ಅಜ್ಜಿ ಅಮ್ಮ ಮಗಳು


Team Udayavani, Sep 20, 2019, 5:15 AM IST

songs-tt-30

ಅಜ್ಜಿ-ಅಮ್ಮ, ಮಕ್ಕಳ ಪಾಲನೆಯನ್ನು ಬೇರೆ ಬೇರೆಯಾಗಿ ನೋಡುವುದಾದರೂ ಏಕೆ? ಅಜ್ಜಿಯೂ “ಅಮ್ಮ’ನಾಗಿಯೇ ಮಕ್ಕಳನ್ನು ಬೆಳೆಸಿರುತ್ತಾಳಷ್ಟೆ. ಆದರೆ, ಅಜ್ಜಿಯಾಗಿ ಮಾಗುವ ವೇಳೆಗೆ ವಯಸ್ಸು-ಅನುಭವಗಳ ಪರಿಣಾಮವಾಗಿ, ಎಲ್ಲವನ್ನೂ ಕಟ್ಟುನಿಟ್ಟಾಗಿ ನೋಡುವ- ಭವಿಷ್ಯದ ಬಗ್ಗೆ ಭಯಪಡುವ ಪ್ರವೃತ್ತಿಗಳು ಕಡಿಮೆಯಾಗಿರುತ್ತವೆ. ತನ್ನ ಮಕ್ಕಳನ್ನು ಬೈದದ್ದು, ಶಿಸ್ತಿಗೆ ಒಳಪಡಿಸಿದ್ದು , ಹೊಡೆದದ್ದು ಇವೆಲ್ಲವೂ ಆಕೆಗೆ ಈಗ “ಸಿಲ್ಲಿ’ ಅನ್ನಿಸತೊಡಗುತ್ತದೆ. ತನ್ನ ಮಕ್ಕಳಿಗೆ ಅವರ ಬಾಲ್ಯದಲ್ಲಿ ನೀಡಲಾಗದ ಮುದ್ದು-ಪ್ರೀತಿ-ಷರತ್ತು ವಿಧಿಸದ ವಾತ್ಸಲ್ಯವೆಲ್ಲ ಮೊಮ್ಮಕ್ಕಳನ್ನು ಕಂಡಾಗ ಉಕ್ಕಿ ಹರಿಯುತ್ತದೆ!

ಇಬ್ಬರು ಮಕ್ಕಳು ಕಾರಿನಲ್ಲಿ ಮುಂದಿನ ಸೀಟಿಗಾಗಿ ಜಗಳವಾಡುತ್ತಿ ದ್ದಾರೆ. ಕಾರನ್ನು “ಡೈವ್‌’ ಮಾಡಿಕೊಂಡು ಹೋಗಿ ದಿನಸಿ ಸಾಮಾನು ತರುವ ಜವಾಬ್ದಾರಿಯ ತಲೆನೋವು ಹೊತ್ತಿರುವ ಅಮ್ಮನಿಗೆ ಮಕ್ಕಳ ಜಗಳ ಮತ್ತೂಂದು ತಲೆನೋವು! ಸಹನೆ ಕಳೆದುಕೊಂಡು ಅವಳು ಮಕ್ಕಳಿಗೆ- “ಶಟಪ್‌! ಸುಮ್ಮನಾಗ್ತಿàರೋ, ಅಥವಾ ಇಬ್ಬರಿಗೂ ಒಂದೊಂದು ಬಾರಿಸಲೋ? ಸಾಯಂಕಾಲ ಟಿವಿ ಟೈಮ್‌ ಕಟ್‌ ಮಾಡ್ತೀನಿ ನೋಡಿ’ ಎನ್ನುತ್ತಾಳೆ. ಒಂದು ಮಗು ಅಳಲಾರಂಭಿಸುತ್ತದೆ. ಮಕ್ಕಳ ಜೊತೆ ಹೊರಟಿರುವ ಅಜ್ಜಿ- “ಬನ್ನಿ ಬಂಗಾರಗಳಾ, ಅಮ್ಮನ ಮಾತು ಕೇಳ್ಬೇಡಿ. ಅವಳಿಗೆ ಮಕ್ಕಳನ್ನು ಹೇಗೆ ನೋಡ್ಕೊàಬೇಕು ಅಂತ ಗೊತ್ತಿಲ್ಲ. ಬನ್ನಿ, ನಿಮಗೆ ಐಸ್‌ಕ್ರೀಮ್‌ ಕೊಡಿಸ್ತೀನಿ. ಇಬ್ಬರೂ ಜಗಳವಾಡಬೇಡಿ’ ಎಂದು ಸುಮ್ಮನಾಗಿಸುತ್ತಾಳೆ!

ಇದು ಅಜ್ಜಿ-ಅಮ್ಮ ಇಬ್ಬರೂ ಮಕ್ಕಳೊಡನೆ ಒಂದೇ ಕುಟುಂಬದಲ್ಲಿ ವಾಸಿಸುವಾಗ ಸಾಮಾನ್ಯವಾಗಿ ಕಾಣುವ ದೃಶ್ಯ. 1980ರಿಂದ ಈಚೆಗೆ ಕೂಡುಕುಟುಂಬಗಳು ಕಣ್ಮರೆಯಾಗುತ್ತಾ ಬಂದರೂ, ಅಪ್ಪ-ಅಮ್ಮ-ಅಜ್ಜ-ಅಜ್ಜಿ-ಮೊಮ್ಮಕ್ಕಳು ಒಟ್ಟಿಗಿರುವ ಕುಟುಂಬಗಳು ಹೆಚ್ಚಾಗಿವೆ. ಇಂಥ ಕುಟುಂಬಗಳಲ್ಲಿ ಮಕ್ಕಳ ಲಾಲನೆ-ಪಾಲನೆಯ ಜವಾಬ್ದಾರಿಯನ್ನು ಅಜ್ಜಿ-ಅಮ್ಮ ಸಮಾನವಾಗಿ ಹಂಚಿಕೊಳ್ಳುವ, ನಿರ್ವಹಿಸುವ ಸಾಧ್ಯತೆ ಹೆಚ್ಚು. ಇದು ಮಕ್ಕಳ ದೃಷ್ಟಿಯಿಂದ “ಐಡಿಯಲ್‌’ ಎನಿಸಬಹುದಾ ದರೂ, ಅಮ್ಮ-ಅಜ್ಜಿಯ ಪಾಲಿಗೆ ಹಲವು ಸಮಸ್ಯೆಗಳನ್ನೂ ತರಬಹುದು. ಮಕ್ಕಳ ನಡುವಣ

ಜಗಳಗಳು ಬೇಗ ಕೊನೆ ಕಂಡರೂ, ಅಜ್ಜಿ-ಅಮ್ಮಂದಿರ ಮಧ್ಯೆ “ಪವರ್‌ ಸ್ಟ್ರಗಲ್‌’ ಆಗಿ ಮಾರ್ಪಾಡಾಗಬಹುದು. ಅಜ್ಜಿ-ಅಮ್ಮ, ಮಕ್ಕಳ ಪಾಲನೆಯನ್ನು ಬೇರೆ ಬೇರೆ ಯಾಗಿ ನೋಡುವುದಾದರೂ ಏಕೆ? ಅಜ್ಜಿಯೂ “ಅಮ್ಮ’ನಾಗಿಯೇ ಮಕ್ಕಳನ್ನು ಬೆಳೆಸಿರುತ್ತಾಳಷ್ಟೆ. ಆದರೆ, ಅಜ್ಜಿಯಾಗಿ ಮಾಗುವ ವೇಳೆಗೆ ವಯಸ್ಸು-ಅನುಭವಗಳ ಪರಿಣಾಮವಾಗಿ, ಎಲ್ಲವನ್ನೂ ಕಟ್ಟುನಿಟ್ಟಾಗಿ ನೋಡುವ-ಭವಿಷ್ಯದ ಬಗ್ಗೆ ಭಯಪಡುವ ಪ್ರವೃತ್ತಿಗಳು ಕಡಿಮೆಯಾಗಿರುತ್ತವೆ. ತನ್ನ ಮಕ್ಕಳನ್ನು ಬೈದದ್ದು, ಶಿಸ್ತಿಗೆ ಒಳಪಡಿಸಿದ್ದು , ಹೊಡೆದದ್ದು ಇವೆಲ್ಲವೂ ಆಕೆಗೆ ಈಗ “ಸಿಲ್ಲಿ’ ಅನಿಸತೊಡಗುತ್ತದೆ. ತನ್ನ ಮಕ್ಕಳಿಗೆ ಅವರ ಬಾಲ್ಯದಲ್ಲಿ ನೀಡಲಾಗದ ಮುದ್ದು-ಪ್ರೀತಿ-ಷರತ್ತು ವಿಧಿಸದ ವಾತ್ಸಲ್ಯವೆಲ್ಲ ಮೊಮ್ಮಕ್ಕಳನ್ನು ಕಂಡಾಗ ಉಕ್ಕಿ ಹರಿಯುತ್ತದೆ! ಹೀಗೆ, ಪ್ರೀತಿಸುವ ಭರದಲ್ಲಿ ಬದಲಾದ ಕಾಲ-ಬದಲಾಗುತ್ತಿರುವ ಒತ್ತಡಗಳ ಮೇಲೆ ಆಕೆಯ ಗಮನ ಹರಿಯುವುದೇ ಇಲ್ಲ.

ಅಮ್ಮನ ಕಥೆ…
ಅಮ್ಮನಿಗೆ ಸಹಾಯಕ್ಕೆ ಮಕ್ಕಳು ಶಾಲೆಯಿಂದ ಬಂದಾಗ ತಾನಿರದಿದ್ದರೆ ಅವರಿಗೆ ತಿಂಡಿ-ಹಾಲು ಕೊಡಲು, ತಾನು ನಿರಾಳವಾಗಿ ಆಫೀಸ್‌ನಲ್ಲಿ ಕೆಲಸ ಮಾಡಲು “ಅಜ್ಜಿ” ಬೇಕೇ ಬೇಕು. ಆದರೆ ಮಕ್ಕಳಿಗೆ ಶಿಸ್ತು ವಿಧಿಸುವಾಗ ಮಧ್ಯೆ ತನ್ನಮ್ಮ/ಅತ್ತೆ ಬಂದು ತನ್ನನ್ನು ತಡೆಯುವುದು, ಮಕ್ಕಳ ಪರ ವಹಿಸುವುದು ಇವು ಅಮ್ಮನಿಗೆ ಇಷ್ಟವಾಗದ ವಿಷಯ. ಮಕ್ಕಳು ಸರಿಯಾಗಿ ಓದದಿದ್ದರೆ/ಶಿಸ್ತಿನ ನಡವಳಿಕೆ ರೂಢಿಸಿಕೊಳ್ಳದಿದ್ದರೆ ಮುಂದೆ ಅವರ ಭವಿಷ್ಯ ಏನಾದೀತೋ ಎಂಬ ಭಯ-ಆತಂಕ ಅವಳದ್ದು. ಅದನ್ನು ಅಜ್ಜಿ “ಮಿನಿಮೈಜ್‌’ ಮಾಡಿ “ಕ್ಷುಲ್ಲಕ’ ಎನ್ನುವಂತೆ ನೋಡುತ್ತಾಳೆ. ಆ ಮೂಲಕ ಮಕ್ಕಳಿಗೆ ಅವಿಧೇಯತೆ, ಅಶಿಸ್ತು ಜೊತೆಯಾಗುವಂತೆ ಮಾಡುತ್ತಾಳೆ. ಜೊತೆಗೆ “ನಮ್ಮನ್ನು ಕಂಡರೆ ಅಮ್ಮನಿಗೆ ಅಷ್ಟಕ್ಕಷ್ಟೆ…’ ಎಂಬ ಭಾವನೆ ಮಕ್ಕಳಲ್ಲಿ ಮೂಡುವಂತೆ ಮಾಡುತ್ತಾಳೆ ಎಂಬುದು ಎಲ್ಲ ಅಮ್ಮಂದಿರ ದೂರು.

ಅಜ್ಜಿ-ಅಮ್ಮಂದಿರ ನಡುವೆ
“ಅಪ್ಪ-ಅಮ್ಮನ ಜಗಳದಲಿ ಕೂಸು ಬಡವಾಯ್ತು…’ ಎಂಬಂತೆ, ಅಜ್ಜಿ-ಅಮ್ಮಂದಿರ ಕಲಹದ ಮಧ್ಯೆ ಮಕ್ಕಳು ಅಶಿಸ್ತು, ಮೈಗಳ್ಳತನ, ಜಗಳವಾಡುವುದು, ಅಳುವುದು, ಎದುರಾಡಲು ಕಲಿಯುವುದು… ಮುಂತಾದ ಗುಣಗಳನ್ನು ಮೈಗೂಡಿಸಿಕೊಳ್ಳುತ್ತಾರೆ. ಅಮ್ಮ “ಟಿವಿ ನೋಡಬೇಡ’ ಎಂದು ಬೈದರೆ, “ನಾನು ಅಜ್ಜಿ ಹತ್ತಿರ ಹೋಗುತ್ತೇನೆ, ಅಜ್ಜಿಯ ಮಾತನ್ನೇ ನಾನು ಕೇಳುವುದು’ ಎನ್ನುತ್ತಾರೆ! ಅಜ್ಜಿ-ಅಮ್ಮನ ನಡುವೆ ಇರುವ ಭಿನ್ನಾಭಿಪ್ರಾಯವನ್ನು ತಮ್ಮ ಬೇಡಿಕೆಗಳನ್ನು ಪೂರೈಸಲು ಉಪಯೋಗಿಸಿಕೊಳ್ಳುವುದನ್ನು ಕಲಿಯುತ್ತಾರೆ. ಅಮ್ಮನಾದವಳಿಗೆ ಮಕ್ಕಳ

ಪಾಲನೆಯ ವಿಷಯದಲ್ಲಿ, ಅಮ್ಮ ಮತ್ತು ಅತ್ತೆ- ಹೀಗೆ ಎರಡೂ ಕಡೆ ಯಿಂದಲೂ ಭಿನ್ನಾಭಿಪ್ರಾಯಗಳು ತಲೆದೋರಬಹುದು. ಆದರೆ ತನ್ನ ಮ್ಮನ ಬಗೆಗೆ ಅವಳ ಧೋರಣೆ ಸ್ವಲ್ಪ ಮೃದು. ಹಾಗೆಯೇ ಮುಕ್ತವಾಗಿ ಮಾತನಾಡುವ ಅವಕಾಶವೂ ಇದೆ. ಆದರೆ ಅತ್ತೆಯೊಂದಿಗೆ ಇದು ಸಾಧ್ಯವಾಗದಿರುವ ಸಂದರ್ಭಗಳೂ ಉಂಟು. ಅಷ್ಟೇ ಅಲ್ಲ , ಸೊಸೆಯ ಮಾತನ್ನು ಅತ್ತೆ “ಇದು ಅವಿಧೇಯತೆ, ತನಗೆ ತೋರುವ ಅಗೌರವ, ತನ್ನನ್ನು ಮೊಮ್ಮಕ್ಕಳಿಂದ ದೂರ ಮಾಡಲು ಸೊಸೆ ಮಾಡುತ್ತಿರುವ ಹುನ್ನಾರ’ ಎಂದು ತಪ್ಪು ಭಾವಿಸಲು ಸಾಧ್ಯವಿದೆ. ಮನೆಯಲ್ಲಿ ಇಂಥ ಕಲಹಗಳು ಪುರುಷರನ್ನೂ ಒಳಗೊಂಡು ಎರಡು ವಿರುದ್ಧ ಪಾರ್ಟಿಗಳನ್ನೇ ಸೃಷ್ಟಿಸಬಹುದು.

ಇಬ್ಬರೂ ಬೇಕು !
ಮೊಮ್ಮಕ್ಕಳಿಗೆ ಅಜ್ಜಿಯ ಸಾಂಗತ್ಯ ಸಿಕ್ಕುವುದು ಸುಲಭದ ಮಾತಲ್ಲ. ಹಿರಿಯ, ಅನುಭವದ, ಅಕ್ಕರೆಯ ಅಜ್ಜಿ ಮಕ್ಕಳಲ್ಲಿ ಸಂಬಂಧಗಳಲ್ಲಿ ವಿಶ್ವಾಸ-ಭರವಸೆ ಮೂಡಿಸಬಲ್ಲಳು. ಆದರೆ ಮಕ್ಕಳ ಓದು-ಅಭ್ಯಾಸಗಳು-ದೈನಂದಿನ ಕೆಲಸಗಳ ಬಗೆಗೆ “ಅಮ್ಮ’ನದೇ ಕೊನೆಯ ಮಾತು! ಇದು ಇಂದಿನ ದಿನಗಳಿಗೆ ಅನ್ವಯಿಸುವ ಸತ್ಯ! “ಅಯ್ಯೋ, ಮಕ್ಕಳು ಚಿಕ್ಕವರಿರುವಾಗ ಏನೋ ಒಂದೇಟು ಹೊಡೆದರೆ ನಮ್ಮತ್ತೆ ಹೇಗೆ ಬೈಯ್ಯುತ್ತಿದ್ದರು! ನಾನು ತೆಪ್ಪಗೆ ಇರಿ¤ರಲಿಲ್ವೇ?’ ಎಂದು ಐವತ್ತು ವರ್ಷದ ಹಿಂದಿನ ಸಂದರ್ಭ ನೆನೆದು ಈಗಿನ ಅಜ್ಜಿ ಅಲವತ್ತು ಕೊಳ್ಳುವ ಹಾಗಿಲ್ಲ. ಅದೇ ಪರಂಪರೆಯನ್ನು ಈಗ ಮುಂದುವರಿಸಲು ಸಾಧ್ಯವೂ ಇಲ್ಲ. ಹತ್ತು ವರ್ಷದ ಮಗುವಿಗೂ “ತಟ್ಟೆಯಲ್ಲಿ ಕಲಸಿ ತುತ್ತಿಡು, ಪಾಪ ಮಗು ಚಿಕ್ಕವನು’ ಎಂದು ಈಗ ಅತ್ತೆ ಸೊಸೆಗೆ ಅಂದರೆ, ಅಜ್ಜಿ ಅಮ್ಮನಿಗೆ ಬೆದರಿಸಿದರೆ ಅದು ತಪ್ಪೇ. ಮಕ್ಕಳ “ಅಮ್ಮ’ನಿಗೆ ಅವರ ಮೇಲೆ ನಿಸ್ಸಂಶಯವಾಗಿ ಇತರ ಎಲ್ಲರಿಗಿಂತ ಹೆಚ್ಚು ಪ್ರೀತಿ ಎನ್ನುವುದನ್ನು ನಾವೆಲ್ಲರೂ ಒಪ್ಪಲೇಬೇಕು. ಹೀಗಿರುವಾಗ, ಆಕೆಯ ಮಕ್ಕಳು ಅವಳನ್ನು ಪ್ರೀತಿ-ಗೌರವಗಳಿಂದ ಕಾಣಬೇಕಾದರೆ, ಮನೆಯ ಇತರರು, ವಿಶೇಷವಾಗಿ ಅಜ್ಜಿ , ಅಮ್ಮನನ್ನು ಪ್ರೀತಿಯಿಂದ ಕಾಣಬೇಕು. ಮಕ್ಕಳ ಮುಂದೆ ಆಕೆಯ ಬಗ್ಗೆ ಒಳ್ಳೆಯ ಮಾತುಗಳನ್ನಾಡಬೇಕು.

ಮಕ್ಕಳ ಆರೈಕೆಯಲ್ಲಿ ಅಜ್ಜಿಯ ಸಹಾಯವನ್ನು ನಿರೀಕ್ಷಿಸುವ “ಅಮ್ಮ’, ಕೆಲವೊಮ್ಮೆಯಾದರೂ ಅವಳ ಸಲಹೆಗಳನ್ನು ಕೇಳಲು ಸಿದ್ಧಳಿರಬೇಕು. ಮಕ್ಕಳೆದುರು ಆಕೆಯನ್ನು ಪ್ರೀತಿ-ಗೌರವದಿಂದ ಕಾಣಬೇಕು. ಬಹುಮುಖ್ಯವಾಗಿ, ಅಮ್ಮಂದಿರು ಗಮನಿಸಬೇಕಾದ ಸಂಗತಿಯೊಂದಿದೆ. ಏನೆಂದರೆ, ಮಕ್ಕಳ ಪಾಲನೆ ಅಜ್ಜಿಯಿಂದ ಸಾಧ್ಯವಾ? ಮಕ್ಕಳೊಂದಿಗೆ ಹೆಣಗಾಡುವಂಥ ಆರೋಗ್ಯ ಆಕೆಗೆ ಇದೆಯಾ ಎಂದು ಯೋಚಿಸಬೇಕು. ಊಟ ಮಾಡಿಸಲು 3 ವರ್ಷದ ಮಗುವಿನ ಹಿಂದೆ ಓಡುವುದು, ಮಗು ಶಾಲೆಯಿಂದ ಹಿಂದಿರುಗುವವರೆಗೆ ಕಾಯುವುದು, ಬೆಳಗ್ಗೆ ವಾಕಿಂಗ್‌ ಮಾಡದೆ, ಮೊಮ್ಮಗುವಿಗೆ ತಿಂಡಿ ಮಾಡಿಸುವುದು… ಇವು ಅಂಥ ಕೆಲ ಸಂದರ್ಭಗಳು. ಇವುಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಲು ಮುಜುಗರಪಡುವ “ಅಜ್ಜಿ’ ಕಡೆಗೊಮ್ಮೆ, ಹೇಗೋ ನಿಭಾಯಿಸಿದರೆ ಆಯ್ತು ಎಂದು ಒಪ್ಪಿಬಿಡಬಹುದು. ಅದು ಮಕ್ಕಳಲ್ಲಿ ಅಶಿಸ್ತು ಬೆಳೆಯಲೂ ಕಾರಣವಾಗಬಹುದು.

ಕೆ. ಎಸ್‌. ಪವಿತ್ರಾ

ಟಾಪ್ ನ್ಯೂಸ್

ಧ್ಯಾನ್‌ಚಂದ್‌ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್‌ ಸಿಂಗ್‌ ಪ್ರಶ್ನೆ

ಧ್ಯಾನ್‌ಚಂದ್‌ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್‌ ಸಿಂಗ್‌ ಪ್ರಶ್ನೆ

ICC ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಅವಕಾಶ

ICC ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಅವಕಾಶ

Mudhola

Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Laxmi-Heebalakar1

ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್‌ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಧ್ಯಾನ್‌ಚಂದ್‌ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್‌ ಸಿಂಗ್‌ ಪ್ರಶ್ನೆ

ಧ್ಯಾನ್‌ಚಂದ್‌ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್‌ ಸಿಂಗ್‌ ಪ್ರಶ್ನೆ

ICC ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಅವಕಾಶ

ICC ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಅವಕಾಶ

de

Mangaluru: ಅಪರಿಚಿತ ವ್ಯಕ್ತಿ ಸಾವು

arest

Kundapura: ಅಂಬರ್‌ ಗ್ರೀಸ್‌ ಮಾರಾಟ ಪ್ರಕರಣ; ಮತ್ತೋರ್ವ ಆರೋಪಿಯ ಬಂಧನ

Mudhola

Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.