ಫೆದರ್ ಫ್ಯಾಶನ್ ಟ್ರೆಂಡ್
Team Udayavani, Jun 8, 2018, 6:00 AM IST
ಫೆದರ್ ಫ್ಯಾಶನ್ ಟ್ರೆಂಡ್ ಬಹಳ ಹಿಂದಿನಿಂದ ಬಂದಂತಹ ಟ್ರೆಂಡ್ ಎನ್ನಬಹುದು. ಈ ಟ್ರೆಂಡಿನಲ್ಲಿ ಕೇವಲ ಆಭರಣಗಳಷ್ಟೇ ಅಲ್ಲದೆ ಬಟ್ಟೆಗಳಲ್ಲಿ, ಪಾದರಕ್ಷೆಗಳಲ್ಲಿ, ಬ್ಯಾಗುಗಳಲ್ಲಿ, ಕೀ ಬಂಚುಗಳಲ್ಲಿ, ಹೇರ್ ಆಕ್ಸೆಸ್ಸರಿಗಳಲ್ಲಿ ಹೀಗೆ ಫ್ಯಾಶನ್ನಿಗೆ ಸಂಬಂಧಿಸಿದ ಎಲ್ಲಾ ಬಗೆಯ ಆಕ್ಸೆಸ್ಸರಿಗಳಲ್ಲಿ ಈ ಫೆದರ್ ಟ್ರೆಂಡ್ ಎನ್ನುವುದು ಎವರ್‌ಗ್ರೀನ್ ಎನಿಸುತ್ತಿವೆ. ಫೆದರ್ ಅಥವಾ ಹಕ್ಕಿಗಳ ಗರಿಗಳು ನಿಸರ್ಗದಲ್ಲಿ ದೊರೆಯುವ ಅತ್ಯಂತ ಸುಂದರವಾದ ಉತ್ಪನ್ನಗಳಲ್ಲಿ ಒಂದು. ಬಾಲ್ಯದಲ್ಲಿ ನವಿಲುಗರಿಗಳನ್ನು ಹುಡುಕಿ ಅವುಗಳನ್ನು ಜೋಪಾನಗೊಳಿಸುತ್ತ ಪುಸ್ತಕಗಳ ಪೇಜುಗಳಲ್ಲಿಯೋ ಅಥವಾ ಗೋಡೆಗಳಿಗೆ ತಗಲು ಹಾಕಲೋ ಬಳಸುತ್ತಿದ್ದುದು ಇನ್ನೂ ಕೂಡ ಬಾಲ್ಯದ ಸವಿ ನೆನಪುಗಳಲ್ಲಿ ಒಂದೆನಿಸಿದೆ. ಅಷ್ಟೇ ಅಲ್ಲದೆ ಹಲವರು ವಿವಿಧ ಬಗೆಯ ಹಕ್ಕಿಗಳ ಪುಕ್ಕಗಳನ್ನು ಸಂಗ್ರಹಿಸುವ ಹವ್ಯಾಸವನ್ನೂ ಹೊಂದಿರುತ್ತಾರೆ.
ಫ್ಯಾಷನ್ ಲೋಕವೆಂಬುದು ನಿರಂತರ ಬದಲಾವಣೆ ಗಳಿಂದ ಕೂಡಿರು ವಂಥದ್ದು. ಫ್ಯಾಷನ್ ತಜ್ಞರುಗಳು ದೊರೆಯುವ ಎಲ್ಲಾ ವಸ್ತುಗಳನ್ನೂ ಕೂಡ ಫ್ಯಾಷನ್ ಲೋಕದಲ್ಲಿ ಬಳಸಿಕೊಳ್ಳುವಂತಹ ಕ್ರಿಯಾಶೀಲತೆಯನ್ನು ಹೊಂದಿದವರಾಗಿರುತ್ತಾರೆ. ಅದರಂತೆ ಈ ಹಕ್ಕಿಗಳ ಪುಕ್ಕಗಳನ್ನೂ ಕೂಡ ಟ್ರೆಂಡಿ ಆಭರಣಗಳನ್ನು ತಯಾರಿಸಲು ಮತ್ತು ಇತರೆ ಆಕ್ಸೆಸ್ಸರಿಗಳನ್ನು ತಯಾರಿಸಲು ಬಳಸಲಾಗುತ್ತಿದೆ. ಬಣ್ಣ ಬಣ್ಣದ ಗರಿಗಳನ್ನು ಬಳಸಿ ವಿವಿಧ ಬಗೆಯ ಉತನ್ನಗಳನ್ನು ತಯಾರಿಸಬಹುದಾಗಿದೆ. ಅಷ್ಟೇ ಅಲ್ಲದೆ ನೈಸರ್ಗಿಕವಾದ ಫೆದರುಗಳಂತೆಯೇ ಇರುವ ಕೃತಕ ಫೆದರುಗಳನ್ನೂ ಕೂಡ ತಯಾರಿಸಿ ಅವುಗಳಿಂದಲೂ ಆಭರಣಗಳನ್ನು ತಯಾರಿಸುವುದನ್ನು ಕಾಣಬಹುದಾಗಿದೆ. ಅಂತಹ ಕೆಲವು ಫೆದರ್ ಉತ್ಪನ್ನಗಳ ಬಗೆಗೆ ಮಾಹಿತಿಗಳನ್ನು ತಿಳಿಯೋಣ.
ಫೆದರ್ ಕಿವಿಯಾಭರಣಗಳು
ವಿವಿಧ ಅಳತೆಗಳ ಫೆದರುಗಳು ದೊರೆಯುವುದರಿಂದ ವಿವಿಧ ಗಾತ್ರಗಳಲ್ಲಿ ಫೆದರ್ ಇಯರ್ ಹ್ಯಾಂಗಿಂಗುಳನ್ನ ತಯಾರಿಸಿಕೊಳ್ಳಬಹುದು. ಇವುಗಳ ತಯಾರಿಕಾ ಹಂತಗಳೂ ಕೂಡ ಬಹಳ ಸರಳವಾದುದು. ಹತ್ತಿರದ ಕ್ರಾಫ್ಟ್ ಅಂಗಡಿಗಳಲ್ಲಿ ನಿಮ್ಮ ಆಯ್ಕೆಯ ನಿಮಗೆ ಬೇಕಾದಂತಹ ಡಿಸೈನಿನ ಫೆದರುಗಳನ್ನು ಕೊಂಡು ಅವುಗಳಿಗೆ ಅಗತ್ಯವಿರುವ ಕ್ರಿಂಪ್ ಬೀಡುಗಳು, ಐ ಪಿನ್ನುಗಳು, ಹ್ಯಾಂಗಿಂಗ್ ಹುಕ್ಕುಗಳು ಇತ್ಯಾದಿಗಳನ್ನು ಬಳಸಿಕೊಂಡು ಸುಂದರವಾದ ಹ್ಯಾಂಗಿಂಗುಗಳನ್ನ ತಯಾರಿಸಿಕೊಂಡು ನಿಮ್ಮ ದಿರಿಸಿಗೆ ಮ್ಯಾಚ್ ಆಗುವಂತಹ ಕಿವಿಯಾಭರಣಗಳನ್ನು ಧರಿಸಿ ಸ್ಟೈಲಿಶ್ ಲುಕ್ಕನ್ನು ಪಡೆದುಕೊಳ್ಳಬಹುದಾಗಿದೆ.
ಫೆದರ್ ನೆಕ್ಲೇಸುಗಳು
ಬೋಹೋ ಮಾದರಿಗಳಿಂದ ಮತ್ತು ಟ್ರೈಬಲ್ ಮಾದರಿಗಳಿಂದ ಪ್ರೇರಿತವಾಗಿ ಈ ಫೆದರುಗಳನ್ನು ಬಳಸಿಕೊಂಡು ಫೆದರ್ ನೆಕ್ಲೇಸುಗಳನ್ನು ತಯಾರಿಸಲಾಗುತ್ತದೆ. ಈ ಬಗೆಯ ನೆಕ್ಲೇಸುಗಳು ಮಾಡರ್ನ್ ಮತ್ತು ಟ್ರೆಡಿಶನಲ್ ಎರಡೂ ಬಗೆಯ ದಿರಿಸುಗಳೊಂದಿಗೆ ಮ್ಯಾಚ್ ಆಗುವುದರಿಂದ ಮಹಿಳೆಯರ ಅಚ್ಚುಮೆಚ್ಚಿನ ಆರ್ಟಿಫಿಶಿಯಲ್ ಆಭರಣಗಳಲ್ಲೊಂದೆನಿಸಿದೆ. ವಿವಿಧ ಬಣ್ಣಗಳ ಮತ್ತು ಮಾದರಿಗಳ ಫೆದರುಗಳನ್ನು ಮತ್ತು ಬೀಡುಗಳನ್ನು ಬಳಸಿಕೊಂಡು ಈ ಬಗೆಯ ನೆಕ್ಲೇಸುಗಳನ್ನು ತಯಾರಿಸಲಾಗುತ್ತದೆ.
ಫೆದರ್ ಕೇಶಾಭರಣಗಳು
ಇವುಗಳು ಸದ್ಯದ ಟ್ರೆಂಡಿ ಆಭರಣಗಳೆನಿಸಿವೆ. ಮಲ್ಟಿ ಲೇಯರ್ ಲಾಂಗ್ ಚೈನುಗಳ ತುದಿಗಳಿಗೆ ಫೆದರುಗಳನ್ನು ಪೋಣಿಸಿ ಸಣ್ಣ ಸಣ್ಣ ಬೀಡುಗಳನ್ನೂ ಕೂಡ ಹಾಕುವುದರ ಮೂಲಕ ಸುಂದರವಾದ ಕೇಶಾಭರಣಗಳನ್ನು ತಯಾರಿಸಲಾಗುತ್ತದೆ. ಮಾಡರ್ನ್ ದಿರಿಸುಗಳನ್ನು ಧರಿಸಿದಾಗ ಕೂದಲನ್ನು ಕಟ್ಟದೆ ಹಾಗೆಯೇ ಬಿಡುವಂತದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಸ್ಟೈಲ… ಎನಿಸಿದೆ. ಇಂತಹ ಸಂದರ್ಭಗಳಲ್ಲಿ ತಲೆಯ ಒಂದು ಕಡೆಯಲ್ಲಿ ಈ ಬಗೆಯ ಕೇಶಾಭರಣವನ್ನು ಹಾಕಿಕೊಳ್ಳುವುದರ ಮೂಲಕ ಸ್ಟೈಲಶ್ ಮತ್ತು ಟ್ರೆಂಡಿ ಲುಕ್ಕನ್ನು ಪಡೆದುಕೊಳ್ಳಬಹುದಾಗಿದೆ.
ಫೆದರ್ ಟ್ಯಾಸೆಲ್ಲುಗಳು
ಇತರೆ ಟ್ಯಾಸೆಲ್ಲುಗಳಂತೆಯೇ ಫೆದರುಗಳನ್ನು ಬಳಸಿ ಕೂಡ ಬಹಳ ಸುಂದರವಾದ ಟ್ಯಾಸೆಲುಗಳನ್ನು ತಯಾರಿಸಲಾಗುತ್ತದೆ. ಅವುಗಳನ್ನು ಸ್ಕರ್ಟುಗಳ ಟ್ಯಾಗುಗಳಲ್ಲಿ, ಬ್ಲೌಸುಗಳ ಟ್ಯಾಗುಗಳ ತುದಿಗಳಲ್ಲಿ, ಟಾಪುಗಳ ಟ್ಯಾಗುಗಳಲ್ಲಿ ಹೀಗೆ ವಿವಿಧ ಕಡೆಗಳಲ್ಲಿ ಬಳಸಬಹುದಾಗಿದೆ. ವಿವಿಧ ಗಾತ್ರಗಳಲ್ಲಿ ದೊರೆಯುವ ಫೆದರುಗಳನ್ನು ಟ್ಯಾಸೆಲುಗಳಾಗಿಯೂ ಬಳಸಬಹುದು.
ಫೆದರ್ ಕೀ ಬಂಚುಗಳು
ಮೊಬೈಲ್ ಪೌಚುಗಳಲ್ಲಿ, ಬ್ಯಾಗುಗಳಲ್ಲಿ ಬಳಸುವ ಕೀ ಬಂಚುಗಳಲ್ಲಿ ಈ ಫೆದರುಗಳನ್ನು ಬಳಸಲಾಗುತ್ತದೆ. ಸ್ಟೈಲಿಶ್ ಲುಕ್ಕನ್ನು ಕೊಡುವಲ್ಲಿ ಇವುಗಳೂ ಕೂಡ ಹಿಂದೆ ಉಳಿದಿಲ್ಲವೆಂಬುದನ್ನು ನಿರೂಪಿಸುವಂತಿರುತ್ತದೆ.
ಫೆದರ್ ಡೆಕೋರೇಟೆಡ್ ಬ್ಯಾಗುಗಳು ಮತ್ತು ಪರ್ಸುಗಳು
ಬ್ಯಾಗುಗಳ ತುದಿಗಳಲ್ಲಿ, ಜಿಪ್ ಚೈನುಗಳ ತುದಿಗಳಲ್ಲಿ, ಬ್ಯಾಗುಗಳ ಹ್ಯಾಂಡಲ್ಲುಗಳಲ್ಲಿ, ಪರ್ಸುಗಳನ್ನು ಅಲಂಕರಿಸಲೂ ಕೂಡ ಈ ಬಗೆಯ ಫೆದರುಗಳನ್ನು ಬಳಸಲಾಗುತ್ತದೆ. ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರಿಗೂ ಇಷ್ಟವಾಗುವ ಆಕ್ಸೆಸ್ಸರಿಗಳು ಇವುಗಳಾಗಿವೆ.
ಫೆದರ್ ಲಾಂಗ್ ಚೈನುಗಳು
ಲಾಂಗ್ ಚೈನುಗಳ ತುದಿಗಳಲ್ಲಿ ಮಲ್ಟಿ ಕಲರ್ಡ್ ಅಥವಾ ಸಿಂಗಲ್ ಕಲರ್ ಫೆದರುಗಳನ್ನು ಹಾಕುವುದರ ಮೂಲಕ ತಯಾರಿಸಲಾಗುವ ಈ ಮಾಡರ್ನ್ ಮಾದರಿಯ ಆಭರಣಗಳು ಜೀನ್ಸ್-ಟಾಪಿನಂತಹ ಮಾಡರ್ನ್ ದಿರಿಸುಗಳೊಂದಿಗೆ ಬಹಳ ಚೆನ್ನಾಗಿ ಹೊಂದುತ್ತವೆ. ಸುಂದರವಾದ ಮತ್ತು ಸ್ಟೈಲಿಶ್ ಲುಕ್ಕನ್ನೂ ಕೂಡ ನೀಡುತ್ತವೆ. ಆದ್ದರಿಂದಲೇ ಟೀನೇಜ್ ಹುಡುಗಿಯರ ಹಾಟ್ ಫೇವರೇಟ್ ಎನಿಸಿವೆ ಈ ಆಭರಣಗಳು.
ಫೆದರ್ ಬ್ರೇಸ್‌ಲೆಟ್‌ಗಳು
ಫೆದರುಗಳನ್ನು ಬಳಸಿಕೊಂಡು ವಿಭಿನ್ನವಾದ ಬ್ರೇಸ್ಲೆಟ್ಟುಗಳನ್ನೂ ಕೂಡ ತಯಾರಿಸಲಾಗುತ್ತದೆ. ನೋಡಲು ಸುಂದರವಾಗಿರುವ ಈ ಬ್ರೇಸ್ಲೆಟುಗಳು ಸ್ಟೈಲಿಶ್ ಲುಕ್ಕನ್ನು ನೀಡುತ್ತವೆ. ಟ್ರೈಬಲ್ ಟಚ್ ಇರುವಂತೆ ತೋರುವ ಈ ಬಗೆಯ ಬ್ರೇಸ್ಲೆಟ್ಟುಗಳು ಫ್ಯೂಶನ್‌ವೇರುಗಳೊಂದಿಗೆ ಬಹಳ ಚೆನ್ನಾಗಿ ಒಪ್ಪುತ್ತವೆ.
ಫೆದರ್ ಫೂಟ್‌ವೇರುಗಳು
ಕಾಲಿಗೆ ಧರಿಸುವ ಫೂಟ್ವೇರುಗಳಲ್ಲಿಯೂ ಕೂಡ ಫೆದರುಗಳನ್ನು ಬಳಸುವುದರ ಮೂಲಕ ಹೊಸ ಬಗೆಯ ಸ್ಟೈಲಿಶ್ ಫೂಟ…ವೇರುಗಳನ್ನು ಅಲಂಕರಿಸಲಾಗುತ್ತದೆ. ಯುವಜನತೆಯನ್ನು ಈ ಬಗೆಯ ಫೂಟ್ ವೇರುಗಳು ಬಹಳ ಬೇಗ ತಮ್ಮತ್ತ ಆಕರ್ಶಿಸುತ್ತವೆ. ಫಂಕಿ ಲುಕ್ಕನ್ನು ನೀಡುವ ಇವುಗಳು ಬಹಳ ಆಕರ್ಷಕವಾದ ಮತ್ತು ವಿಭಿನ್ನವಾದ ಬಗೆಯ ಫೂಟ್ ವೇರುಗಳಾಗಿವೆ.
ಫೆದರ್ ಶೋ ಪೀಸುಗಳು
ಈ ಆರ್ಟಿಫಿಶಿಯಲ್ ಫೆದರುಗಳು ಕೇವಲ ಆಭರಣಗಳ ತಯಾರಿಕೆಯಲ್ಲಷ್ಟೇ ಅಲ್ಲದೆ ಆಲಂಕಾರಿಕ ವಸ್ತುಗಳನ್ನು ತಯಾರಿಸಲೂ ಕೂಡ ಬಳಸಲಾಗುತ್ತದೆ. ಇವುಗಳನ್ನು ಬಳಸಿ ಸುಂದರವಾದ ವಾಲ… ಹ್ಯಾಂಗಿಂಗುಗಳನ್ನು ತಯಾರಿಸಬಹುದು.
ಫೆದರುಗಳನ್ನು ಈ ಮೇಲಿನ ಬಗೆಗಳಲ್ಲಿ ಬಳಸಿಕೊಳ್ಳಬಹುದು ಎಂಬುದು ಮಾನವನ ಸೃಜನಶೀಲತೆಗೆ ಹಿಡಿದ ಕೈಗನ್ನಡಿಯೆಂದೇ ಹೇಳಬಹುದು. ಅಷ್ಟೇ ಅಲ್ಲದೆ ಆರ್ಟಿಫಿಶಿಯಲ್ ಫೆದರುಗಳು ಸುಲಭವಾಗಿ ಮಾರುಕಟ್ಟೆಯಲ್ಲಿ ದೊರೆಯುವುದರಿಂದ ಈ ಮೇಲಿನ ಕೆಲವು ಬಗೆಗಳನ್ನು ನಾವೇ ಸುಲಭವಾಗಿ ಮನೆಯಲ್ಲಿಯೇ ತಯಾರಿಸಿಕೊಂಡು ಬಳಸಬಹುದು.
ಪ್ರಭಾ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.