ಫ್ಯಾಶನ್ ಟ್ರೆಂಡ್: ಕೇಶಾಭರಣಗಳು
Team Udayavani, Aug 4, 2017, 11:09 AM IST
ಬಂಗಾರದೊಡವೆ ಬೇಕೆ…. ನೀರೆ ಬಂಗಾರದೊಡವೆ ಬೇಕೆ’ ಎಂದು ಕೇಳಿದರೆ ಯಾವ ಮಹಿಳೆ ಬೇಡವೆನ್ನುವುದುಂಟು? ಅಂತಹ ಒಡವೆಗಳು ಅಥವಾ ಆಭರಣಗಳು ನೀರೆಯರಿಗೆ ಅತ್ಯಂತ ಪ್ರಿಯವಾದುದು. ಅದರಲ್ಲಿಯೂ ನಮ್ಮ ಭಾರತದ ನೀರೆಯರಿಗೆ ಬಂಗಾರವೆಂದರೆ ಅಚ್ಚುಮೆಚ್ಚು. ಹೆಣ್ಣು ಎಷ್ಟೇ ಮಾಡರ್ನ್ ಮೈಂಡೆಡ್ ಆಗಿದ್ದರೂ ಅವರ ಬಳಿ ಯುನಿಕ್ ಆದ ಆಭರಣಗಳನ್ನು ಕಲೆಕ್ಟ್ ಮಾಡುವ ಹವ್ಯಾಸ ಇದ್ದೇ ಇರುತ್ತದೆ. ಮಹಿಳೆಯರು ಬಳಸುವ ಹಲವಾರು ಆಭರಣಗಳಲ್ಲಿ ಕೇಶಾಭರಣಗಳೂ ಒಂದು ಬಗೆಯವು. ಟ್ರೆಂಡ್ ಕೇವಲ ದಿರಿಸುಗಳಿಗೆ ಮಾತ್ರವೇ ಸೀಮಿತವಲ್ಲ. ದಿನದಿಂದ ದಿನಕ್ಕೆ ಹಲವಾರು ಟ್ರೆಂಡಿ ಆಭರಣಗಳೂ ಡಿಸೈನ್ ಗೊಳ್ಳುತ್ತಿರುತ್ತವೆ. ಅವುಗಳಲ್ಲಿ ಈ ಕೇಶಾಭರಣಗಳೂ ಇಂದು ಹಲವಾರು ಫ್ಯೂಷನ್ ಪ್ರಯೋಗಗಳಿಗೊಳಪಟ್ಟು ಮಹಿಳೆಯರನ್ನು ತನ್ನತ್ತ ಆಕರ್ಷಿಸುವುದರಲ್ಲಿ ಮುಂಚೂಣಿಯಲ್ಲಿವೆ. ಇವುಗಳಲ್ಲಿ ಮುಖ್ಯವಾಗಿ ಎರಡು ವಿಭಾಗಗಳನ್ನು ಕಾಣಬಹುದಾಗಿದೆ. ಮೊದಲನೆಯದು ಭಾರತೀಯ ಶೈಲಿ ಕೇಶಾಭರಣಗಳು ಮತ್ತು ಎರಡನೆಯದು ಪಾಶ್ಚಾತ್ಯ ಮಾದರಿಯ ಆಭರಣಗಳು. ಅವುಗಳಲ್ಲಿ ಕೆಲವನ್ನು ಈ ಕೆಳಗಿನಂತೆ ವಿಶ್ಲೇಷಿಸಬಹುದಾಗಿದೆ. ಭಾರತೀಯ ಮಾದರಿಯ ಕೇಶಾಭರಣಗಳು: ಹಲವಾರು ಜಾತಿ, ಮತಗಳು ಮತ್ತು ಧರ್ಮಗಳ ದೇಶವಾದ ಭಾರತದಲ್ಲಿ ವಿವಿಧ ಸಂಸ್ಕೃತಿಗಳಿಂದ ಪ್ರೇರಿತವಾದ ಹಲವಾರು ಹೊಸ ಬಗೆಯ ಕೇಶಾಭರಣಗಳು ಮಾರುಕಟ್ಟೆಯಲ್ಲಿ ಲಭಿಸುತ್ತಿವೆ.
1 ಮುಂದಲೆ ಬೊಟ್ಟು (ಮಾಂಗ್ ಟೀಕ)
ಇವು ಭಾರತೀಯ ಸಾಂಪ್ರದಾಯಿಕ ಆಭರಣವಾಗಿದ್ದು, ಇವುಗಳು ಮುಖ ಮತ್ತು ತಲೆಯ ಭಾಗವನ್ನು ಅಲಂಕರಿಸುವಲ್ಲಿ ಮುಖ್ಯವಾದ ಪಾತ್ರವಹಿಸುವಂಥವುಗಳು. ಇವುಗಳು ಚೈನಿಂದ ಆರಂಭವಾಗಿ ಪೆಂಡೆಂಟ್‌ಗಳಲ್ಲಿ ಮುಕ್ತಾಯಗೊಳ್ಳುತ್ತವೆ. ಮುತ್ತುಗಳು, ಬಣ್ಣ ಬಣ್ಣದ ಬೀಡುÕಗಳು, ಕುಂದನ್‌ಗಳು, ಸಿಲ್ವರ್, ಗೋಲ್ಡನ್ ಪ್ಲೇಟೆಡ್ ಎಲ್ಲಾ ವಿಧಗಳಲ್ಲಿಯೂ ಲಭಿಸುತ್ತವೆ. ಇಷ್ಟಲ್ಲದೆ ಹಳದಿ, ಮೆಹೆಂದಿ ಮತ್ತಿತರ ಸಮಾರಂಭಗಳಲ್ಲಿ ಧರಿಸಲೆಂದೇ ಇವುಗಳಲ್ಲಿ ಹೂವಿನಂತಹ ಬೀಡ್ಸುಗಳುಳ್ಳ ಮುಂದಲೆ ಬೊಟ್ಟು ಸಹ ದೊರೆಯುತ್ತವೆ.
2 ರಾಜಸ್ಥಾನಿ ಬೋರ್ಲಗಳು
ಕೆಲವು ಪ್ರಾದೇಶಿಕ ಸಂಪ್ರದಾಯಗಳಲ್ಲಿ ಮಾಂಗ್‌ಟೀಕ ಸುಮಂಗಲೆಯರ ಸಂಕೇತವೆಂದು ಬಳಸುವ ಆಚರಣೆಯೂ ಇದೆ. ರಾಜಸ್ಥಾನದ ಈ ಸಾಂಪ್ರದಾಯಿಕ ಬೋರ್ಲಗಳು ಹಲವು ವಿನ್ಯಾಸಗಳಲ್ಲಿ ದೊರೆಯುತ್ತವೆ. ಬಂಗಾರದ ಬೋರ್ಲಗಳು, ಸಿಲ್ವರ್ ಬೋರ್ಲಗಳು, ಬೀಡೆಡ್ ಬೋರ್ಲಾಗಳು, ಫ್ಲವರ್ ಆಕಾರದ ಬೋರ್ಲಾಗಳು ದೊರೆಯುತ್ತವೆ. ಧರಿಸಲು ಆರಾಮದಾಯಕ ಮತ್ತು ಸುಂದರವಾಗಿರುತ್ತವೆ.
3 ರಾಕೋಡಿ ಅಥವಾ ಜೂಡ ಪಿನ್ನುಗಳು ಅಥವಾ ತುರುಬಿನ ಆಭರಣಗಳು
ಇವುಗಳು ಹೆಸರಿಗೆ ತಕ್ಕಂತೆ ಸಾಂಪ್ರದಾಯಿಕ ಸಮಾರಂಭಗಳಿಗೆ, ಎಥಿಕ್ ಡ್ರೆಸ್ಸುಗಳಿಗೆ ತುರುಬನ್ನು ಹಾಕಿದಾಗ ಧರಿಸಬಹುದಾದ ಪಿನ್ನುಗಳು. ತುರುಬನ್ನು ವಿಶೇಷವಾಗಿ ಅಲಂಕರಿಸಲು ನಾನಾ ಬಗೆಯ ಆಭರಣಗಳು ದೊರೆಯುತ್ತವೆ. ನೋಡಲು ಬಹಳ ಸುಂದರವಾಗಿ ಕಾಣುತ್ತವೆ. ಸಾಧಾರಣವಾದ ಪೆಂಡೆೆಂಟ್ ಶೈಲಿಯಿಂದ ಬಹಳ ಗ್ರ್ಯಾಂಡ್ ಲುಕ್ಕನ್ನು ನೀಡುವ ಝಮಕಿಗಳ ಲೋಲಕವಿರುವ ಜೂಡ ಪಿನ್ನುಗಳು ದೊರೆಯುತ್ತವೆ. ಕಿವಿಯ ಆಭರಣಗಳನ್ನು ಮತ್ತು ತುರುಬನ್ನು ಸೇರಿಸಿ ಹಾಕುವಂತಹ ಜೂಡ ಪಿನ್ನುಗಳು ದೊರೆಯುತ್ತವೆ. ಟ್ರೆಡಿಶನಲ್ ತುರುಬುಗಳಿಗಷ್ಟೇ ಅಲ್ಲದೆ ಮಾಡರ್ನ್ ತುರುಬು ಮಾದರಿಯ ಹೇರ್ ಸ್ಟೈಲುಗಳಿಗೆ ಒಪ್ಪುವಂತಹ ಮಾಡರ್ನ್ ಟಚ್ ಇರುವ ಜೂಡ ಪಿನ್ನುಗಳೂ ದೊರೆಯುವುದರಿಂದ ಗೌನುಗಳಿಗೆ, ಲೆಹೆಂಗಾಗಳಿಗೆ, ಕ್ರಾಪ್ ಟಾಪುಗಳಿಗೆ ಧರಿಸುವ ಆಯ್ಕೆಗಳಿರುತ್ತವೆ.
4 ಝೂಮರ್ ಪಾಸ್ಸ (ಸೈಡ್ ಮಾಂಗ್ ಟಿಕ್ಕ) ಆಭರಣಗಳು
ಇವುಗಳು ಒಂದು ಕಾಲದಲ್ಲಿ ನಿರ್ದಿಷ್ಟ ಧರ್ಮದ ಜನರಿಂದ ಬಳಸಲ್ಪಡುತ್ತಿದ್ದ ಸಾಂಪ್ರದಾಯಿಕ ಆಭರಣವಾಗಿತ್ತು. ಈಗಿನ ಫ್ಯಾಷನ್ ಟ್ರೆಂಡಿನಲ್ಲಿ ಈ ಆಭರಣಗಳು ಮುಂಚೂಣಿಯಲ್ಲಿವೆ. ಇವುಗಳು ಸಾಮಾನ್ಯವಾಗಿ ತಲೆಯ ಎಡಭಾಗಕ್ಕೆ ಸ್ವಲ್ಪ$ಭಾಗ ಹಣೆಗೆ ಇಳಿಯುವಂತೆ ಧರಿಸುವ ಒಂದು ಬಗೆಯ ಮುಂದಲೆ ಬೊಟ್ಟಾಗಿದೆ. ಇವುಗಳು ಬಂಗಾರ, ಬೆಳ್ಳಿ, ಪರ್ಲ್, ಕುಂದನ್‌ಗಳಿಂದ ತಯಾರಾದ ಮಾದರಿಗಳಲ್ಲಿ ದೊರೆಯುತ್ತವೆ. ಮದುವೆ ಮತ್ತಿತರ ಸಂಪ್ರದಾಯಗಳಲ್ಲಿ ಬ್ರೆ„ಡಲ್ ಆಭರಣಗಳಾಗಿ ಬಳಸಲು ಸೂಕ್ತವಾದುದಾಗಿದೆ. ಮುಂದಲೆ ಬೊಟ್ಟು ಮತ್ತು ಇದನ್ನು ಎರಡನ್ನೂ ಧರಿಸುವುದರಿಂದ ರಿಚ್ ಲುಕ್ಕನ್ನು ನೀಡಿ ಮುಖದ ಸೌಂದರ್ಯವನ್ನು ಇಮ್ಮುಡಿಗೊಳಿಸುತ್ತವೆ.
5 ಮುಂದಲೆ ಪಟ್ಟಿ
ಸಾಮಾನ್ಯವಾಗಿ ನೃತ್ಯ ಪ್ರಕಾರಗಳಲ್ಲಿ ಈ ಮುಂದಲೆ ಪಟ್ಟಿಯನ್ನು ಬಳಸಲಾಗುತ್ತಿತ್ತು. ಇಂದು ಸಮಾರಂಭಗಳಲ್ಲಿ ಮದುಮಗಳ ಅಲಂಕಾರಕ್ಕಾಗಿ ನಾನಾ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಬಂದಿವೆ. ಇವುಗಳು ಗ್ರ್ಯಾಂಡ್ ಲುಕ್ಕನ್ನು ನೀಡಿ ಮದುಮಗಳ ಮುಖದ ಅಂದವನ್ನು ಹೆಚ್ಚಿಸುತ್ತವೆ. ಇವುಗಳು ಪೆಂಡೆಂಟಿನೊಂದಿಗೆ ಮಧ್ಯ ಮತ್ತು ಎರಡೂ ಕಡೆಗಳಲ್ಲಿ ವರ್ಕ್ ಇರುವ ಚೈನಿನೊಂದಿಗೆ ರೂಪಿತವಾಗಿರುತ್ತದೆ. ಇವುಗಳಲ್ಲಿ ಲೇಯರ್ಡ್ ಸೈಡ್ ಚೈನ್ ಇರುವ ಮುಂದಲೆ ಪಟ್ಟಿಗಳು ದೊರೆಯುತ್ತವೆ.
6 ಜಡೆ ಬಂಗಾರ
ಸಾಂಪ್ರದಾಯಿಕ ಸಮಾರಂಭಗಳಲ್ಲಿ ವೇಣಿ (ಚೌಲಿ) ಯನ್ನು ಧರಿಸುವುದು ಸಾಮಾನ್ಯ. ಇಂತಹ ಚೌಲಿಗಳನ್ನು ಅಲಂಕರಿಸಲೆಂದೇ ಇರುವಂಥವುಗಳು ಈ ಜಡೆ ಬಂಗಾರಗಳು. ಇವುಗಳು ಬಿಲ್ಲೆಗಳ ಆಕಾರದಲ್ಲಿ, ಹೂವಿನ ಆಕಾರದಲ್ಲಿ ಇನ್ನಿತರ ಆಕಾರಗಳಲ್ಲಿ ದೊರೆಯುತ್ತವೆ. ಇವುಗಳನ್ನು ಜಡೆಯ ಮಧ್ಯೆ ಮಧ್ಯೆ ಸಿಕ್ಕಿಸಿಕೊಳ್ಳಬಹುದಾಗಿದೆ. ಸೀರೆಗಳಿಗೆ ಈ ಜಡೆಗಳು ಸುಂದರವಾಗಿ ಕಾಣುತ್ತವೆ.
7 ಚೌಲಿ ಆಭರಣ (ಜ್ಯುವೆಲ್ಡ್ ಬ್ರೈಡ್)
ಜಡೆ ಬಂಗಾರಕ್ಕೆ ಹೋಲಿಕೆಯಿರುವ ಇವುಗಳು ಡೆಕೋರೇಟೆಡ್ ಆದ ಜಡೆಗಳು. ಮುತ್ತುಗಳಿಂದ, ಬೀvÕ…ಗಳಿಂದ, ಹೆವಿ ವಕ್ಡ್ì ಗೋಲ್ಡ… ಡಿಸೈನುಗಳಿಂದ ಅಲಂಕೃತವಾಗಿರುವ ಜಡೆಗಳಿವು. ಧರಿಸಲು ಆರಾಮದಾಯಕ ಮತ್ತು ನೋಡಲು ಸುಂದರವಾಗಿರುತ್ತದೆ.
8 ಟಿಯಾರಗಳು
ಇವು ನಮ್ಮ ಪುರಾತನ ರಾಣಿಯರ ಕಿರೀಟಗಳಂದ ಪ್ರೇರಿತವಾದ ಆಭರಣಗಳು ಎನ್ನಬಹುದು. ಇವುಗಳು ಇಂಡೋ ವೆಸ್ಟರ್ನ್ ಮಾದರಿಯ ಆಭರಣಗಳು. ಆದ್ದರಿಂದ ಪಾರ್ಟಿಗಳಿಗೆ ಸೂಕ್ತ. ಅಷ್ಟಲ್ಲದೆ ಹಳದಿ ಶಾಸ್ತ್ರಗಳಿಗೆಂದೇ ಆರ್ಟಿಫಿಶಿಯಲ… ಹೂಗಳನ್ನು ಪೋಣಿಸಿರುವ ಟಿಯಾರಗಳು ದೊರೆಯುತ್ತವೆ. ಇವು ಲೆಹೆಂಗಾ, ಲಾಂಗ್ ಗೌನುಗಳಿಗೆ ಸೂಕ್ತವಾದುದಾಗಿದೆ.
9 ಹೂವಿನ ಜಡೆಗಳು
ಈ ಮೇಲಿನ ಎಲ್ಲಾ ಆಭರಣಗಳ ಭರಾಟೆಯಲ್ಲಿಯೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಎವರ್‌ಗ್ರೀನ್ ಟ್ರೆಂಡ್ ಆಗಿರುವವು ಹೂವಿನ ಜಡೆಗಳು. ಮೊದಲು ನೈಸರ್ಗಿಕವಾಗಿ ದೊರೆಯುತ್ತಿದ್ದ ಮಲ್ಲಿಗೆ, ಸುಗಂಧರಾಜ, ಗುಲಾಬಿಗಳನ್ನು ಬಳಸಿ ಈ ಜಡೆಗಳನ್ನು ಬಳಸಲಾಗುತ್ತಿತ್ತು. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ವಿವಿಧ ಬಣ್ಣಗಳ ಗುಲಾಬಿ ಪಕಳೆಗಳನ್ನು ಕೆಲವು ಆಕರ್ಷಕವಾದ ಪ್ಲ್ಯಾಂಟ್‌ಗಳನ್ನು ಬಳಸಿ ಡಿಸೈನರ್ ಹೂವಿನ ಜಡೆಗಳು ಲಭಿಸುತ್ತಿವೆ. ಹಗುರವಾದ ಬಟ್ಟೆಗಳಿಂದ ತಯಾರಿಸಿದ ಜಡೆಗಳೂ ಲಭಿಸುತ್ತವೆ. ತುರುಬುಗಳಿಗೂ ಆರ್ಟಿಫಿಶಿಯಲ… ಹೂವಿನ ದಂಡೆಗಳಿಂದ ಅಲಂಕಾರ ಮಾಡಿಕೊಳ್ಳಬಹುದು.
ಪಾಶ್ಚಾತ್ಯ ಕೇಶಾಭರಣಗಳು
ಮೇಲೆ ತಿಳಿಸಿರುವಂಥವು ಸಮಾರಂಭಗಳಿಗೆ ಹೆಚ್ಚು ಸೂಕ್ತವಾದುದು. ಆದರೆ ಈ ಪಾಶ್ಚಾತ್ಯ ಕೇಶಾಭರಣಗಳು ಕ್ಯಾಶುವಲ… ವೇರಾಗಿ ಮತ್ತು ಪಾರ್ಟಗಳಿಗೆ ಬಳಸುವಂತಹವುಗಳು. ಇವುಗಳಲ್ಲಿ ಹೆಚ್ಚು ಟ್ರೆಂಡಿನಲ್ಲಿರುವುದು ಟಿಯಾರಗಳು. ಬೀಚ್ ಪಾರ್ಟಿಗಳಿಗೆ ಮತ್ತು ಕ್ಯಾಶುವಲ… ಪಾರ್ಟಿಗಳಿಗೆ ಟಿಯಾರಗಳನ್ನು ಧರಿಸುವುದು ಫ್ಯಾಶನ್ ಎನಿಸಿದೆ. ಪಾರ್ಟಿ ಥೀಮ…ಗೆ ಸರಿಹೊಂದುವ ಟಿಯಾರಗಳು ದೊರೆಯುತ್ತವೆ. ಇನ್ನೂ ಅನೇಕ ಬಗೆಯ ಅಲಂಕಾರಿಕ ಪಿನ್ನುಗಳು ದೊರೆಯುತ್ತವೆ. ಇವುಗಳನ್ನು ಬಳಸಿ ಕೂದಲನ್ನು ಅಲಂಕರಿಸಿಕೊಳ್ಳಬಹುದಾಗಿದೆ. ಇನ್ನುಳಿದಂತೆ ಬೋ ಇರುವಂತಹ ಕ್ಲಿಪ್ಪುಗಳು ಮಾಡರ್ನ್ ಡ್ರೆಸ್ಸುಗಳಿಗೆ ಹೊಂದುವುದಲ್ಲದೆ ಎಲಿಗ್ಯಂಟ್ ಲುಕ್ಕನ್ನು ಕೊಡುತ್ತವೆ. ಒಟ್ಟಾರೆಯಾಗಿ ನಮ್ಮ ಉಡುಗೆ ತೊಡುಗೆಗೆ ತಕ್ಕಂತಹ ಕೇಶಾಭರಣಗಳನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯವಾದುದಾಗಿದೆ.
ಪ್ರಭಾ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಹದ್ದೂರ ಬಂಡಿ ಏತ ನೀರಾವರಿ ಪರೀಕ್ಷೆ ? ತುಂಗಾಭದ್ರಾ ಹಿನ್ನೀರಿನಲ್ಲಿ ಜಾಕ್ ವೆಲ್
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
Varthur Prakash: ವರ್ತೂರು ಪ್ರಕಾಶ್‌ಗೆ 3 ತಾಸು ಗ್ರಿಲ್, 38 ಪ್ರಶ್ನೆ!
Blackmail: ಸ್ನೇಹಿತೆಯ ವಿಡಿಯೋ, ಫೋಟೋ ಇಟ್ಟುಕೊಂಡು ಹಣಕ್ಕೆ ಬ್ಲ್ಯಾಕ್‌ಮೇಲ್
Fraud: ಡಿಕೆಸು ಹೆಸರಲ್ಲಿ 8 ಕೋಟಿ ಸಾಲ ಪಡೆದು ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.