ಹೇರ್‌ ಜೆಲ್‌ಗ‌ಳು


Team Udayavani, Mar 22, 2019, 12:30 AM IST

maneyalle-hair-gelgalu.jpg

ವೈವಿಧ್ಯಮಯವಾಗಿ ಕೂದಲನ್ನು ಸೆಟ್‌ ಮಾಡಲು, ಕೂದಲಿಗೆ ಹೊಸ ವಿನ್ಯಾಸಗಳನ್ನು ಮಾಡಲು, ಕೂದಲಿಗೆ ಪೋಷಕಾಂಶಗಳನ್ನು ಒದಗಿಸಲು ಮನೆಯಲ್ಲೇ ಸುಲಭವಾಗಿ ತಯಾರಿಸುವ ಈ ವೈವಿಧ್ಯಮಯ ಹೇರ್‌ ಜೆಲ್‌ಗ‌ಳು ಪರಿಣಾಮಕಾರಿ.

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೃತಕ ಹೇರ್‌ಜೆಲ್‌ಗ‌ಳು ಹಲವು ರಾಸಾಯನಿಕಗಳಿಂದ ಕೂಡಿದ್ದು ದೀರ್ಘ‌ಕಾಲದ ಉಪಯೋಗದಿಂದ ದುಷ್ಪರಿಣಾಮ ಉಂಟುಮಾಡುತ್ತವೆ. ಮುಖ್ಯವಾಗಿ ಫಾರ್ಮಾಲ್ಡಿಹೈಡ್‌ ಎಂಬ ರಾಸಾಯನಿಕವು ಹಾರ್ಮೋನ್‌ ವ್ಯತ್ಯಯವನ್ನು ಉಂಟುಮಾಡುತ್ತದೆ. ಇದು ಸಾಮಾನ್ಯವಾಗಿ ಎಲ್ಲ ಕೃತಕ ಹೇರ್‌ಜೆಲ್‌ಗ‌ಳಲ್ಲಿ ಅಧಿಕ ಪ್ರಮಾಣದಲ್ಲಿರುತ್ತದೆ. ಮನೆಯಲ್ಲೇ ತಯಾರಿಸಿದ ಹೇರ್‌ಜೆಲ್‌ಗ‌ಳು ರಾಸಾಯನಿಕಗಳನ್ನು ಹೊಂದಿರುವುದಿಲ್ಲ. ಮಕ್ಕಳಿಗೆ, ಮಹಿಳೆಯರಿಗೆ ನಿತ್ಯೋಪಯೋಗಕ್ಕೆ ದೀರ್ಘ‌ಕಾಲೀನ ಬಳಕೆಗೆ ಸುಯೋಗ್ಯ.

ಜೆಲ್ಯಾಟಿನ್‌ಯುಕ್ತ ಹೇರ್‌ಜೆಲ್‌ಗ‌ಳು
ಸಾಮಗ್ರಿ
: ಆರ್ಧ ಚಮಚ ಜೆಲ್ಯಾಟಿನ್‌, ಅರ್ಧ ಕಪ್‌ ಬೆಚ್ಚಗಿನ ಡಿಸ್ಟಿಲ್‌ ವಾಟರ್‌, 20 ಹನಿ ಲ್ಯಾವೆಂಡರ್‌ ತೈಲ (ಪರಿಮಳಕ್ಕಾಗಿ).

ವಿಧಾನ: ಒಂದು ಬೌಲ್‌ನಲ್ಲಿ ಅರ್ಧ ಚಮಚ ಜೆಲ್ಯಾಟಿನ್‌ ತೆಗೆದುಕೊಂಡು ಅದಕ್ಕೆ ಬೆಚ್ಚಗಿನ ಡಿಸ್ಟಿಲ್‌ವಾಟರ್‌ ಬೆರೆಸುತ್ತ ಚೆನ್ನಾಗಿ ಕಲಕಬೇಕು. ತದನಂತರ 20 ಹನಿ ಲ್ಯಾವೆಂಡರ್‌ ತೈಲವನ್ನು ಸೇರಿಸಿ ಮಿಶ್ರಮಾಡಬೇಕು. ಪರಿಮಳಕ್ಕಾಗಿ ಲ್ಯಾವೆಂಡರ್‌ ತೈಲವನ್ನು ಬಳಸುವುದಾಗಿದ್ದು, ಲ್ಯಾವೆಂಡರ್‌ ತೈಲವಿಲ್ಲದೆಯೂ ಹೇರ್‌ಜೆಲ್‌ ತಯಾರಿಸಬಹುದು. ಅಥವಾ ಟೀಟ್ರೀ ಆಯಿಲ್‌ ಬೆರೆಸಿಯೂ ತಯಾರಿಸಬಹುದು. ಇದನ್ನು  ಫ್ರಿಜ್‌ನಲ್ಲಿಟ್ಟು ಬಳಸಬೇಕು.

ಅಲೋವೆರಾಯುಕ್ತ ಹೇರ್‌ಜೆಲ್‌
ಸಾಮಗ್ರಿ:
ಅರ್ಧ ಕಪ್‌ ಅಲೋವೆರಾ, 20 ಹನಿ ಲ್ಯಾವೆಂಡರ್‌ ತೈಲ.
ವಿಧಾನ: ಒಂದು ಪುಟ್ಟ ಬೌಲ್‌ನಲ್ಲಿ  ಅಲೋವೆರಾ ಜೆಲ್‌ ಹಾಗೂ ಲ್ಯಾವೆಂಡರ್‌ ತೈಲವನ್ನು ಚೆನ್ನಾಗಿ ಮಿಶ್ರ ಮಾಡಬೇಕು. ಸಣ್ಣ ಗಾಜಿನ ಭರಣಿಯಲ್ಲಿ ಹಾಕಿ, ಫ್ರಿಜ್‌ನಲ್ಲಿ ಅರ್ಧ ಗಂಟೆ ಇಡಬೇಕು. ಇದನ್ನು ನಿತ್ಯ ಕೂದಲಿಗೆ ಲೇಪಿಸಿದರೆ, ಪೋಷಕಾಂಶವೂ ದೊರೆಯುತ್ತದೆ. ಕೂದಲು ಜಿಡ್ಡಿನ ಅಂಶವಿಲ್ಲದೆ ಹೊಳೆಯುತ್ತದೆ. ಸ್ಟೈಲಿಂಗ್‌ ಜೆಲ್‌ ಆಗಿಯೂ ಇದು ಉಪಯುಕ್ತ.

ಅಗಸೇ ಬೀಜದ ಹೇರ್‌ಜೆಲ್‌
ಸಾಮಗ್ರಿ:
10 ಚಮಚ ಅಗಸೇಬೀಜ , 1 ಕಪ್‌ ಡಿಸ್ಟಿಲ್‌ ವಾಟರ್‌, 20 ಹನಿಗಳಷ್ಟು ಲ್ಯಾವೆಂಡರ್‌ ತೈಲ.
ವಿಧಾನ: ಒಂದು ಪಾತ್ರೆಯಲ್ಲಿ ಅಗಸೇಬೀಜ ಹಾಗೂ ಡಿಸ್ಟಿಲ್‌ ವಾಟರ್‌ ತೆಗೆದುಕೊಂಡು ಸಣ್ಣ ಉರಿಯಲ್ಲಿ ಕುದಿಸಬೇಕು. ಸುಮಾರು 10-15 ನಿಮಿಷ ಕುದಿಸಿದಾಗ, ನೀರು ದಪ್ಪವಾಗಿ ಸಕ್ಕರೆಯ ಪಾಕದಂತೆ ಅಂಟುತನ ಪಡೆದುಕೊಳ್ಳುತ್ತದೆ. ತದನಂತರ ಇದನ್ನು ಬಟ್ಟೆ ಅಥವಾ ಜಾಲರಿಯ ಮೂಲಕ ಸೋಸಬೇಕು. ಆರಿದ ಬಳಿಕ ಇದನ್ನು ಲ್ಯಾವೆಂಡರ್‌ ತೈಲದೊಂದಿಗೆ ಮಿಶ್ರ ಮಾಡಿ ಒಂದು ಸಣ್ಣ ಗ್ಲಾಸ್‌ ಜಾರ್‌ನಲ್ಲಿ ಹಾಕಿ ಫ್ರಿಜ್‌ನಲ್ಲಿಡಬೇಕು. ಎಲ್ಲ ಸೀಸನ್‌ಗಳಲ್ಲೂ ಬಳಸಬಹುದಾದ ಆರೋಗ್ಯಕರ ಹೇರ್‌ಜೆಲ್‌ ಇದು!

ನೈಸರ್ಗಿಕ ಹೇರ್‌ ಸ್ಟ್ರೇಯ್‌ಟನಿಂಗ್‌ ಜೆಲ್‌
ಉದ್ದವಾದ ನೀಳ-ನೇರ ಕೇಶರಾಶಿ ಇಂದಿನ ಫ್ಯಾಶನ್‌ ಟ್ರೆಂಡ್‌ಗಳಲ್ಲಿ ಒಂದು. ಮನೆಯಲ್ಲೇ ನೀಳ-ನೇರವಾದ ಕೇಶರಾಶಿಗಾಗಿ ಈ ಹೇರ್‌ಜೆಲ್‌ ಉಪಯುಕ್ತ.
ಸಾಮಗ್ರಿ: 10 ಚಮಚ ಅಗಸೆಬೀಜ, 1 ಕಪ್‌ ನೀರು, ಅಲೋವೆರಾ ತಿರುಳು 4 ಚಮಚ, 2 ಚಮಚ ಶುದ್ಧ ಹರಳೆಣ್ಣೆ , 1 ಚಮಚ ಲಿಂಬೆರಸ, 2 ಚಮಚ ಜೇನು.
ವಿಧಾನ: ಒಂದು ಅಗಲಬಾಯಿಯ ಪಾತ್ರೆಯಲ್ಲಿ  ನೀರು ತೆಗೆದುಕೊಂಡು ಕುದಿಸಬೇಕು. ಕುದಿ ಬಂದ ನಂತರ ಅಗಸೆಬೀಜಗಳನ್ನು ಬೆರೆಸಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕಲಕುತ್ತಾ ಬಿಸಿ ಮಾಡಬೇಕು. ದಪ್ಪವಾದ ದ್ರವದಂತಾದಾಗ ಆರಿಸಿ, ಬಟ್ಟೆ ಅಥವಾ ಜರಡಿಯಲ್ಲಿ ಸೋಸಬೇಕು. ಆರಿದ ಬಳಿಕ ಅಲೋವೆರಾ ತಿರುಳು ಸೇರಿಸಿ ಕಲಕಬೇಕು. ತದನಂತರ ಇದಕ್ಕೆ ನಿಂಬೆರಸ, ಹರಳೆಣ್ಣೆ , ಜೇನು ಬೆರೆಸಿ ಚೆನ್ನಾಗಿ ಮಿಶ್ರಮಾಡಿ ಗಾಜಿನ ಭರಣಿಯಲ್ಲಿ ಹಾಕಿ ಫ್ರಿಜ್‌ನಲ್ಲಿಡಬೇಕು.

ಇದನ್ನು ಕೂದಲಿಗೆ ಮೇಲಿನಿಂದ ಕೆಳಗೆ ಚೆನ್ನಾಗಿ ಲೇಪಿಸಬೇಕು. ಉದ್ದಕ್ಕೆ ಬಾಚಿ, ಕೂದಲನ್ನು ಬಿಡಬೇಕು. ಅರ್ಧ ಗಂಟೆ ಬಳಿಕ ಕೂದಲು ತೊಳೆದರೆ, ನೈಸರ್ಗಿಕ ಹೇರ್‌ ಸ್ಟ್ರೇಯ್‌ಟನರ್‌ ಜೆಲ್‌ ಆಗಿ ಇದು ಕಾರ್ಯವೆಸಗುತ್ತದೆ. ಇದನ್ನು ನಿತ್ಯ ಒಂದು ಬಾರಿಯಂತೆ ಒಂದು ತಿಂಗಳು ಲೇಪಿಸಿದರೆ, ಹೊಳೆವ ನೀಳ-ನೇರ ಕೇಶರಾಶಿ ಉಂಟಾಗುತ್ತದೆ!

ನಿಂಬೆಯುಕ್ತ ಹೇರ್‌ಜೆಲ್‌
ಸಾಮಗ್ರಿ
: 5 ಚಮಚ ಜೆಲ್ಯಾಟಿನ್‌, 1 ಕಪ್‌ ನೀರು, 10 ಚಮಚ ನಿಂಬೆರಸ, 2 ಚಮಚ ಕೊಬ್ಬರಿಎಣ್ಣೆ , 4 ಚಮಚ ಅಲೋವೆರಾ ತಿರುಳು.
ವಿಧಾನ: ಒಂದು ಪ್ಯಾನ್‌ನಲ್ಲಿ  ನೀರು ಹಾಗೂ ಜೆಲ್ಯಾಟಿನ್‌ ತೆಗೆದುಕೊಂಡು ಚೆನ್ನಾಗಿ ಮಿಶ್ರಮಾಡಿ, ಸಣ್ಣ ಉರಿಯಲ್ಲಿ ಕರಗಿಸಬೇಕು. ಉರಿಯಿಂದ ಕೆಳಗಿಳಿಸಿದ ಬಳಿಕ ನಿಂಬೆರಸ ಬೆರೆಸಿ ಮಿಶ್ರಮಾಡಬೇಕು. ಆರಿದ ಬಳಿಕ ಗಟ್ಟಿಯಾದ ಜೆಲ್‌ ಸೆಟ್‌ ಆಗುತ್ತದೆ. ಇದಕ್ಕೆ ಕೊಬ್ಬರಿಎಣ್ಣೆ ಹಾಗೂ ಅಲೋವೆರಾ ತಿರುಳು ಬೆರೆಸಿ ಬ್ಲೆಂಡರ್‌ನಲ್ಲಿ ಚೆನ್ನಾಗಿ ಬ್ಲೆಂಡ್‌ ಮಾಡಬೇಕು. ಇದನ್ನು ಗಾಜಿನ ಭರಣಿಯಲ್ಲಿ ಸಂಗ್ರಹಿಸಿ ಕೂದಲಿಗೆ ಸ್ಟೈಲಿಂಗ್‌ ಹೇರ್‌ಜೆಲ್‌ ಆಗಿ ಉಪಯೋಗಿಸಿದರೆ ಕೂದಲಿಗೆ ಪೋಷಣೆ, ಕಂಡೀಷನರ್‌ ಪರಿಣಾಮವೂ ಉಂಟಾಗಿ ಕೂದಲು ಕಾಂತಿ, ಸ್ನಿಗ್ಧತೆ ಪಡೆದುಕೊಳ್ಳುತ್ತದೆ. ಹೊಸ ವಿನ್ಯಾಸಗಳಲ್ಲಿ ಕೂದಲನ್ನು ಸೆಟ್‌ಮಾಡಲೂ ಈ ಹೇರ್‌ಜೆಲ್‌ ಉಪಯುಕ್ತ.

ಜೇನುಮೇಣ ಜೋಜೋಬಾ ತೈಲದ ಹೇರ್‌ಜೆಲ್‌
ಸಾಮಗ್ರಿ
: 5 ಚಮಚ ಜೇನುಮೇಣದ ತುರಿ, 5 ಚಮಚ ಶೀಬಟರ್‌, ಜೋಜೋಬಾ ತೈಲ 5 ಚಮಚ, 1 ಚಮಚ ಆರಾರೂಟ್‌ ಹಿಟ್ಟು , ವಿಟಮಿನ್‌ “ಈ’ ತೈಲ 10 ಹನಿ.
ವಿಧಾನ: ಮೊದಲು ಸಣ್ಣ ಉರಿಯಲ್ಲಿ ಜೇನುಮೇಣ ಕರಗಿಸಿ, ಅದರೊಂದಿಗೆ ಶೀಬಟರ್‌ ಬೆರೆಸಿ ಕಲಕಬೇಕು. ಇದಕ್ಕೆ ಜೋಜೋಬಾ ತೈಲ ಬೆರೆಸಿ ಆರಾರೂಟ್‌ ಹಿಟ್ಟು ಹಾಗೂ ಕೊನೆಯಲ್ಲಿ ವಿಟಮಿನ್‌ “ಈ’ ತೈಲ ಬೆರೆಸಿ ಕಲಕಬೇಕು. ಶೀಬಟರ್‌ ಬದಲಿಗೆ ಜೆಲ್ಯಾಟಿನ್‌ ಬಳಸಬಹುದು. ಇದು ಸಹ ಕಂಡೀಶನರ್‌ ಪರಿಣಾಮ ಬೀರುವ ಹೇರ್‌ಜೆಲ್‌.

ಕೃತಕ ಹೇರ್‌ಜೆಲ್‌ನಲ್ಲಿರುವ ರಾಸಾಯನಿಕಗಳಾದ ಬೆನ್‌ರಿkುನ್‌ ಈಉಅ, ಕ್ಲೋರಿನ್‌, ಯೂರಿಯಾ, ಐಸೊ ಪ್ರೊಪೈಲ್‌ ಆಲ್‌ಕೊಹಾಲ್‌ಗ‌ಳು ನೈಸರ್ಗಿಕ ಹೇರ್‌ಜೆಲ್‌ಗ‌ಳಲ್ಲಿ ಇಲ್ಲ. ಆದ್ದರಿಂದ ಸೌಂದರ್ಯಕ್ಕೂ ಆರೋಗ್ಯಕ್ಕೂ ಉತ್ತಮ.

– ಡಾ. ಅನುರಾಧಾ ಕಾಮತ್‌

ಟಾಪ್ ನ್ಯೂಸ್

ICC Champions Trophy to be completely moved from Pakistan?: Decision will be taken at ICC meeting

ICC ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

2-bus

ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Jasprit-Bumra

ICC World Rankings: ಟೆಸ್ಟ್‌ ಬೌಲಿಂಗ್‌ ರ್‍ಯಾಂಕಿಂಗ್‌ ಬುಮ್ರಾ ಮರಳಿ ನಂ.1

horoscope-new-3

Daily Horoscope: ವೆಚ್ಚಗಳು ಎಣಿಸದೆ ಬಂದರೂ ಅಪವ್ಯಯ ಇಲ್ಲ, ಎಲ್ಲದರಲ್ಲೂ ಎಚ್ಚರವಿರಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ICC Champions Trophy to be completely moved from Pakistan?: Decision will be taken at ICC meeting

ICC ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

2-bus

ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.