ಹಮ್ ಆಪ್ಕೆ ಹೈ ಕೌನ್ ಚಿತ್ರದ ನಿಶಾಗೆ 25!
Team Udayavani, Aug 16, 2019, 5:00 AM IST
ಬಾಲಿವುಡ್ ಸಿನಿಪ್ರಿಯರಿಗೆ ಹಮ್ ಆಪ್ಕೆ ಹೈ ಕೌನ್ ಚಿತ್ರ ನೆನಪಿರಬಹುದು. 1994ರ ಆಗಸ್ಟ್ 5 ರಂದು ಬಿಡುಗಡೆಯಾದ ಹಮ್ ಆಪ್ಕೆ ಹೈ ಕೌನ್ ಚಿತ್ರ ಬರೋಬ್ಬರಿ ನೂರು ವಾರಗಳ ಯಶಸ್ವಿ ಪ್ರದರ್ಶನವನ್ನು ಕಂಡು ಬಾಲಿವುಡ್‌ನಲ್ಲಿ ಸಾಕಷ್ಟು ದಾಖಲೆಯನ್ನೆ ಬರೆದಿತ್ತು. ನಟಿ ಮಾಧುರಿ ದೀಕ್ಷಿತ್, ಸಲ್ಮಾನ್ ಖಾನ್ ಜೋಡಿಗೆ ಸಾಕಷ್ಟು ಹೆಸರು ಮತ್ತು ಜನಪ್ರಿಯತೆ ಈ ಚಿತ್ರದಿಂದ ಸಿಕ್ಕಿದ್ದಂತೂ ಸುಳ್ಳಲ್ಲ. ಅದರಲ್ಲೂ ಬಾಲಿವುಡ್‌ನ ಸಿನಿಪ್ರಿಯರಂತೂ, ಚಿತ್ರದಲ್ಲಿ ಬರುವ ನಿಶಾ ಎನ್ನುವ ಪಾತ್ರದ ಮೂಲಕವೇ ಕರೆಯುವಷ್ಟರ ಮಟ್ಟಿಗೆ ಹಮ್ ಆಪ್ಕೆ ಹೈ ಕೌನ್ ಚಿತ್ರ ಮಾಧುರಿ ದೀಕ್ಷಿತ್ ಅವರ ಜನಪ್ರಿಯತೆಯನ್ನು ಉತ್ತುಂಗಕ್ಕೆ ಕರೆದುಕೊಂಡು ಹೋಗಿತ್ತು. ಹಮ್ ಆಪ್ಕೆ ಹೈ ಕೌನ್ ಚಿತ್ರ ಎಷ್ಟರ ಮಟ್ಟಿಗೆ ಜನಪ್ರಿಯವಾಗಿತ್ತು ಎಂದರೆ, ಇಂದಿಗೂ ಅದೆಷ್ಟೋ ಜನರ ಬಾಯಲ್ಲಿ ಈ ಚಿತ್ರದ ಹಾಡುಗಳು ಆಗಾಗ್ಗೆ ಗುನುಗುಡುತ್ತಲೇ ಇರುತ್ತದೆ. ಭಾರತದ ಮದುವೆಯ ಸಂಭ್ರಮವನ್ನು ಈ ಹಾಡುಗಳು ಮತ್ತಷ್ಟು ಹೆಚ್ಚಿಸಿದ್ದವು ಎಂಬ ಕೀರ್ತಿಗೂ ಪಾತ್ರವಾಗಿದ್ದವು.
ಇತ್ತೀಚೆಗೆ ಹಮ್ ಆಪ್ಕೆ ಹೈ ಕೌನ್ ಚಿತ್ರ ತೆರೆಕಂಡು ಬರೋಬ್ಬರಿ 25 ವರ್ಷಗಳನ್ನು ಪೂರೈಸಿದೆ. ಇದೇ ಖುಷಿಯನ್ನು ನಟಿ ಮಾಧುರಿ ದೀಕ್ಷಿತ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. “ಹಾಯ್ ನಾನು ನಿಮ್ಮ ನಿಶಾ… ಹಮ್ ಆಪ್ಕೆ ಹೈ ಕೌನ್ 25 ವರ್ಷದ ಸಂಭ್ರಮವನ್ನು ಆಚರಣೆ ಮಾಡುತ್ತಿದ್ದೇನೆ’ ಎಂದು ಒಂದು ವಿಡಿಯೋ ಮಾಡಿದ್ದಾರೆ. ಚಿತ್ರದ ತಮ್ಮ ಪಾತ್ರದ ಹೆಸರಿನ ಮೂಲಕವೇ ಮಾತನಾಡಿದ್ದಾರೆ.
ಹಮ್ ಆಪ್ಕೆ ಹೈ ಕೌನ್ ಚಿತ್ರವನ್ನು ಜನರು ಸ್ವೀಕರಿಸಿದ ರೀತಿ, ಅದಕ್ಕೆ ಸಿಕ್ಕ ಪ್ರತಿಕ್ರಿಯೆ, ತಮ್ಮ ಚಿತ್ರ ಬದುಕಿನಲ್ಲಿ ಅದು ತಂದುಕೊಟ್ಟ ಜನಪ್ರಿಯತೆ ಇತ್ಯಾದಿ ವಿಷಯಗಳ ಬಗ್ಗೆ ಮಾಧುರಿ ದೀಕ್ಷಿತ್ ಮನಬಿಚ್ಚಿ ಮಾತನಾಡಿದ್ದಾರೆ. ಚಿತ್ರಕ್ಕೆ ಆಯ್ಕೆ ಮಾಡಿದ ನಿರ್ದೇಶಕ ಸೂರಜ್ ಬರ್ಜತ್ಯ, ನಿರ್ಮಾಪಕರು, ಸಹ ಕಲಾವಿದರು, ತಂತ್ರಜ್ಞರು ಮತ್ತು ಚಿತ್ರವನ್ನು ಗೆಲ್ಲಿಸಿದ ಪ್ರೇಕ್ಷಕರು ಹೀಗೆ ಎಲ್ಲರಿಗೂ ಮಾಧುರಿ ಧನ್ಯವಾದ ಗಳನ್ನು ಸಮರ್ಪಿಸಿದ್ದಾರೆ. ಇನ್ನು ಮಾಧುರಿ ದೀಕ್ಷಿತ್ ಅವರ ಮಧುರವಾದ ನೆನಪಿನ ಮಾತುಗಳನ್ನು ಕೇಳಿ 90ರ ದಶಕದ ಅವರ ಫ್ಯಾನ್ಸ್ ಕೂಡ ಒಮ್ಮೆ ದಶಕದ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದ್ದಂತೂ ಸುಳ್ಳಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.