ಭವ್ಯವಾಗಿರುವ ದಿವ್ಯಾ
Team Udayavani, Mar 16, 2018, 8:15 AM IST
ಪ್ರತಿಭೆ, ಸೌಂದರ್ಯ, ಶ್ರೀಮಂತಿಕೆ, ಸೃಜನಶೀಲತೆ ಹೀಗೆ ಎಲ್ಲ ಗುಣಗಳೂ ಒಬ್ಬರಲ್ಲೇ ಇರುವುದು ವಿರಳಾತಿವಿರಳ. ಇಂತಹ ವಿರಳ ವ್ಯಕ್ತಿಗಳ ಸಾಲಿಗೆ ಸೇರಿದವಳು ದಿವ್ಯಾ ಖೋಸ್ಲ ಕುಮಾರ್. ಇಷ್ಟುದ್ದ ಹೆಸರಿನ ಇವಳಾರಪ್ಪ ಎಂದು ತಲೆ ತುರಿಸುವುದು ಬೇಡ. ಟಿ-ಸಿರೀಸ್ ಮಾಲಕ ಭೂಷಣ್ ಕುಮಾರ್ ಹೆಂಡತಿ ಎಂದರೆ ಸುಲಭದಲ್ಲಿ ಪರಿಚಯ ಮಾಡಿಕೊಳ್ಳಬಹುದು. ಆದರೆ, ಬಾಲಿವುಡ್‌ನ ಗಟ್ಟಿ ಕುಳವೊಂದರ ಭಾಗ ಎನ್ನುವುದಕ್ಕಿಂತಲೂ ಮಿಗಿಲಾಗಿ ದಿವ್ಯಾ ತನ್ನ ಸೃಜನಶೀಲತೆಯಿಂದ ಗುರುತಿಸಿಕೊಂಡಿದ್ದಾಳೆ ಎನ್ನುವುದೇ ವಿಶೇಷತೆ.
ಮೂಲತಃ ನಟಿಯೇ ಆಗಿದ್ದರೂ ದಿವ್ಯಾಳ ಆಸಕ್ತಿಯ ಕ್ಷೇತ್ರಗಳು ಅನೇಕ. ನಟನೆಗಿಂತಲೂ ನಿರ್ದೇಶನವೇ ಅವಳಿಗೆ ಹೆಸರು ತಂದಿತ್ತಿದೆ. ಯಾರಿಯಾಂ ಮತ್ತು ಸನಮ್ ರೇ ಎಂಬೆರಡು ಚಿತ್ರಗಳು ಹಾಗೂ ಹಲವಾರು ಜಾಹೀರಾತು ಚಿತ್ರಗಳನ್ನು ನಿರ್ದೇಶಿಸಿರುವ ದಿವ್ಯಾ ಚಿತ್ರರಂಗಕ್ಕೆ ಬಂದಿರುವುದು ಅಬ್ ತುಮಾರೆ ಹವಾಲೆ ವತನ್ ಸಾಥಿಯಯೋ ಚಿತ್ರದ ಮೂಲಕ. ನಟನೆಗೆ ಹೆಚ್ಚು ಅವಕಾಶ ಸಿಗದ ಹಿನ್ನೆಲೆಯಲ್ಲಿ ನಿದೇರ್ಶನದತ್ತ ಹೊರಳಿದ ಅವಳು ಇಲ್ಲಿ ಗೆದ್ದಿದ್ದಾಳೆ. ಇತ್ತೀಚೆಗೆ ದಿವ್ಯಾ ನಟಿಸಿರುವ ಬುಲ್‌ಬುಲ್ ಎಂಬ ಕಿರುಚಿತ್ರ ಬಿಡುಗಡೆಯಾಗಿದ್ದು, ಅನಂತರ ಅವಳಿಗೆ ಬಾಲಿವುಡ್‌ನಿಂದ ಉತ್ತಮ ಪಾತ್ರಗಳ ಕೊಡುಗೆ ಬರುತ್ತಿದೆಯೆಂತೆ. ಹಿಂದೆಯೂ ಅವಕಾಶಗಳಿಗೆ ಬರವಿರಲಿಲ್ಲ. ಆದರೆ ಬಂದ ಎಲ್ಲ ಅವಕಾಶಗಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಹೀಗಾಗಿ ಬಹಳ ಚೂಸಿ ಎಂಬ ದೂರುಗಳಿದ್ದವು. ಆದರೆ, ಇದಕ್ಕಾಗಿ ದಿವ್ಯಾ ಬೇಸರಿಸಿಕೊಳ್ಳುವುದಿಲ್ಲ. ಹಾಗೇ ಬಂದು ಹೀಗೆ ಹೋಗುವ ಪಾತ್ರಗಳನ್ನು ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ ಎನ್ನುವುದು ಅವಳ ಅಭಿಪ್ರಾಯ. ಅಂದ ಹಾಗೇ ದಿವ್ಯಾ ಮೂಲತಃ ದಿಲ್ಲಿಯವಳು. ಇತ್ತೀಚೆಗೆ ಆಕೆಯನ್ನು ದಿಲ್ಲಿಯವರು “ದಿಲ್ಲಿಯೇಟ್ಸ್ ಲೈಫ್ಟೈಮ್ ಅವಾರ್ಡ್’ ಎಂಬ ಪ್ರಶಸ್ತಿಯಿತ್ತು ಗೌರವಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.