ಅತಿಥಿ ದೇವೋ ಭವ
Team Udayavani, Oct 26, 2018, 6:00 AM IST
ಮೊದಲೆಲ್ಲ ಬಹುತೇಕ ಮನೆಗಳಲ್ಲಿ ಸದಸ್ಯರ ಸಂಖ್ಯೆ ಜಾಸ್ತಿ ಇದ್ದುದರಿಂದ ಬಂದು ಹೋಗುವವರ ಸಂಖ್ಯೆಯೂ ಅದಕ್ಕನುಗುಣವಾಗಿಯೇ ಇತ್ತು. ಆದರೆ, ಇಂದು ಮನೆಗಳೇನೋ ಬೃಹತ್ತಾಗಿದ್ದರೂ ಮನೆಮಂದಿ ಕಮ್ಮಿ. ಅವರದ್ದೇ ಆದ ವ್ಯವಹಾರದ ಮೇಲೆ ಮನೆ ಹೊರಗೇ ಇರುವುದರಿಂದ ಇಂದು ಸಮಯ ನಿಗದಿ ಮಾಡಿ ಮುಂಚಿತವಾಗಿಯೇ ತಿಳಿಸಿ ಹೋಗಬೇಕಾಗುತ್ತದೆ.
ಅತಿಥಿಗಳು ಅಂದ್ರೆ ಸಂತೋಷ, ಸಂಭ್ರಮ. ಮನೆ ಅಂದ ಮೇಲೆ ನೆಂಟರಿಷ್ಟರು, ಆಪ್ತರನ್ನು ಕರೆಯುವುದು ಇದ್ದದ್ದೇ. ಅತಿಥಿ ಸತ್ಕಾರವೆನ್ನುವುದು ಭಾರತೀಯರ ರಕ್ತದಲ್ಲೇ ಪಾರಂಪರಿಕವಾಗಿ ಬಂದ ವ್ಯವಸ್ಥೆ, ವಾಡಿಕೆಯೂ ಹೌದು. ಅದಕ್ಕೇ ಇರಬೇಕು “ಅತಿಥಿ ದೇವೋ ಭವ’ ಎಂಬ ಮಾತು ಪ್ರಚಲಿತ. ನಮ್ಮ ಮಣ್ಣಿನ ಸೊಗಡೇ ಅಂತಹದು.
ಬಂದ ಅಭ್ಯಾಗತರನ್ನು ಮುಂಬಾಗಿಲಿನಿಂದಲೇ ಆದರಿಸಿ, ಕರೆಸಿ, ಕೂರಿಸಿ, ವಾತಾವರಣ-ಸಂದರ್ಭಕ್ಕೆ ತಕ್ಕಂತಹ ಪಾನೀಯಗಳನ್ನಿತ್ತು ಕ್ಷೇಮ ಸಮಾಚಾರದ ವಿನಿಮಯಗಳೊಂದಿಗೆ ಸತ್ಕರಿಸುವುದು ಪದ್ಧತಿ. ಹಿರಿಯರಿದ್ದಲ್ಲಿ ಆದರಾತಿಥ್ಯವೆನ್ನುವುದು ಮನೆಯ ವೈಭವವನ್ನು ಸಾರುತ್ತದೆ. ಹಳ್ಳಿಯಾಗಲಿ, ದಿಲ್ಲಿಯಾಗಲಿ ಆಗಮಿಸಿದವರನ್ನು ಸರಿಯಾದ ತಿಂಡಿ, ತೀರ್ಥ, ಊಟದೊಂದಿಗೆ ಗೌರವದಿಂದ ಕಾಣುವುದು ನಮ್ಮ ಸಂಸ್ಕೃತಿಯ ದ್ಯೋತಕವೂ ಹೌದು. ಅದು ಯಾವ ರಾಜ, ಮಹಾರಾಜ, ರಾಜಕಾರಣಿಗಳೇ ಆಗಲಿ ಈ ಸತ್ಸಂಪ್ರದಾಯವನ್ನು ಅರ್ಪಣಾಭಾವದಿಂದ ಪಾಲಿಸುತ್ತಾರೆ.
ಇತ್ತೀಚೆಗೆ ಮುಖ್ಯಮಂತ್ರಿ ಸನ್ಮಾನ್ಯ ಕುಮಾರಸ್ವಾಮಿಯವರು ಸಾಲಮನ್ನಾಕ್ಕೆ ಸಂಬಂಧಿಸಿದಂತೆ ರೈತ ಸಮಾಲೋಚನೆ ಬಗ್ಗೆ ಸಭೆ ಕರೆದಿದ್ದಾಗ ಕಾರ್ಯಕ್ರಮದ ಕೊನೆಯಲ್ಲಿ “ಊಟದ ವ್ಯವಸ್ಥೆ ಇದೆ. ದಯಮಾಡಿ ಎಲ್ಲರೂ ಊಟ ಮಾಡಿಕೊಂಡು ಹೋಗಿ’ ಎಂದು ಕೇಳಿಕೊಂಡಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ಸೂಕ್ತವೇನೋ. ಹಾಗೆಯೇ ಎಷ್ಟೊಂದು ಮಠ-ಮಂದಿರ, ದೇವಸ್ಥಾನ, ಛತ್ರಗಳಲ್ಲಿ ಬಂದ ಅತಿಥಿ ಭಕ್ತಾದಿಗಳಿಗೆ ಊಟೋಪಚಾರಗಳನ್ನು ಪೂರೈಸುವ ಸುವ್ಯವಸ್ಥೆಯೂ ಇದೆ.
ನಮ್ಮ ದೇಶದಲ್ಲಿ ಮಾತ್ರವಲ್ಲ, ನಾನು ಇಂಗ್ಲೆಂಡಿಗೆ ಹೋಗಿದ್ದಾಗ ಅಲ್ಲಿ ಗಣಪ, ವೆಂಕಟೇಶ್ವರ, ಸ್ವಾಮಿ ನಾರಾಯಣ, ಕೃಷ್ಣ , ಸ್ಕಂಧ, ಭಗವತೀ ದೇವಸ್ಥಾನಗಳು, ಸಾಯಿಬಾಬಾ ಮಂದಿರ, ರಾಯರ ಮಠ ಎಂದೆಲ್ಲ ಹಲವು ಕಡೆ ಊಟ ಮಾಡಿ ಸಂಭ್ರಮಿಸಿದ್ದನ್ನು ನೆನಪಿಸುತ್ತಿರುತ್ತೇನೆ.
ಮೊದಲೆಲ್ಲ ಬಹುತೇಕ ಮನೆಗಳಲ್ಲಿ ಸದಸ್ಯರ ಸಂಖ್ಯೆ ಜಾಸ್ತಿ ಇದ್ದುದರಿಂದ ಬಂದು ಹೋಗುವವರ ಸಂಖ್ಯೆಯೂ ಅದಕ್ಕನುಗುಣವಾಗಿಯೇ ಇತ್ತು. ಆದರೆ, ಇಂದು ಮನೆಗಳೇನೋ ಬೃಹತ್ತಾಗಿದ್ದರೂ ಮನೆಮಂದಿ ಕಮ್ಮಿ. ಅವರದ್ದೇ ಆದ ವ್ಯವಹಾರದ ಮೇಲೆ ಮನೆ ಹೊರಗೇ ಇರುವುದರಿಂದ ಇಂದು ಸಮಯ ನಿಗದಿ ಮಾಡಿ ಮುಂಚಿತವಾಗಿಯೇ ತಿಳಿಸಿ ಹೋಗಬೇಕಾಗುತ್ತದೆ. ಇಲ್ಲವಾದಲ್ಲಿ ಜಡಿದ ಬೀಗ ನೋಡಿ ಹಿಂತಿರುಗಬೇಕಾಗಬಹುದು.
“ಕಾಲಾಯ ತಸೆ¾„ ನಮಃ’ ಎಂಬ ಬದಲಾವಣೆಗೆ ಒಗ್ಗಿಕೊಳ್ಳುವುದು ಅನಿವಾರ್ಯ.ಅತಿಥಿಗಳಾಗಿ ಹೋಗುವವರೂ ಕೆಲವು ವಿಷಯಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳುವುದು ಸೂಕ್ತ. ಮಕ್ಕಳು, ವೃದ್ಧರು, ಅನಾರೋಗ್ಯಪೀಡಿತರು, ಅಪರೂಪದ ವ್ಯಕ್ತಿಗಳ ಭೇಟಿ ಸಂದರ್ಭಗಳಲ್ಲೆಲ್ಲಾ ಬರಿಗೈಯಲ್ಲಿ ಹೋಗದೆ ಸನ್ನಿವೇಶಗಳಿಗೆ ತಕ್ಕಂತೆ ಹಣ್ಣುಹಂಪಲು, ಸಿಹಿತಿಂಡಿ, ಉಡುಗೊರೆಗಳೊಂದಿಗೆ ಹೋಗುವುದು ಸಮಂಜಸ. ಇಲ್ಲಿ ಸ್ಟೇಟಸ್ ಮುಖ್ಯವಾಗದೆ ಪ್ರೀತಿ, ಸೌಹಾರ್ದತೆಗೆ ಆದ್ಯತೆ. ಪುರಾಣ ಕತೆ ಸುಧಾಮ ಚರಿತೆಯಲ್ಲಿ ಕಡುಬಡವ ಸುಧಾಮನು ಹಲವಾರು ವರ್ಷಗಳ ಆನಂತರ ಬಾಲ್ಯಸ್ನೇಹಿತ ಕೃಷ್ಣ ಪರಮಾತ್ಮನನ್ನು ಭೇಟಿಯಾಗಲು ಹೋಗುವ ಸಂದರ್ಭದಲ್ಲಿ “ಪ್ರಾಣಪದಕ ಹರಿಯ ಹೋಗಿ ಕಾಣಬೇಕಾದರೆ ಕೈ ಕಾಣಿಕೆಗೆ ಕಾಣೆನೆಂದು ಮನದಿ ನೊಂದನೂ’ ಎಂದು ಉಲ್ಲೇಖೀಸಿದ ಪ್ರಕಾರ ಆತನ ಹೆಂಡತಿ ನೆರೆಹೊರೆಯವರಿಂದ ಕಾಡಿಬೇಡಿ ಒಂದು ಹಿಡಿ ಅವಲಕ್ಕಿಯನ್ನು ತಂದು, ಅದನ್ನೇ ಹರಕು ಚಿಂದಿ ಬಟ್ಟೆಯಲ್ಲಿ ಕಟ್ಟಿಕೊಟ್ಟು ತೆಕ್ಕೊಂಡು ಹೋಗುವಂತಹ ಸನ್ನಿವೇಶದಲ್ಲಿ ಪ್ರೀತಿ, ಭಕ್ತಿ-ಭಾವಕ್ಕೆ ಪ್ರಾಧಾನ್ಯ ಕೊಡಮಾಡಿದೆ.
ಮೊನ್ನೆ ನನ್ನ ಚಿಕ್ಕಪ್ಪನ ಮಗಳು ಕೂಡುಕುಟುಂಬದ ಹಳ್ಳಿವಾಸಿ ತಂಗಿ ಪೂರ್ಣಿಮಾ ಸಿಕ್ಕಿದಾಗ ಅತಿಥಿಗಳ ಬಗ್ಗೆ ಮಾತಾಡುತ್ತ, “”ಅಕ್ಕಾ, ನಮ್ಮ ಮನೆಗೆ ಊಟದ ಹೊತ್ತಿಗೆ ಆರೇಳು ಮಂದಿ ಬರುವುದು ಸರ್ವೇಸಾಮಾನ್ಯ. ಮನೆಯ ಗಂಡಸರು, “ಕೈಕಾಲು ತೊಳ್ಕೊಳ್ಳಿ , ಊಟಕ್ಕೇಳಿ’ ಎಂದು ಸಲೀಸಾಗಿ ಹೇಳುತ್ತಾರೆಯೇ ಹೊರತು ಹೆಂಗಸರ ಪರಿಸ್ಥಿತಿ ಅರ್ಥಮಾಡುವ ಗೊಡವೆಗೇ ಹೋಗುವುದಿಲ್ಲ.
“ಎಷ್ಟೋ ಭಾರಿ ನಾವು ಹೆಂಗಸರು ಅರೆಹೊಟ್ಟೆಯಲ್ಲಿದ್ದ ಸಂದರ್ಭಗಳೂ ಇತ್ತು ಅನ್ನು. ಈಗ ಅನ್ನ ಒಂದು ಧಾರಾಳ ಮಾಡಿಟ್ಟಿರುವುದನ್ನು ಕಲಿತಿದ್ದೇನೆ. ಹೇಗೂ ಮಜ್ಜಿಗೆ, ಉಪ್ಪಿನಕಾಯಿ, ಚಟ್ನಿಪುಡಿ ಇದ್ದೇ ಇರುವ ಕಾರಣ ಮ್ಯಾನೇಜ್ ಮಾಡ್ತೇವೆ’ ಎಂಬ ಆಕೆಯ ಅಸಹಾಯಕತೆಯ ಮಾತಿಗೆ ನಾನೂ “ಇಂತಹ ಸಂದರ್ಭಗಳಲ್ಲಿ ಸ್ವಲ್ಪ ನೀರು, ಬೆಲ್ಲ, ಉಪ್ಪು , ಹುಳಿ, ಸಾಂಬಾರು ಪುಡಿ ಸೇರಿಸಿ ಸಾಂಬಾರಿನ ಕ್ವಾಂಟಿಟಿ ಜಾಸ್ತಿ ಮಾಡು. ಮಾತ್ರವಲ್ಲ, ಸನ್ನಿವೇಶಕ್ಕೆ ತಕ್ಕಂತೆ ಬಡಿಸುವಾಗ ಕೈ ಸ್ವಲ್ಪ ಹಿಡಿತದಲ್ಲಿರಲಿ’ ಎಂಬ ಕಿವಿಮಾತಿನೊಂದಿಗೆ ಪುಕ್ಕಟೆ ಸಲಹೆಯನ್ನು ಕೊಡಲು ಮರೆಯಲಿಲ್ಲ. ಯಾಕೆಂದ್ರೆ, ಆಕೆ ನನ್ನ ತಂಗಿಯೆಂಬ ಅಕ್ಕರೆಯಿಂದ. ಹಾವೂ ಸಾಯಬಾರದು, ಕೋಲೂ ಮುರಿಯಬಾರದು ಎಂಬ ಧೋರಣೆಯಿಂದ ಪರಿಸ್ಥಿತಿ ನಿಭಾಯಿಸುವುದೇ ಚಾಣಾಕ್ಷತನ. ಮೊದಲು ನಾನೂ ಇದನ್ನೆಲ್ಲ ಅನುಭವಿಸಿದವಳು ತಾನೇ? ಹಳ್ಳಿಮನೆ ಅಂದ್ರೆ ಹಾಗೇನೇ. ಹೊತ್ತಲ್ಲದ ಹೊತ್ತಲ್ಲಿ ಮುಂಚಿತವಾಗಿ ತಿಳಿಸದೆ ಊಟದ ಹೊತ್ತಲ್ಲಿ ಬರುವುದು ಸಭ್ಯತೆಯ ಲಕ್ಷಣವಲ್ಲ.
ನಮ್ಮ ಕಾಲದಲ್ಲಂತೂ ಅತಿಥಿಗಳು ಮನೆಗೆ ಬಾರದ ದಿನಗಳೇ ಅಪರೂಪ. ಬಂಡಿಪಾತ್ರೆ ತುಂಬಾ ಬೇಯಿಸುವುದು ದಿನಚರಿ. ನನ್ನ ಮದುವೆಯಾದ ಹೊಸದರಲ್ಲಿ ಇಂತಹ ಕ್ಲಿಷ್ಟಕರ ಸನ್ನಿವೇಶಗಳನ್ನು ಎದುರಿಸಿದ್ದು ಬಹಳಷ್ಟು ಸಾರಿ! ನಮ್ಮತ್ತೆ ಇದ್ದ ಸಂದರ್ಭಗಳಲ್ಲಿ ಓ.ಕೆ. ಇಲ್ಲದಿದ್ದಾಗ ಕೈಕಾಲು ನಡುಕ. ಮಕ್ಕಳು ಚಿಕ್ಕವರಿದ್ದಾಗ ರಾತ್ರಿ ಊಟವಾಗಿ ಕಣ್ಣಿಗೆ ನಿದ್ದೆ ಹತ್ತುವ ಹೊತ್ತಲ್ಲಿ ಅತಿಥಿಗಳ ಆಗಮನವಾಗಿದ್ದೂ ಇತ್ತು. ಕಣ್ಣು ಹೊಸಕಿಕೊಳ್ಳುತ್ತ ಪುನಃ ಅಡುಗೆ ತಯಾರಿ, ಊಟ, ಕ್ಲೀನಿಂಗ್, ಮಲಗುವ ವ್ಯವಸೆ§ ಎಲ್ಲಾ ಪೂರೈಸಿ ನಾನು ಮಲಕ್ಕೋ ವೇಳೆಗೆ ನಡುರಾತ್ರಿ. ಅಷ್ಟರಲ್ಲಿ ಒಂದು ನಿದ್ದೆ ಆಗಿ ಎದ್ದ ಮಗು. ಅದರ ಫೀಡಿಂಗ್ ಎಲ್ಲಾ ಫಿನಿಶ್ ಆಯೂ¤ಂತ ನೆಮ್ಮದಿಯಲ್ಲಿ ಮಲಕ್ಕೊಳ್ಳೋ ಹಾಗುಂಟೇ? ಪುನಃ ಬೆಳ್ಳಂಬೆಳಗ್ಗೆ ಎದ್ದು ಬೆಳಗ್ಗಿನ ತಿಂಡಿ ತಯಾರಿ ಬಗ್ಗೆ ಚಿಂತೆ. ಅಬ್ಟಾ… ಆಗ ನಿಶಾಚರ ನೆನಪಾಗಿದ್ದಂತೂ ಸತ್ಯ. ಅಕಾಲಿಕ ಸಮಯದಲ್ಲಿ ಸಮಯದ ಪರಿವೆಯಿಲ್ಲದೆ ಬರುವ ಅನಪೇಕ್ಷಿತ ಅತಿಥಿಗಳ ಬಗ್ಗೆ ಮನದಲ್ಲಿ ಅಸಮಾಧಾನಗೊಂಡು ಮುಂಚಿತವಾಗಿ ತಿಳಿಸಿ ಬಂದಿದ್ದರೆ ಚೆನ್ನಾಗಿತ್ತು ಅಂತ ಅನಿಸಿದ್ದಿದೆ.
ಹಾಗೆ ನೋಡಿದರೆ, ದ್ರೌಪದಿನೇ ಪುಣ್ಯವಂತೆ. ಯಾಕೇಂತ ಕೇಳ್ತೀರಾ? ಕೌರವರು ದೂರ್ವಾಸ ಮುನಿ, ಶಿಷ್ಯವೃಂದದವರನ್ನು ಅತಿಥಿಗಳಾಗಿ ವನವಾಸಿಗಳಾದ ಪಾಂಡವರ ಬಳಿ (ಪರೀಕ್ಷಿಸುವುದ ಕ್ಕೋಸ್ಕರ) ಕಳುಹಿಸಿದ ಸಂದರ್ಭದಲ್ಲಿ ಕೃಷ್ಣನ ನೆನೆದರೆ ಕಷ್ಟವೊಂದಿಷ್ಟಿಲ್ಲ… ಕೃಷ್ಣಾ ಎನಬಾರದೇ… ಎಂದು ಪಾಂಚಾಲಿ ಉಲಿದಾಗ ಕೃಷ್ಣ ಕೊಟ್ಟ ಅಕ್ಷಯ ಪಾತ್ರೆ ಮೂಲಕ ಬಂದವರನ್ನು ಸಂತೃಪ್ತಿಪಡಿಸಿದ ಕತೆ ಎಲ್ಲರಿಗೂ ತಿಳಿದದ್ದೇ. ನಾನು ಎಲ್ಲಿಯಾದರೂ ಕೃಷ್ಣಾ… ಎಂದು ಹಾಡಲು ಪ್ರಾರಂಭಿಸಿದೆ ಅನ್ನಿ. ಕೃಷ್ಣ ಪರಮಾತ್ಮ ಬಾರದೆ ನನ್ನ ಪತಿ ಈಶ್ವರ ದೇವರು ಎದುರು ಬಂದು ಮುಗುಳುನಗುತ್ತ ನಿಲ್ಲುತ್ತಿದ್ದರು. ಕೆಲಸಕ್ಕೆ ಕೈಸೇರಿಸಲಿಲ್ಲ. ಅತಿಥಿಗಳಿಗೆ ಏನೆಲ್ಲಾ ವಿಶೇಷ ಅಡುಗೆ, ಎಷ್ಟು ಹೊತ್ತಿಗೆ ತಯಾರಾಗುತ್ತದೆ ಎಂದು ತನಿಖೆ ಮಾಡಲು. ಓಹ್! ಆಗ ನಮ್ಮ ಹಟ್ಟಿಯಲ್ಲಿ ಈಗಿರುವ ಹಸುಗಳೊಂದಿಗೆ ದೇವಲೋಕದ ನಂದಿನಿ, ಕಾಮಧೇನು, ಸುರಭಿಯರಿದ್ರೆ ಇಲ್ಲಾ ನನೆYà ನಾಲ್ಕು ಕೈಗಳಿದ್ದಿದ್ರೆ ಚೆನ್ನಾಗಿತ್ತು ಎಂದು ಗಂಡ ಮಹಾಶಯನ ಬಳಿ ಅಂದದ್ದಿದೆ. ಆದರೆ, ಏನೇ ಹೇಳಿ ಅಂದಿಗೆ ಅದೂ ಒಂದು ಥರ ಹಿತವಾಗಿತ್ತು, ಸಂತೋಷವಾಗಿತ್ತು ಎಂದರೆ ತಪ್ಪಲ್ಲ.
ಇಂದು ಪೇಟೆ, ಪಟ್ಟಣಗಳಲ್ಲಿ ಅವರವರ ಅನುಕೂಲಕ್ಕೆ ತಕ್ಕಂತೆ ಹೊಟೇಲು, ರೆಸ್ಟುರಾ, ಕಾಫಿಡೇಗೆ ಕರಕ್ಕೊಂಡು ಹೋಗುವುದು, ರೆಡಿ ಟು ಈಟ್ ಕಿಟ್‌ಗಳಿಂದ ಸತ್ಕರಿಸಿ ಸಂತೋಷಪಡಿಸುವುದು, ಅಥವಾ ಮನೆಗೇ ತರಿಸಿ ಉಪಚರಿಸುವುದು ಆತಿಥ್ಯದ ಒಂದು ಮಗ್ಗುಲಾದರೆ, ಮನೆಯಾಕೆಯ ನಿಸ್ವಾರ್ಥಪೂರ್ವಕವಾದ ಅಡುಗೆಯೂಟದ ಉಪಚಾರ ಇನ್ನೊಂದು ಮಗ್ಗುಲು.
ಮೊನ್ನೆ ನನ್ನ ಗೆಳತಿ ಫೋನಾಯಿಸಿದಾಗ ಹೇಳಿದ ಸಂಗತಿ- ಆಕೆಗೆ ಪ್ರಿಮೆಚೂÂರ್ ಮೊಮ್ಮಗು ಜನಿಸಿ ಆಸ್ಪತ್ರೆಯಿಂದ ಮನೆಗೆ ಬಂದಿದ್ದಾಗಿನ ಸಂದರ್ಭ. ಆಗಮಿಸಿದವರು ಹಿತೈಷಿಗಳಾಗಿದ್ದರೂ ಕೆಲವರು ಶೀತ, ಜ್ವರದವರು, ಕೆಲವರು ಕೈಕಾಲುಗಳ ಸ್ವತ್ಛತೆ ಬಗ್ಗೆ ಗಮನಿಸದೆ ಮಗುವನ್ನು ಎತ್ತಿಕೊಳ್ಳುವಾಗ ಅತ್ತ ಹೇಳಲಾಗದೆ ಚಡಪಡಿಸಿದ್ದು ಮಾತ್ರವಲ್ಲ, ಮಗು-ಬಾಣಂತಿಯ ಅಷ್ಟೊಂದು ಕೆಲಸಗಳ ಮಧ್ಯೆ ಬಂದವರನ್ನು ಉಪಚರಿಸಿ ಕಳುಹಿಸುವುದೂ ತ್ರಾಸದಾಯಕವೇ ಸರಿ ಎಂದು ತನ್ನ ಮನದ ತೊಳಲಾಟವನ್ನು ವ್ಯಕ್ತಪಡಿಸಿದಳು.
ಅತಿಥಿಗಳು ಸಮಯ ಪಾಲನೆಯೊಂದಿಗೆ ಸಭ್ಯತೆ, ಶಿಸ್ತುಬದ್ಧ ನಡವಳಿಕೆಯಿಂದಿರುವುದೂ ಅಷ್ಟೇ ಮುಖ್ಯ. ಕೆಟ್ಟ ಕುತೂಹಲಗಳಿಂದ ಅನಗತ್ಯ ವಿಷಯಗಳ ಬಗ್ಗೆ ಪ್ರಶ್ನೆ, ಅಶುದ್ಧ ಭಾಷಾ ಪ್ರಯೋಗ, ತೂಕವಲ್ಲದ ಮಾತು, ಆತಿಥಿÂದ ಬಗ್ಗೆ ಅತಿಯಾದ ನಿರೀಕ್ಷೆ ಯಾವತ್ತಿದ್ರೂ ಬೇಡ. ಪೀಠೊಪಕರಣಗಳ ಮೇಲೆ ಹತ್ತಿ, ಹಾರಿ ಯಾ ತಿನ್ನಲು ಕೊಟ್ಟ ತಿಂಡಿಗಳನ್ನು ಎಲ್ಲೆಂದರಲ್ಲಿ ಚೆಲ್ಲುವುದು, ತಂಟೆ-ಕೀಟಲೆ ಮಾಡುವುದು, ಅಲಂಕಾರಿಕ ವಸ್ತು-ಗಿಡಗಳನ್ನು ಹಾಳುಗೆಡಹುವುದು, ಅನುಮತಿ ಇಲ್ಲದೆ ಕಪಾಟು-ವಾರ್ಡ್‌ರೋಬುಗಳನ್ನು ತೆರೆದು ನೋಡುವುದು, ಕಸ-ಕಡ್ಡಿ ಎಸೆದು ರಂಪ ಮಾಡುವುದು ಎಂಬಿತ್ಯಾದಿ ಮಕ್ಕಳ ಅಸಭ್ಯತೆಯ ತುಂಟಾಟಗಳನ್ನು ಯಾರೂ ಇಷ್ಟಪಡುವುದಿಲ್ಲ. ಆದ್ದರಿಂದ ಘನತೆ, ಗೌರವಗಳನ್ನು ಕಾಯ್ದುಕೊಳ್ಳುವುದೂ ಮುಖ್ಯ.
ಒಟ್ಟಿನಲ್ಲಿ ಬಂದವರು ಅಪೇಕ್ಷಿತ ಅತಿಥಿಗಳೆನಿಸಿ ನಿರ್ಗಮಿಸಿದರೆ ಆತಿಥೇಯರಿಗೂ ಓ.ಕೆ.ಯಾಗುವುದರೊಂದಿಗೆ ಮಗುದೊಮ್ಮೆ ಅವರ ಆಗಮನಕ್ಕೆ ಮನೆ-ಮನದ ಕದ ತೆರೆದುಕೊಳ್ಳುತ್ತದೆ.
– ಪಿ. ಪಾರ್ವತಿ ಐ. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.