ಆರೋಗ್ಯಕರ ಸ್ಮೂದಿಗಳು
Team Udayavani, Mar 23, 2018, 7:30 AM IST
ಬಿಸಿಲಿನ ಧಗೆ ಏರುತ್ತಿದೆ. ಎಷ್ಟು ನೀರು ಕುಡಿದರೂ ಬಾಯಾರಿಕೆ ನೀಗದು. ಹೆಚ್ಚು ಖಾರ, ಮಸಾಲೆ ಪದಾರ್ಥಗಳನ್ನು ಕಡಿಮೆ ಮಾಡಿ ಮನೆಯಲ್ಲಿಯೇ ಆರೋಗ್ಯಕರ ಸ್ಮೂದಿಗಳನ್ನು ಮಾಡಿ ಕುಡಿದರೆ ಆರೋಗ್ಯಕ್ಕೂ ಹಿತ, ಮನಸ್ಸಿಗೂ ಹಿತ.
ಅಂಜೂರ ಸ್ಮೂದಿ
ಬೇಕಾಗುವ ಸಾಮಗ್ರಿ: 1 ಕಪ್ ನೀರಿನಲ್ಲಿ ನೆನೆಸಿದ ಅಂಜೂರು, 1 ಕಪ್ ಹಾಲು, 2 ಚಮಚ ಜೇನುತುಪ್ಪ .
ತಯಾರಿಸುವ ವಿಧಾನ: ಅಂಜೂರ, ಹಾಲು ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಜೇನುತುಪ್ಪ ಹಾಕಿ ಸರಿಯಾಗಿ ಬೆರೆಸಿ ಸ್ವಲ್ಪ ಹೊತ್ತು ಫ್ರಿಜ್‌ನಲ್ಲಿಟ್ಟು ಸವಿಯಿರಿ.
ದಂಟಿನ ಸೊಪ್ಪಿನ ಸ್ಮೂದಿ
ಬೇಕಾಗುವ ಸಾಮಗ್ರಿ: 1/4 ಕಪ್ ಸಣ್ಣಗೆ ಹೆಚ್ಚಿದ ದಂಟಿನ ಸೊಪ್ಪು , 1 ಏಲಕ್ಕಿ, ಸಣ್ಣ ತುಂಡು ಶುಂಠಿ, 1/2 ಕಪ್ ತೆಂಗಿನಹಾಲು, 1/4 ಕಪ್ ಶೋಧಿಸಿದ ಬೆಲ್ಲದ ನೀರು ಯಾ ಸಕ್ಕರೆ.
ತಯಾರಿಸುವ ವಿಧಾನ: ದಂಟಿನ ಸೊಪ್ಪು , ಏಲಕ್ಕಿ, ಶುಂಠಿ ಸೇರಿಸಿ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿ. ನಂತರ ಶೋಧಿಸಿ ಬೆಲ್ಲದ ನೀರು ಸೇರಿಸಿ ಸರಿಯಾಗಿ ಕಲಕಿ ನಂತರ ಗ್ಲಾಸಿಗೆ ಹಾಕಿ ಸವಿಯಿರಿ.
ಸ್ಟ್ರಾಬೆರಿ ಸ್ಮೂದಿ
ಬೇಕಾಗುವ ಸಾಮಗ್ರಿ: 1/2 ಕಪ್ ಸಣ್ಣಗೆ ಹೆಚ್ಚಿದ ಸ್ಟ್ರಾಬೆರಿ ಹಣ್ಣು , 1/2 ಕಪ್ ಸಕ್ಕರೆ, 1 ಕಪ್ ಹಾಲು, 2 ಪುದೀನಾ ಎಲೆ, ಸಣ್ಣ ತುಂಡು ಲಿಂಬೆ ಚೂರು.
ತಯಾರಿಸುವ ವಿಧಾನ: ಸ್ಟ್ರಾಬೆರಿ ಹಣ್ಣಿನ ಚೂರು, ಸಕ್ಕರೆ, ಹಾಲು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ. ನಂತರ ಗ್ಲಾಸಿಗೆ ಹಾಕಿ ಪುದೀನಾ ಎಲೆ, ವೃತ್ತಾಕಾರದ ಲಿಂಬೆ ಚೂರು ಗ್ಲಾಸಿಗೆ ಸಿಕ್ಕಿಸಿ ಸರ್ವ್ ಮಾಡಿ.
ಮೆಂತೆ ಸೊಪ್ಪಿನ ಸ್ಮೂದಿ
ಬೇಕಾಗುವ ಸಾಮಗ್ರಿ: 1 ಕಪ್ ಹಾಲು, ಸಣ್ಣಗೆ ತುಂಡು ಮಾಡಿದ 1/2 ಕಪ್ ಮೆಂತೆಸೊಪ್ಪು , 2 ಚಮಚ ಜೇನುತುಪ್ಪ , 1/2 ಕಪ್ ತೆಂಗಿನ ಹಾಲು, 1/4 ಚಮಚ ಜೀರಿಗೆ.
ತಯಾರಿಸುವ ವಿಧಾನ: ಮೆಂತೆಸೊಪ್ಪು ಮತ್ತು ಜೀರಿಗೆಯನ್ನು ಸ್ವಲ್ಪ ನೀರು ಸೇರಿಸಿ ರುಬ್ಬಿ. ನಂತರ ಶೋಧಿಸಿ. ಹಾಲು, ಜೇನುತುಪ್ಪ , ತೆಂಗಿನ ಹಾಲು ಹಾಕಿ ಸರಿಯಾಗಿ ಬೆರೆಸಿ ಗ್ಲಾಸಿಗೆ ಹಾಕಿ ಕುಡಿಯಿರಿ.
ಸೀಬೆಹಣ್ಣಿನ ಸ್ಮೂದಿ
ಬೇಕಾಗುವ ಸಾಮಗ್ರಿ: 2 ಸೀಬೆ ಹಣ್ಣು, 1 ಕಪ್ ಹಾಲು, 1/4 ಕಪ್ ಸಕ್ಕರೆ, ಸ್ವಲ್ಪ ಐಸ್ ತುಂಡುಗಳು, 2 ಚಮಚ ವೆನಿಲಾ ಐಸ್‌ಕ್ರೀಮ್.
ಸ್ಮೂಸೀಬೆಹಣ್ಣು ತುಂಡು ಮಾಡಿ. ಒಳಗಿನ ಬೀಜ ತೆಗೆದು ಹಾಲು, ವೆನಿಲಾ ಐಸ್‌ಕ್ರೀಮ್ ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಐಸ್‌ತುಂಡು ಸೇರಿಸಿ ಸರಿಯಾಗಿ ಕಲಕಿ. ಗ್ಲಾಸಿಗೆ ಹಾಕಿ ಸವಿಯಿರಿ.
ಮಾವು-ಓಟ್ಸ್ ಡಿಲೈಟ್ ಸ್ಮೂದಿ
ಬೇಕಾಗುವ ಸಾಮಗ್ರಿ: 1 ಕಪ್ ಮಾವಿನಹಣ್ಣಿನ ತುಂಡುಗಳು, 2 ಚಮಚ ಓಟ್ಸ್ , 2 ಕಪ್ ಹಾಲು, ಸ್ವಲ್ಪ ಮಂಜುಗಡ್ಡೆ ತುಂಡುಗಳು.
ಸ್ಮೂ ಮಾವಿನ ಹಣ್ಣಿನ ತಿರುಳು, ಓಟ್ಸ್ , ಹಾಲು, ಮಂಜುಗಡ್ಡೆ ತುಂಡು ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಗ್ಲಾಸಿಗೆ ಹಾಕಿ ಸವಿಯಿರಿ.
ಹಲಸಿನ ಹಣ್ಣಿನ ಸ್ಮೂದಿ
ಬೇಕಾಗುವ ಸಾಮಗ್ರಿ: 10-12 ಹಲಸಿನ ಹಣ್ಣಿನ ಸೊಳೆ, 4 ಚಮಚ ಹಾಲಿನ ಪುಡಿ, 1 ಕಪ್ ಹಾಲು, 2 ಚಮಚ ಜೇನುತುಪ್ಪ.
ತಯಾರಿಸುವ ವಿಧಾನ: ಹಲಸಿನ ಹಣ್ಣಿನ ಸೊಳೆ, ಹಾಲಿನ ಪುಡಿ ಮತ್ತು ಹಾಲು ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಜೇನುತುಪ್ಪ ಹಾಕಿ ಸರಿಯಾಗಿ ಬೆರೆಸಿ. ನಂತರ ಗ್ಲಾಸಿಗೆ ಹಾಕಿ ರುಚಿ ನೋಡಿ.
ಮುಳ್ಳುಸೌತೆ-ಕರಬೂಜ-ಕಲ್ಲಂಗಡಿ ಸ್ಮೂದಿ
ಬೇಕಾಗುವ ಸಾಮಗ್ರಿ: 1/2 ಕಪ್ ಮುಳ್ಳುಸೌತೆ ತುಂಡುಗಳು, 1/2 ಕಪ್ ಕರಬೂಜ ಹಣ್ಣಿನ ತುಂಡುಗಳು, 1/2 ಕಪ್ ಕಲ್ಲಂಗಡಿ ಹಣ್ಣಿನ ತುಂಡುಗಳು, 1/2 ಕಪ್ ಹಾಲು, ಚಿಟಿಕಿ ಶುಂಠಿ ಪುಡಿ, ಚಿಟಿಕಿ ಏಲಕ್ಕಿ ಪುಡಿ.
ತಯಾರಿಸುವ ವಿಧಾನ: ಮುಳ್ಳುಸೌತೆ ಚೂರು, ಕರಬೂಜ ಹಣ್ಣಿನ ತುಂಡುಗಳು, ಕಲ್ಲಂಗಡಿ ಹಣ್ಣಿನ ಚೂರು, ಹಾಲು, ಶುಂಠಿ ಪುಡಿ, ಏಲಕ್ಕಿ ಪುಡಿ ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಗ್ಲಾಸಿಗೆ ಹಾಕಿ ಸವಿಯಿರಿ.
ಸರಸ್ವತಿ ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.