ಹೆಲ್ದೀ ಆ್ಯಂಡ್ ಟೇಸ್ಟೀ ಪರೋಟ
Team Udayavani, Feb 2, 2018, 2:33 PM IST
ಗೋಧಿಹಿಟ್ಟಿಗೆ ವಿವಿಧ ಹಿಟ್ಟುಗಳು, ಸೊಪ್ಪು ಮತ್ತು ತರಕಾರಿಗಳನ್ನು ಸೇರಿಸಿ ತಯಾರಿಸುವ ಪರೋಟಗಳೆಂದರೆ ಎಲ್ಲರಿಗೂ ಬಹಳ ಇಷ್ಟ. ಇಲ್ಲಿವೆ ಕೆಲವು ರಿಸಿಪಿ.
ಆಲೂ ಪರೋಟಾ
ಬೇಕಾಗುವ ಸಾಮಗ್ರಿ: ಬೇಯಿಸಿದ ಆಲೂಗಡ್ಡೆ – ನಾಲ್ಕು, ಗೋಧಿಹುಡಿ- ಒಂದು ಕಪ್, ದನಿಯಾ ಪುಡಿ- ಎರಡು ಚಮಚ, ಅರಸಿನ- ಇಂದು ಚಿಟಿಕಿ, ಉಪ್ಪು ರುಚಿಗೆ. ಪೆಪ್ಪರ್‌ಪುಡಿ – ಎರಡು ಟೀ ಚಮಚ, ಗರಂ ಮಸಾಲ- ಎರಡು ಟೀ ಚಮಚ, ಕೊತ್ತಂಬರಿಸೊಪ್ಪು- ನಾಲ್ಕು ಚಮಚ, ಸೋಡಾ ಚಿಟಿಕಿ.
ತಯಾರಿಸುವ ವಿಧಾನ: ಗೋಧಿಹುಡಿಗೆ ನಾಲ್ಕು ಚಮಚ ತುಪ್ಪ ಮತ್ತು ರುಚಿಗೆ ಬೇಕಷ್ಟು ಉಪ್ಪು$ ಸೇರಿಸಿ ಬಿಸಿನೀರಿನಲ್ಲಿ ಚಪಾತಿ ಹಿಟ್ಟು ಕಲಸಿ ಹದಿನೈದು ನಿಮಿಷ ನೆನೆಯಲು ಇಡಿ. ಹಿಟ್ಟು ಸ್ವಲ್ಪ ಗಟ್ಟಿಯಾಗಿರಬೇಕು. ಬೇಯಿಸಿದ ಆಲೂಗಡ್ಡೆಯನ್ನು ನುಣ್ಣಗೆ ಮ್ಯಾಶ್ ಮಾಡಿ, ಇದಕ್ಕೆ ಮೇಲೆ ತಿಳಿಸಿದ ಎಲ್ಲಾ ಪುಡಿಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಮಾಡಿ ಸಣ್ಣಸಣ್ಣ ಉಂಡೆಗಳನ್ನಾಗಿ ಮಾಡಿ. ಚಪಾತಿಹಿಟ್ಟನ್ನು ಸ್ವಲ್ಪ ಲಟ್ಟಿಸಿ ಇದರ ಒಳಗೆ ಆಲೂವನ್ನು ತುಂಬಿ ಸುತ್ತಲೂ ಹಿಟ್ಟಿನ ಅಂಚುಗಳನ್ನು ಅಂಟಿಸಿ, ಲಟ್ಟಿಸಿ. ಕಾದ ತವಾದಲ್ಲಿ ಎರಡೂ ಬದಿ ಎಣ್ಣೆ ಹಾಕಿ ಕೆಂಪಗೆ ಬೇಯಿಸಿ. ಈಗ ತಯಾರಾದ ಆಲೂ ಪರೋಟವನ್ನು ಚಟ್ನಿ ಅಥವಾ ಮೊಸರಿನೊಂದಿಗೆ ಸರ್ವ್ ಮಾಡಬಹುದು.
ಪಾಲಕ್ ಪರೋಟಾ
ಬೇಕಾಗುವ ಸಾಮಗ್ರಿ: ಗೋಧಿಹುಡಿ- ಎರಡು ಕಪ್, ಅಕ್ಕಿಹುಡಿ- ಎರಡು ಚಮಚ, ಕಡ್ಲೆಹಿಟ್ಟು – ನಾಲ್ಕು ಚಮಚ, ಬೇಯಿಸಿದ ಹೆಸರುಬೇಳೆ- ಅರ್ಧ ಕಪ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಎರಡು ಚಮಚ, ಅಜವಾನ- ಒಂದು ಚಿಟಿಕೆ, ಹಸಿಖಾರ- ಒಂದು ಚಮಚ, ಹೆಚ್ಚಿದ ಪಾಲಕ್‌ಸೊಪ್ಪು-ಎರಡು ಕಟ್ಟು, ಉಪ್ಪು ರುಚಿಗೆ.
ತಯಾರಿಸುವ ವಿಧಾನ: ಬೇಯಿಸಿದ ಹೆಸರುಬೇಳೆಯನ್ನು ಚೆನ್ನಾಗಿ ಮಸೆದು ಗೋಧಿಹುಡಿಗೆ ಸೇರಿಸಿ. ನಂತರ, ಇದಕ್ಕೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಮಾಡಿ, ಗಟ್ಟಿಯಾಗಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹತ್ತು ನಿಮಿಷ ಹಾಗೆ ಇಡಿ. ನಂತರ, ಬೇಕಾದ ಆಕಾರಕ್ಕೆ ಲಟ್ಟಿಸಿ ಎರಡೂ ಬದಿ ತುಪ್ಪ ಹಾಕಿ ಬೇಯಿಸಿ.
ಓಟ್ಸ್ ಪರೋಟಾ
ಬೇಕಾಗುವ ಸಾಮಗ್ರಿ: ಗೋಧಿಹುಡಿ- ಎರಡು ಕಪ್, ಪುಡಿಮಾಡಿದ ಓಟ್ಸ್ – ಆರು ಚಮಚ, ಹೆಚ್ಚಿದ ಮೆಂತೆಸೊಪ್ಪು – ಒಂದು ಕಪ್, ಕೆಂಪು ಮೆಣಸಿನಪುಡಿ- ಎರಡು ಚಮಚ, ಉಪ್ಪು ರುಚಿಗೆ.
ತಯಾರಿಸುವ ವಿಧಾನ: ಮೆಂತೆಸೊಪ್ಪಿಗೆ ಎರಡು ಚಮಚ ಮೆಣಸಿನಪುಡಿ ಮತ್ತು ಉಪ್ಪು ಸೇರಿಸಿ, ಐದು ನಿಮಿಷ ಬೇಯಿಸಿ. ನಂತರ, ಇದಕ್ಕೆ ಓಟ್ಸ್ ಮತ್ತು ಗೋಧಿಹುಡಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ನಂತರ, ಚಪಾತಿ ಲಟ್ಟಿಸಿ ಕಾದ ತವಾಲ್ಲಿ ಎರಡೂ ಬದಿ ಎಣ್ಣೆ ಹಾಕಿ ಬೇಯಿಸಿ, ಕಾಯಿಚಟ್ನಿ ಜೊತೆ ಸರ್ವ್ ಮಾಡಬಹುದು.
ಮೂಲಂಗಿ ಪರೋಟಾ
ಬೇಕಾಗುವ ಸಾಮಗ್ರಿ: ಗೋಧಿಹುಡಿ- ಒಂದು ಕಪ್, ಮೂಲಂಗಿತುರಿ- ಒಂದು ಕಪ್, ಕಡ್ಲೆಹುಡಿ- ನಾಲ್ಕು ಚಮಚ, ಜೀರಿಗೆ ಪುಡಿ- ಅರ್ಧ ಚಮಚ, ಸಕ್ಕರೆ- ಒಂದು ಚಮಚ, ಹೆಚ್ಚಿದ ಹಸಿಮೆಣಸು- ಒಂದು, ಗರಂ ಮಸಾಲ ಪುಡಿ- ಒಂದು ಚಮಚ, ಕೊತ್ತಂಬರಿಸೊಪ್ಪು- ನಾಲ್ಕು ಚಮಚ, ಅರಸಿನಪುಡಿ ಚಿಟಿಕೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಒಂದು ಚಮಚ, ಉಪ್ಪು ರುಚಿಗೆ.
ತಯಾರಿಸುವ ವಿಧಾನ: ಮಿಕ್ಸಿಂಗ್ ಬೌಲ್‌ನಲ್ಲಿ ಬಿಸಿನೀರಿಗೆ ಸ್ವಲ್ಪ ತುಪ್ಪಮತ್ತು ಉಪ್ಪು ಸೇರಿಸಿ ಮಿಶ್ರಮಾಡಿ. ಇದಕ್ಕೆ ಗೋಧಿಹುಡಿ ಹಾಕಿ ಚಪಾತಿಹಿಟ್ಟಿನ ಹದಕ್ಕೆ ಕಲಸಿ ಅರ್ಧಗಂಟೆ ಇಡಿ. ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ ಇದರಲ್ಲಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು ಬಾಡಿಸಿಕೊಳ್ಳಿ. ನಂತರ, ಮೂಲಂಗಿ, ಜೀರಿಗೆಪುಡಿ, ಮೆಣಸಿನಪುಡಿ, ಗರಂ ಮಸಾಲ ಮತ್ತು ಉಪ್ಪು$ ಹಾಕಿ ಬಾಡಿಸಿ. ಕೊನೆಗೆ ಕಡ್ಲೆಹುಡಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಉಂಡೆಗೆ ಬರುವಷ್ಟು ನೀರು ಆರಿಸಿ ಬೇಯಿಸಿಕೊಳ್ಳಿ. ಕಲಸಿಟ್ಟ ಗೋಧಿಹಿಟ್ಟನ್ನು ಸಣ್ಣ ಚಪಾತಿ ಮಾಡಿ ಒಳಗೆ ಮೂಲಂಗಿಯನ್ನು ತುಂಬಿ ಮಡಚಿ ಪುನಃ ಬೇಕಾದ ಆಕಾರಕ್ಕೆ ಲಟ್ಟಿಸಿ, ಕಾದ ತವಾದಲ್ಲಿ ಎರಡೂ ಬದಿ ತುಪ್ಪ ಹಾಕಿ ಬೇಯಿಸಿ.
ಗೀತಸದಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.