![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
Team Udayavani, Aug 10, 2018, 6:00 AM IST
ಐಸ್ ತುಣುಕುಗಳನ್ನು ಜ್ಯೂಸ್‌ಗೆ ಹಾಕ್ಕೊಂಡು ಕುಡಿದರೆ, ತಣ್ಣಗಿನ ಫೀಲ್ ಸಿಗುತ್ತೆ. ರಕ್ತ ಬರುತ್ತಿರುವ ಗಾಯದ ಮೇಲಿಟ್ಟರೆ, ರಕ್ತಸ್ರಾವ ನಿಲ್ಲುತ್ತೆ. ಫ್ರಿಡ್ಜ್ನಲ್ಲಿಟ್ಟ ಐಸ್‌ಕ್ಯೂಬ್‌ಗಳ ಇವೆರಡು ಉಪಕಾರದ ಬಗ್ಗೆ ಮಾತ್ರ ನಮಗೆ ಗೊತ್ತು. ಆದರೆ, ಐಸ್‌ಕ್ಯೂಬ್, ಐಶ್ವರ್ಯಾ ರೈಯಂಥ ಲುಕ್ ಕೊಡುತ್ತೆ ಅನ್ನೋದು ನಿಮಗೆ ಗೊತ್ತೇ?
1 ಐಸ್‌ಕ್ಯೂಬ್‌ನಿಂದ ದಿನವೂ ಮುಖಕ್ಕೆ ಮಸಾಜ್ ಮಾಡಿಕೊಂಡರೆ, ರಕ್ತಚಲನೆ ಸರಾಗಗೊಳ್ಳುತ್ತದೆ. ಚರ್ಮದ ಬಿರುಕುಗಳನ್ನು ಮುಚ್ಚುವ ಕೆಲಸವನ್ನೂ ಐಸ್‌ಕ್ಯೂಬ್ ಮಾಡುತ್ತದೆ. ಇದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ.
2 ಮುಖಕ್ಕೆ ಮೇಕಪ್ ಹಚ್ಚಿಕೊಳ್ಳುವುದಕ್ಕೂ ಮುನ್ನ ಐಸ್‌ಕ್ಯೂಬ್‌ನಿಂದ ಮಸಾಜ್ ಮಾಡಿದರೆ, ಮೇಕಪ್‌ನ ಫಲಿತಾಂಶ ದೀರ್ಘ ಕಾಲದವರೆಗೆ ಇರುತ್ತದೆ. ಮುಖಕ್ಕೂ ತಾಜಾ ಕಳೆ ಸಿಗುತ್ತದೆ.
3 ಫೇಶಿಯಲ್ ಅಥವಾ ಐಬ್ರೋ ಮಾಡಿಕೊಂಡ ಮರುದಿನ, ತುಸು ಮುಖ ದಪ್ಪಗಾಗುವುದು, ಕೆಂಪಾಗುವುದು ಸಾಮಾನ್ಯ. ಬ್ಯೂಟಿ ಪಾರ್ಲರ್‌ನಿಂದ ಬಂದ ಕೂಡಲೇ ಐಸ್‌ನಿಂದ 10 ನಿಮಿಷ ಮುಖಕ್ಕೆ ಮಸಾಜ್ ಮಾಡಿಕೊಂಡರೆ, ಹೀಗೆ ದಪ್ಪ ಆಗುವುದನ್ನು ತಪ್ಪಿಸಬಹುದು.
4 ಮೊಡವೆ ಒಡೆದು, ರಕ್ತ ಜಿನುಗುತ್ತಿದ್ದರೆ, ಮುಖದ ಸೌಂದರ್ಯಕ್ಕೆ ಆ ಭಾಗ ಒಂಥರಾ ಕಪ್ಪು ಚುಕ್ಕೆ. ಇಂಥ ವೇಳೆ ಮೊಡವೆ ಒಡೆದ ಜಾಗದಲ್ಲಿ ಐಸ್‌ಕ್ಯೂಬ್‌ನಿಂದ 10 ನಿಮಿಷ ಮಸಾಜ್ ಮಾಡಿದರೆ, ರಕ್ತಸ್ರಾವ ನಿಂತು, ಮೊಡವೆ ಎದ್ದ ಜಾಗ ಚರ್ಮಕ್ಕೆ ಹೊಂದಿಕೊಳ್ಳುತ್ತದೆ.
5 ಸನ್‌ಬರ್ನ್ ಆಗಿದ್ದರೆ, ಅದಕ್ಕೆ ಲೋಶನ್ ಹಚ್ಚಿ ಚರ್ಮ ಮೊದಲಿನಂತಾಗಲಿ ಎಂದು ಕಾಯಬೇಕಾಗಿಲ್ಲ. ಐಸ್‌ಕ್ಯೂಬ್‌ನಿಂದ ಸನ್‌ಬರ್ನ್ ಆದ ಜಾಗದಲ್ಲಿ ಚೆನ್ನಾಗಿ ಮಸಾಜ್ ಮಾಡಿಕೊಂಡರೆ, ಬೇಗನೆ ಫಲಿತಾಂಶ ಸಿಗುತ್ತದೆ.
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
You seem to have an Ad Blocker on.
To continue reading, please turn it off or whitelist Udayavani.