಯಾಗುಗಳು, ಪರ್ಸುಗಳು, ಸೈಡ್ ಬ್ಯಾಗುಗಳು ಮತ್ತು ಲಗೇಜ್ ಬ್ಯಾಗುಗಳೂ ಕೂಡ ಡೆನಿಮ್ ಬಟ್ಟೆಗಳಿಂದ ತಯಾರಿಸಲಾಗಿರುತ್ತವೆ. ಬಳಸಲು ಬಹಳ ಆರಾಮದಾಯಕವಾಗಿರುತ್ತವೆ. ನೋಡಲು ಕೂಡ ಸುಂದರವಾಗಿರುತ್ತವೆ.
ಹೀಗೆ ಹತ್ತು ಹಲವಾರು ಬಗೆಯ ಡೆನಿಮ್ ಉತ್ಪನ್ನಗಳು ಇಂದು ಟ್ರೆಂಡಿ ಎನಿಸಿವೆ. ಇವುಗಳ ವಿಶೇಷತೆ ಎಂದರೆ ಇವುಗಳು ಉತ್ತಮ ಬಾಳಿಕೆ ಬರುವಂಥವುಗಳು ಮತ್ತು ಎಲ್ಲಾ ಬಗೆಯ ಕಲರ್ ಕಾಂಪ್ಲೆಕ್ಷನ್ ಇರುವವರಿಗೂ ಈ ಶೇಡುಗಳು ಹೊಂದಿಕೆಯಾಗುತ್ತವೆ. ನೀವು ಕೂಡ ನಿಮಗಿಷ್ಟವಾದ ಡೆನಿಮ್ ಡ್ರೆಸ್ಸುಗಳನ್ನು ಬಳಸಿ ಟ್ರೆಂಡಿ ಸ್ಟೈಲನ್ನು ನಿಮ್ಮದಾಗಿಸಿಕೊಳ್ಳಿ.
– ಪ್ರಭಾ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.