ಫ್ಲೋರಾ ಆ್ಯಂಡ್ ಫೌನಾ
Team Udayavani, Jan 4, 2019, 12:30 AM IST
ಇಪ್ಪತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದಾಳೆ. ನಟಿಸಿದ ಚಿತ್ರಗಳ ಸಂಖ್ಯೆ 50 ದಾಟಿದೆ. ಆದರೆ, ಫ್ಲೋರಾ ಸೈನಿ ಎಂಬ ನಟಿಯ ಹೆಸರು ಪ್ರಖರವಾಗಿ ಕೇಳಿ ಬಂದದ್ದು ಸ್ತ್ರೀ ಚಿತ್ರದ ಬಳಿಕ. ನಟಿ ಅಥವಾ ನಟನನ್ನು ಜನಪ್ರಿಯಗೊಳಿಸಲು ಒಂದು ಚಿತ್ರ ಸಾಕು ಎನ್ನುವುದಕ್ಕೆ ಫ್ಲೋರಾ ಸೈನಿಯೇ ಉದಾಹರಣೆ. ಹಾಗೆ ನೋಡಿದರೆ 19 ವರ್ಷದ ಹಿಂದೆಯೇ ಸಬ್‌ಸೆ ಬಡಾ ಬೇ ಇಮಾನ್ ಮತ್ತು ಯೇ ಹೈ ಗ್ರೀನ್ ಸಿಗ್ನಲ್ ಎಂಬೆರಡು ಚಿತ್ರಗಳಲ್ಲಿ ಫ್ಲೋರಾ ನಟಿಸಿದ್ದಳು. ಅನಂತರ ಭಾಗ್ಯ ವಿಧಾತ, ಲವ್ ಇನ್ ನೇಪಾಲ್, ದಬಂಗ್ 2, ಯೇ ರಬ್, ಲಕ್ಷ್ಮೀ, ಗುಡ್ಡು ಗುಣ್, ಬೇಗಮ್ ಜಾನ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾಳೆ. ಈ ನಡುವೆ ಕನ್ನಡ, ತಮಿಳು, ತೆಲುಗು, ಪಂಜಾಬಿ ಭಾಷೆಗಳಲ್ಲಿ ಸಿಕ್ಕಿದ ಅವಕಾಶಗಳು ಧಾರಾಳ.
ಇಷ್ಟೆಲ್ಲ ಆದರೂ ರಾಷ್ಟ್ರಮಟ್ಟದಲ್ಲಿ ಮಿಂಚಬೇಕೆಂಬ ಅಭಿಲಾಷೆ ಈಡೇರಿದ್ದು ಮಾತ್ರ ಸ್ತ್ರೀ ಚಿತ್ರದಿಂದ. ಇದು 2018ರ ಸೂಪರ್‌ಹಿಟ್ ಚಿತ್ರಗಳಲ್ಲಿ ಒಂದು ಮಾತ್ರವಲ್ಲದೆ, ಗಳಿಕೆಯಲ್ಲೂ ಉತ್ತಮ ನಿರ್ವಹಣೆ ತೋರಿಸಿದೆ. ಸ್ತ್ರೀ ಓ ಸ್ತ್ರೀ ಕಲ್ ಆನಾ ಡೈಲಾಗ್ ಬಹಳ ಜನಪ್ರಿಯವಾಗಿದೆ. ಚಿತ್ರದ ನಿರ್ದೇಶಕರೇ ಈ ಡೈಲಾಗ್ ಹೇಳಿ ಅವಳನ್ನು ಕಿಚಾಯಿಸುತ್ತಿದ್ದಾರಂತೆ. ಗಂಧಿ ಬಾತ್ ಎಂಬ ವೆಬ್ ಚಿತ್ರದಲ್ಲೂ ಫ್ಲೋರಾ ನಟಿಸಿದ್ದಾಳೆ. ಇದರ ಬೆನ್ನಿಗೆ ಈಗ ಫ್ರಾಡ್ ಸೈಯಾಮ್ ಎಂಬ ಇನ್ನೊಂದು ವೆಬ್ ಚಿತ್ರ ರೆಡಿಯಾಗಿದೆ. ಸ್ತ್ರೀ ಬಳಿಕ ಈಗ ಫ್ಲೋರಾಳಿಗೆ ಬಾಲಿವುಡ್‌ನಿಂದ ಅವಕಾಶಗಳು ಹರಿದು ಬರಲು ತೊಡಗಿದೆ. ಹೀಗೊಂದು ಪವಾಡ ಸಂಭವಿಸಲು 20 ವರ್ಷಗಳೇ ಬೇಕಾಯಿತು ಎನ್ನುವ ವಿಷಾದವೂ ಅವಳಿಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.