ಕ್ಷಮಯಾ ಧರಿತ್ರಿ


Team Udayavani, Jul 19, 2019, 5:00 AM IST

a

ಸಾಂದರ್ಭಿಕ ಚಿತ್ರ.

ಮನೆಯ ಹಜಾರದಲ್ಲಿ ಟಿವಿ ನೋಡುತ್ತಿದ್ದವರು ಆಗಲೇ ಅಲ್ಲಿಂದ ಎದ್ದು ಹೋಗಿಯಾಗಿತ್ತು. ಒಳಗೆ ಅಡುಗೆ ಕೋಣೆಯಿಂದ ಯಾವುದೋ ಕಾರಣಕ್ಕೆ ಈಚೆಗೆ ಬಂದ ಅಮ್ಮಾ ನೋಡುತ್ತಾಳೆ ಹಜಾರದಲ್ಲಿ ಯಾರೂ ಇಲ್ಲ. ಫ್ಯಾನ್‌ ತಿರುಗುತ್ತಲೇ ಇದೆ. ಟಿ.ವಿ. ಸ್ವಿಚ್‌ ಹಾಕಿಯೇ ಇದೆ.

“ಇವರಿಗೆ ಬುದ್ಧಿ ಬರುವುದು ಯಾವಾಗ. ಎಷ್ಟು ಸಲ ಹೇಳಿದ್ದೇನೆ. ಆಚೆ ಹೋಗುವಾಗ ಫ್ಯಾನ್‌ ಸ್ವಿಚ್‌ ಆರಿಸಿ ಹೋಗಬಾರದೆ? ಇದೊಂದು ರಾಷ್ಟ್ರೀಯ ಸಂಪತ್ತಿನ ದುಂದುವೆಚ್ಚವಲ್ಲವೆ?” ಎಂದೆಲ್ಲ ಗೊಣಗಿಕೊಳ್ಳುತ್ತ ಅಮ್ಮ ಟಿ.ವಿ., ಫ್ಯಾನ್‌ ಸ್ವಿಚ್‌ಗಳನ್ನೆಲ್ಲ ಆರಿಸುತ್ತ ಬರುತ್ತಾಳೆ. “ಕರೆಂಟ್‌ ಬಿಲ್‌ ಯಾಕೆ ಈ ಬಾರಿ ಜಾಸ್ತಿ ಬಂತು ಎಂದು ನನ್ನನ್ನು ಕೇಳುವವರಿಗೆ ತಾವು ಮಾಡುವ ಈ ಬಗೆಯ ದುಂದುಗಾರಿಕೆ ಅರ್ಥವೇ ಆಗುವುದಿಲ್ಲವೇಕೆ”

ಬೆಳಿಗ್ಗೆ ಎದ್ದ ಮಗ ಅರ್ಧ ಕಣ್ಣು ಮುಚ್ಚಿಕೊಂಡೇ ಸಿಂಕ್‌ನೆದುರು ನಿಂತು ಬ್ರಶ್‌ ಮಾಡುತ್ತಾನೆ. ಅವನು ಬ್ರಶ್‌ ಮಾಡಿ ಮುಗಿಯುವ ತನಕವೂ ನಲ್ಲಿಯಿಂದ ಗರಿಷ್ಟ ಗಾತ್ರದಲ್ಲಿ ನೀರು ಹೋಗುತ್ತಲೇ ಇರುತ್ತದೆ. ಒಂದು ಮಗ್‌ನಲ್ಲಿ ಪೂರೈಸಬಹುದಾದ ಕೆಲಸಕ್ಕೆ ಎರಡು ಬಕೆಟ್‌ ನೀರು ಪೋಲಾಗಿ ಹೋಗುವ ಅರಿವೇ ಇರುವುದಿಲ್ಲ. ಇದನ್ನೆಲ್ಲ ಎಚ್ಚರಿಸಿ ನೀರು ಕೂಡ ಅಮೂಲ್ಯ ಸಂಪತ್ತು ಎಂದು ಪದೇ ಪದೇ ಹೇಳಿ ಆತನನ್ನು ಆ ಅಭ್ಯಾಸದಿಂದ ಬಿಡಿಸುವವಳು ಅಮ್ಮ. ಗೃಹಿಣಿಯ ಈ ಬಗೆಯ ಕಾಳಜಿ ಮನೆಯ ವಿತ್ತಸೂತ್ರದ ಆಧಾರವಾಗಿರುತ್ತದೆ.

ಮೊದಲೆಲ್ಲ ಚಿನ್ನಾಭರಣಗಳನ್ನು ಆಪದ್ಧನ ಎನ್ನುತ್ತಿದ್ದರು. ಷೋಕಿಗಿಂತ ಆಪತ್ತಿನ ಕಾಲದಲ್ಲಿ ಇರಲಿ ಎಂದೇ ಚಿನ್ನಾಭರಣ ಮಾಡಿಸುತ್ತಿದ್ದರು. ಅದು ಮನೆಯ ಕಷ್ಟಕಾಲದಲ್ಲಿ ಉಪಯೋಗಕ್ಕೆ ಬರುತ್ತಿತ್ತು. ಮನೆಯವರ ಸಂಕಷ್ಟ ನಿವಾರಣೆ ತನ್ನಿಂದಾಗುವುದಾದರೆ ಅದಕ್ಕಿಂತ ಒಳ್ಳೆಯದು ಬೇರೊಂದಿಲ್ಲ ಎಂದು ತಿಳಿದಿದ್ದ ಗೃಹಿಣಿ ಅಂಥ ಸಂದರ್ಭದಲ್ಲಿ ತನ್ನ ಚಿನ್ನಾಭರಣವನ್ನು ಸ್ವಲ್ಪವೂ ಬೇಸರವಿಲ್ಲದೆ ಅಡವಿಡುವುದೋ ಮಾರುವುದೋ ಮಾಡಿ ಮನೆಯವರ ಸಂಕಷ್ಟ ನಿವಾರಿಸಿ ಮನೆಯ ಮರ್ಯಾದಿ ಉಳಿಸುತ್ತಿದ್ದಳು. ಆಕೆ ಸಾಸಿವೆ ಡಬ್ಬ, ಪರ್ಸು, ಕಪಾಟಿನಲ್ಲಿರಿಸಿದ ಚಿಲ್ಲರೆ ಪುಡಿಗಾಸಿನ ಉಳಿತಾಯವೇ ಎಷ್ಟೋ ಕಷ್ಟ ಪರಿಸ್ಥಿತಿಯಲ್ಲಿ ಇಡುಗಂಟಾಗಿರುತ್ತಿತ್ತು. ಒಮ್ಮೊಮ್ಮೆ ಕಪಾಟಿನಲ್ಲಿಡಲೂ ಧೈರ್ಯವಿಲ್ಲದೆ ಸಾಸಿವೆ, ಕೊತ್ತಂಬರಿ, ತೊಗರಿಬೇಳೆಯ ಡಬ್ಬಗಳಲ್ಲಿ ಆಕೆಯ ಉಳಿತಾಯ ಖಾತೆ ಬೆಳೆಯುತ್ತಿರುತ್ತಿತ್ತು. ಠೇವಣಿಯೂ ಅಲ್ಲೇ. ಬಡ್ಡಿಯೂ ಅಲ್ಲೇ. ಎಂಥ ಅನಿರೀಕ್ಷಿತ ಪ್ರಸಂಗಕ್ಕೂ ಅದು ಸಂದಭೋìಚಿತವಾಗಿ ದಕ್ಕಿಯೂ ಬಿಡುತ್ತಿತ್ತು. ಇಂತಹ ದೂರಾಲೋಚನೆ ಹಾಗೂ ಚಾಕಚಕ್ಯತೆಯನ್ನು ಗೃಹಿಣಿ ತನ್ನದಾಗಿಸಿಕೊಂಡಿದ್ದಳು. ಮನೆಯನ್ನು ಅತ್ಯಂತ ಜಾಗರೂಕತೆಯಿಂದ ನಿಭಾಯಿಸುವ ಕುಶಾಗ್ರಮತಿಯಾದ ಗೃಹಿಣಿಯ ಬುದ್ಧಿವಂತಿಕೆಯನ್ನು ಉದ್ಯೋಗಸ್ಥ ಮಹಿಳೆ ಕೂಡ ಅರ್ಥಮಾಡಿಕೊಳ್ಳಬೇಕು.

ಮನೆಯಲ್ಲಿ ಯಾವ ವಸ್ತು ಎಲ್ಲಿಡಬೇಕು ಎಂದು ನಿರ್ಧರಿಸಿ ಅದನ್ನು ಆಯಾಯ ಸ್ಥಾನದಲ್ಲಿ ಅಲಂಕರಿಸುವವಳು ಗೃಹಿಣಿ. ಅಡುಗೆ ಕೋಣೆಯದಂತೂ ಸಂಪೂರ್ಣ ಒಳಾಲಂಕಾರ ಆಕೆಯದೇ. ದೊಡ್ಡ ಸಣ್ಣ ಗಾತ್ರದ ಪಾತ್ರೆ, ಚಮಚ, ಸೌಟು, ಪ್ಲೇಟು, ಲೋಟದಿಂದ ಹಿಡಿದು ಆಹಾರ ಪದಾರ್ಥಗಳನ್ನು ಕೆಡದಂತೆ ಯಾವ ಡಬರಿಯಲ್ಲಿ, ಭರಣಿಯಲ್ಲಿ, ಡಬ್ಬಿಗಳಲ್ಲಿ ಸಂಗ್ರಹಿಸಿ ಎಲ್ಲೆಲ್ಲಿ ಇಡಬೇಕು ಎನ್ನುವ ತನಕ ಆಕೆಯದೇ ಅಂತಿಮ ನಿರ್ಧಾರ. ಪಾತ್ರೆಗಳನ್ನು ತೊಳೆದ ನಂತರ ಮೊದಲಿದ್ದ ಜಾಗದಲ್ಲಿಯೇ ಇಡಬೇಕು. ಹಾಗಿಟ್ಟರೆ ಮಾತ್ರ ಬೇಕಾದಾಗ ಕೂಡಲೇ ತೆಗೆದುಕೊಳ್ಳಲು ಸಾಧ್ಯ ಎನ್ನುವುದು ಆಕೆಯ ವಾದ. ಬೇರೆ ಯಾರೂ ಕೂಡ ಈ ಪರಿಕರಗಳನ್ನೆಲ್ಲ ಸ್ಥಾನಪಲ್ಲಟ ಮಾಡುವ ಹಾಗಿಲ್ಲ. ಇದು ಆಕೆಯ ಪಾಕಲೋಕದ ನಿಯಮ.

ಒಂದು ಕಾಲದ ಪುರುಷ ಪ್ರಧಾನ ಸಮಾಜ ಕೂಡ ಗೃಹಸ್ಥನ ಸಮಸ್ತ ನಡವಳಿಕೆ, ಆಗುಹೋಗುಗಳ ಸ್ಫೂರ್ತಿಯ ಮೂಲ “ಗೃಹಿಣಿ’ ಎಂಬುದನ್ನು ಒಪ್ಪಿಕೊಂಡಿತ್ತು. ಈ ನಿಟ್ಟಿನಲ್ಲಿ ಗೃಹಿಣಿಯನ್ನು ಗೌರವಿಸುವುದರ ಜೊತೆಗೆ ಹೆಚ್ಚಿನ ಜವಾಬ್ದಾರಿಯನ್ನು ಆಕೆಯ ಮೇಲೆ ಹೊರಿಸಲಾಗಿತ್ತು. ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಒಬ್ಬ ಹೆಣ್ಣಿರುತ್ತಾಳೆ ಎನ್ನುವ ಲೋಕೋಕ್ತಿ ಕೂಡ ಮನೆಯೊಡತಿ ಮನೆಯೊಡೆಯನ ಮಾತ್ರವಲ್ಲ ಇಡೀ ಮನೆಯ “ಕೀಲಿಕೈ’ ಆಗಿರುತ್ತಾಳೆ ಎನ್ನುವುದನ್ನು ಶ್ರುತಪಡಿಸುತ್ತದೆ.

ಕ್ಷಮಯಾ ಧರಿತ್ರಿ
ಸಾಂಪ್ರದಾಯಿಕ ವಿವಾಹ ಸಮಾರಂಭದಲ್ಲಿ, ವಿವಾಹಿತ ಗೃಹಿಣಿಯ ನಡೆನುಡಿ ಹೇಗಿರಬೇಕು ಎಂಬುದನ್ನು ಪುರೋಹಿತರು ತುಸು ಹೆಚ್ಚೇ ಉಪದೇಶ ನೀಡುತ್ತಾರೆ. ಪತಿಯ ಸಕಲ ಕಾರ್ಯಗಳಲ್ಲೂ ಸಹಕರಿಸುವವಳೇ ಸಹಧರ್ಮಿಣಿ. ಕಾಯೇìಷು ದಾಸಿ, ಕರಣೇಷು ಮಂತ್ರಿ, ಕ್ಷಮಯಾ ಧರಿತ್ರಿ ಎಂಬೆಲ್ಲ ವಿಶೇಷ ಜವಾಬ್ದಾರಿಗಳನ್ನು ವಧುವಿಗೆ ಪರಿಚಯಿಸುತ್ತಾರೆ. ಇಷ್ಟೆಲ್ಲ ಕರ್ತವ್ಯಗಳು ಗೃಹಿಣಿಗಿರುವಾಗ, ಗೃಹಸ್ಥನಿಗೂ ಇರಲಿ ಎಂದು ಧರ್ಮೇಚ ಅರ್ಥೇಚ, ಕಾಮೇಚ ನಾತಿಚರಾಮಿ ಎಂದು ಹೇಳಿಸುತ್ತಾರೆ. ಇವೆಲ್ಲ ಗೃಹಿಣಿ ಗೃಹಸ್ಥನಿಂದ ಸಮಾಜ ಬಯಸುವ ಆದರ್ಶ ಸದಾಶಯಗಳು ಎನ್ನಬಹುದು.

ಆದರೆ ಕ್ಷಮಯಾ ಧರಿತ್ರಿಯಂತಹ ಉಪದೇಶಗಳೆಲ್ಲ ಒಂದು ಮಿತಿಯಲ್ಲಿದ್ದರೆ ಸರಿ. ತನ್ನನ್ನೇ ಮೆಟ್ಟಿನಿಂತು ಕಡಿದು ಕೊಚ್ಚಿ ಹಿಂಸಿಸುವಾಗ ಭೂಮಾತೆಯೇ ಸಹಿಸಿಕೊಳ್ಳಲಾಗದೆ ಸ್ಫೋಟಗೊಳ್ಳುತ್ತಾಳೆ. ಇನ್ನು ಹೆಣ್ಣು ಮಾತ್ರ ತನ್ನ ಮೇಲೆ ಎಷ್ಟೇ ದೌರ್ಜನ್ಯವೆಸಗಿದರೂ ಕ್ಷಮಯಾ ಧರಿತ್ರಿಯಾಗಿರಬೇಕು ಎನ್ನುವುದು ಯಾವ ನ್ಯಾಯ. ಹೆಣ್ಣಾಗಿ, ಗೃಹಿಣಿಯಾಗಿ ಕ್ಷಮೆಗೂ ಒಂದು ಮಿತಿಯಿರುತ್ತದೆ. ಮಿತಿಮೀರಿದರೆ ಮಿಂಚೂ ಸಿಡಿಲಾಗಿ ಅಪ್ಪಳಿಸುತ್ತದೆ.

ಬದಲಾದ ಕಾಲಗತಿಯಲ್ಲೂ ಗೃಹಿಣಿಗೆ ಕೆಲವು ಮೂಲಭೂತ ಜವಾಬ್ದಾರಿಗಳು ರಕ್ತಗತವಾಗಿಯೇ ಮೈಗೂಡಿದೆಯೇನೊ ಎನಿಸುತ್ತದೆ.

ಮನೆಗಿಂತ ಅತ್ಯಂತ ಹೆಚ್ಚು ಸಾರ್ವಜನಿಕ ಸಂಪರ್ಕದಲ್ಲಿರುವ ಗೃಹಸ್ಥ ಹಲವಾರು ಸಮಸ್ಯೆ, ಗೊಂದಲ, ಅನಿರೀಕ್ಷಿತ ವಿಪತ್ತುಗಳನ್ನೆಲ್ಲ ತನ್ನದೇ ಕಾರಣದಿಂದಲೊ, ಅಥವಾ ಇನ್ನೊಬ್ಬರ ಕಾರಣದಿಂದಲೊ ಎದುರಿಸುತ್ತಲೇ ಇರಬೇಕಾದ ಪರಿಸ್ಥಿತಿ ಆಗಾಗ ಒದಗಿ ಬರಬಹುದು. ಖರ್ಚು ನಿಭಾಯಿಸಲಾಗದೆ ಸಾಲ ಮಾಡಬೇಕಾಗಿಯೂ ಬರಬಹುದು. ಅಂತಹ ಸಂದರ್ಭದಲ್ಲಿ ಸರಿ ಯಾವುದು ತಪ್ಪು ಯಾವುದು ಗೊತ್ತಾಗದೆ ಆತ ಪ್ರಶ್ನೆಗಳ ಸುಳಿಯಲ್ಲಿ ಚಡಪಡಿಸುತ್ತಾನೆ. ಆಗ ಆತನ ಸರಿತಪ್ಪುಗಳನ್ನು ವಿಶ್ಲೇಷಿಸಿ ಹೇಗೆ ಮುಂದುವರಿಯಬೇಕು, ಹೇಗೆ ಸಮಸ್ಯೆಗಳನ್ನು ಹೆಚ್ಚಿನ ಬದ್ಧತೆಯಿಂದ ಪರಿಹರಿಸಿಕೊಳ್ಳಬಹುದು ಎಂಬ ರಕ್ಷಣಾತ್ಮಕ ಸಲಹೆ ನೀಡಿ ಗೃಹಿಣಿ ಎಷ್ಟೋ ಸಂದರ್ಭದಲ್ಲಿ ಆತನನ್ನು ಆ ಕ್ಷಣದ ಸಂಕಷ್ಟದಿಂದ ಪಾರು ಮಾಡುತ್ತಾಳೆ. ಇಂತಹ ಉತ್ತಮ ಸಲಹೆ, ಮಾರ್ಗದರ್ಶನ ನೀಡುವ ಸಾಮರ್ಥ್ಯ ಆಕೆಗೆ ಇರವುದನ್ನು ನಮ್ಮ ವೈದಿಕ ಸಮಾಜ ಕೂಡ ಗುರುತಿಸಿತ್ತು. ಅದಕ್ಕೆ ಕರಣೇಷು ಮಂತ್ರಿ ಎಂಬ ಉಪದೇಶದ ಮೂಲಕ ಆಕೆಯ ಮುಂದಿಡುವ ಆರ್ತ ಕೋರಿಕೆಯೇ ಸಾಕ್ಷಿ.

ಮನೆಯಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಗೃಹಿಣಿಯ ಕಾರ್ಯಗತಿ ಗಡಿಯಾರದ ಮುಳ್ಳಿನಂತೆ. ನೀರಲ್ಲಿ ಎಡೆಬಿಡದೆ ಸದಾ ಚಲಿಸುವ ಮೀನಿನಂತೆ. ಅಮೃತ ಬಿಂದುವಾಗಿ ಉದ್ಯಾನವನದಲ್ಲೆಲ್ಲ ಪರದಾಡುವ ಜೇನಿನಂತೆ.

ಹಾಗಾಗಿ, ಮನೆಯೆಂಬ ಬಂಧಿತ ಉಸಿರಿನ ಬೀಗಮುದ್ರೆಯಲ್ಲಿ ಗೃಹಿಣಿಯೆಂಬ ಪ್ರೀತಿ, ಕಾಳಜಿಯ ಕೈ ಸಂಚಾರವಾದರೆ ಮಾತ್ರ ಕ್ರಿಯಾ ಶೀಲವಾದ, ಹೃದಯಸ್ಪರ್ಶಿ ಗೃಹಲೋಕ ತಾನಾಗಿ ತೆರೆದುಕೊಳ್ಳುತ್ತದೆ.

-ವಿಜಯಲಕ್ಷ್ಮಿ ಶ್ಯಾನ್‌ಭೋಗ್‌

ಟಾಪ್ ನ್ಯೂಸ್

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ

Allegation against Amit Shah: Canadian diplomats summoned

Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.