ಎಲ್ಲವೂ ಯೂಟ್ಯೂಬ್‌ನಲ್ಲಿ…
Team Udayavani, Nov 10, 2017, 6:50 AM IST
ಆಚೆ ಬೀದಿಯ ಪದ್ಮಾಕ್ಷಮ್ಮನ ಮನೆಯಲ್ಲಿ ವರಮಹಾಲಕ್ಷಿ¾à ವ್ರತ ತುಂಬಾ ಅದ್ದೂರಿಯಾಗಿ ನಡೆಯುತ್ತದೆ. ಈ ಸಲವೂ ವ್ರತಕ್ಕೆ ನನ್ನನ್ನು ಕರೆಯಲು ಅರಸಿನ-ಕುಂಕುಮ ಕರಡಿಗೆ ಹಿಡಿದುಕೊಂಡೇ ಬಂದಿದ್ದರು. “”ಪ್ರತಿವರ್ಷ ಕಲಶ ಪ್ರತಿಷ್ಠೆ ಮಾಡಿ ಅದಕ್ಕೆ ಸೀರೆ ಉಡಿಸಿ ಎಷ್ಟೇ ಅಲಂಕಾರ ಮಾಡಿದ್ರೂ ಏನೋ ಚೆನ್ನಾಗಿಲ್ಲ ಅನ್ನಿಸ್ತಿತ್ತು ಕಣೆ. ಆದ್ರೆ ಈ ಸಲ “ಹೌಟು ವೇರ್ ಸಾರೀ ಫಾರ್ ಗಾಡೆಸ್ ಲಕ್ಷ್ಮೀ’ ಅಂತ ಯೂಟ್ಯೂಬ್‌ನಲ್ಲಿ ಒಂದು ವೀಡಿಯೋ ಇತ್ತು. ಮಗಳು ಡೌನ್‌ಲೋಡ್ ಮಾಡಿಕೊಟು. ಅದರಲ್ಲಿ ಇದ್ದಂಗೆ ಮಾಡಿದೀನಿ, ಎಷ್ಟು ಚೆನ್ನಾಗಿ ಬಂದಿದೆ ಗೊತ್ತಾ?, ನೀನೇ ನೋಡುವಿಯಂತೆ ಸಂಜೆ ಬರಿ¤àಯಲ್ಲ” ಎಂದು ಉತ್ಸಾಹದ ಬುಗ್ಗೆಯಾಗಿ ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದರು.
ಪಮ್ಮಿ ಓಡೋಡಿ ಬಂದಳು.
“”ಆಂಟಿ ನಿಮ್ಮ ಮನೆಯಲ್ಲಿ ಫೋರಿj ಸಿಗುತ್ತಲ್ಲ?”
“”ಹೂಂ, ಏನೀವಾಗ?”
“”ಏನಿಲ್ಲ ಆಂಟಿ, ಸೀರೆ ಉಡ್ಬೇಕಿತ್ತು. ನಮ್ಮಲ್ಲಿ ನೆಟ್ ಸಿಗಲ್ಲ.” ಅಂತೇನೊ ಅಂದು (ನನಗೆ ಸರಿಯಾಗಿ ಕೇಳಿಸಲೂ ಇಲ್ಲ) ಹೆಚ್ಚುಕಡಿಮೆ ನನ್ನನ್ನು ದೂಡಿಕೊಂಡೇ ಒಳಗೆ ಬಂದಳು.
ಕೈಯಲ್ಲಿ ಮುದ್ದೆ ಮಾಡಿ ಹಿಡಿದುಕೊಂಡ ಸೀರೆ ಬೇರೆ ಇತ್ತು. ನಾನು ಸಾವರಿಸಿಕೊಂಡು ಏನು ಮಾಡ್ತಾ ಇದ್ದಾಳೆ ಇವಳು ಎಂದು ನೋಡುವಷ್ಟರಲ್ಲಿ ಮೇಲಿನ ರೂಮಿಗೆ ಹೋಗಿ “ದಢ್’ ಎಂದು ಬಾಗಿಲು ಹಾಕಿಕೊಂಡಳು. ಒಂದು ಹತ್ತು ನಿಮಿಷದಲ್ಲಿ ಹೊರಬಂದು, “”ಹೇಗೆ ಕಾಣಿ¤ದೀನಿ ಆಂಟಿ” ಎಂದು ಬಿಂಕದಿಂದ ಕೇಳಿದಳು.
“”ಸೀರೆಯಲ್ಲಿ ಚೆಂದ ಕಾಣದವರು ಯಾರಿದ್ದಾರೆ ಹೇಳು? ಅದು ಸರಿ, ಆಗ್ಲೆà ನಿಮ್ಮನೇಲಿ ಏನೋ ಸಿಗಲ್ಲ ಅಂತ ಹೇಳಿದ್ದೆಯಲ್ಲ ಏನದು?”
“”ಓ ಅದಾ, ಫೋರಿj ಸಿಗಲ್ಲ ಅಂತ ಅಂದೆ ಆಂಟಿ. ಯೂ ಟ್ಯೂಬ್ ಇದೆಯಲ್ಲ ಅದರಲ್ಲಿ “ಹೌಟು ವೇರ್ ಸಾರಿ’ ಅಂತ ವಿಡಿಯೋ ಸಿಗುತ್ತೆ ಆಂಟಿ, ಅದನ್ನು ನೋಡಿ ಸೀರೆ ಉಟ್ಕೊಂಡೆ. ನಮ್ಮನೇಲಿ ಮನೆ ಹೊರಗೆ ಬಂದು ಸೀರೆ ಉಡ್ಬೇಕಷ್ಟೆ. ಫೋರಿj ಮನೆ ಒಳಗೆ ಸಿಗಲ್ಲ. ಥ್ಯಾಂಕ್ಸ್ ಆಂಟಿ ಬರಿ¤àನಿ” ಎನ್ನುತ್ತಾ ತಾನು ಹಾಕಿಕೊಂಡು ಬಂದಿದ್ದ ಚೂಡಿದಾರವನ್ನು ಕೈಯಲ್ಲಿ ಮುದ್ದೆ ಮಾಡಿ ಹಿಡಿದುಕೊಂಡು ಸೀರೆಯ ನೆರಿಗೆಯನ್ನು ಕೊಂಚ ಮೇಲೆತ್ತಿ ಬಿನ್ನಾಣದಿಂದ ನಡೆಯುತ್ತಾ ಹೊರಟುಹೋದಳು. ನಾನು ಅವಳು ಹೋದ ದಿಕ್ಕನ್ನೇ ನೋಡುತ್ತಾ, “ಸೀರೆ ಉಡೋದಕ್ಕೂ ವಿಡಿಯೋನ?’ ಎಂದು ಬಿಟ್ಟ ಕಣ್ಣು ಬಿಟ್ಟ ಹಾಗೆ, ಬಿಟ್ಟ ಬಾಯಿ ಬಿಟ್ಟ ಹಾಗೆ ನಿಂತು ಬಿಟ್ಟೆ.
ಆಚೆ ಬೀದಿಯ ಪದ್ಮಾಕ್ಷಮ್ಮನ ಮನೆಯಲ್ಲಿ ವರಮಹಾಲಕ್ಷಿ¾à ವ್ರತ ತುಂಬಾ ಅದ್ದೂರಿಯಾಗಿ ನಡೆಯುತ್ತದೆ. ಈ ಸಲವೂ ವ್ರತಕ್ಕೆ ನನ್ನನ್ನು ಕರೆಯಲು ಅರಸಿನ-ಕುಂಕುಮ ಕರಡಿಗೆ ಹಿಡಿದುಕೊಂಡೇ ಬಂದಿದ್ದರು. “”ಪ್ರತಿವರ್ಷ ಕಲಶ ಪ್ರತಿಷ್ಠೆ ಮಾಡಿ ಅದಕ್ಕೆ ಸೀರೆ ಉಡಿಸಿ ಎಷ್ಟೇ ಅಲಂಕಾರ ಮಾಡಿದ್ರೂ ಏನೋ ಚೆನ್ನಾಗಿಲ್ಲ ಅನ್ನಿಸ್ತಿತ್ತು ಕಣೆ. ಆದ್ರೆ ಈ ಸಲ “ಹೌಟು ವೇರ್ ಸಾರೀ ಫಾರ್ ಗಾಡೆಸ್ ಲಕ್ಷ್ಮೀ’ ಅಂತ ಯೂಟ್ಯೂಬ್‌ನಲ್ಲಿ ಒಂದು ವೀಡಿಯೋ ಇತ್ತು. ಮಗಳು ಡೌನ್‌ಲೋಡ್ ಮಾಡಿಕೊಟು. ಅದರಲ್ಲಿ ಇದ್ದಂಗೆ ಮಾಡಿದೀನಿ, ಎಷ್ಟು ಚೆನ್ನಾಗಿ ಬಂದಿದೆ ಗೊತ್ತಾ?, ನೀನೇ ನೋಡುವಿಯಂತೆ ಸಂಜೆ ಬರಿ¤àಯಲ್ಲ” ಎಂದು ಉತ್ಸಾಹದ ಬುಗ್ಗೆಯಾಗಿ ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದರು.
“”ಅರೇ! ಮನುಷ್ಯರಿಗೆ ಮಾತ್ರವಲ್ಲ ದೇವರಿಗೆ ಸೀರೆ ಉಡಿಸುವುದನ್ನೂ ಹೇಳಿ ಕೊಡುತ್ತಾ ಈ ಯೂಟ್ಯೂಬ್?” ಎಂದು ಟ್ಯೂಬ್‌ಲೈಟ್ ಉರಿಯಲು ಸಮಯ ತೆಗೆದುಕೊಳ್ಳುವಂತೆ ಈ ಯೂಟ್ಯೂಬಿನ ವ್ಯಾಪಾರಗಳು ನನ್ನ ತಲೆಗೆ ಅರ್ಥವಾಗಲು ಕೊಂಚ ಹೊತ್ತು ಹಿಡಿಯಿತು.
ಒಂದು ದಿನ ಮಧ್ಯಾಹ್ನ ಊಟ ಮಾಡಿ ಮಲಗಿದ್ದೆ. ಇನ್ನೂ ನಿದ್ದೆ ಹತ್ತಿರಲಿಲ್ಲ. ಬಾಗಿಲು ಡಬ ಡಬ ಬಡಿದಂತೆ ಕೇಳಿಸಿತು. ಎದ್ದು ಬಂದು ನೋಡಿದರೆ ಆಚೆಮನೆಯ ಪುಟ್ಟ ಗಾಬರಿ ಕಣ್ಣುಗಳಿಂದ, “”ಆಂಟಿ ನಿಮ್ಮನೇಲಿ ಏಣಿ ಇದೆಯಾ?” ಎಂದ.
“”ಯಾಕೋ ಇಷ್ಟೊತ್ನಲ್ಲಿ?” ಎಂದೆ. ಅವನು ತನ್ನ ಮನೆಯ ಟೆರೇಸಿನ ಕಡೆಗೆ ಕೈ ತೋರಿದ. ನಮ್ಮ ಮನೆಯಿಂದಲೇ ಬಗ್ಗಿ ನೋಡಿದೆ. ಇಬ್ಬರು ಹುಡುಗಿಯರು ನೀರಿನ ಟ್ಯಾಂಕ್‌ನ ಕಟ್ಟೆಯ ಮೇಲೆ ಕುಳಿತುಕೊಂಡಿದ್ದರು. ಮನೆಯ ತಾರಸಿ ಮೇಲೆ ಒಂದು ಎಂಟು ಹತ್ತು ಜನ ಸೇರಿ ಏನೋ ಮಾತಾಡಿಕೊಳ್ಳುತ್ತಿದ್ದರು.
“”ಯೂಟ್ಯೂಬ್ ನೋಡಿ ಕೈಗೆ ಮೆಹಂದಿ ಹಾಕಲು ನನ್ನಕ್ಕ ಮತ್ತೆ ಅವಳ ಫ್ರೆಂಡ್ಸ್ ಇಬ್ರು ಟ್ಯಾಂಕ್ ಕಟ್ಟೆಗೆ ಹತ್ತಿ ಈಗ ಅವ್ರಿಗೆ ಇಳಿಯಕ್ಕಾಗ್ತಿಲ್ಲ ಆಂಟಿ. ಅದಕ್ಕೆ ಅಮ್ಮ ನಿಮ್ಮನೆಯಿಂದ ಏಣಿ ತೊಗೊಂಬಾ ಅಂತ ನನ್ನ ಕಳಿÕàದ್ರು” ಅಂತ ಹುಡುಗ ಒಂದೇ ಸಮನೆ ಹೇಳಿ ಮುಗಿಸಿದ. ನನಗೆಲ್ಲಾ ಅರ್ಥ ಆಯಿತು. ಎರಡು ಕೈಗೂ ಮೆಹಂದಿ ಹಚ್ಚಿಕೊಂಡು ಮೂದೇವಿಗಳ ಹಾಗೆ ಕುಳಿತ ಇಬ್ಬರನ್ನು ನೋಡಿ ನಗು ಬಂತು. ಹೋಗಿ ಏಣಿ ತೆಗೆದು ಕೊಟ್ಟೆ. “ನಿಧಾನ ನಿಧಾನ’ ಅನ್ನುತ್ತ ಎಲ್ಲರೂ ಸೇರಿ ಆ ಹುಡುಗಿಯರನ್ನು ಇಳಿಸಿದರು. ಇದನ್ನೆಲ್ಲ ನಮ್ಮ ಅಂಗಳದಿಂದಲೇ ನೋಡುತ್ತಿದ್ದ ನಾನು ಕಲಿಗಾಲದ ಈ ಯೂಟ್ಯೂಬ್ ಮಹಿಮೆಗೆ ಏನನ್ನಬೇಕೋ ತಿಳಿಯದೆ,”ರೇಂಜ್ ಇಲ್ಲಾಂತ ಇವರು ಯಾವ ರೇಂಜಿಗೆ ಏರಲೂ ತಯಾರಿದ್ದಾರೆ” ಎಂದು ನನ್ನಷ್ಟಕ್ಕೆ ಗೊಣಗಿಕೊಂಡು ಒಳಗೆ ಬಂದೆ.
ನಮ್ಮ ಮನೆಯ ಕೆಲಸದ ಹೆಂಗಸು ಕಾವ್ಯಾ ಬೇರೆ ಇನ್ನೊಂದೆರಡು ಮನೆಗಳಿಗೂ ಕಸ-ಮುಸುರೆಗೆ ಹೋಗುತ್ತಿದ್ದಳು. “”ಒಂದು ಬೆಂಗಾಲಿ ಜನರ ಮನೆ ಸಿಕ್ಕಿದೆ ಅಕ್ಕಾ, ಅವರಿಗೆ ಬೆಂಗಾಲಿ ಅಡುಗೇನೇ ಆಗ್ಬೇಕಂತೆ. ಮೊದಲು ಒಂದೆರಡು ದಿನ ಚಪಾತಿ ಮಾಡೆª. ಮತ್ತೆ ಈಗ ಯೂಟ್ಯೂಬಿನಲ್ಲಿದ್ದ ಬೆಂಗಾಲಿ ಅಡುಗೆಗಳ ವೀಡಿಯೋ ಮಗ ಡೌನ್‌ಲೋಡ್ ಮಾಡಿಕೊಟ್ಟ. ಈಗ ಅವ್ರ ಎಲ್ಲಾ ಅಡುಗೆಗಳನ್ನ ಮಾಡ್ತೀನಿ. ಖುಷಿಯಾಗಿ ಈ ತಿಂಗಳು ಐನೂರು ಜಾಸ್ತಿ ಕೊಟ್ಟಿದ್ದಾರೆ ಅಕ್ಕಾ” ಎಂದು ಸೊಂಟದಲ್ಲಿ ಸಿಗಿಸಿದ್ದ ಚೀಲದಿಂದ ಐನೂರರ ನೋಟೊಂದನ್ನು ತೆಗೆದು ತೋರಿದಳು.
“”ಇವತ್ತೇ ಇದರಲ್ಲಿ ಡೇಟಾಪ್ಯಾಕ್ ಹಾಕಿಸಬೇಕು” ಎನ್ನುತ್ತಾ ನೋಟನ್ನು ಪುನಃ ಚೀಲಕ್ಕೆ ಸೇರಿಸಿದಳು.
“”ಎಲ್ಲಾ ಊರಿನ ಅಡಿಗೇನೂ ಯೂಟ್ಯೂಬ್ನಲ್ಲಿ ಸಿಗುತ್ತೇನೆ?”
“”ಅದೇನೋ ಗೊತ್ತಿಲ್ಲ ಅಕ್ಕಾ, ಮಗ್ಳ ಹತ್ರ ಕೇಳ್ಬೇಕಷ್ಟೇ” ಎನ್ನುತ್ತಾ ಮುಂದಿನ ಮನೆ ಕೆಲಸಕ್ಕಾಗಿ ದಾಪುಗಾಲು ಹಾಕುತ್ತಾ ಹೊರಟುಹೋದಳು.
ಮರುದಿನ ಎದ್ದು ಬಾಗಿಲು ತೆಗೆದು ನೋಡುತ್ತೇನೆ ನನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. ಕಾವ್ಯಾ ಅದಾಗಲೇ ಬಂದು ಹೊಸ್ತಿಲು ತೊಳೆದು ಚೆಂದದ ರಂಗೋಲಿ ಇಟ್ಟು ಹೋಗಿದ್ದಳು. ಇನ್ನು ಅವಳು ಎರಡು ಮನೆ ಮುಗಿಸಿಯೇ ಬರುವುದು. ಯಾವಾಗಲೂ ದಿಕ್ಕುಗಳನ್ನು ಸೂಚಿಸುವ ಫಲಕದಂತೆಯೋ ಅಥವಾ ಬಿಲ್ಲು -ಬಾಣದಂತೆಯೋ ಎರಡು ಗೆರೆ ಎಳೆದು ಹೋಗುತ್ತಿದ್ದವಳು ಇಷ್ಟು ಚೆನ್ನಾಗಿ ರಂಗೋಲಿ ಹಾಕುವುದನ್ನು ಎಲ್ಲಿ ಕಲಿತಳು ಎಂದು ನಾನು ಆಲೋಚಿಸುತ್ತಿದ್ದಂತೆಯೇ,
“”ಯೂಟ್ಯೂಬಿನಲ್ಲಿ ರಂಗೋಲಿ ಕಲಿಸುವ ವಿಡಿಯೋ ಇದೆ. ನೀವು ಒಂದು ವೀಡಿಯೋಕ್ಕೆ ಲೈಕ್ ಕೊಟ್ಟರೆ ಸಾಕು ಮತ್ತೆ ರಾಶಿ ರಾಶಿ ರಂಗೋಲಿ ವೀಡಿಯೋಗಳು ನಿಮ್ಮ ಮುಂದೆ ಬಂದು ಬೀಳುತ್ತಕ್ಕ” ಎಂದಳು ಪಾತ್ರೆ ತಿಕ್ಕುತ್ತಾ.
“”ಪಾತ್ರೆ ತಿಕ್ಕೋದು ಹೇಗೆ ಅನ್ನುವ ವೀಡಿಯೋನೂ ಇದ್ಯೆàನೆ?” ಎಂದೆ ನಗುತ್ತಾ.
“”ಸ್ವಲ್ಪ$ ತಾಳಿ ಅಕ್ಕಾ , ಮಗ್ಳ ಹತ್ರ ಕೇಳಿ ನಾಳೆ ಹೇಳ್ತೀನಿ” ಅಂದಳು.
ಹೀಗೆ ಪ್ರತಿದಿನ ಈ ಯೂಟ್ಯೂಬಿನ ಹೆಸರು ಕೇಳಿ ಕೇಳಿ ನಾನೂ ಒಮ್ಮೆ ಇದನ್ನು ನೋಡಬೇಕಲ್ಲ ಅಂದುಕೊಂಡು ನನ್ನ ಮೊಬೈಲನ್ನು ಆನ್ ಮಾಡಿ ಯೂಟ್ಯೂಬಿನ ಬಾಣದ ಗುರುತನ್ನು ಒತ್ತಿ ನನ್ನ ಇಷ್ಟದ ಕರ್ನಾಟಕ ಸಂಗೀತ ಸರ್ಚ್ ಕೊಟ್ಟೆ. ನನ್ನ ಸರ್ಚ್‌ಗಾಗಿ ಕಾಯುತ್ತಾ ಇದ್ದವೇನೋ ಅನ್ನುವಂತೆ ರಾಶಿ ರಾಶಿ ವೀಡಿಯೋಗಳು ಬಂದು ಬಿದ್ದವು. ಖುಷಿಯಾಗಿ ಇಯರ್‌ಫೋನ್ ಕಿವಿಗೆ ಸಿಕ್ಕಿಸಿ ಮೊಬೈಲ್ ಸೊಂಟಕ್ಕೆ ಸಿಕ್ಕಿಸಿ ಕೆಲಸ ಮಾಡುತ್ತಲೇ ಕೇಳತೊಡಗಿದೆ. “ಹೌ ಟು ಲರ್ನ್’ ಸರಳ ವರಸೆಯಿಂದ ಹಿಡಿದು ದೊಡ್ಡ ಹೆಸರು ಹೋದವರ ಹಾಡುಗಾರಿಕೆವರೆಗೆ ಅಲ್ಲಿ ಎಲ್ಲವೂ ಇತ್ತು. ಚಪಾತಿ ಲಟ್ಟಿಸುವಾಗ, ತರಕಾರಿ ಹೆಚ್ಚುವಾಗ, ದೋಸೆ ಹೊಯ್ಯುವಾಗ…. ಹೀಗೆ ಎಲ್ಲಾ ಕಡೆ ಈಗ ಕಿವಿಗೆ ಸಿಕ್ಕಿಸಿ “ಗಗ ಪಪ ಮಮ ದದ…’ ಸರಳ ವರಸೆ, ಜಂಟಿ ವರಸೆ, ದಾಟು ವರಸೆ… ಎಲ್ಲಾ ರೀತಿಯ ವರಸೆಗಳೂ ಅಡಿಗೆ ಮನೆಯೊಳಗೆ ಕಾಲಿರಿಸಿದ್ದವು. ಮದುವೆಗೆ ಮೊದಲು ಕಲಿತಿದ್ದ ವರಸೆಗಳೆಲ್ಲ ಮದುವೆ ನಂತರ ಎಲ್ಲಿ ಹೋಗಿದ್ದವೋ. ಈಗ ಪುನಃ ಎಲ್ಲ ನನ್ನ ಬೆರಳ ತುದಿಯಲ್ಲಿ ನನಗೆ ಸಿಕ್ಕಿಬಿಟ್ಟಿದ್ದವು.
ಗಂಡ ಮಕ್ಕಳು ಆಗಾಗ ಬಂದು ಬಗ್ಗಿ ನೋಡಿ ಹೋಗುತ್ತಿದ್ದರು. ಅವರು ಮಾತಾಡಿದರೂ ನನಗೆ ಕೇಳುತ್ತಿರಲಿಲ್ಲ. ಕಾವ್ಯಾಳೂ ಎರಡು ದಿನ ನನ್ನನ್ನು ವಿಚಿತ್ರ ನೋಡುವಂತೆ ನೋಡಿದ್ದಳು. ಎಲ್ಲರಂತೆ ನಾನೂ ಈಗ ಮಾತು ಮಾತಿಗೆ “ಯೂಟ್ಯೂಬ್, ಯೂಟ್ಯೂಬ್’ ಅನ್ನತೊಡಗಿದ್ದೆ. ನನ್ನ ಗೆಳತಿಯೊಬ್ಬಳು, “”ನಾನು ಎಜುಕೇಶನ್ ಅಂತ ಬರೆದದ್ದನ್ನು ಮಾತ್ರ ನೋಡೋದಪ್ಪಾ” ಎಂದು ನಮ್ಮೆದುರು ಗರತಿಯ ಫೋಸ್ ಕೊಡುತ್ತಿರುತ್ತಾಳೆ. ಹಾಗೆ ನೋಡಿದರೆ, ಎಜುಕೇಶನ್ ಅಲ್ಲದ್ದು ಯಾವುದಿದೆ ಇಲ್ಲಿ?! ಏನೇ ಆಗಲಿ ಯೂಟ್ಯೂಬ್‌ನಿಂದಾಗಿ ನಮ್ಮ ಮನೆಯ ಜಗಳ, ಕದನ ಎಲ್ಲಾ ನಿಂತು ಮನೆಯಲ್ಲಿ ಶಾಂತಿ ನೆಲೆಸಿದೆ. ಎಲ್ಲರೂ ಬಯಸುವುದು ಇದನ್ನೇ ತಾನೇ?
– ರೇಷ್ಮಾ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.