ಫ್ಯಾನ್ ಗಾಳಿ !
Team Udayavani, Aug 30, 2019, 5:00 AM IST
ಬಿಸಿಲಾದರೇನು, ಮಳೆಯಾದರೇನು… ಕೆಲವರಿಗಂತೂ ಫ್ಯಾನ್ ಬೇಕೇ ಬೇಕು. ಮೈಕೊರೆಯುವ ಚಳಿ ಇದ್ದರೂ, ಫ್ಯಾನು ತಿರುಗದಿದ್ದರೆ, ಅದರ ಶಬ್ದ ಕಿವಿಗೆ ಬೀಳದಿದ್ದರೆ ನಿದ್ದೆ ಬರುವುದಿಲ್ಲ ಅನ್ನುವವರಿದ್ದಾರೆ. ಆದರೆ, ಹೀಗೆ ಹಗಲೂ ರಾತ್ರಿ ಫ್ಯಾನ್‌ನ ಗಾಳಿ ಸೇವಿಸುವುದು ಒಳ್ಳೆಯದಲ್ಲ ಅನ್ನುತ್ತವೆ ಸಂಶೋಧನೆಗಳು. ಫ್ಯಾನ್ ಬಳಕೆಗೂ ಮುನ್ನ ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ.
.ಫ್ಯಾನ್‌ನ ಕಾರಣದಿಂದ, ಕೋಣೆಯಲ್ಲಿ ಗಾಳಿ ಸದಾ ಚಲನೆಯಲ್ಲಿರುತ್ತದೆ. ಆಗ, ಗಾಳಿಯಲ್ಲಿನ ಧೂಳು, ಮೂಗಿನೊಳಗೆ ಸೇರುವ ಸಂಭವ ಹೆಚ್ಚಿದ್ದು, ಶ್ವಾಸಕೋಶದ ಅಲರ್ಜಿಯುಂಟಾಗಬಹುದು.
.ತಜ್ಞರು ಹೇಳುವ ಪ್ರಕಾರ, ಅಸ್ತಮಾ, ಶೀತ-ಜ್ವರ, ಧೂಳಿನ ಅಲರ್ಜಿ ಉಳ್ಳವರಿಗೆ ಫ್ಯಾನ್‌ನ ಕೃತಕ ಗಾಳಿ ಒಳ್ಳೆಯದಲ್ಲ.
.ಫ್ಯಾನ್ ಗಾಳಿಯಿಂದ ಏಳುವ ಧೂಳಿನ ಕಣಗಳು ಚರ್ಮಕ್ಕೆ ಹಾನಿ ಮಾಡುತ್ತವೆ.
.ಕೃತಕ ಗಾಳಿಯಿಂದ ಶುಷ್ಕ ಚರ್ಮ ಮತ್ತಷ್ಟು ಶುಷ್ಕವಾಗಬಹುದು.
.ಅರೆಗಣ್ಣು ತೆರೆದು ಮಲಗುವವರ ಕಣ್ಣಿನ ದ್ರವವನ್ನು ಫ್ಯಾನ್ ಗಾಳಿಯು ಒಣಗಿಸುತ್ತದೆ. ಇದರಿಂದ ಕಣ್ಣಿನ ಅಲರ್ಜಿಯೂ ಉಂಟಾಗಬಹುದು.
.ಬಾಯಿಯನ್ನು ಅರೆ ತೆರೆದು ಮಲಗಿದರೆ, ಗಾಳಿಯಲ್ಲಿನ ಸೂಕ್ಷ್ಮಾಣುಗಳು ಬಾಯಿ ಮೂಲಕ ದೇಹ ಸೇರುತ್ತವೆ.
.ಶೀತ ದೇಹದವರಿಗೆ ಕೃತಕ ಗಾಳಿ ಒಗ್ಗುವುದೇ ಇಲ್ಲ. ಯಾಕೆಂದರೆ, ಗಾಳಿಯಿಂದ ಮೂಗು ಕಟ್ಟಿ , ಉಸಿರಾಟಕ್ಕೆ ತೊಂದರೆ ಆಗುತ್ತದೆ. ಕೃತಕ ಗಾಳಿಯಿಂದಾಗಿ ಮೂಗಿನ ಮೇಲ್ಭಾಗವು ಒಣಗಿ, ಕಫದ ರೀತಿ ಲೋಳೆ ಉತ್ಪಾದನೆಯಾಗಿ ಉಸಿರಾಟಕ್ಕೆ ಅಡಚಣೆಯಾಗಬಹುದು.
ಪುಷ್ಪಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.