ಹೋಮ್‌ಸ್ಪಾ ಗೃಹೋಪಚಾರ
Team Udayavani, Oct 26, 2018, 6:00 AM IST
ಷೋಡಶಿಯರಿಗೆ ಸೌಂದರ್ಯ ಹಾಗೂ ಆರೋಗ್ಯ ಫಿಟ್‌ನೆಸ್ ಕುರಿತಾಗಿ ಇತರ ವಯಸ್ಸಿನ ಸ್ತ್ರೀಯರಿಗಿಂತ ತುಸು ಹೆಚ್ಚೇ ಕಾಳಜಿ, ಆಸ್ಥೆ. ಅಂತೆಯೇ ಹದಿಹರೆಯದಲ್ಲಿ ಕೆಲವು ವಿಶಿಷ್ಟ ಸೌಂದರ್ಯ ಸಂಬಂಧೀ ತೊಂದರೆಗಳು, ಆರೋಗ್ಯಸಂಬಂಧಿ ತೊಂದರೆಗಳು ಕಾಡುವುದೂ ಹೆಚ್ಚು.
ಆದ್ದರಿಂದ ಹದಿಹರೆಯದವರ ಪೂರ್ಣಾರೋಗ್ಯ ಸೌಂದರ್ಯ ಹಾಗೂ ವಿಶೇಷ ವ್ಯಕ್ತಿತ್ವಕ್ಕಾಗಿ ಇಲ್ಲಿದೆ ಬರಹಗುತ್ಛ.ಷೋಡಶ ಪ್ರಾಯವೇ ಅಂತಹದು, ಷೋಡಶಿಯರ ಮನಸ್ಸೇ ಅಂತಹದು. ಮಲ್ಲಿಗೆಯಂಥ ಮೊಗದಲ್ಲಿ ಮೆಲ್ಲಗೊಂದು ಮೊಡವೆ ಚುಕ್ಕೆ ಕಂಡರೂ, ಆಗಸವೇ ಕಳಚಿ ಬಿದ್ದಂತೆ ಭಾಸವಾಗುತ್ತದೆ, ಆ ಪ್ರಾಯದಲ್ಲಿ. ಒಂದು ಕಿಲೋ ತೂಕ ಹೆಚ್ಚಿದರೆ ಒಂದು ವಾರ ಉಪವಾಸ ಮಾಡಿಯಾದರೂ ತೂಕ ಕಡಿಮೆ ಮಾಡಬೇಕೆನ್ನುವಷ್ಟು ದಿಗಿಲು, ಷೋಡಶಿಯರಲ್ಲಿ. ಹರೆಯಕ್ಕೆ ಕಾಲಿಡುವ ಸಮಯದಲ್ಲಿ ಹಾರ್ಮೋನುಗಳ ವ್ಯತ್ಯಯದಿಂದ ಸಹಜವಾಗಿ ತುಸು ಆತಂಕವಿರುವುದು ದಿಟ. ಅದರ ಜೊತೆಗೆ ಇಂದಿನ ಆಧುನಿಕ ಯುಗದ ಧಾವಂತ, ಒತ್ತಡಗಳು ಜೊತೆಯಾಗಿ ಷೋಡಶಿಯರ ಮೈಮನವನ್ನು ಮತ್ತಷ್ಟು ದಣಿಸುತ್ತವೆ.
ಮೈಮನದ ದಣಿವನ್ನು ನಿವಾರಣೆ ಮಾಡಿ ಸೌಂದರ್ಯ, ಆರೋಗ್ಯ ಚೈತನ್ಯದ ಬುಗ್ಗೆಯಾಗಿಸಲು ಸುಲಭ ವಿಧಾನಗಳಿವೆ. ಅವುಗಳಲ್ಲಿ ಒಂದು ಹೋಮ್ ಸ್ಪಾ !ಇಂದು ಎಲ್ಲೆಡೆಯಲ್ಲಿ “ಸ್ಪಾ’ ವಿಧಾನದ ಸೌಂದರ್ಯ ಸ್ವಾಸ್ಥ್ಯ ಹಾಗೂ ರಿಲ್ಯಾಕ್ಸಿಂಗ್ ಆರೈಕೆಗಳು ಜನಪ್ರಿಯವಾಗುತ್ತಿವೆ. ಹಾಂ! ಈ ವಿಧಾನದ ಸೌಂದರ್ಯವರ್ಧಕ, ಸ್ವಾಸ್ಥ ರಕ್ಷಕ, ಒತ್ತಡ ನಿವಾರಕ “ಸ್ಪಾ’ಗಳು ಬಲು ದುಬಾರಿ.
ಕೇವಲ ಆಧುನಿಕ “ಸ್ಪಾ’ಗಳ ವಿಧಿವಿಧಾನಗಳ ಬದಲಾಗಿ ಪಾರಂಪರಿಕ ವಿಧಾನಗಳ ಬೆಸುಗೆಯೊಂದಿಗೆ “ಹೋಮ್ ಸ್ಪಾ’ ಮನೆಯಲ್ಲಿಯೇ ಶೋಡಶಿಯರು ತಾವೇ ಮಾಡಬಹುದು.ಆಯುರ್ವೇದಿಯ, ಜಾನಪದೀಯ ವಿಧಾನಗಳ ಬೇರಿನೊಂದಿಗೆ, ಆಧುನಿಕತೆಯ ವಿಧಾನಗಳ ಚಿಗುರನ್ನು ಬೆರೆಸಿ ಅಳವಡಿಸಿದರೆ, ಕೇವಲ ಶೋಷಶಿಯರು ಮಾತ್ರವಲ್ಲ , ಎಲ್ಲ ಯುವತಿಯರೂ ಶೋಡಶಪ್ರಾಯದವರಾಗಿ ನಲಿಯಬಹುದು!
ರಜಾದಿನಗಳ ಆನಂದ ವರ್ಧಿಸಲು, ಮೊಡವೆ ನಿವಾರಕ ಹೋಮ್‌ಸ್ಪಾ ಕುರಿತು ಅರಿಯೋಣವೇ?85 ಪ್ರತಿಶತ ಯುವತಿಯರನ್ನು ಮೊಡವೆ ಒಂದಿಲ್ಲೊಂದು ಬಗೆಯಿಂದ ಕಾಡುವುದು ದಿಟ.
“ಹೋಮ್ ಸ್ಪಾ’ದೊಂದಿಗೆ ಮೊಡವೆಯನ್ನು ನಿವಾರಿಸುವುದರ ಜೊತೆಗೆ ರಜಾದಿನವನ್ನು ರಿಲ್ಯಾಕ್ಸ್ ಆಗಿ ಕಳೆಯಬಹುದು.
ಮೊದಲು ಅಭ್ಯಂಗಸ್ನಾನ. ಕೊಬ್ಬರಿ ಎಣ್ಣೆ ಬೆಚ್ಚಗೆ ಮಾಡಿ ಅದರಲ್ಲಿ 8-10 ಹನಿ ಶ್ರೀಗಂಧ ತೈಲ ಬೆರೆಸಿ ಮಾಲೀಶು ಮಾಡಬೇಕು.
ಹಾಂ! “ಹೋಮ್‌ಸ್ಪಾ’ದ ದಿನದಂದು ನಿಮ್ಮ ಮೊಬೈಲ್, ಟಿವಿ ಇತ್ಯಾದಿಗಳನ್ನು ಆಪ್ ಮಾಡಿ. ಇದು ಕೇವಲ ಮೊಡವೆಗೆ ಮಾತ್ರ ಚಿಕಿತ್ಸೆಯಲ್ಲ, ಅದರ ಜೊತೆಗೆ ಮೈಮನಸ್ಸುಗಳನ್ನು ಉತ್ಸಾಹಪೂರ್ಣತೆಯಿಂದ ತುಂಬುವ ಗೃಹೋಪಚಾರ.
ಹಾಂ! ಎಷ್ಟೋ ಸಂದರ್ಭಗಳಲ್ಲಿ ಒತ್ತಡದಿಂದಲೂ ಮೊಡವೆಯಾಗುತ್ತದೆ. ಯಾವುದೇ ಮುಖಲೇಪ, ಔಷಧಿಗಳಿಗೆ ಜಗ್ಗದ ಈ ಮೊಡವೆಯ ಒಂದು ಬಗೆ, ಒತ್ತಡ ನಿವಾರಣೆಯಾಗುತ್ತಲೇ ಮಾಯವಾಗುತ್ತದೆ!
ಬಾದಾಮಿ ತೈಲ, ಆಲಿವ್ ತೈಲಗಳಿಂದಲೂ ಮೃದುವಾಗಿ ಮುಖವನ್ನು ಮಾಲೀಶು ಮಾಡಬಹುದು. ಮಾಲೀಶು ಮಾಡುವಾಗ ತುದಿ ಬೆರಳುಗಳಿಂದ ಮೃದುವಾಗಿ ತೈಲ ಲೇಪಿಸಿ ವರ್ತುಲಾಕಾರದಲ್ಲಿ ಹೆಚ್ಚು ಒತ್ತಡ ನೀಡದೆ ಮಾಲೀಶು ಮಾಡಬೇಕು.
ಮೈಕೈಗಳಿಗೆ ಮಾಲೀಶು ಮಾಡಲು ಬೆಚ್ಚಗಿನ ಕೊಬ್ಬರಿ ಎಣ್ಣೆಯಲ್ಲಿ ಶುದ್ಧ ಕರ್ಪೂರ ಬೆರೆಸಿ ಈ ಎಣ್ಣೆಯಿಂದ ಮಾಲೀಶು ಮಾಡಿದರೆ ಮೈಕೈ ನೋವು ಇದ್ದರೂ ನಿವಾರಣೆಯಾಗುವುದರ ಜೊತೆಗೆ ಕರ್ಪೂರವು ಕೇಂದ್ರೀಯ ನರಮಂಡಲವನ್ನು ಉದ್ದೀಪಿಸುವುದರಿಂದ, ಮನಸ್ಸು ಉಲ್ಲಸಿತವಾಗುತ್ತದೆ.
ಶಿರೋಭ್ಯಂಗ ಅಥವಾ ತಲೆಕೂದಲಿಗೆ ತೈಲ ಲೇಪಿಸಲು ಅವರವರ ದೇಹ ಪ್ರಕೃತಿಯಂತೆ ಹಲವು ತೈಲಗಳನ್ನು ಆರಿಸಬಹುದು. ಆಲಿವ್‌ತೈಲ, ಕೊಬ್ಬರಿ ಎಣ್ಣೆ, ಎಳ್ಳೆಣ್ಣೆ- ಇವು ಕೂದಲನ್ನು ಸಂರಕ್ಷಿಸಲು ಹಿತಕರ. ತುಂಬಾ ಉಷ್ಣ ದೇಹವುಳ್ಳವರು, ಕಣ್ಣು ಉರಿ ಉಳ್ಳವರು ಕೊಬ್ಬರಿ ಎಣ್ಣೆಯೊಂದಿಗೆ ಹರಳೆಣ್ಣೆ ಬೆರೆಸಿ ಮಾಲೀಶು ಮಾಡಬಹುದು. ಎಳ್ಳೆಣ್ಣೆಗೆ ಕರಿಬೇವು, ಒಂದೆಲಗ, ಮದರಂಗಿ ಸೊಪ್ಪು ಅರೆದು ಬೆರೆಸಿ ಕುದಿಸಿ ತೈಲ ತಯಾರಿಸಿದರೆ ತಲೆಕೂದಲು ಉದುರುವುದು, ಹೊಟ್ಟು ಉದುರುವುದು ನಿವಾರಣೆಯಾಗುತ್ತದೆ. ಮೊಡವೆ ಉಂಟುಮಾಡುವ ಹಲವು ಹೇತುಗಳಲ್ಲಿ ತಲೆಹೊಟ್ಟು ಸಹ ಒಂದು ಮುಖ್ಯಕಾರಣ. ಮೊಗದ ಮೇಲೆ ಸಣ್ಣ ಮೊಡವೆಗಳನ್ನು ಉಂಟುಮಾಡಿ, ತುರಿಕೆಯನ್ನು ಉಂಟುಮಾಡುವ ಈ ತಲೆಹೊಟ್ಟು ಬೆನ್ನಿನ ಭಾಗದಲ್ಲಿ ಸಹ ಉಂಟುಮಾಡುತ್ತದೆ.
– ಡಾ. ಅನುರಾಧಾ ಕಾಮತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.