ಜನಪದಾಯಣ


Team Udayavani, Mar 23, 2018, 7:30 AM IST

16.jpg

ಕೊಕ್ಕೊಕ್ಕೋಕೋ ಎಂದು ಕೂಗಿದ ಜಾಮದಗಂಟೆ (ಕೋಳಿ)ಯನ್ನು ರಾಮ ಸೇತುವೆ ಕಟ್ಟಲು ಕರೆದಾಗ ಅದು, “”ಊಹೂ! ನನ್ನ ಬಂಗಾರದ ಜುಟ್ಟಿಗೆ ಮಣ್ಣಾಗುತ್ತೆ, ನಾನು ಬರಲ್ಲಪ್ಪಾ!” ಅಂದಿತಂತೆ. “”ಅಬ್ಟಾ ನಿನ್ನ ಸೊಕ್ಕೆ! ಎಣಿಸದೆಯೇ ಅಕಾಲಿಕ ಮರಣ ಬರಲಿ ನಿನಗೆ” ಎಂದನಂತೆ ರಾಮ. ಅದಕ್ಕೇ ನೆಂಟರು ಬರಲಿಕ್ಕಿಲ್ಲ, ಕೋಳಿಯನ್ನು ಕೇಳದೆಯೇ ಮಸಾಲೆ ಅರೆಯುತ್ತಾರೆ.ಗುಬ್ಬಿಯು, “”ಊಹೂ! ನನ್ನ ಬೆಳ್ಳಿಗೆಜ್ಜೆಗೂ ಮಣ್ಣು ಹಿಡಿತದೆ” ಅಂದಾಗ “”ನಿನ್ನ ಕಾಲಿಗದು ಸಂಕೋಲೆಯಾಗಲಿ” ಎಂದನಂತೆ ರಾಮ. ಅದಕ್ಕೇ ಗುಬ್ಬಿಯು ನಡೆಯುವುದಿಲ್ಲ, “ಥಯ್ಯಥಯ್ಯ’ ಲಾಗ ಹಾಕಿಕೊಂಡೇ ಹೋಗುತ್ತದೆ.ಅಳಿಲೋ, ತಾನೇ ತಾನಾಗಿ ಓಡಿಬಂದು ಮರಳಲ್ಲಿ ಹೊರಳಿಹೊರಳಿ ಸೇತುವೆಗೆ ಮೈಕೊಡವತೊಡಗಿದಾಗ ಅಳಿಲುಭಕ್ತಿಯ ಮಳಲಸೇವೆ ಗೊಲಿದು ಅದರ ಬೆನ್ನನ್ನು ಮೂರು ಬೆರಳಲಿ ನೇವರಿಸಿ, “”ಮೂರು ಕವಲಿನ ಬೆತ್ತದಲ್ಲಿ ಹೊಡೆದರೆ ಮಾತ್ರ ನಿನಗೆ ಮರಣ” ಎಂದನಂತೆ ರಾಮ. ಹೊಡೆಯಲು ಸಿಗಬೇಕಲ್ಲ ಅದು! ಅದರ ಬೆನ್ನ ಮೂರು ಗೀಟಿನ ಹಿಂದೆಯೇ ಮಕ್ಕಳು ಕಾಪಿ ಬರೆಯಲು ಓಡುತ್ತಿರುತ್ತಾರೆ. ಹಣ್ಣೆಂದು ಭಾವಿಸಿ ಸೀತೆಯ ಎದೆಗೇ ಕಾಗೆಯು ಕುಕ್ಕಿದಾಗ ರಾಮ ಸಿಟ್ಟಿನಿಂದ “”ನೀನು ಕಾಕಾಸುರನಾಗು” ಎಂದು ಶಾಪಕೊಟ್ಟದ್ದಕ್ಕೇ ಬಕಾಸುರನ ಅಪರಾವತಾರವದು. ಬೆಳಗಾಗುವಷ್ಟರಲ್ಲಿ ಅದಕ್ಕೆ ಕಣ್ಣಲ್ಲೆ ಏಳು ಸಲ ಜೀವ ಹಾರುತ್ತದಂತೆ. 

ಹುಣ್ಣಿಮೆಯಲ್ಲಂತೂ ಬೆಳಗಾಯಿತೆಂಬ ಭಾತಲ್ಲಿ ಕಾಕಾಕಾವೇ. “ಕೋಣನ ಬೇನೆ ಕಾಗೆಗೆ ಗೊತ್ತೇ?’ ಬೆನ್ನಗಾಯಕ್ಕೆ ಕುಕ್ಕಿಕುಕ್ಕಿಯೇ ಸಾಯಿಸುತ್ತದೆ. ಕಣ್ಣ ನುಸಿ ಎತ್ತರಕ್ಕೆ ಹಾರಿ ದೈತ್ಯಾಕಾರದ ರಣಹದ್ದುವಿನೊಡನೆ “”ಕೊಂಬುರಾಯರು ಬಿದ್ದಿದ್ದಾರೆ, ಬರ್ಬೆàಕಂತೆ ಬರ್ಬೆàಕಂತೆ” ಎನ್ನಲಿಕ್ಕಿಲ್ಲ, ಅವು ಕಾಗೆಗಳನ್ನು ಓಡಿಸಿ ಮುತ್ತಿಮುಕ್ಕಿ ತಿಂದಲ್ಲಿ ಖಾಲಿ ಅಸ್ಥಿಪಂಜರ.

ರಾಮನು ಸೀತೆಗಾಗಿ ನೆಲಕೆ ಬಾಣಬಿಟ್ಟು ನೀರುಚಿಮ್ಮಿಸಿದ ರಾಮತೀರ್ಥವಂತೆ ತೀರ್ಥಳ್ಳಿಯ ಅಂಬುತೀರ್ಥ, ಶರಾವತಿಯ ಉಗಮಸ್ಥಾನ. ಕಾಶಿಯಿಂದ ರಾಮೇಶ್ವರದವರೆಗೂ ರಾಮ-ಸೀತೆಯರ ಉಸಿರಸ್ಪರ್ಶದಿಂದ ಜೀವತಳೆದ ಭರತಖಂಡದ ಕಲ್ಲುಕಲ್ಲುಗಳೂ ಜೀವಕತೆಗಳನ್ನು ಉಸುರುತ್ತವೆ. ರಾಮದೇವರು ಪಾದಊರದ ಊರುಂಟ? ಒಂದೂರಲ್ಲಿ ರಾಮ ಜಾನಕಿ ದಣಿದು ನಿದ್ರಿಸಿದಾಗ ಗೌಜುಗದ್ದಲವೆಬ್ಬಿಸಿದ ಅಶ್ವತ್ಥ ಮರದೆಲೆಗಳಿಗೆ ಮುನಿದ ಲಕ್ಷ್ಮಣನು, “”ದೇವರು ಮಲಗಿಹರು ಸದ್ದುಮಾಡದಿರಿ!” ಎಂದನಂತೆ. ಅದಕೇ ಗಾಳಿಬೀಸಿದರೂ ಸಾಸೂ ಸದ್ದಿಲ್ಲವಂತೆ. ಇನ್ನೊಂದೂರಲ್ಲಿ ರೆಂಜೆಮರದ ಕಟ್ಟೆಯಲ್ಲೇ ಇರುಳು ಕಳೆದು ಸೀತಮ್ಮ ಭೂಪಾಳಿರಾಗದಲ್ಲಿ ಉದಯರಾಗ ಹಾಡಿದಳಂತೆ. ಆ ಮರದಲ್ಲಿ ಕಾಗೆ ಕೂತರೂ ಇಂದಿಗೂ ಕೋಗಿಲೆಯಂತೆಯೇ ಕೂಗುವುದಂತೆ. ಮತ್ತೂಂದೂರಲ್ಲಿ ಬಾನೊಡನೆ ಗುಟ್ಟು ಮಾತಾಡುವ ಏರಲಾಗದ ರಾಮಪಾದೆ. ಹೊಸಮದುಮಕ್ಕಳು ಅದನ್ನೇರಿ ಜತೆಜೋಡಿ ಹೆಜ್ಜೆಗಳಿಗೆ ಹಣೆಮುಟ್ಟಿಸಿದರೆ ಅವರಿಗೆಂದೂ ಅಗಲಿಕೆಯಿಲ್ಲವಂತೆ. ಮತ್ತೂಂದು ಬಂಡೆಯೆದೆಯಲ್ಲಿ ರಾಮದೇವರು ಸೀತೆಯನ್ನು ಹುಡುಹುಡುಕಿ ಕಾಲುಸೋತು, ಒಡಲುಬೆಂದು, ಮನಸ್ಸು ಬಾಡಿ ಕಣ್ಣೀರು ಸುರಿಸಿದ ಎಂದೂ ಬತ್ತದ ಉಗುರುಬಿಸಿ ನೀರಿನಕೊಳ. ಅದರಲ್ಲಿ ಮಿಂದವರಿಗೆ ಕಣ್ಣೀರು ಸುರಿಸುವ ಯೋಗವಿಲ್ಲವಂತೆ. ಮತ್ತೂಂದು ಆಳದ ನೀರಗುಂಡಿಯಲ್ಲಿ ಅಮ್ಮ ಸೀತಮ್ಮ ನವಣೆಯನ್ನು ಕೊಟ್ಟು ಕೊಟ್ಟು ಸಾಕಿದ ಹಿಂಡುಹಿಂಡು ಬಣ್ಣದ ಮೀನು.ಅವನ್ನಾರೂ ತಿನ್ನುವುದೇ ಇಲ್ಲವಂತೆ. ಅಂತೆಕಂತೆಯ ಕತೆಗಳೆಲ್ಲ ಸತ್ಯವೇ ಎಂದು ಕೇಳುವಿರಾ? ಸತ್ಯ-ಮಿಥ್ಯದ ಲೆಕ್ಕಾಚಾರ ಮಾಡುವ ಬುದ್ಧಿಯೇ ಚಿಕ್ಕದು. ಮನಸ್ಸಿಂದ ಹಾರುವ ಸತ್ಯವೆಂದೂ ಗೇಣುಮೊಳಮಾರಿನ ಅಳತೆಗೆ ಸಿಗದು ಎನ್ನುತ್ತಾರೆ ಪಾ. ವೆಂ. ಆಚಾರ್ಯರು ರಾಮದೇವೆರೆ ಸತ್ಯವೆಂಬ ತುಳುಕವನದಲ್ಲಿ .

“ಹೆಣ್ಣಿನಿಂದ ರಾವಣಕೆಟ್ಟ ‘. ಆದರೆ, ಜೀವಮಾನವಿಡೀ ರಕ್ಕಸ ನೆಂದು ದೇವರೆಂದು ಪಾಡುಪಟ್ಟದ್ದು ಹೆಣ್ಣೇ ಅಲ್ಲವೆ? ಸೀತೆ ತಾನು ನಂಬಿದ ಮೌಲ್ಯಕ್ಕಾಗಿ ಕಾಡಲ್ಲಿ ಲಕ್ಷ್ಮಣರೇಖೆಯನ್ನು ದಾಟಿದ್ದಕ್ಕೆ ದೊಡ್ಡ ರಾಮಾಯಣವೇ ಆಗಿ, ನಾಡಲ್ಲಿ ರಾಮನೊಂದಿಗೆ ಮತ್ತೆ ಸುಖ ಸಂಸಾರವೆನ್ನುವಾಗಲೇ ಶೂರ್ಪನಖೀಯಿಂದ ಹೊಸ ಸೀತಾಯಣವೇ ಶುರುವಾಗಬೇಕೆ? ಅವಳಿಗೋ ಸೀತೆಯ ದುರಂತವನ್ನು ನೋಡಲೇಬೇಕೆಂಬ ಹಟ. ಭಗ್ನಶಿಲ್ಪಕ್ಕೆ ಜೀವಬಂದಂತೆ ಕೊರವಂಜಿಯ ವೇಷದಲ್ಲಿ ಬಂದು, “”ಪುಟವಿಟ್ಟ ಚಿನ್ನವೇ, ಮಹಾಪತಿವ್ರತೆಯೇ, ರಾವಣನಚಿತ್ರವನ್ನು ಬಿಡಿಸಿಕೊಟ್ಟರೆ ನನ್ನ ಜೀವನದ ಪಾಡಿಗೊಂದು ದಾರಿಯಾಗುತ್ತದೆ ನೋಡು” ಎಂದಳಂತೆ. “”ಇಲ್ಲ, ಅವನನ್ನು ಕಡೆಗಣ್ಣಿಂದಲೂ ನೋಡಿಲ್ಲ, ಎಂದೋ ಒಮ್ಮೆ ಉಂಗುಷ್ಠವನ್ನು ಕಂಡಹಾಗಿದೆ” ಎಂದರೆ ಅದನ್ನೇ ಬಿಡಿಸೆಂಬ ಒತ್ತಾಯ. ಉಂಗುಷ್ಠದಿಂದ ಆರಂಭವಾಗಿ ಮಸ್ತಿಷ್ಕದವರೆಗೂ ಬೆಳೆದು ಚಿತ್ರ ಪೂರ್ಣವಾದೊಡನೆ ಶೂರ್ಪನಖೀ ನಿಜರೂಪತಾಳಿ ಆ ಚಿತ್ರಪಟಕ್ಕೆ ಜೀವಕಳೆ ನೀಡಿ, “”ಸೀತೇ ಇನ್ನು ಅನುಭವಿಸು ನೀನು, ನೀನೇ ಬರೆದ ವಿಧಿಯನ್ನು” ಎಂದು ಮಾಯವಾದಳಂತೆ. ಸರಿ. ರಾವಣ ಪಟವು ತಾನು ಹೋದಲ್ಲೆಲ್ಲ ಬೆಂಬಿಡದ ಬೇತಾಳನಂತೆ ಹಿಂಬಾಲಿಸತೊಡಗಿತೆಂದು ಮಂಚದಡಿ ಅಡಗಿಸಿಟ್ಟರೆ ಅದು ರಾಮ ಬಂದೊಡನೆ ಅವನ ಮುಂದೆಯೇ ಕುಣಿಯಬೇಕೆ? ರಾಮನ ಚಿತ್ತಭಿತ್ತಿಯನ್ನು ಹೊಕ್ಕ ಚಿತ್ರವು ವಿಚಿತ್ರ ಅನುಮಾನವಾಗಿ ಬೆಳೆದ ಗಾಳಿಗೆ ಎಲುಬಿಲ್ಲದ ನಾಲಗೆಗಳಲ್ಲಿ ಪಟಪಟಿಸಿ ಅಗಸನೇ ನೆಪವಾಗಿ ತುಂಬು ಬಸುರಿ ಕಾಡುಪಾಲಾದಳಲ್ಲ? “”ಇದೊಂದು ನೋಡಿ ನನ್ನನ್ನು ಬಿಡುವುದಿಲ್ಲ ರಾವಣಪಟದ ಹಾಗೆ!” ಅನ್ನುತ್ತಾರೆ ತುಳುವರು. “”ಅಯ್ಯೋರಾಮ!” ಎಂದು ಮಾತಿಗೊಮ್ಮೆ ಉದ್ಗರಿಸುವವರು ಯಕ್ಷಗಾನದ “ಚಿತ್ರಪಟ ರಾಮಾಯಣ’ ಪ್ರಸಂಗವನ್ನೊಮ್ಮೆ ನೋಡಿದರೆ “”ಅಯ್ಯೋ ಸೀತೇ!” ಅನ್ನದಿರಲಾರರು ಕೊರಗಿಕರಗಿ.

ಲವಕುಶರೊಂದಿಗೆ ಮರಳಿದ ಬಳಿಕವೂ “ರಾಮರಾಜ್ಯ ಆಳಿದರೂ ರಾಗಿ ಬೀಸೋದು ತಪ್ಪಲ್ಲ’ವೆಂಬ ಪಾಡೇ ಸೀತೆಯದ್ದು. ಆಗ ರಾವಣಸನ್ಯಾಸಿ ಯಿಂದ ಮೋಸಹೋದವಳು ಸೀತೆ. ಈಗ ಸನ್ಯಾಸಿಗೆ ಬಂಗಾರದ ಹರಿವಾಣದಲ್ಲಿ ಅನ್ನ ತಂದು ಬೆಳ್ಳಿಯ ಸಟ್ಟುಗದಲ್ಲಿ ಬಡಿಸುವಾಗ, “”ಸತ್ತರೂ ನಿನ್ನನ್ನು ಬಿಡೆ” ಎಂಬಂತೆ ಹತ್ತುತಲೆಯ ಹುಳವೊಂದು ಬಾಳೆಯೆಲೆಯಲ್ಲಿ ಹರಿಯತೊಡಗಿತಂತೆ. “”ಹೊರಗೆ ರಾಮರಾಮ ಒಳಗೆ ರಾವಣೇಶ್ವರ” ಎಂದನಂತೆ ರಾಮನಾಗ. ಭೂಮಿಯ ಮಗಳವಳು ಭೂಮಿತೂಕದ ಸೀತೆ. ಕ್ಷಮಯಾಧರಿತ್ರಿ! ಎಲ್ಲಿಯತನಕ? ಒಮ್ಮೆಯಾದರೂ ಭೂಮಿ ಕಂಪಿಸಲೇಬೇಕಲ್ಲವೇ? “”ಅಮ್ಮಾ ಸಾಕೋಸಾಕು ಸಂಸಾರ”ವೆನ್ನುತ್ತ ಸೀತೆ ಸಟ್ಟುಗದಲ್ಲೆ ಭೂಮಿಯನ್ನು ಬಡಿದಾಗ ಅದರ ಹೃದಯವೇ ಬಾಯ್ಬಿಟ್ಟು ಇಳಿದುಹೋದಳು ಧರೆಗೆ. “”ನಿಲ್ಲು ಸೀತೆ” ಎಂದು ರಾಮ ಅವಳ ಕೇಶವನ್ನು ಹಿಡಿದೆಳೆದ. ಬುಡವಿರದೆಯೇ ಮರಕೆ ಹಬ್ಬಿಕೊಳ್ಳುವ ಸಪೂರ ತಲೆಮುಡಿಬಳ್ಳಿ (ಜಡೆಬಳ್ಳಿ)ಯೇ ಸೀತೆಯ ಕೇಶವಂತೆ. ಮಣ್ಣಡಿಯಲಿ ಗೊಂಚಲುಗೆಡ್ಡೆ ಹೊತ್ತ ಹಲವು ಮಕ್ಕಳತಾಯಿ ಉದುರಿಬೇರು (ಶತಾವರಿ) ಸೀತೆಯ ಉದುರಿ. ಇದರ ಲೇಹವು ಮಕ್ಕಳ ಕಾಯಿಲೆಗೆ ರಾಮಬಾಣವಂತೆ. ಇನ್ನು ರಾಮಫ‌ಲ, ಸೀತಾಫ‌ಲ, ಲಕ್ಷ್ಮಣಫ‌ಲ, ಹನುಮಂತಫ‌ಲಗಳ ಕಥಾಬೀಜವಾವುದೋ! “ಜನಪದಾಯಣ’ವಿದು.

ಸೀತೆ ಮಹಾನ್‌ ಕೃತಿಯ ನಾಯಕಿ. ಲಕ್ಷ್ಮೀಶನ ಜೈಮಿನಿಭಾರತದಲ್ಲಿ ಕಡುಪಾತಕಂಗೈದು ಪೆಣ್ಣಾಗಿ ಸಂಭವಿಸಿ ಒಡಲ ಪೊರೆಯುವುದು ಎನ್ನೊಳಪರಾಧಮುಂಟು ಪೋಗೆಂದು ಸೌಮಿತ್ರಿಗೆ ಬೆಂದು ನುಡಿದವಳು. “”ಅಂತಹ ರಾಮನಿದ್ದರೂ ಸೀತೆಗೇ ತಪ್ಪಲಿಲ್ಲ ಕಷ್ಟ ! ಇನ್ನು ನಮ್ಮದೇನು ಮಹಾ!” ಎಂದು ನಿಟ್ಟುಸಿರಿಟ್ಟು ತಮ್ಮ ನೋವು ಮರೆಯುತ್ತವೆ ಹಳ್ಳಿಗಾಡಿನ ಹೆಣ್ಣುಜೀವಗಳು. ಕಾವ್ಯ ಬರೆದವನೇ ಬಸುರಿಪಾತ್ರವನ್ನು ಆಶ್ರಮಕ್ಕೆ ಕರೆದೊಯ್ದು ಆಕೆಯ ಮಕ್ಕಳಿಗೆ ರಾಮಾಯಣವನ್ನು; ತನ್ನದೇ ನಿಯೋಗ ಸಂತತಿಗೆ “ಮಹಾಭಾರತ’ವನ್ನು ಹೇಳುವ ಕಲ್ಪನೆಯೇ ಅದ್ಭುತವಲ್ಲವೆ?  ಜಟಾಯುವಿಗೆ ಮಾತ್ರವಲ್ಲ ಪ್ರಕೃತಿಗೇ ಪ್ರಿಯಳಾದ ವನದೇವತೆ ಸೀತೆ. ಅವಳಲ್ಲಿ ದೈವೀಪ್ರಭೆ ಇದ್ದುದರಿಂದಲೇ ರಾವಣನಿಗವಳು ಮುಟ್ಟಲಾಗದ ನಿಗಿನಿಗಿಕೆಂಡ.ರಾಮಸೀತೆಯರ ದಿವ್ಯಪ್ರಭೆ ಜನಸಾಮಾನ್ಯರ ಅನುಭವಕ್ಕೆ ಬರುತ್ತಿರುತ್ತದೆ. ಆ ದಿವ್ಯತೆಗೊಂದು ಅಮೂರ್ತ ಚೆಲುವಿದೆ, ಬುಡವಿಲ್ಲದೆ ಅಲೌಕಿಕಕ್ಕೆ ಹಬ್ಬಿದ ಸೀತೆಯ ತಲೆಮುಡಿ ಜಡೆಬಳ್ಳಿಯಂತೆ, ಬುಡಕ್ಕಿಳಿದ ಲೌಕಿಕ ಉದುರಿಬೇರಿನಂತೆ.

ಕಾತ್ಯಾಯಿನಿ ಕುಂಜಿಬೆಟ್ಟು

ಟಾಪ್ ನ್ಯೂಸ್

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.