ಬಿಸಿಲ ಧಗೆಗೆ ಹಸಿರು ತಂಬುಳಿಗಳು
Team Udayavani, Mar 24, 2017, 3:50 AM IST
ಇನ್ನೇನು ಬೇಸಿಗೆ ಪ್ರಾರಂಭವಾಯಿತು. ತಡೆಯಲಾರದ ಬಿಸಿಲ ಧಗೆಗೆ ದೇಹ ಮನಸ್ಸು ತಂಪಿಗಾಗಿ ಹಪಾಹಪಿಸುವಂತಾಗುತ್ತದೆ. ಹಿತ್ತಲಲ್ಲೇ ಇರುವ ಹಸಿರು ಸೊಪ್ಪುಗಳು, ಜೀರಿಗೆ, ಮಜ್ಜಿಗೆ ಇತ್ಯಾದಿ ಬಳಸಿ ತಯಾರಿಸುವ ಹಸಿರು ತಂಬುಳಿಗಳ ಸೇವನೆ ನಾಲಗೆಯ ರುಚಿಯನ್ನು ವೃದ್ಧಿಸುವುದರ ಜೊತೆಗೆ ಶರೀರವನ್ನೂ ತಂಪಾಗಿಸುತ್ತದೆ.
ಸಾಂಬಾರು ದೊಡ್ಡಪತ್ರೆ ಸೊಪ್ಪಿನ ತಂಬುಳಿ
ಬೇಕಾಗುವ ಸಾಮಗ್ರಿ: ಹೆಚ್ಚಿದ ಸೊಪ್ಪು- ಅರ್ಧ ಕಪ್, ತೆಂಗಿನ ತುರಿ – ಒಂದು ಕಪ್, ಜೀರಿಗೆ – ಒಂದು ಚಮಚ, ಕಾಳುಮೆಣಸು – ಎಂಟು, ಮಜ್ಜಿಗೆ – ಒಂದು ಕಪ್, ಉಪ್ಪು ರುಚಿಗೆ.
ತಯಾರಿಸುವ ವಿಧಾನ: ಬಾಣಲೆಗೆ ಒಂದು ಚಮಚ ತುಪ್ಪಹಾಕಿ ಕಾಳುಮೆಣಸನ್ನು ಹುರಿದುಕೊಂಡು ನಂತರ ಇದೇ ಬಾಣಲೆಯಲ್ಲಿ ಸಾಂಬಾರು ಸೊಪ್ಪನ್ನು ಬಾಡಿಸಿಕೊಳ್ಳಿ. ಆರಿದ ಮೇಲೆ ಬಾಡಿಸಿದ ಸೊಪ್ಪನ್ನು ಕಾಳುಮೆಣಸು, ಜೀರಿಗೆ, ತೆಂಗಿನತುರಿ, ಉಪ್ಪು$ ಹಾಗೂ ಸ್ವಲ್ಪ ಮಜ್ಜಿಗೆ ಜೊತೆ ಮಿಕ್ಸಿಜಾರಿನಲ್ಲಿ ನುಣ್ಣಗೆ ರುಬ್ಬಿ ಮಿಕ್ಸಿಂಗ್ ಬೌಲ್‌ನಲ್ಲಿ ಹಾಕಿ ಬೇಕಷ್ಟು ನೀರು ಹಾಗೂ ಉಳಿದ ಮಜ್ಜಿಗೆ ಸೇರಿಸಿ ತಂಬುಳಿಯ ಹದ ಮಾಡಿಕೊಂಡು ತುಪ್ಪದಲ್ಲಿ ಜೀರಿಗೆ ಒಗ್ಗರಣೆ ನೀಡಿ.
ಕಫ ಕಡಿಮೆ ಮಾಡುವ ಕ್ರಿಮಿಹರವಾದ ಈ ತಂಬುಳಿಯ ಸೇವನೆ ಚಿಣ್ಣರಿಗಂತೂ ಬಹಳ ಉತ್ತಮ.
ನೆಲನೆಲ್ಲಿ ಸೊಪ್ಪು ತಂಬುಳಿ
ಬೇಕಾಗುವ ಸಾಮಗ್ರಿ: ನೆಲನೆಲ್ಲಿ ಸೊಪ್ಪು- ಒಂದು ಹಿಡಿ, ಕಾಳುಮೆಣಸು – ಆರು, ತೆಂಗಿನತುರಿ – ಅರ್ಧ ಕಪ್, ಮಜ್ಜಿಗೆ – ಒಂದು ಕಪ್, ಉಪ್ಪು ರುಚಿಗೆ.
ತಯಾರಿಸುವ ವಿಧಾನ: ಸ್ವತ್ಛಗೊಳಿಸಿದ ಸೊಪ್ಪನ್ನು ಹೆಚ್ಚಿಕೊಂಡು ಸ್ವಲ್ಪ$ಮಜ್ಜಿಗೆ, ಉಪ್ಪು , ತೆಂಗಿನ ತುರಿ, ಕಾಳುಮೆಣಸಿನ ಜೊತೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ನಂತರ ಬೇಕಷ್ಟು ನೀರು ಹಾಗೂ ಉಳಿದ ಮಜ್ಜಿಗೆ ಬೆರೆಸಿ ತುಪ್ಪದಲ್ಲಿ ಕೆಂಪುಮೆಣಸು, ಜೀರಿಗೆ ಸೇರಿಸಿದ ಸಾಸಿವೆ ಒಗ್ಗರಣೆ ನೀಡಿದರೆ ತಂಬುಳಿ ರೆಡಿ.
ಪಿತ್ತಶಮನಕಾರಿಯಾದ ಇದರ ಸೇವನೆಯಿಂದ ಹಸಿವು ವೃದ್ಧಿಸುವುದು ಹಾಗೂ ಕಾಮಾಲೆಗೆ ಬಹಳ ಉತ್ತಮ.
ದಾಸವಾಳ ಸೊಪ್ಪಿನ ತಂಬುಳಿ
ಬೇಕಾಗುವ ಸಾಮಗ್ರಿ : ದಾಸವಾಳ ಸೊಪ್ಪು- ಒಂದು ಹಿಡಿ, ತೆಂಗಿನ ತುರಿ- ಅರ್ಧ ಕಪ್, ಜೀರಿಗೆ- ಒಂದು ಚಮಚ, ಮಜ್ಜಿಗೆ- ಒಂದು ಕಪ್, ಉಪ್ಪು ರುಚಿಗೆ.
ತಯಾರಿಸುವ ವಿಧಾನ: ಹೆಚ್ಚಿದ ದಾಸವಾಳ ಸೊಪ್ಪನ್ನು ಬಾಣಲೆಯಲ್ಲಿ ಸ್ವಲ್ಪ ತುಪ್ಪಹಾಕಿಕೊಂಡು ಬಾಡಿಸಿಕೊಳ್ಳಿ. ಆರಿದಮೇಲೆ ಇದಕ್ಕೆ ತೆಂಗಿನ ತುರಿ, ಜೀರಿಗೆ, ಉಪ್ಪು ಮತ್ತು ಸ್ವಲ್ಪ ಮಜ್ಜಿಗೆ ಸೇರಿಸಿ ನುಣ್ಣಗೆ ರುಬ್ಬಿ. ನಂತರ ಇದಕ್ಕೆ ಬೇಕಷ್ಟು ನೀರು, ಮಜ್ಜಿಗೆ ಸೇರಿಸಿ ತಂಬುಳಿ ಹದ ಮಾಡಿಕೊಂಡು ಸಾಸಿವೆ ಒಗ್ಗರಣೆ ನೀಡಿ.
ವಾತ, ಪಿತ್ತಹರವಾದ ತಂಪು ಗುಣದ ಈ ತಂಬುಳಿಯ ಸೇವನೆ ಬೇಸಿಗೆಗೆ ಬಹಳ ಹಿತ ನೀಡುವುದು. ಉಷ್ಣದಿಂದಾಗಿ ಪದೇಪದೆ ಕುರ, ಬೊಕ್ಕೆಗಳು ಬೀಳುವವರಿಗಂತೂ ಇದರ ಸೇವನೆ ಬಹಳ ಉತ್ತಮ
ಕೊತ್ತಂಬರಿ ಸೊಪ್ಪಿನ ತಂಬುಳಿ
ಬೇಕಾಗುವ ಸಾಮಗ್ರಿ: ಕೊತ್ತಂಬರಿ ಸೊಪ್ಪು- ಒಂದು ಹಿಡಿ, ತೆಂಗಿನ ತುರಿ – ಅರ್ಧ ಕಪ್, ಮಜ್ಜಿಗೆ – ಒಂದು ಕಪ್, ಕಾಳುಮೆಣಸು – ಆರು, ಜೀರಿಗೆ- ಒಂದು ಚಮಚ, ಉಪ್ಪು ರುಚಿಗೆ.
ತಯಾರಿಸುವ ವಿಧಾನ: ಹೆಚ್ಚಿಕೊಂಡ ಸೊಪ್ಪನ್ನು ತೆಂಗಿನ ತುರಿ, ಕಾಳುಮೆಣಸು, ಉಪ್ಪು ಹಾಗೂ ಸ್ವಲ್ಪ ಮಜ್ಜಿಗೆ ಜೊತೆ ನುಣ್ಣಗೆ ರುಬ್ಬಿ. ನಂತರ ಇದಕ್ಕೆ ಬೇಕಷ್ಟು ನೀರು ಮತ್ತು ಉಳಿದ ಮಜ್ಜಿಗೆ ಸೇರಿಸಿ ಹದ ಮಾಡಿಕೊಂಡು ಜೀರಿಗೆ ಒಗ್ಗರಣೆ ನೀಡಿ.
ಸುವಾಸನಾಯುಕ್ತವಾದ ತಂಪುಗುಣದ ಈ ತಂಬುಳಿಯ ಸೇವನೆ ರಕ್ತಶುದ್ಧಿಗೆ, ಅಜೀರ್ಣಕ್ಕೆ ಬಹಳ ಉತ್ತಮ.
ಗೀತಸದಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.