ಕುಪ್ಪಸಗಳಿಗೆ ಬಗೆಬಗೆ ತೋಳುಗಳು
Team Udayavani, Oct 27, 2017, 6:30 AM IST
ದಕ್ಷಿಣ ಭಾರತದ ಮಹಿಳೆಯರ ಸಾಂಪ್ರದಾಯಿಕ ಉಡುಪೆನಿಸಿದ ಸೀರೆಗಳ ಅಂದವನ್ನು ಹೆಚ್ಚಿಸುವ ಕೆಲವು ಆಭರಣಗಳು, ಟ್ಯಾಸೆಲ್ಲುಗಳು, ಬ್ಲೌಸುಗಳ ನೆಕ್ ಮಾದರಿಗಳ ಬಗೆಗೆ ಹಿಂದಿನ ಸಂಚಿಕೆಗಳಲ್ಲಿ ಈಗಾಗಲೇ ಚರ್ಚಿಸಲಾಗಿದೆ. ಇಂದು ಬ್ಲೌಸುಗಳ ಅಂದವನ್ನು ಹೆಚ್ಚಿಸುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುವ ತೋಳುಗಳ ವಿಧಗಳಲ್ಲಿ ಆಯ್ದ ಬಗೆಗಳ ಮಾಹಿತಿಯನ್ನು ನೀಡಲಾಗಿದೆ. ತೋಳುಗಳಲ್ಲಿ ಹಲವಾರು ವಿಧಗಳನ್ನು ನೋಡಬಹುದು. ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಲೋಕದಲ್ಲಿ ಸೀರೆಗಳಿಗಿಂತ ಹೆಚ್ಚಿನ ಮಹತ್ವವನ್ನು ಬ್ಲೌಸುಗಳಿಗೆ ನೀಡಲಾಗುತ್ತದೆ. ದಿನದಿಂದ ದಿನಕ್ಕೆ ಹೊಸ ಹೊಸ ಮಾದರಿಯ ತೋಳುಗಳ ಡಿಸೈನ್ ಸಿದ್ಧಗೊಳ್ಳುತ್ತಿರುತ್ತವೆ. ಅವುಗಳಲ್ಲಿ ಹಲವು ಬಗೆಗಳನ್ನು ನಾವೇ ಸ್ವತಃ ನಮಗೆ ಬೇಕಾದಂತೆ ಡಿಸೈನ್ ಕೂಡ ಮಾಡಿಕೊಳ್ಳಬಹುದು. ಆದರೆ ಅವುಗಳ ಬಗೆಗಿನ ಮಾಹಿತಿ ಆವಶ್ಯಕವಾಗಿರುತ್ತವೆ. ಸೂಕ್ತವಾದ ಬಗೆಯನ್ನು ಆಯ್ದುಕೊಳ್ಳುವುದು ಅತ್ಯಂತ ಮುಖ್ಯವಾದುದಾಗಿದೆ. ಅಂತಹ ಟ್ರೆಂಡಿ ಬಗೆಗಳು ಇಂತಿವೆ.
1 ಕ್ವಾರ್ಟರ್ ಸ್ಲೀವ್ಸ್ : ಇದು ಈಗಾಗಲೇ ಪ್ರಚಲಿತದಲ್ಲಿರುವ ಮತ್ತು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ತೋಳಿನ ಬಗೆಯಾಗಿದೆ. ಹೆಸರಿಗೆ ತಕ್ಕಂತೆ ತ್ರಿಫೋರ್ತ್ ತೋಳುಗಳಿವಾಗಿದ್ದು ಕೈಗಳ ಮುಕ್ಕಾಲು ಭಾಗವನ್ನು ಕವರ್ ಮಾಡುತ್ತವೆ. ಈ ಮಾದರಿಗಳು ಎಲ್ಲಾ ಬಗೆಯ ನೆಕ್ ಡಿಸೈನುಗಳಿಗೆ ಹೊಂದುತ್ತವೆ ಮತ್ತು ಎಲ್ಲಾ ವಯೋಮಾನದವರೂ ಬಳಸಲು ಇಚ್ಛಿಸುವಂತಹುದಾಗಿದೆ. ಇವುಗಳು ಸೀರೆಗಳಿಗೆ ಎಲಿಗ್ಯಾಂಟ್ ಲುಕ್ಕನ್ನು ನೀಡುತ್ತವೆ ಹಾಗೂ ಎಥಿಕ್ ಸೀರೆಗಳು, ಕಾಟನ್ ಸೀರೆಗಳಿಗೆ ಬಹಳ ಚೆನ್ನಾಗಿ ಒಪ್ಪುತ್ತವೆ.
2 ಫುಲ್ ಸ್ಲೀವ್ಸ್: ಹಿಸ್ಟರಿ ರಿಪೀಟ್ಸ… ಎಂಬುದು ಫ್ಯಾಷನ್ ಲೋಕಕ್ಕೆ ಬಹಳ ಸೂಕ್ತವೆನಿಸುತ್ತವೆ. ಕೆಲವು ಫ್ಯಾಷನ್ನುಗಳು ಪೀರಿಯಾಡಿಕ್ ಆಗಿ ಸುತ್ತುತ್ತಾ ಇರುತ್ತವೆ. ಇದಕ್ಕೆ ಉದಾಹರಣೆಯಾಗಿ ಫುಲ್‌ಸ್ಲೀವ್ಸ್ ಗಳು. ಸುಂದರವಾಗಿ ಡಿಸೈನ್‌ಗೊಳಿಸಲಾದ ಫಲ್ ಸ್ಲೀವ್ಸ್ ಬ್ಲೌಸುಗಳು ದೊರೆಯುತ್ತವೆ. ಇವುಗಳು ಚಳಿಗಾಲಕ್ಕೆ ಸೂಕ್ತವೆನಿಸುತ್ತವೆ ಆದರೆ ಬೇಸಿಗೆಯಲ್ಲಿ ಧರಿಸಲು ಸೂಕ್ತವೆನಿಸುವುದಿಲ್ಲ. ಈ ಬಗೆಯ ತೋಳುಗಳು ಶಿಫಾನ್, ಸ್ಯಾಟಿನ್ ಅಥವ ನೆಟ್ ಸೀರೆಗಳೊಂದಿಗೆ ಧರಿಸಿದಾಗ ಸುಂದರವಾಗಿ ಕಾಣತ್ತವೆ.
3 ಕ್ಯಾಪ್ ಸ್ಲೀವ್ಸ್: ಅಗಲವಾದ ಭುಜಗಳನ್ನು ಹೊಂದಿದವರಿಗೆ ಈ ಬಗೆಯ ಕ್ಯಾಪ್ ಸ್ಲೀವ್ಸ್ ಹೆಚ್ಚು ಸೂಕ್ತವೆನಿಸುತ್ತವೆ. ಇವುಗಳು ಸ್ಲೀವ್ಸ್ಸ್ ಮತ್ತು ಶಾರ್ಟ್ ತೋಳುಗಳ ನಡುವಿನ ಅಳತೆಯನ್ನು ಹೊಂದಿರುತ್ತವೆ. ಕೆಲವು ಜಾರ್ಜೆಟ್ ಬ್ಲೌಸುಗಳಿಗೆ ಸೂಕ್ತ. ಈ ಬಗೆಯ ತೋಳುಗಳನ್ನು ಇಡಿಸುವಾಗ ಯಾವ ಬಟ್ಟೆಯ ಬ್ಲೌಸುಗಳೆನ್ನುವುದು ಮುಖ್ಯವಾಗಿರುತ್ತದೆ. ಸಾಂಪ್ರದಾಯಿಕ ಸೀರೆಗಳಿಗೆ ಸ್ವಲ್ಪ ಮಾಡರ್ನ್ ಟಚ್ ಅನ್ನು ಕೊಡುವಲ್ಲಿ ಈ ಬಗೆಯ ಕ್ಯಾಪ್ ಸ್ಲೀವ್ಸ್ ಯಶಸ್ವಿಯಾಗುತ್ತವೆ ಎನ್ನಬಹುದಾಗಿದೆ.
4 ಕೋಲ್ಡ್ ಶೋಲ್ಡರ್ ಸ್ಲೀವ್ಸ್: ಈ ಬಗೆಯ ತೋಳುಗಳು ಸಧ್ಯದ ರನ್ನಿಂಗ್ ಟ್ರೆಂಡಾಗಿದೆ. ಟಾಪುಗಳಲ್ಲಿ, ಗೌನುಗಳಲ್ಲಿ, ಮಿನಿ ಸ್ಕರ್ಟುಗಳಲ್ಲಿ ಇನ್ನಿತರ ಮಾಡರ್ನ್ ಬಗೆಯ ದಿರಿಸುಗಳಲ್ಲಿ ಈ ಬಗೆಯ ತೋಳುಗಳು ಬಹಳ ವೇಗದಲ್ಲಿ ಪ್ರಚಲಿತವಾಗುತ್ತಿವೆ. ಅಂತೆಯೇ ಸೀರೆಗಳ ಬ್ಲೌಸುಗಳಲ್ಲಿಯೂ ಈ ಬಗೆಯ ತೋಳುಗಳನ್ನು ಇಡಿಸುವುದರಿಂದ ಸೀರೆಗೆ ಮಾಡರ್ನ್ ಟಚ್ ನೀಡಿದಂತಾಗುತ್ತದೆ. ಮಾಡರ್ನ್ ಇರುವಂಥವರು ಎಥಿ°ಕ್ ಸೀರೆಗಳನ್ನು ಧರಿಸುವಂತಹ ಸಂದರ್ಭಗಳಲ್ಲಿ ಈ ಬಗೆಯ ಕೋಲ್ಡ್ ಶೋಲ್ಡರ್ ಸ್ಲೀವ್ಸ್ ಬ್ಲೌಸುಗಳನ್ನು ಹೆಚ್ಚು ಇಷ್ಟಪಡುವಂತದ್ದಾಗಿದೆ. ಸಖತ್ ಸ್ಟೈಲಿಶ್ ಮತ್ತು ಎಲಿಗ್ಯಾಂಟ್ ಲುಕ್ಕನ್ನು ನೀಡುವುದರೊಂದಿಗೆ ಸಾಂಪ್ರದಾಯಿಕ ಸೀರೆಗಳನ್ನು ಇಂಡೋ-ವೆಸ್ಟರ್ನ್ ಆಗಿ ಪರಿಣಮಿಸುತ್ತವೆ.
5 ಹಾಫ್ ಸ್ಲೀವ್ಸ್: ಇವು ಬಹಳ ಹಿಂದಿನಿಂದಲೂ ಬಳಕೆಯಲ್ಲಿರುವ ತೋಳುಗಳ ಬಗೆಯಾಗಿದೆ. ಹಳೆಯದಾದರೂ ಸಹ ಎವಗ್ರೀನ್ ಎನಿಸುವಂತಹ ಬಗೆಯಾಗಿದೆ. ನಿತ್ಯ ಬಳಕೆಗೆ ಬಹಳ ಆರಾಮದಾಯಕವಾಗಿರುತ್ತವೆ. ಸಿಂಪ್ಲಿಸಿಟಿಯನ್ನು ಇಚ್ಛಿಸುವವರು ಇವುಗಳನ್ನು ಹೆಚ್ಚು ಬಳಸಲು ಇಚ್ಛಿಸುತ್ತಾರೆ. ಎಲ್ಲಾ ಬಗೆಯ ಬಟ್ಟೆಗಳ ಸೀರೆಗಳೊಂದಿಗೂ ಹೊಂದುವಂತಹವುಗಳಾಗಿವೆ.
6 ಸ್ಲೀವ್ಸ್ ಬ್ಲೌಸುಗಳು: ಬಹಳ ಬೋಲ್ಡ್ ಲುಕ್ಕನ್ನು ಕೊಡುವ ಬಗೆಯ ಬ್ಲೌಸುಗಳು ಸ್ಲೀವ್ಸ್ ಬ್ಲೌಸುಗಳು. ಶೋಲ್ಡರ್‌ನ ವಿಧಗಳಿಗನುಗುಣವಾದ ಬಗೆಯನ್ನು ಆಯ್ಕೆ ಮಾಡುವುದು ಸೂಕ್ತವಾದುದು. ಈ ಬಗೆಯ ಬ್ಲೌಸುಗಳು ಎಲ್ಲಾ ಸೀರೆಗಳಿಗೂ ಸಾಮಾನ್ಯವಾಗಿ ಒಪ್ಪುತ್ತವೆ. ಹೆಸರಿಗೆ ತಕ್ಕಂತೆ ತೋಳುಗಳಿಲ್ಲದ ಕೇವಲ ಶೋಲ್ಡರ್ ಹೊಂದಿರುವ ಬಗೆಯಾಗಿದ್ದು ಸೆಲೆಬ್ರೆಟಿಗಳಿಂದ ಹೆಚ್ಚು ಬಳಸಲ್ಪಡುತ್ತವೆ. ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ಇವು ಸೂಕ್ತವಾದುದಲ್ಲ ಬದಲಾಗಿ ಪಾರ್ಟಿವೇರ್ ಸೀರೆಗಳೊಂದಿಗಿನ ಬಳಕೆ ಹೆಚ್ಚು ಸೂಕ್ತವೆನಿಸುತ್ತವೆ.
7 ಪಫ್ ಸ್ಲೀವ್ಸ್: ಗುಬ್ಬಿ ತೋಳು ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಬಹಳ ಹಳೆಯದಾದ ತೋಳ್ಬಗೆಯೇ ಪಫ್ ಸ್ಲೀವ್ಸ್ ಇವುಗಳು ಅಷ್ಟೇನು ಟ್ರೆಂಡಿಯಾಗಿರದಿದ್ದರೂ ಚಾರ್ಮಿಂಗ್ ಮತ್ತು ಒಂದು ಬಗೆಯ ಕ್ಯೂಟ್ ಲುಕ್ಕನ್ನು ನೀಡುತ್ತವೆ. ವೈವಿಧ್ಯವಾದ ಬಗೆಯ ಸ್ಟೈಲುಗಳನ್ನು ಇಚ್ಛಿಸುವವರು ತಮ್ಮಲ್ಲಿ ಈ ಬಗೆಯ ಬ್ಲೌಸಿನ ಕಲೆಕ್ಷನ್ ಮಾಡಿಕೊಂಡು ಧರಿಸಬಹುದು. ಈ ಬಗೆಯ ತೋಳುಗಳು ಕೆಲವು ಆಧುನಿಕ ಶೈಲಿಯ ಬಟ್ಟೆಗಳ ತೋಳುಗಳಲ್ಲಿಯೂ ಕಾಣಸಿಗುತ್ತವೆ ಮತ್ತು ಟ್ರೆಂಡಿಯಾಗಿವೆ.
8 ಕೇಪ್ ಸ್ಲೀವ್ಸ್: ಕೇಪ್ ಬ್ಲೌಸುಗಳು ಈಗಿನ ಟ್ರೆಂಡಿ ಫ್ಯಾಷನ್ ಜಗತ್ತಿನಲ್ಲಿ ಮುಂಚೂಣಿಯಲ್ಲಿರುವ ಸ್ಟೈಲ್ ಆಗಿದೆ. ಬೇಸ್‌ನಲ್ಲಿ ಸ್ಲೀವ್ಸ್ ಬ್ಲೌಸುಗಳಿದ್ದು ಮೇಲಿಂದ ಕೇಪ್ ಬರುವ ಸುಂದರವಾದ ಬ್ಲೌಸ್ ಮಾದರಿಯೆನಿಸಿದೆ. ತೋಳ ಬದಲು ಕೇಪ್ ತೋಳಿನ ಸ್ಥಾನವನ್ನು ಪಡೆದು ಮತ್ತೆ ಸೀರೆಗೆ ಫ್ಯೂಷನ್ ಲುಕ್ಕನ್ನು ಕೊಡುತ್ತವೆ. ಸಧ್ಯದಲ್ಲಿ ಸೆಲೆಬ್ರೆಟಿಗಳ ಅಚ್ಚುಮೆಚ್ಚಿನ ಬಗೆ ಇವಾಗಿವೆ. ನಾನಾ ಬಗೆಯ ಬಟ್ಟೆಗಳಲ್ಲಿ, ಡಿಸೈನುಗಳಲ್ಲಿ ದೊರೆಯುತ್ತವೆ ಮತ್ತು ನೋಡಲು, ಧರಿಸಲು ಬಹಳ ಸುಂದರವಾಗಿಯೂ ಆಕರ್ಷಕವಾಗಿಯೂ ಇರುತ್ತವೆ.
9 ಆಫ್ ಶೋಲ್ದರ್ ಸ್ಲೀವ್ಸ್ : ಇವುಗಳೂ ಕೂಡ ಬೋಲ್ಡ್ ಆದ ಲುಕ್ಕನ್ನು ಕೊಡುವ ಸ್ಟೈಲಿಶ್ ಬಗೆಗಳು. ಸಾಮಾನ್ಯವಾಗಿ ಸೆಲೆಬ್ರೆಟಿಗಳಿಂದ ಹೆಚ್ಚು ಬಳಸಲ್ಪಡುತ್ತಿರುವ ಬಗೆಗಳಾಗಿವೆ. ಇವು ನಿಧಾನವಾಗಿ ಜನ ಸಾಮಾನ್ಯರನ್ನು ತನ್ನೆಡೆಗೆ ಆಕರ್ಷಿಸುತ್ತಿರುವಂತಹ ಮಾದರಿಯಾಗಿದೆ. ಇವುಗಳೂ ಕೂಡ ಕೇಪ್, ಕೋಲ್ಡ್ ಶೋಲ್ಡರ್‌ಗಳಂತೆ ಸೀರೆಗೆ ಫ್ಯೂಶನ್ ಲುಕ್ಕನ್ನು ನೀಡುತ್ತವೆ. ಇವುಗಳು ಶೋಲ್ಡರ್‌ನಿಂದ ಕೆಳಗಿಳಿದಂತಿರುವ ಬಗೆಯ ಬ್ಲೌಸುಗಳಾಗಿದ್ದು ಫ್ಯಾಷನೇಬಲ್ ಆಗಿರುತ್ತವೆ.
– ಪ್ರಭಾ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.