ಬಿಗ್‌ಬಾಸ್ ಹವಾ
Team Udayavani, Jan 10, 2020, 4:58 AM IST
ಬೇಸಿಗೆ, ಮಳೆ, ಚಳಿಗಾಲ ಇದ್ದಂತೆ ಇದೀಗ ಬಿಗ್‌ಬಾಸ್ ಕಾಲ ಎಂಬ ಹೊಸದೊಂದು ಋತು ಬಂದಿದೆ ಎನ್ನುತ್ತಾರೆ ಟೀವಿ ಪ್ರಿಯರು.
ಸಂಜೆ ಕೆಲಸ ಮುಗಿಸಿ ಮನೆಗೆ ಬರುತ್ತಿರಬೇಕಾದ್ರೆ ಬಸ್ಸಿನಲ್ಲಿ ಓರ್ವ ಪ್ರಯಾಣಿಕರ ರಿಂಗ್‌ಟೋನ್ ಕೇಳಿ ಆಶ್ಚರ್ಯಚಕಿತಳಾದೆ. “ಬಿಗ್‌ಬಾಸ್… ಬಿಗ್‌ಬಾಸ್… ಹೌದು ಸ್ವಾಮಿ… ‘ ಎಂದು ಒಂದೇ ಸಮನೆ ಆತನ ಫೋನ್ ರಿಂಗಣಿಸಿತು. ಡ್ರೈವರ್ ಸಮೇತ ಪ್ರಯಾಣಿಕರೆಲ್ಲರೂ ಆತನೆಡೆಗೆ ಒಮ್ಮೆ ತಿರುಗಿ ನೋಡಿದರು. ಅವನೋ, ರಿಂಗ್‌ಟೋನ್ ಪೂರ್ತಿ ಕೇಳಿಸಿಕೊಂಡು ಕೊನೆಗೆ ಫೋನ್ ರಿಸೀವ್ ಮಾಡಿದ ಹಾಗಿತ್ತು.
ಈ ಬಾರಿ “ಬಿಗ್‌ಬಾಸ್’ ಹವಾ ಜೋರಾಗಿಯೇ ಇದೆಯೇನೋ. ಬಸ್ಸಿನಲ್ಲಿ ಪ್ರಯಾಣಿಸುವವರು ಮೊಬೈಲ್‌ನೊಳಗೆ ತಲೆತೂರಿಸಿ ಬಿಗ್‌ಬಾಸ್ ದೃಶ್ಯಗಳನ್ನು ನೋಡುತ್ತಾರೆ. ವೂಟ್ ಆ್ಯಪ್ ಇದ್ದರಾಯಿತು. ಯಾವತ್ತಿನ ಸೀರಿಯಲ್, ಬಿಗ್‌ಬಾಸ್ ದೃಶ್ಯಗಳೂ ಅಂಗೈಯೊಳಗೆ ಲಭ್ಯ. ಬಿಗ್‌ಬಾಸ್‌ನ ದೃಶ್ಯಗಳು ಮಾತ್ರವಲ್ಲ, ಅಲ್ಲಿರುವ ಸ್ಪರ್ಧಿಗಳ ಟಿಕ್‌ಟಾಕ್ ವಿಡಿಯೋಗಳು ಕೂಡ ವೈರಲ್ ಆಗುತ್ತಿವೆ.
ಕನ್ನಡ ಬಿಗ್‌ಬಾಸ್ ಶುರುವಾಗಿದ್ದೇ ತಡ, ಎಲ್ಲರ ಮನೆಯ ಅಜ್ಜಂದಿರು ವಾರ್ತೆಗೆ ರಜೆ ಕೊಟ್ಟರು. ಅಜ್ಜಿ-ಮೊಮ್ಮಕ್ಕಳು ಕಾಟೂìನಿಗೆ ಟಾಟಾ ಹೇಳಿದರು. ಮನೆಯ ಗೃಹಿಣಿಯರು ಧಾರಾವಾಹಿಗಳ ಕೈಬಿಟ್ಟರು. ಹುಡುಗರು ಕ್ರೀಡಾ ಚಾನೆಲ್‌ಗಳಿಗೆ ವಿದಾಯ ಹಾಡಿದರು. ಮನೆಮಂದಿಯೆಲ್ಲ ಕುಳಿತು ಈಗ ಬಿಗ್‌ಬಾಸ್ ನೋಡಲು ಶುರುಮಾಡಿ¨ªಾರೆ. ಕುರಿ ಪ್ರತಾಪನ “ನೀರೊಳಗಿದ್ದು ಬೆಮರ್ದಂ ಉರಗಪತಾಕಂ…’ ಎಂಬ ಡಯಲಾಗ್‌ನ್ನು ಕೇಳಿ ಅಜ್ಜಂದಿರೂ ನಕ್ಕರು. ಮಕ್ಕಳೂ ನಕ್ಕರು. ನಗುವುದಕ್ಕೆ ಅವರವರ ಕಾರಣಗಳು ಅವರವರಿಗೆ.
ರಾತ್ರಿ ಮನೆಗೆ ಬರುವುದು ತಡವಾದಾಗ, ಬಿಗ್‌ಬಾಸ್ ದೃಶ್ಯಗಳು ನೋಡುವುದಕ್ಕೆ ಅವಕಾಶವಾಗದೆ ಇದ್ದಾಗ, ವೂಟ್ ಆ್ಯಪ್‌ನಲ್ಲಿ ದೃಶ್ಯಗಳನ್ನು ನೋಡುತ್ತ ಮೈಮರೆತರು. ಟಾಸ್ಕ್ ಸಂದರ್ಭ “ಕ್ಯಾಪ್ಟನ್ ಔಟ್ ಕೊಟ್ಟದ್ದು ಸರಿಯೋ ತಪ್ಪೋ’ ಎಂಬ ಚರ್ಚೆಗಳು ಸ್ನೇಹಿತರ ವಲಯದಲ್ಲಿ ಜೋರಾಗಿ ನಡೆಯುತ್ತಿದೆ. ಥರ್ಡ್ ಅಂಪಾಯರ್ ತೀರ್ಪುಗಳಂತೂ ಫೇಸ್‌ಬುಕ್ ತುಂಬಾ ಗಿಜಿಗುಟ್ಟುತ್ತಿವೆ.
“ಬರೀ ವೂಟ್ ನೋಡ್ತೀ. ನನ್ನ ಸ್ಟೇಟಸ್ಸೇ ನೋಡಿಲ್ಲ’ ಎಂದು ಗರ್ಲ್-ಬಾಯ್‌ಫ್ರೆಂಡ್‌ಗಳು ಪರಸ್ಪರ ಬೈದಾಡಿಕೊಳ್ಳುತ್ತಿದ್ದಾರೆ. ಈ ಬಾರಿ ಯಾರು ಬಿಗ್‌ಬಾಸ್ ಮನೆಯಿಂದ ಹೊರಬೀಳುತ್ತಾರೆ ಎಂಬ ಬಗ್ಗೆ ಚಾಲೆಂಜ್ ಹಾಕುವ ಕಾಲೇಜು ವಿದ್ಯಾರ್ಥಿಗಳು ತಮ್ಮ ಇಷ್ಟದ ಸ್ಪರ್ಧಿಗಳ ಪರ ನಿಂತು ಓಟಿಂಗ್ ಮಾಡುತ್ತಿದ್ದಾರೆ. ಯಾರ ತಂಟೆಗೂ ಹೋಗದೇ ತನ್ನ ಪಾಡಿಗೆ ತಾನಿದ್ದ ದೀಪಿಕಾದಾಸ್ ಈಗೇಕೆ ಶೈನ್ ಶೆಟ್ಟಿಯತ್ತ ಒಲವು ತೋರಿಸುತ್ತಿದ್ದಾಳೆ ಎಂದು ಪಡ್ಡೆ ಹುಡುಗರಿಗೆ ಬೇಸರವಾಗಿದೆ. ಬಿಗ್‌ಬಾಸ್ ಮನೆಗೆ ಬಂದಾಗ ಪುಷ್ಕಳವಾಗಿದ್ದ ಈ ಶೈನ್‌ಶೆಟ್ಟಿ ಇದೀಗ ಸ್ಲಿಮ್ ಆಗಿ ಚಾಕೊಲೇಟ್ ಹೀರೋ ತರ ಆಗೋಗಿದ್ದಾರೆೆ. ಪಾಪ, ದೀಪಿಕಾದಾಸ್ ಆದ್ರೂ ಏನು ಮಾಡಿಯಾಳು ಎಂದು ಸಮಾಧಾನ ಮಾಡಿಕೊಂಡಿದ್ದಾರೆ. ಹುಬ್ಬು ಏರಿಸುವ ಪ್ರಿಯಾಂಕಾ ಈ ಬಾರಿ ವಾಸುಕಿ ಜೊತೆಗೆ ಹೊಸವರ್ಷದ ನೃತ್ಯ ಮಾಡಿದ್ದು ಕಂಡು ವಾಸುಕಿ ಅಭಿಮಾನಿಗಳು ಪುಳಕಿತರಾಗಿದ್ದಾರೆ.
ಮನಸ್ಸಿಂದ ಕೆಟ್ಟೋರಲ್ಲ
ಬಿಗ್‌ಬಾಸ್ ಪ್ರಾರಂಭ ಆದ ದಿನಗಳಿಂದ ನನ್ನ ಗೆಳತಿ ಕಾಲ್‌ಗೆ ಸಿಕ್ತಾ ಇಲ್ಲ, ಮೆಸೇಜಿಗೂ ಸಿಕ್ತಾ ಇಲ್ಲ. “ಫೋನೂ ಇಲ್ಲ , ಮೆಸೇಜೂ ಇಲ್ಲ ಎಲ್ಲಿರುವೆ…’ ಎಂದು ನಾನು ಹಾಡಿದ್ರೆ, ಆ ಕಡೆಯಿಂದ “ನಾನು ಇಲ್ಲಿ ಬಿಗ್‌ಬಾಸ್ ನೋಡ್ತಾ ಕುಳಿತಿರುವೆ’ ಎನ್ನುವ ಉತ್ತರ ಬರುತ್ತಿದೆ. ಅತ್ತ ವಾಸುಕಿ ಹಾಡಿದ “ಇಲ್ಲಿರಲಾರೆ… ಅಲ್ಲಿಗೆ ಹೋಗಲಾರೆ…’ ಹಾಡು ಕೇಳುತ್ತ¤ ಆಕೆ ಟಪಕ್ಕಂತ ಫೋನ್ ಕಟ್‌ಮಾಡಿದ್ದಾಳೆ.
ನಾನೂ “ಮನಸ್ಸಿಂದ ಯಾರೂ ಕೆಟ್ಟೋರಲ್ಲಾ…’ ಎಂಬ ಅವನ ಹಾಡನ್ನೇ ಫೇಸ್‌ಬುಕ್‌ನಲ್ಲಿ ಹುಡುಕಿ ಕೇಳುತ್ತ ಸಮಾಧಾನಗೊಂಡಿರುವೆ. “ಏನ್ ಮಾಡ್ಲಿ… ಹೌದು ಸ್ವಾಮಿ, ಈ ರೀತಿ ಅನುಭವ ನನಗಂತೂ ಆಗಿದೆ’ ಅಂತೀರಾ. ಮೊನ್ನೆಯಷ್ಟೇ ನನ್ನ ಚಿಕ್ಕಮ್ಮನ ಮಗ ಊಟ ಮಾಡೋಲ್ಲ ಎನ್ನುವ ದೂರಿಗೆ ತಮಾಷೆ ಎಂಬಂತೆ “ಬಿಗ್‌ಬಾಸ್ ತೋರಿಸುತ್ತ ಊಟ ಮಾಡಿಸಿ ಆಂಟಿ’ ಎಂದೆ. ಈ ಐಡಿಯ ಫಲಿಸಿದ್ದು ಆಶ್ಚರ್ಯ. ಟಾಸ್ಕ್ಗಳಲ್ಲಿ ಮುಗಿಬಿದ್ದು ಆಡುವ ಸ್ಪರ್ಧಿಗಳನ್ನು ನೋಡುತ್ತ ಅವನು ಊಟ ಮುಗಿಸಿಬಿಟ್ಟಿದ್ದ.
ಬದುಕು ಖಾಸಗಿಯೇ ?
ಗೃಹಿಣಿಯರ ಅಡುಗೆ ಮನೆಗೂ ಬಿಗ್‌ಬಾಸ್ ದಾಳಿ ಮಾಡಿದೆ. “”ಒಂದು ಕೈಯ್ಯಲ್ಲಿ ಮೊಬೈಲ್ ಹಿಡಿದು, ಬಿಗ್‌ಬಾಸ್ ನೋಡುತ್ತಾ ಅಡುಗೆ ಮಾಡಿದರೆ ಮುಗಿಯಿತು ಕಥೆ, ಸಾಂಬಾರಿಗೆ ಖಾರದ ಪುಡಿ ಹಾಕುತ್ತಾರೋ, ರಂಗೋಲಿ ಪುಡಿ ಹಾಕ್ತಾರೋ ಗೊತ್ತಾಗ್ಲಿಕ್ಕಿಲ್ಲ. ಅದನ್ನೇ ನೋಡುತ್ತಾ ಊಟ ಮಾಡೋ ಮಂದಿ ಸಾಂಬಾರ್ ಬದಲು ನೀರು ಹಾಕಿಕೊಂಡರೂ ಆಶ್ಚರ್ಯವಿಲ್ಲ”- ಎಂದು ಮೊನ್ನೆ ಅಪ್ಪಯ್ಯ ಬೈಯುತ್ತಿದ್ದರು.
ಬಿಗ್‌ಬಾಸ್‌ನಲ್ಲಿ ಮೊನ್ನೆ ತಾನೇ ಭಾರೀ ಖಾರ ಅಡುಗೆ ತಿಂದು ಎಲ್ಲರೂ ಕಂಗಾಲಾದ ಬಗ್ಗೆ, ಚಂದನಾ ಖಾರದಡುಗೆ ಉಂಡು ಪೇಚಾಡಿದ ಬಗ್ಗೆ ಅಮ್ಮ ಕತೆ ಶುರು ಮಾಡಿಯೇ ಬಿಟ್ಟಳು ಅನ್ನಿ. ಅಷ್ಟರಲ್ಲಿ ಚಂದನಾ ಸ್ಪರ್ಧೆಯಿಂದ ಹೊರಬಿದ್ದೂ ಆಯಿತು. ನನ್ನನ್ನು ಬಿಗ್‌ಬಾಸ್ ಹವಾ ಬಿಟ್ಟಿಲ್ಲ . ಹೌದು, ಎಲ್ಲ ಕೆಲಸಗಳನ್ನು ಬೇಗ ಬೇಗ ಮುಗಿಸಿ, ಬಿಗ್‌ಬಾಸ್ ಮುಂದೆ ಕುಳಿತುಕೊಳ್ಳುವ ನಾನು ಅಲ್ಲಿಂದ ಏಳುವುದು ಬಿಗ್‌ಬಾಸ್ ಮುಗಿದ ಮೇಲೆಯೇ. ಬೇರೆಯವರ ಖಾಸಗಿ ಬದುಕಿನಲ್ಲಿ ಇಣುಕುವುದು ಎಲ್ಲರಿಗೂ ಬಹಳೇ ಇಷ್ಟ. ಡೈರಿಯನ್ನು ಕದ್ದು ಓದಿದ ಹಾಗೆ.
ಶರಾವತಿ ಕಾಲ್ತೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.