ವಿಚ್ಛೇದನೋತ್ಸವ ಸಂಭ್ರಮ
Team Udayavani, May 5, 2017, 3:54 PM IST
ಆಂಜೆಲಿನಾ ಜೋಲಿ ಕುಳಿತರೂ ಸುದ್ದಿಯೇ, ನಿಂತರೂ ಸುದ್ದಿಯೇ. ಮದುವೆಯಾದರೂ ಸುದ್ದಿಯೇ, ಡೈವೋರ್ಸ್ ಕೊಟ್ಟರೂ ಸುದ್ದಿಯೇ.
ಹಾಲಿವುಡ್‌ನ ಈ ಜಗದ್ವಿಖ್ಯಾತ ನಟಿ ಹುಟ್ಟಿದ್ದು ಕ್ಯಾಲಿಫೋರ್ನಿಯಾದಲ್ಲಿ. ಹತ್ತು ವರ್ಷಗಳ ಹಿಂದೆ ಬ್ರಾಡ್‌ಪಿಟ್ ಎಂಬ ವಿವಾಹಿತ ನಟನೊಂದಿಗೆ ಸಹಜೀವನ ಆರಂಭಿಸಿದಾಗ ಯಾರೂ ಹುಬ್ಬೇರಿಸಲಿಲ್ಲ. ಏಕೆಂದರೆ ಜೋಲಿಯ ಪ್ರಿಯಕರರಲ್ಲಿ ಆತ ಎಷ್ಟನೆಯವನೆಂದು ಆಕೆ ಮಾತ್ರ ಬಲ್ಲವಳಾಗಿದ್ದಳು.
ಈಗ ಸುದ್ದಿಯಾಗಿರುವುದು ಅದಕ್ಕಲ್ಲ, ಆಕೆ ಲಂಡನ್‌ನಲ್ಲಿ ಇತ್ತೀಚೆಗೆ ತನ್ನ “ವಿಚ್ಛೇದನ ಉತ್ಸವ’ವನ್ನು ಅಭಿಮಾನಿಗಳೊಂದಿಗೆ ಆಚರಿಸಿದ್ದಾಳೆ! ಬ್ರಾಡ್‌ಪಿಟ್‌ನಿಂದ ದೂರವಾದರೂ ಆತನೊಂದಿಗೆ ಸಾಂಸಾರಿಕವಾದ ಸಂಬಂಧ ಇನ್ನೂ ಮುಂದುವರಿದಿದೆ ಎಂದು ಎಲ್ಲರೂ ಭಾವಿಸಿದ್ದರು.
ಆದರೆ, ಅದು ನಿಜವಲ್ಲ , ನಾನೀಗ “ಫ್ರೀ ಬರ್ಡ್’ ಎಂಬಂತೆ ಆಕೆ ತನ್ನ ಬದುಕಿನ ಪ್ರಮುಖ ಘಟನೆಯನ್ನು ಸಂಭ್ರಮದಂತೆ ಅನುಭವಿಸಿದ್ದಾಳೆ. ಇದನ್ನು ಆಕೆಯೇ “ಮುಕ್ತತೆಯ ಉತ್ಸವ’ವೆಂದು ಖುಷಿ ಪಟ್ಟಿದ್ದಾಳೆ.
ಹಾಲಿವುಡ್‌ನಲ್ಲಿ ಅತ್ಯಂತ ಹೆಚ್ಚು ಸಂಭಾವನೆಯನ್ನು ಪಡೆಯುತ್ತಿದ್ದಳೆನ್ನಳಾದ ಮತ್ತು ಅಷ್ಟೊಂದು ಅಧಿಕ ಮೊತ್ತದ ಸಂಭಾವನೆಯನ್ನು ಪಡೆಯಬಾರದೆಂದು ಬೇರೆ ನಟಿಯರಿಂದ ಒತ್ತಡಕ್ಕೆ ಒಳಗಾಗಿದ್ದ ಆಂಜೆಲಿನಾ ಜೋಲಿಯದ್ದು ವಿಲಕ್ಷಣ ಬದುಕು. ಆಕೆಯ ಹೆತ್ತವರಿಬ್ಬರೂ ಹಾಲಿವುಡ್ ನಟನಾ ಜಗತ್ತಿನಲ್ಲಿ ಪ್ರಸಿದ್ಧರಾಗಿದ್ದರು. ಇಬ್ಬರೂ ವಿಚ್ಛೇದನಗೊಂಡಾಗ ತಾಯಿಯ ಆಶ್ರಯದಲ್ಲಿ ಬೆಳೆಯುವ ಅನಿವಾರ್ಯತೆ ಉಂಟಾಯಿತು. 14ನೆಯ ವರ್ಷದಲ್ಲಿಯೇ ಅವಳಿಗೊಬ್ಬ ಬಾಯ್‌ಫ್ರೆಂಡ್ ಇದ್ದನಂತೆ. ಮುಂದೆ ಜಾನಿ ಲೀ ಮಿಲ್ಲರ್ ಸ್ನೇಹ ಬೆಳೆದು ಆತನನ್ನು ಮದುವೆಯೂ ಆದಳು. ಈ ಮಧ್ಯೆ ದ್ವಿಲಿಂಗಿಯಾಗಿಯೂ ಆಕೆ ಸುದ್ದಿಯಾಗಿದ್ದಳು. ಮುಂದೆ ಪ್ರಸಿದ್ಧ ಹಾಲಿವುಡ್ ನಟ ಬ್ರಾಡ್‌ಪಿಡ್‌ನೊಂದಿಗೆ ಸ್ನೇಹ ಬೆಳೆದು ಆತ ತನ್ನ ನಟಿ ಪತ್ನಿಯಿಂದ ದೂರವಾಗಿ ಜೋಲಿಯನ್ನೇ ಮದುವೆಯಾದ. ತನ್ನ ಹೆಸರನ್ನು “ಜೋಲಿ ಪಿಟ್’ ಎಂದು ಕೆಲವು ಸಮಯ ಬದಲಾಯಿಸಿಕೊಂಡಳು.
ನಲ್ವತ್ತೂಂದರ ಹರೆಯದ ಹಲವು ಮಕ್ಕಳ ತಾಯಿ ಆಂಜೆಲಿನಾ ಜೋಲಿ ಎರಡು ವರ್ಷಗಳ ಹಿಂದೆ ಸ್ತನದ ಕ್ಯಾನ್ಸರ್‌ಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು.
ಪ್ರಸ್ತುತ ಬ್ರಿಟಿಷ್ ಉದ್ಯಮಸಾಹಸಿಯೊಬ್ಬನ ಜೊತೆಗೆ ಆಕೆಯ ಡೇಟಿಂಗ್ ನಡೆಯುತ್ತಿದೆ ಎಂದು ಸುದ್ದಿ! ಆಲ್ ದಿ ಬೆಸ್ಟ್ !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.