ಜಿಡ್ಡುನಿ ವಾರಕ ಸೌಂದರ್ಯ ವರ್ಧಕಗಳು
Team Udayavani, Nov 2, 2018, 6:00 AM IST
ಮೊಡವೆ ಶೋಡಶಿಯರನ್ನು ಕಾಡುವ ನಂಬರ್ ವನ್ ಸಮಸ್ಯೆಯಾದರೆ, ಅಧಿಕ ತೈಲಯುಕ್ತ ಚರ್ಮದಿಂದ ಮೊಗದ ಅಂದ ಕುಂದುವುದು ಎರಡನೆಯ ಸಮಸ್ಯೆ.
ಹಾಂ! ಶೋಡಶ ವರ್ಷ ಪ್ರಾಯದಲ್ಲಿ ಹಾರ್ಮೋನ್‌ಗಳ ಸ್ರಾವ ಹೆಚ್ಚಿರುತ್ತದೆ. ಕೆಲವರಲ್ಲಿ ಹಾರ್ಮೋನ್ ಸ್ರಾವ ವ್ಯತ್ಯಯವಾದಾಗಲೂ ಅಧಿಕ ಜಿಡ್ಡಿನಂಶ ಉಂಟಾಗುತ್ತದೆ. ಮೊಗದಲ್ಲಿ ಸೆಬೇಷಿಯಸ್ ಗ್ರಂಥಿಗಳ ಚಟುವಟಿಕೆ ಅಧಿಕವಾಗಿಯೂ ಜಿಡ್ಡಿನಂಶದಿಂದ ಮೊಗದ ಚರ್ಮ ಕಳಾಹೀನವಾಗುತ್ತದೆ. ಅದೆಷ್ಟೋ ಬಾರಿ ಮೊಡವೆ, ಗುಳ್ಳೆ , ಬ್ಲ್ಯಾಕ್‌ಹೆಡ್ಸ್ , ವೈಟ್‌ಹೆಡ್ಸ್‌ಗಳಿಗೆ ಮುಖ್ಯ ಕಾರಣವೇ ಅಧಿಕ ತೈಲಾಂಶವುಳ್ಳ ಚರ್ಮ.
ಜಿಡ್ಡುನಿವಾರಕ ಸೌಂದರ್ಯವರ್ಧಕ ವಿಧಾನಗಳು
.ಮೊಗವನ್ನು ಆಗಾಗ್ಗೆ ಬೆಚ್ಚಗೆ ನೀರಿನಿಂದ ತೊಳೆಯುತ್ತಲೇ ಇರಬೇಕು. ಕೆಲವು ಮನೆಯಲ್ಲೇ ತಯಾರಿಸಿದ ಕ್ಲೆನ್ಸರ್‌ಗಳನ್ನು ಬಳಸಿದರೆ ಶೀಘ್ರ ಮೊಗದ ಜಿಡ್ಡು ನಿವಾರಣೆಯಾಗುತ್ತದೆ.
.ಬೆಚ್ಚಗಿನ ನೀರಿನ ಬೌಲ್‌ನಲ್ಲಿ 8-10 ಹನಿಗಳಷ್ಟು ಶುದ್ಧ ಆಲಿವ್‌ತೈಲ ಬೆರೆಸಿ, ಮೃದುವಾದ ಟವೆಲ್‌ನಿಂದ ಅದರಲ್ಲಿ ಅದ್ದಿ ಮುಖಕ್ಕೆ ವರ್ತುಲಾಕಾರದಲ್ಲಿ ಮಾಲೀಶು ಮಾಡುತ್ತ ಶಾಖ ನೀಡಬೇಕು. ಇನ್ನೊಂದು ವಿಧಾನವೆಂದರೆ, 10-15 ಹನಿ ಆಲಿವ್ ತೈಲ ಕೈಗಳಿಗೆ ಲೇಪಿಸಿ ಮೃದುವಾಗಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಬೇಕು. ತದನಂತರ ನಿಂಬೆರಸ ಬೆರೆಸಿದ ಬೆಚ್ಚಗಿನ ನೀರಿನಲ್ಲಿ ಮೃದು ಟವೆಲ್ ಅದ್ದಿ ಶಾಖ ನೀಡಿದರೆ ಮೊಗದ ಜಿಡ್ಡಿನಂಶ ಮಾಯ! ಇದು ಜೊತೆಗೆ ಮುಖದ ಕಾಂತಿಯೂ ದುಪ್ಪಟ್ಟು ಹೆಚ್ಚುತ್ತದೆ. ಈ ರೀತಿಯಲ್ಲಿ ನಿತ್ಯವೂ ಕ್ಲೆನ್ಸ್ ಮಾಡಿದರೆ ಉತ್ತಮ. ಆಲಿವ್ ತೈಲದಲ್ಲಿ ಚರ್ಮದ ಪಿಎಚ್ ಎಲ್ಲವನ್ನು ಸರಿಹೊಂದಿಸುವ ಗುಣವಿದೆ. ಜೊತೆಗೆ ಚರ್ಮದಲ್ಲಿರುವ ಅಧಿಕ ಜಿಡ್ಡು ನಿವಾರಕವೂ ಹೌದು. ನಿಂಬೆರಸಯುಕ್ತ ನೀರು ವಿಟಮಿನ್ “ಸಿ’ಯಿಂದ ಕೂಡಿ ತ್ವಚೆಗೆ ಟಾನಿಕ್, ಟಾಕ್ಸಿನ್‌ನಿವಾರಕ ಜೊತೆಗೆ ಎಣ್ಣೆ ಪಸೆಯನ್ನು ನಿವಾರಣೆ ಮಾಡಿ ಹೊಳಪು ನೀಡುತ್ತದೆ. ತೀಕ್ಷ್ಣ ಕೆಮಿಕಲ್ಸ್‌ಗಳಿಂದ ಕೂಡಿದ ಕ್ಲೆನ್ಸರ್ ಬಳಸಿ ಚರ್ಮದ ಹಾನಿಯನ್ನು ತಡೆಗಟ್ಟಲು ಈ ಸುಲಭ, ಸರಳ ಮನೆಯಲ್ಲೇ ತಯಾರಿಸಬಹುದಾದ ಕ್ಲೆನ್ಸರ್ ಬಳಸಿದರೆ ಚರ್ಮದ ಸೌಂದರ್ಯ ವರ್ಧಿಸುತ್ತದೆ.
ಹಾಲು ಮತ್ತು ಕಿತ್ತಳೆ ಸಿಪ್ಪೆಯ ಕ್ಲೆನ್ಸರ್
3 ದೊಡ್ಡ ಚಮಚ ತಣ್ಣಗಿನ ಹಾಲು, 1 ಚಮಚ ಕಿತ್ತಳೆಹಣ್ಣಿನ ಸಿಪ್ಪೆಯ ಹುಡಿ- ಇವೆರಡನ್ನೂ ಚೆನ್ನಾಗಿ ಕಲಸಿ ಪೇಸ್ಟ್ ತಯಾರಿಸಬೇಕು. ಇದನ್ನು ಒಂದು ಹತ್ತಿ ಉಂಡೆಯಿಂದ ಅದ್ದಿ ಮುಖಕ್ಕೆ ಬಲಬದಿಗೆ ಐದು ನಿಮಿಷ ವರ್ತುಲಾಕಾರವಾಗಿ, ಎಡಬದಿಗೆ 5 ನಿಮಿಷ ವರ್ತುಲಾಕಾರವಾಗಿ ಮಾಲೀಶು ಮಾಡಬೇಕು. ಮತ್ತೆ ಐದು ನಿಮಿಷ ಬಿಟ್ಟು ತದನಂತರ ತಣ್ಣೀರಿನಿಂದ ರಿನ್ಸ್ ಮಾಡಿ ತೊಳೆಯಬೇಕು. ಈ ಕ್ಲೆನ್ಸರ್‌ನ್ನು ನಿತ್ಯವೂ ಬಳಸಿದರೆ ಶೀಘ್ರ ಪರಿಣಾಮ ಕಂಡುಬರುತ್ತದೆ.
ಹಾಲು ಚರ್ಮವನ್ನು ಕ್ಲೆನ್ಸ್ ಮಾಡುವ ಜೊತೆಗೆ ಚರ್ಮಕ್ಕೆ “ರಸಾಯನ’ (Rejuvinative) ಟಾನಿಕ್ ಆಗಿದೆ. ಇದರಲ್ಲಿ ನೈಸರ್ಗಿಕ ಕಿಣ್ವಗಳ ಜೊತೆಗೆ ಚರ್ಮವನ್ನು ಕ್ಲೆನ್ಸ್ ಮಾಡುವ ಆಮ್ಲಿàಯ ಗುಣವಿದೆ. ಕಿತ್ತಳೆ ಸಿಪ್ಪೆಯ ಹುಡಿ ಪಿಎಚ್ ಬ್ಯಾಲೆನ್ಸ್ ಮಾಡುತ್ತದೆ. ಜಿಡ್ಡು ನಿವಾರಣೆ ಮಾಡುತ್ತದೆ.
ಜಿಡ್ಡಿನ ಮುಖಕ್ಕೆ ಆ್ಯಸ್ಟ್ರಿಂಜೆಟ್‌ಗಳ ಬಳಕೆ
ನೈಸರ್ಗಿಕ ಆ್ಯಸ್ಟ್ರಿಂಜೆಟ್ಸ್‌ಗಳ ಬಳಕೆ ಚರ್ಮದಲ್ಲಿರುವ ರಂಧ್ರ (ಟಟ್ಟಛಿs)ಗಳನ್ನು ನಿವಾರಣೆ ಮಾಡುತ್ತದೆ. ಜಿಡ್ಡಿನ ಮೊಗದ ಚರ್ಮವನ್ನು ಮೃದುಗೊಳಿಸುತ್ತದೆ. ಸೋಂಕು, ಗುಳ್ಳೆ ಮೊದಲಾದವುಗಳನ್ನು ನಿವಾರಣೆ ಮಾಡುತ್ತದೆ. ಕಿತ್ತಳೆ, ನಿಂಬೆ, ಗ್ರೇಫ್ ಫ್ರೂಟ್‌ಗಳ ರಸವನ್ನು ತಾಜಾ ಆಗಿರುವಾಗ ಮುಖಕ್ಕೆ ಲೇಪಿಸಬೇಕು. 3-4 ನಿಮಿಷಗಳ ಬಳಿಕ ತೊಳೆಯಬೇಕು.
ಪುದಿನಾ ಹಾಗೂ ರೋಸ್ ವಾಟರ್
ಪುದೀನಾ ರಸ 4 ಚಮಚಕ್ಕೆ ಶುದ್ಧ ಗುಲಾಬಿ ಜಲ 10 ಚಮಚ ಬೆರೆಸಿ ಮುಖಕ್ಕೆ ಲೇಪಿಸಿ 4-5 ನಿಮಿಷಗಳ ಬಳಿಕ ಮೊಗ ತೊಳೆದರೆ, ಮೊಗ ತಾಜಾ ಆಗಿ ಹೊಳೆಯುತ್ತದೆ.
ಜೇನು ಮತ್ತು ಮೊಟ್ಟೆಯ ಆಯಿಲ್ ಕಂಟ್ರೋಲ್ ಮುಖಲೇಪನ
2 ಚಮಚ ನಿಂಬೆಹಣ್ಣಿನ ರಸಕ್ಕೆ, 1 ಮೊಟ್ಟೆಯ ಬಿಳಿ ಭಾಗವನ್ನು ಬೆರೆಸಿ ಚೆನ್ನಾಗಿ ಗೊಟಾಯಿಸಿ ಮಿಶ್ರ ಮಾಡಬೇಕು. ಈ ಮಿಶ್ರಣಕ್ಕೆ 2 ಚಮಚ ಜೇನು ಬೆರೆಸಿ ಚೆನ್ನಾಗಿ ಕಲಕಿ ಲೇಪಿಸಬೇಕು. 15 ನಿಮಿಷಗಳ ಬಳಿಕ ಮೊಗ ತೊಳೆದರೆ ಜಿಡ್ಡಿನಂಶ ನಿವಾರಣೆಯಾಗಿ ಮುಖ ಶುಭ್ರವಾಗುತ್ತದೆ.
ಜಿಡ್ಡಿನಂಶ ಮುಖದಲ್ಲಿ ಅಧಿಕವಾದಾಗ ಮುಖದ ಕಾಂತಿ ಕಡಿಮೆಯಾಗಿ ಮುಖ ಕಪ್ಪಾಗುತ್ತದೆ. ಮುಖದ ಚರ್ಮವನ್ನು ಶುಭ್ರ ಹಾಗೂ ಶ್ವೇತವರ್ಣಯುಕ್ತವಾಗಿಸಲು ಇಲ್ಲಿದೆ ಸುಲಭ ಹೋಮ್ ಸ್ಪಾ ಗೃಹೋಪಚಾರ.
ಶ್ವೇತ ವರ್ಣಕಾರಕ ಮುಖಲೇಪ: ಒಂದು ಬೌಲ್‌ನಲ್ಲಿ 10 ಚಮಚ ಸಿಹಿ ಮೊಸರು ಬೆರೆಸಿ, 2 ಚಮಚ ಜೇನು, 2 ಚಿಟಿಕೆ ಜಾಯಿಕಾಯಿ ಹುಡಿ, 2 ಚಿಟಿಕೆ ದಾಲಿcàನಿ ಪುಡಿ ಬೆರೆಸಿ ಚೆನ್ನಾಗಿ ಮಿಶ್ರಮಾಡಿ ಫೇಸ್‌ಪ್ಯಾಕ್ ಮಾಡಬೇಕು. ವಾರಕ್ಕೆ 2 ಬಾರಿ ಬಳಸಿದರೆ ಮುಖ ಬೆಳ್ಳಗಾಗುತ್ತದೆ. ಮೊಸರಲ್ಲಿರುವ ಲ್ಯಾಕ್ಟಿಕ್ ಆಮ್ಲ ಚರ್ಮವನ್ನು ಬಿಳಿಯಾಗಿಸುತ್ತದೆ. ಜೇನು ಚರ್ಮಕ್ಕೆ ಪೋಷಕಾಂಶ ಹಾಗೂ ತೇವಾಂಶ ನೀಡಿ ತಾಜಾಗೊಳಿಸುತ್ತದೆ. ದಾಲಿcàನಿಯು ಚರ್ಮವನ್ನು ಡಿಟಾಕ್ಸಿಫಾç ಮಾಡಿದರೆ, ಜಾಯಿಕಾಯಿ ನೆರಿಗೆ ನಿವಾರಿಸಿ ಚರ್ಮವನು ಬಿಳಿಯಾಗಿಸುತ್ತದೆ.
ಡಾ. ಅನುರಾಧಾ ಕಾಮತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.