ಆರೋಗ್ಯಕ್ಕೆ ಇಂಬು ನೀಡುವ ತಂಬುಳಿ
Team Udayavani, May 11, 2018, 7:20 AM IST
ಪ್ರಕೃತಿಯ ಕೊಡುಗೆಯಾದ ವಿವಿಧ ಚಿಗುರುಗಳು, ಹೂವುಗಳು ಇತ್ಯಾದಿಗಳಿಗೆ ಮಜ್ಜಿಗೆ ಸೇರಿಸಿ ತಯಾರಿಸುವ ತಂಬುಳಿಗಳು ಒಗರು ರುಚಿಯನ್ನು ಹೊಂದಿದ್ದು ಆರೋಗ್ಯಕ್ಕೆ ಪೂರಕವಾದ ಹಲವಾರು ಉತ್ತಮ ಅಂಶಗಳನ್ನೊಳಗೊಂಡಿದೆ. ಇವುಗಳ ಸೇವನೆಯಿಂದ ಬಿಸಿಲ ಬೇಗೆಗೆ ದೇಹ ತಂಪಾಗುವುದರ ಜೊತೆಗೆ ಜೀರ್ಣಶಕ್ತಿಯೂ ವೃದ್ಧಿಸುವುದು. ಇಲ್ಲಿವೆ ಕೆಲವು ವೈವಿಧ್ಯಮಯ ತಂಬುಳಿಗಳು.
ಕೇಪುಳ ಕಿಸ್ಕಾರ ಹೂವಿನ ತಂಬುಳಿ
ಬೇಕಾಗುವ ಸಾಮಗ್ರಿ: ಕೆಂಪು ಕೇಪುಳ ಹೂವುಗಳು- ಅರ್ಧ ಕಪ್, ತೆಂಗಿನ ತುರಿ- ಅರ್ಧ ಕಪ್, ಸಿಹಿ ಮಜ್ಜಿಗೆ- ಒಂದು ಕಪ್, ಕೆಂಪು ಮೆಣಸು- ಒಂದು, ಜೀರಿಗೆ- ಅರ್ಧ ಚಮಚ, ಉಪ್ಪು ರುಚಿಗೆ.
ತಯಾರಿಸುವ ವಿಧಾನ: ಕೇಪುಳ ಹೂವಿನ ಮಧ್ಯದ ಪರಾಗ ಕುಸುಮವನ್ನು ತೆಗೆದು ಎರಡು ಚಮಚ ತುಪ್ಪದಲ್ಲಿ ಬಾಡಿಸಿಕೊಳ್ಳಿ. ಮಿಕ್ಸಿಜಾರಿಗೆ ತೆಂಗಿನ ತುರಿ, ಜೀರಿಗೆ, ಕೇಪುಳ ಹೂವು, ಉಪ್ಪು, ಮೆಣಸು, ಸ್ವಲ್ಪ$ಮಜ್ಜಿಗೆ ಇವುಗಳನ್ನು ಹಾಕಿ ನುಣ್ಣಗೆ ರುಬ್ಬಿ. ನಂತರ ಇದಕ್ಕೆ ಬೇಕಷ್ಟು ನೀರು ಮತ್ತು ಮಜ್ಜಿಗೆ ಸೇರಿಸಿಕೊಂಡು ತಂಬುಳಿಯ ಹದ ಮಾಡಿಕೊಳ್ಳಿ. ಅನ್ನದ ಜೊತೆ ಸವಿಯಲು ತಯಾರಾದ ಈ ತಂಬುಳಿ ತಂಪು ಗುಣವನ್ನು ಹೊಂದಿದ್ದು ಇದರ ಸೇವನೆ ಬೇಸಿಗೆಯಲ್ಲಿ ಉಷ್ಣದಿಂದ ಉಂಟಾಗುವ ಬಾಯಿಹುಣ್ಣಿಗೆ ಹಾಗೂ ರಕ್ತಶುದ್ಧಿಗೆ ಬಹಳ ಉಪಯುಕ್ತ.
ಎಲಾವರೆ ತಂಬುಳಿ
ಬೇಕಾಗುವ ಸಾಮಗ್ರಿ: ಎಲಾವರೆ ಸೊಪ್ಪು- ಅರ್ಧ ಕಪ್, ತೆಂಗಿನ ತುರಿ- ಮುಕ್ಕಾಲು ಕಪ್, ಮಜ್ಜಿಗೆ- ಒಂದು ಕಪ್, ಹಸಿಮೆಣಸು- ಒಂದು, ಶುಂಠಿ- ಕಾಲು ಚಮಚ, ಉಪ್ಪು ರುಚಿಗೆ.
ತಯಾರಿಸುವ ವಿಧಾನ: ತೆಂಗಿನ ತುರಿಯ ಜೊತೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಸ್ವಲ್ಪ$ಮಜ್ಜಿಗೆ ಸೇರಿಸಿ ನುಣ್ಣಗೆ ರುಬ್ಬಿ. ನಂತರ ಇದನ್ನು ಮಿಕ್ಸಿಂಗ್ ಬೌಲ್‌ಗೆ ಹಾಕಿ ಇದಕ್ಕೆ ಉಳಿದ ಮಜ್ಜಿಗೆ ಹಾಗೂ ನೀರು ಸೇರಿಸಿಕೊಂಡು ಹದ ಮಾಡಿಕೊಳ್ಳಿ. ಇದಕ್ಕೆ ಇಂಗು ಹಾಗೂ ಉದ್ದಿನಬೇಳೆ ಸೇರಿಸಿದ ಸಾಸಿವೆ ಒಗ್ಗರಣೆಯನ್ನು ತುಪ್ಪದಲ್ಲಿ ನೀಡಿ. ಈಗ ತಯಾರಾದ ಈ ತಂಬುಳಿಯ ಸೇವನೆ ಬಿಸಿಲಿನ ಉಷ್ಣದಿಂದ ಉಂಟಾಗುವ ಹೊಟ್ಟೆನೋವು, ಬಾಯಿಹುಣ್ಣು ಇತ್ಯಾದಿ ಸಮಸ್ಯೆಗಳಿಗೆ ಉತ್ತಮ ಪರಿಹಾರ.
ಗೇರು ಮರದ ಚಿಗುರಿನ ತಂಬುಳಿ
ಬೇಕಾಗುವ ಸಾಮಗ್ರಿ: ಗೇರುಮರದ ಚಿಗುರೆಲೆಗಳು- ಎಂಟು, ತೆಂಗಿನ ತುರಿ- ಅರ್ಧ ಕಪ್, ಮಜ್ಜಿಗೆ- ಒಂದು ಕಪ್, ಕೆಂಪು ಮೆಣಸು- ಒಂದು, ಜೀರಿಗೆ- ಕಾಲು ಚಮಚ, ಉಪ್ಪು$ರುಚಿಗೆ.
ತಯಾರಿಸುವ ವಿಧಾನ: ಚಿಗುರೆಲೆಗಳನ್ನು ಬೇಯಿಸಿ. ಆರಿದ ನಂತರ ಇದಕ್ಕೆ ತೆಂಗಿನ ತುರಿ ಹಾಗೂ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳು ಹಾಗೂ ಸ್ವಲ್ಪಮಜ್ಜಿಗೆ ಸೇರಿಸಿ ನುಣ್ಣಗೆ ರುಬ್ಬಿ. ನಂತರ ಇದಕ್ಕೆ ಬೇಕಷ್ಟು ಮಜ್ಜಿಗೆ ಸೇರಿಸಿ ಹದ ಮಾಡಿಕೊಂಡು ಘಮ್ ಎನ್ನುವ ಸಾಸಿವೆ ಒಗ್ಗರಣೆ ನೀಡಿ. ಬಹಳ ರುಚಿಯಾದ ಈ ತಂಬುಳಿಯ ಸೇವನೆಯಿಂದ ಜೀರ್ಣಶಕ್ತಿ ವೃದ್ಧಿಸುವುದು.
ನುಗ್ಗೆ ಹೂವಿನ ತಂಬುಳಿ
ಬೇಕಾಗುವ ಸಾಮಗ್ರಿ: ನುಗ್ಗೆ ಹೂವು- ಅರ್ಧ ಕಪ್, ಕಾಳುಮೆಣಸು- ಆರು, ತೆಂಗಿನ ತುರಿ- ಅರ್ಧ ಕಪ್, ಜೀರಿಗೆ- ಕಾಲು ಚಮಚ, ಮಜ್ಜಿಗೆ- ಒಂದು ಕಪ್, ಉಪ್ಪು ರುಚಿಗೆ.
ತಯಾರಿಸುವ ವಿಧಾನ: ಬಾಣಲೆಗೆ ಎರಡು ಚಮಚ ತುಪ್ಪಹಾಕಿ ನುಗ್ಗೆ ಹೂವನ್ನು ಬಾಡಿಸಿಕೊಳ್ಳಿ. ಆರಿದ ನಂತರ ಇದಕ್ಕೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ಮಜ್ಜಿಗೆ ಜೊತೆ ನುಣ್ಣಗೆ ರುಬ್ಬಿ. ಮಿಕ್ಸಿಂಗ್ ಬೌಲ್‌ಗೆ ಹಾಕಿ ಹದಮಾಡಿಕೊಂಡು ಇದಕ್ಕೆ ತುಪ್ಪದಲ್ಲಿ ಇಂಗಿನ ಒಗ್ಗರಣೆ ಸಿಡಿಸಿದರೆ ತಂಬುಳಿ ಸವಿಯಲು ಸಿದ್ಧ. ಕಬ್ಬಿಣಾಂಶ ಪೂರಿತವಾದ ಈ ತಂಬುಳಿ ಆರೊಗ್ಯಕ್ಕೆ ಬಹಳ ಉತ್ತಮ.
ಗೀತಸದಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Punjab; ಗುಂಡಿನ ಚಕಮಕಿ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರ ಬಂಧನ
Aranthodu: ವಾಹನ ಡಿಕ್ಕಿ ಹೊಡೆದು ಕಾಡು ಹಂದಿ ಸಾವು
Artificial Intelligence: ಎಐ ಯುಗದಲ್ಲಿ ನಾವು ನೀವು?
Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್ ಟೈಮ್ ಎಷ್ಟು?
Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.