ಅಮ್ಮ ಮಗಳಲ್ಲಿ ಕೇಳ್ಳೋ ನೂರಾರು ಪ್ರಶ್ನೆಗಳು ಅವಳ ಅನುಮಾನದ ಸಂಕೇತವಲ್ಲ.
Team Udayavani, Jan 20, 2017, 3:45 AM IST
ಹರೆಯಕ್ಕೆ ಕಾಲಿಟ್ಟ ಅದೆಷ್ಟೋ ಹುಡುಗ, ಹುಡುಗಿಯರ ಪಾಲಿಗೆ ಅಮ್ಮ ವಿಲನ್ ಆಗಿ ಬಿಡ್ತಾಳೆ. ಏನೇ ಮಾತನಾಡಿದ್ರೂ ಪ್ರಶ್ನೆ ಮೇಲೆ ಪ್ರಶ್ನೆ ಕೇಳುವ ಅಮ್ಮ ಯಾಕಿØàಗೆ ಕಾಡ್ತಾಳೆ ಅಂತ ಅನಿಸೋದೇ ಹೆಚ್ಚು. ಫೋನ್‌ನಲ್ಲಿ ಮಾತನಾಡಿದಾಗ ಕಿವಿಕೊಡುವ ಅಮ್ಮ, ಮನೆಯಿಂದ ಹೊರ ಹೋದಾಗ ನೂರು ಸಾರಿ ಎಚ್ಚರಿಸುತ್ತಾಳೆ. ಅಮ್ಮನಿಗೆ ನನ್ಮೆàಲೆ ಯಾಕಿಷ್ಟು ಅನುಮಾನ ಅಂತ ಬೇಸರವಾಗದೆ ಇರಲ್ಲ. ಆದ್ರೆ ಅಮ್ಮನಿಗಿರುವ ಆತಂಕ ಅದೆಷ್ಟೋ ಮಂದಿಗೆ ಅರ್ಥವಾಗುವುದಿಲ್ಲ.
ಮಗಳು ಕಾಲೇಜು ಮೆಟ್ಟಿಲು ಹತ್ತಿದ ನಂತರವಂತೂ ಅಮ್ಮನಲ್ಲಿ ಇನ್ನಿಲ್ಲದ ಚಡಪಡಿಕೆ. “ಸುಮ್ ಸುಮ್ನೆ ನಗೋದು, ಹುಡುಗರಲ್ಲಿ ಮಾತನಾಡೋದು ಮಾಡ್ಬೇಡ. ಓದು, ಮನೆ ಇಷ್ಟೇ ಇದ್ರೆ ಸಾಕು’ ಅಂತ ಸಾರಿ ಸಾರಿ ಹೇಳುವ ಅಮ್ಮ ಅನುಮಾನದ ಗುಮ್ಮನಂತೆ ಕಾಣತೊಡಗುತ್ತಾಳೆ. “ಎಷ್ಟು ಸಾರಿ ಹೇಳಿದ್ದನ್ನೇ ಹೇಳ್ತೀಯಾ, ಸುಮ್ನಿರು ನಾನೇನು ಚಿಕ್ಕ ಹುಡುಗಿಯಲ್ಲ’ ಅಂತ ಮಗಳು ಹುಸಿ ಕೋಪ ತೋರಿದ್ರು, ಅಮ್ಮನಲ್ಲಿ ಹುಸಿ ನಗು.
ಮಗಳು ಹೈಹೀಲ್ಡ್ ಚಪ್ಪಲಿ ತುಳಿದು ಗೇಟ್ ದಾಟಿ ಹೊರಟು ಹೋದ್ರೂ, ಅಮ್ಮ ಮೌನಿ. ಮಗಳು ಹಾದಿ ತಪ್ಪುತ್ತಾಳೇನೋ ಅನ್ನೋದು ಅಮ್ಮನ ಆತಂಕ. ಮಗಳು ಕಾಲೇಜಿನಿಂದ ಮರಳಿ ಬಂದ ಕೂಡಲೇ ಸಿಐಡಿಯಂತೆ ಅಮ್ಮನ ತನಿಖೆ ಶುರುವಾಗುತ್ತದೆ. ಮತ್ತೆ ಬ್ಯಾಗ್ ಚೆಕ್ಕಿಂಗ್. ಮಗಳು ಅತ್ತ ಹೋದ ಕೂಡಲೇ ಮಗಳ ಬ್ಯಾಗ್‌ನಲ್ಲಿ ಏನಾದ್ರೂ ಸಿಗುತ್ತೋ ಅಂತ ತಡಕಾಡುತ್ತಾಳೆ. ಮೊಬೈಲ್ ನೋಡಿದರೂ ಪಾಸ್‌ವರ್ಡ್ ಗೊತ್ತಾಗದೆ ಪರದಾಡುತ್ತಾಳೆ.
ಮಗಳು ವರಾಂಡದಿಂದ ಹೊರಬಂದು ಫೋನ್‌ನಲ್ಲಿ ಪಿಸು ಪಿಸು ಮಾತನಾಡಿದರೆ ಅಮ್ಮನಲ್ಲಿ ನೂರು ಪ್ರಶ್ನೆಗಳು. ಮಗಳು “ಫ್ರೆಂಡ್ ಕಾಲ್ ಮಾಡಿದು’ ಅಂತ ಹೇಳಿದ್ರೂ “ಹೌದಾ’ ಅನ್ನುವ ಅಮ್ಮನ ಆತಂಕ ಕೊನೆಯಾಗಲ್ಲ. ಸಂಡೇ ಸ್ಪೆಷಲ್ ಕ್ಲಾಸ್ ಅಂತ ಹೇಳಿ ಮನೆಯಿಂದ ಹೊರಟಾಗಲಂತೂ ಅರಿಯಲಾಗದ ಆತಂಕ.
ಸಿಲೆಬಸ್ ಕಂಪ್ಲೀಟ್ ಮಾಡೋಕೆ ಎಕ್ಸ್‌ಟ್ರಾ ಕ್ಲಾಸ್ ಮಾಡ್ತಾರೆ ಅಂತ ಮಗಳು ಎಷ್ಟು ಸಾರಿ ಹೇಳಿದರೂ ಅರ್ಥ ಮಾಡುವ ಸ್ಥಿತಿಯಲ್ಲಿರಲ್ಲ ಅಮ್ಮ. ಮಗಳು “ಅಮ್ಮ, ಅಮ್ಮ’ ಅಂತ ಹಿಂದೆ ಕಾಡ್ತಾ ದಿನದ ಘಟನೆಯನ್ನೆಲ್ಲಾ ವಿವರಿಸಿದ್ರೂ ಇದ್ರೂ, ಅದೇನೋ ಅನುಮಾನ. ಹರೆಯದ ಹುಮ್ಮಸ್ಸಿನಲ್ಲಿ, ಸ್ನೇಹಿತರ ಸಹವಾಸದಿಂದ ಮಗಳು ಎಲ್ಲಿ ದಾರಿ ತಪ್ಪುತ್ತಾಳೆ ಅನ್ನೋ ಭಯ.
ಮಗಳು ಕನ್ನಡಿ ಮುಂದೆ ನಿಂತು ಗಂಟೆಗಟ್ಟಲೆ, ಮೇಕಪ್ ಮಾಡಿ ಫ್ರೆಂಡ್ ಮದ್ವೆಗೆ ಹೊರಟಾಗ “ಚೆನ್ನಾಗಿ ಕಾಣಿ¤àದ್ದೀಯಾ ಅನ್ನೋದು ಅಪ್ಪನ ಕಾಂಪ್ಲಿಮೆಂಟ್’. “ಬೇಗ್ ಬಂದು ಬಿಡು’ ಅನ್ನೋದು ಅಮ್ಮನ ಯಾವತ್ತಿನ ಡೈಲಾಗ್. ಗಂಟೆಗಟ್ಟಲೆ ರೂಮು ಸೇರಿ ಫೋನ್‌ನಲ್ಲಿ ಮಾತನಾಡುವ ಮಗಳ ಬಗ್ಗೆ ಪ್ರತಿಯೊಬ್ಬ ಅಮ್ಮನಿಗೂ ಆ ಭಯ ಇದ್ದೇ ಇರುತ್ತದೆ. ಮಗಳು ಯಾವುದೋ ಹುಡುಗನ ಪ್ರೀತಿಯ ಬಲೆಯಲ್ಲಿ ಬಿದ್ದು, ಮುಂದೊಂದು ದಿನ ಮನೆಯವ್ರನ್ನೇ ಧಿಕ್ಕರಿಸುತ್ತಾಳೆ ಅನ್ನೋ ಹೆದರಿಕೆ ಅಮ್ಮನನ್ನು ಕಾಡುತ್ತಿರುತ್ತದೆ.
ಪಕ್ಕದ್ಮನೆಯವ್ರು, “ಆಚೆ ಮನೆ ಪದ್ಮಾ ಮಗಳು ಎರಡು ದಿನದ ಹಿಂದೆ ಓಡಿ ಹೋದಳಂತೆ’ ಅನ್ನೋವಾಗಲಂತೂ ಅಮ್ಮನ ಆತಂಕ ದುಪ್ಪಟ್ಟಾಗಿ ಬಿಡುತ್ತದೆ.
ಮುದ್ದು ಮಗಳು ಅಮ್ಮನ ಮಗಳಾಗಿಯೇ ಉಳಿದಿದ್ದಾಳೆ ಅಂತ ಗೊತ್ತಾಗೋದು, “ನಾಳೆ ನಮ್ಮ ಪುಟ್ಟಿàನ ನೋಡೋಕೆ ಹುಡುಗನ ಕಡೆಯವರು ಬರ್ತಿದ್ದಾರೆ ಕಣೇ’ ಅನ್ನೋ ಅಪ್ಪನ ಮಾತಿಗೆ ಮಗಳು ನಾಚಿ ನೀರಾದಾಗಲೇ.
ಅಮ್ಮ ಮಗಳಲ್ಲಿ ಕೇಳ್ಳೋ ಈ ನೂರು ಪ್ರಶ್ನೆಗಳು ಅನುಮಾನವಲ್ಲ. ಜಸ್ಟ್ ಅಮ್ಮನ ಆತಂಕ ಅಷ್ಟೆ . ಅಮ್ಮ ಅನುಮಾನದ ಜೀವಿಯಲ್ಲ. ಮಗಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ, ಮಗಳು ಹಾದಿ ತಪ್ಪಬಾರದು ಅಂತ ಆಶಿಸುವ ಒಬ್ಬ ನಿಜವಾದ ಮಮತಾಮಯಿ ಅಷ್ಟೆ.
– ತನುವಿ ಚವಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.