ಬಿಸಿನೀರು ಕುಡಿಯಿರಿ !
Team Udayavani, Feb 9, 2018, 8:15 AM IST
ಎಲ್ಲ ಕಾಲಗಳಲ್ಲೂ ನೀರನ್ನು ಕುದಿಸಿ ಕುಡಿಯುವುದರಿಂದ ಆರೋಗ್ಯಪೂರ್ಣವಾಗಿರಲು ಸುಲಭ ಸಾಧ್ಯ. ನಾವು ಶುದ್ಧ ನೀರಿನ ಸೇವನೆ ಅಧಿಕ ಮಹತ್ವ ನೀಡಬೇಕು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿನ ಸೇವನೆ ತಾಜಾ ಮತ್ತು ಉತ್ತಮ ಆರೋಗ್ಯವನ್ನು ಕಲ್ಪಿಸಿಕೊಡುತ್ತದೆ. ನಿತ್ಯವೂ ಬಿಸಿನೀರನ್ನು ಕುಡಿಯುವುದರಿಂದ ಪಡೆಯಬಹುದಾದ ಕೆಲವು ಪ್ರಯೋಜನಗಳು ಇಲ್ಲಿವೆ.
ಕಟ್ಟಿದ ಮೂಗು, ಗಂಟಲು ನೋವಿಗೆ
ಬೆಳಗ್ಗೆ ಬಿಸಿ ನೀರನ್ನು ಸೇವಿಸುವುದರಿಂದ ಮೂಗು ಮತ್ತು ಗಂಟಲಿಗೆ ಆರಾಮದಾಯಕ. ಬೀಸಿನೀರಿನ ಸೇವನೆಯಿಂದ ಕಟ್ಟಿದ ಮೂಗು, ಗಂಟಲಿನ ಕಿರಿಕಿರಿ ಹಾಗೂ ಸೈನಸ್‌ನಿಂದ ಉಂಟಾದ ತಲೆನೋವುಗಳೆಲ್ಲವೂ ನಿವಾರಣೆಯಾಗುತ್ತವೆ.
ಜೀರ್ಣಕ್ರಿಯೆಗೆ
ಊಟದ ನಂತರ ತಂಪಾದ ನೀರನ್ನು ಕುಡಿಯುವುದಕ್ಕಿಂತ ಬೆಚ್ಚಗೆ ನೀರು ಸೇವನೆ ಹೆಚ್ಚು ಪರಿಣಾಮಕಾರಿ. ಊಟದ ನಂತರ ಒಂದು ಗ್ಲಾಸ್ ಬಿಸಿ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಯು ಸೂಕ್ತ ರೀತಿಯಲ್ಲಿ ಆಗುವುದು. ಬಿಸಿ ನೀರು ಸೇವನೆ ಜೀರ್ಣಕಾರಿ ಗ್ರಂಥಿಗಳನ್ನು ಸರಿಯಾಗಿ ಕಾರ್ಯನಿರ್ವಹಿಸುವಂತೆ ಪ್ರಚೋದಿಸುತ್ತದೆ.
ಮಲಬದ್ದತೆ ನಿವಾರಣೆಗೆ
ಆಹಾರ ಪದಾರ್ಥಗಳು ನಮ್ಮ ಕರುಳಿನಲ್ಲಿ ಸಂಗ್ರಹವಾದಾಗ, ಕರುಳಿನ ಚಲನೆ ನಿಧಾನವಾಗಿ ತಿಂದ ಆಹಾರ ಜೀರ್ಣವಾಗದೆ ಮಲಬದ್ದತೆ ಉಂಟಾಗುತ್ತದೆ. ಬೀಸಿನೀರು ಸೇವನೆಯಿಂದ ಕರುಳಿನ ಚಲನೆಯನ್ನು ಮಾಡುವ ಮೂಲಕ ಕರುಳಿಗೆ ಮೃದುವಾಗಿ ತಿಂದ ಆಹಾರವು ಬಹುಬೇಗ ಕೊಳೆಯಲು ಸಹಾಯ ಮಾಡುತ್ತದೆ. ಹಾಗೂ ಮಲಬದ್ಧತೆಯನ್ನು ತಡೆಯುತ್ತದೆ.
ಆರೋಗ್ಯಕರ ಚರ್ಮಕ್ಕಾಗಿ
ಬೆಳಗ್ಗೆ ನಿಯಮಿತವಾಗಿ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ದೇಹವು ಹೈಡ್ರೀಕರಿಸುತ್ತದೆ ಮತ್ತು ಬೆಚ್ಚಗಿರುತ್ತದೆ. ಇದು ಶುಷ್ಕ ಮತ್ತು ಹೊಳಪಿನ ಚರ್ಮವನ್ನು ಪಡೆಯಲು ಅನುವುಮಾಡಿಕೊಡುವುದು. ಮೊಡವೆ ಹಾಗೂ ಇನ್ನಿತರ ಚರ್ಮದ ಸಮಸ್ಯೆಗಳನ್ನು ದೂರಮಾಡುತ್ತದೆ. ಜೊತೆಗೆ ಮೈಬಣ್ಣವನ್ನು ಸುಧಾರಿಸುತ್ತದೆ.
ತೂಕ ಕಡಿಮೆಮಾಡಲು
ತೂಕವನ್ನು ಕಡಿಮೆ ಮಾಡಬೇಕೆಂದು ಬಯಸುವುದಾದರೆ ಪ್ರತಿದಿನ ಬೆಳಗ್ಗೆ ಬಿಸಿ ನೀರನ್ನು ಕುಡಿಯಬೇಕು. ಬಿಸಿನೀರು ಕುಡಿಯುವುದರಿಂದ ದೇಹದ ಚಯಾಪಚಯ ಕ್ರಿಯೆ ಉತ್ತೇಜಿಸುವುದರಿಂದ ತೂಕ ®ಇಇಷ್ಟಕ್ಕೆ ಅತ್ಯುತ್ತಮ ಪರಿಹಾರವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.