ಪಾದಕ್ಕೆ ಆಭರಣ ಅಲಂಕಾರ
Team Udayavani, Jul 7, 2017, 3:50 AM IST
ಫ್ಯಾಷನ್ ಎಂಬುದು ಕೇವಲ ಆಡಂಬರ ಅಥವಾ ತೋರಿಕೆಯ ಬಗೆಯಲ್ಲ, ಬದಲಾಗಿ, ನಮ್ಮನ್ನು ನಾವು ಸಮಾಜದಲ್ಲಿ ಹೇಗೆ ಪ್ರಸ್ತುತಪಡಿಸುತ್ತೇವೆ ಎಂಬುದಾಗಿದೆ. ಹಾಗಾಗಿ ಫ್ಯಾಷನ್ ಕೇವಲ ಅಂದ ಚಂದವನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ನಮ್ಮಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವಂಥ ಮತ್ತು ಉಳಿಸುವಂಥ ಕಾರ್ಯವನ್ನು ಮಾಡುತ್ತದೆ. ಅಂತಹ ಫ್ಯಾಷನ್ ಲೋಕ ಮಹಿಳೆಯನ್ನೇ ಕೇಂದ್ರವಾಗಿರಿಸಿಕೊಂಡು ಹಲವಾರು ಹೊಸ ಬಗೆಯ ಶೈಲಿಯ ಸೌಂದರ್ಯೋತ್ಪನ್ನಗಳನ್ನು ಮಾದರಿಗೊಳಿಸುತ್ತಿರುತ್ತವೆ. ಬಹಳ ಹಿಂದಿನ ಕಾಲದಿಂದಲೂ ಮಹಿಳೆಯರು ಅಂದಕ್ಕೋಸ್ಕರ ಹಲವಾರು ಬಗೆಯ ಆಭರಣಗಳನ್ನು ಧರಿಸುತ್ತಿದ್ದರು. ಕಾಲ್ಗೆಜ್ಜೆ, ಮೂಗುತಿ, ಕಿವಿಯೋಲೆ, ಮೂಗಿನ ನತ್ತು, ಕೈಬಳೆಗಳು, ಬಾಜೂಬಂಧಿ, ಡಾಬುಗಳು, ಮುಂದಲೆ ಬಟ್ಟು, ಕಾಲುಂಗುರ ಇತ್ಯಾದಿಗಳು. ಈ ಬಗೆಯ ಆಭರಣಗಳ ಬಗೆಗೆ ಮಹಿಳೆಯರು ಹೆಚ್ಚಿನ ಜ್ಞಾನವನ್ನು ಹೊಂದಿರುತ್ತಾರೆ. ಆದರೆ ಗೆಜ್ಜೆ ಮತ್ತು ಕಾಲುಂಗುರಗಳನ್ನು ಹೊರತುಪಡಿಸಿ ಕಾಲಿನ ಇನ್ನಿತರೆ ಆಭರಣಗಳ ಬಗ್ಗೆ ಹೆಚ್ಚಿನ ಮಹಿಳೆಯರು ಅಪ್ಡೆàಟ್ ಆಗಿರುವುದಿಲ್ಲ. ಇತ್ತೀಚಿನ ಟ್ರೆಂಡಿ ಫೂಟ್ ಜ್ಯುವೆಲ್ಲರಿಗಳ ಸಣ್ಣ ಪರಿಚಯವನ್ನು ಕೊಡುವ ಪ್ರಯತ್ನ ಇಲ್ಲಿದೆ.
ಪಾದ ಮತ್ತು ಆ್ಯಂಕಲ್‌ಗಳೆರಡನ್ನು ಅಂದಗೊಳಿಸುವ ಆಭರಣಗಳೇ ಫೂಟ್ ಆಭರಣಗಳು. ಈ ಆಭರಣಗಳು ಕಾಲಿನ ಅಂದವನ್ನು ಹೆಚ್ಚಿಸುವುದರೊಂದಿಗೆ ಉಡುಗೆಯ ಮೆರುಗನ್ನೂ ಸಂದಭೋìಚಿತವಾಗಿ ಹೆಚ್ಚಿಸುವಲ್ಲಿ ಸಹಾಯಕವಾದುದಾಗಿದೆ. ಸಾಮಾನ್ಯರಿಗೆ ಹೆಚ್ಚು ಪರಿಚಿತವಾದವು ಗೆಜ್ಜೆಗಳು ಮತ್ತು ಆ್ಯಂಕ್ಲೆಟ್ಟುಗಳು ಮಾತ್ರ. ಆದರೆ, ಇನ್ನೂ ಅನೇಕ ಬಗೆಯ ಫೂಟ್ ಆಭರಣಗಳು ಸದ್ಯದ ಟ್ರೆಂಡಿ ಫ್ಯಾಷನ್ನಿಗೆ ಸೇರ್ಪಡೆಗೊಂಡಿದೆ. ಅವುಗಳಲ್ಲಿ ಕೆಲವು ಇಂತಿವೆ :
ಬೇರ್ ಫೂಟ್ ಜ್ಯುವೆಲ್ಲರಿ
ಇವುಗಳು ಅಡಿಭಾಗವಿಲ್ಲದ ಸ್ಯಾಂಡಲ್ಲುಗಳಂತೆ ಕಾಣುವುದರಿಂದ ಇವಕ್ಕೆ ಸೋಲ್ ಲೆಸ್ ಸ್ಯಾಂಡಲ್ ಆಭರಣಗಳೆನ್ನುವರು. ಇದು ಅಂಗುಷ್ಠ ಮತ್ತು ಆ್ಯಂಕಲ್‌ಗಳೆರಡನ್ನು ಜೋಡಿಸಿಕೊಂಡಿರುವ ಮಾದರಿಯಾಗಿದೆ. ಇವುಗಳು ಟ್ರೆಂಡಿಯಾದ ಆಭರಣಗಳಾಗಿದ್ದು ಎಲ್ಲಾ ವಯೋಮಾನದ ಮಹಿಳೆಯರನ್ನು ತನ್ನತ್ತ ಆಕರ್ಷಿಸುತ್ತವೆ. ಇವು ಇತ್ತೀಚಿನ ದಿನಗಳಲ್ಲಿ ಬಹಳ ಪ್ರಚಲಿತವಾದ ಸ್ಟೈಲಾಗಿದೆ. ಇವುಗಳ ಜನಪ್ರಿಯತೆಗೆ ಮುಖ್ಯ ಕಾರಣ ವಿಭಿನ್ನವಾದ ಆಯ್ಕೆಗಳು ಮತ್ತು ವಿಭಿನ್ನವಾದ ಸಂದರ್ಭಗಳಿಗೆ ಒಪ್ಪುವಂಥ ಆಯ್ಕೆಗಳು ಲಭ್ಯವಿರುವುದು. ವಿವಿಧ ಸಂದರ್ಭಕ್ಕನುಗುಣವಾಗಿ ಇವುಗಳನ್ನು ಹಲವಾರು ವಿಧಗಳಲ್ಲಿ ಮಾದರಿಗೊಳಿಸಲಾಗುತ್ತದೆ. ಅವುಗಳಲ್ಲಿ
1 ಟ್ರೆಡಿಶನಲ್ ಬೇರ್ ಫೂಟ್ ಆಭರಣಗಳು
ಇವುಗಳು ಹೆಸರಿಗೆ ತಕ್ಕಂತೆ ಬಹಳ ಟ್ರೆಡಿಶನಲ್ ಲುಕ್ ಕೊಡುವಂತವುಗಳಾಗಿರುತ್ತವೆ. ಇವುಗಳನ್ನು ಬ್ರೈಡಲ್ ಫೂಟ್ ಆಭರಣಗಳೆಂದೂ ಕರೆಯಲಾಗುತ್ತದೆ. ಇವುಗಳು ಗ್ರ್ಯಾಂಡ್ ಲುಕ್ಕನ್ನು ಕೊಡುತ್ತವೆ. ಇವುಗಳ ಧರಿಸುವಿಕೆಯಿಂದ ತೊಟ್ಟಂತಹ ರೇಷ್ಮೆ ಸೀರೆಯಾಗಿರಬಹುದು ಅಥವಾ ಡಿಸೈನರ್ ಲೆಹೆಂಗವಾಗಿರಬಹುದು, ಉಡುಪಿನ ಅಂದವನ್ನು ಮತ್ತು ಮದುವೆ ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುತ್ತವೆ. ಇವುಗಳು ಸಾಮಾನ್ಯವಾಗಿ ಗೋಲ್ಡ್ ಪ್ಲೇಟೆಡ್ಡಾಗಿದ್ದು, ಕುಂದನ್ ಮತ್ತು ಬೀಡ್ಸ್‌ಗಳಿಂದ ಅಲಂಕರಿಸಲಾಗಿರುತ್ತವೆ. ಡ್ರೆಸ್Õ ಅಥವಾ ಸೀರೆಯ ಬಣ್ಣಕ್ಕೆ ಹೊಂದುವಂತಹ ಬಣ್ಣದ ಕುಂದನ್ ಇರುವ ವಿನ್ಯಾಸಗಳನ್ನು ಆಯ್ಕೆ ಮಾಡುವುದು ಸೂಕ್ತವಾದುದು.
2 ಲೇಸ್ ಬೇರ್ ಫೂಟ್ ಆಭರಣಗಳು
ಇವುಗಳು ಲೇಸ್ ಫ್ಯಾಬ್ರಿಕ್‌ನಿಂದ ತಯಾರಿಸಲಾಗಿದ್ದು, ಸಿಂಪಲ್ ಮತ್ತು ಎಲಿಗ್ಯಾಂಟ್ ಲುಕ್ಕನ್ನು ನೀಡುತ್ತವೆ. ಇವುಗಳು ಲಾಂಗ್ ಗೌನುಗಳು ಜೀನ್ಸ್‌ಗಳಿಗೆ ಹೆಚ್ಚು ಹೊಂದುತ್ತವೆ. ಪಾರ್ಟಿಗಳಲ್ಲಿಯೂ ಧರಿಸಬಹುದಾಗಿದೆ. ಅವುಗಳ ಬಣ್ಣ ಮತ್ತು ಮಾದರಿಗಳ ಆಯ್ಕೆಯ ಬಗ್ಗೆ ಹೆಚ್ಚು ಗಮನವಿರಲಿ.
3 ಚೈನ್ ಬೇರ್ ಫೂಟ್ ಆಭರಣಗಳು
ಇವುಗಳು ಇಂಡೋ-ವೆಸ್ಟರ್ನ್ ದಿರಿಸುಗಳಿಗೆ ಹೇಳಿ ಮಾಡಿಸಿದಂತಿರುತ್ತವೆ. ಮದುವೆ ಇನ್ನಿತರ ಸಮಾರಂಭಗಳಿಗೆ ಬರಿಯ ಗೆಜ್ಜೆಗಳಿಗಿಂತ ಈ ಬಗೆಯ ಆಭರಣಗಳನ್ನು ಧರಿಸಿದಾಗ ಹೊಸ ಸ್ಟೈಲ್ ಸ್ಟೇಟ್‌ಮೆಂಟನ್ನು ಸೃಷ್ಟಿಸುವಂತಾಗುತ್ತದೆ. ಪಾದದ ಅಂದವನ್ನು ಇಮ್ಮಡಿಗೊಳಿಸುತ್ತವೆ. ಇವುಗಳು ಗೋಲ್ಡ್ ಪ್ಲೇಟೆಡ್ ಮತ್ತು ಸಿಲ್ವರ್ ಪ್ಲೇಟೆಡ್‌ಗಳಲ್ಲಿ ಲಭ್ಯವಿರುತ್ತವೆ.
4 ಬಂಜಾರ ಫೂಟ್ ಆಭರಣಗಳು
ಇವುಗಳು ಬಂಜಾರ (ಲಂಬಾಣಿ) ಜನಾಂಗ ಮತ್ತು ಬುಡಕಟ್ಟು ಜನಾಂಗದವರ ಆಭರಣಗಳಿಂದ ಪ್ರೇರಿತವಾದವುಗಳು. ಇವು ಸಾಮಾನ್ಯವಾಗಿ ಆಕ್ಸಿಡೈಸ್ಡ್ ಸಿಲ್ವರ್‌ನಿಂದಾಗಿರುತ್ತವೆ. ಹಲವಾರು ಡಿಸೈನುಗಳಲ್ಲಿ ಲಭ್ಯವಿದ್ದು ತುಂಬಾ ಆ್ಯಂಟಿಕ್ ಲುಕ್ಕನ್ನು ನೀಡುತ್ತವೆ. ಈ ಬಗೆಯ ಆಭರಣಗಳು ಮಾಡರ್ನ್ ಡ್ರೆಸ್ಸುಗಳಿಗೆ ಮತ್ತು ಕಾಟನ್ ದಿರಿಸುಗಳಿಗೆ ಹೆಚ್ಚು ಸೂಕ್ತವಾದುದು. ಪಾರ್ಟಿವೇರ್ ಮತ್ತು ಕ್ಯಾಷುವಲ್ ಎರಡೂ ಸಂದರ್ಭಗಳಲ್ಲಿ ಬಳಸಬಹುದು. ಯಾವ ಬಗೆಯ ಬಣ್ಣದ ಬಟ್ಟೆಗಳಿಗಾದರೂ ಹೊಂದುವುದು ಇವುಗಳ ವಿಶೇಷತೆ.
5 ಕ್ರಾಚೆಟ್ ಬೇರ್ ಫೂಟ್ ಆಭರಣಗಳು
ಇವುಗಳನ್ನು ಎಂಬ್ರಾಯಿಡರಿ ಥೆÅಡ್‌ನಿಂದ ತಯಾರಿಸಿರುತ್ತಾರೆ. ಇವುಗಳು ಲೇಸ್ ಫೂಟ್ ಆಭರಣಗಳಿಗೆ ಹೋಲುತ್ತವೆ, ಆದರೆ ಕ್ರಾಚೆಟ್‌ಗಳು ಹ್ಯಾಂಡ್‌ಮೇಡ್ ಆಭರಣಗಳಾಗಿರುತ್ತವೆ. ಬೇಕಾದ ಕಲರ್ ಆಯ್ಕೆಗಳಿರುವುದರಿಂದ ಡ್ರೆಸ್‌ಗೆ ಮ್ಯಾಚ್ ಆಗುವಂತಹ ಆಭರಣಗಳು ಲಭ್ಯ. ಇವುಗಳು ಕೇವಲ ಮಾಡರ್ನ್ ಡ್ರೆಸ್ಸುಗಳಿಗೆ ಸೂಕ್ತವಾದವುಗಳಾಗಿವೆ.
6 ಪರ್ಲ್ ಮತ್ತು ಬೀಡ್ಸ್‌ಗಳಿಂದ ತಯಾರಾದ ಬೇರ್ ಫೂಟ್ ಆಭರಣಗಳು
ಇವುಗಳು ಸಿಂಪಲ್ಲಾದ ಆಭರಣಗಳು. ಸಾಮಾನ್ಯವಾಗಿ ಒಂದು ಎಳೆಯಲ್ಲಿ ಅಂಗುಷ್ಠದಿಂದ ಆ್ಯಂಕಲ್‌ಗೆ ಜೋಡಿಸಲಾದ ಮಾದರಿಗಳು. ಆದ್ದರಿಂದ ಇವು ಕ್ಯಾಷುವಲ್ ವೇರ್‌ಗೆ ಹೇಳಿ ಮಾಡಿಸಿದಂತಿರುತ್ತವೆ. ಪರ್ಲ್ ಆದರೆ ವೈಟ್ ಡ್ರೆಸ್ಸುಗಳಿಗೆ ಹಾಗೆಯೇ ಬಣ್ಣದ ಬಟ್ಟೆಗಳಿಗೆ ವಿವಿಧ ಬಣ್ಣಗಳ ಬೀಡುÕಗಳಿಂದಾದ ಆಭರಣಗಳು ಲಭಿಸುತ್ತವೆ.
7 ಬೀಚ್ ಬೇರ್ ಫೂಟ್ ಆಭರಣಗಳು:
ಇವುಗಳು ಹೆಸರೇ ಹೇಳುವಂತೆ ಬೀಚ್ ಪಾರ್ಟಿಗಳಿಗೆ ಸೂಕ್ತವಾದುದು. ಇವುಗಳು ವಿವಿಧ ರೀತಿಯ ಸ್ಟೋನ್ಸುಗಳಿಂದ ಮತ್ತು ಕಪ್ಪೆ ಚಿಪ್ಪುಗಳು, ಸಣ್ಣ ಸಣ್ಣ ಕವಡೆಗಳು, ಶಂಖಗಳಿಂದ ತಯಾರಿಸಲ್ಪಟ್ಟದ್ದು, ಬೀಚ್ ಥೀಮನ್ನು ಹೈಲೈಟ್ ಮಾಡುತ್ತವೆ. ನೋಡಲು ಬಹಳ ಸುಂದರವಾಗಿರುವ ಆಭರಣಗಳಿವಾಗಿವೆ.
– ಪ್ರಭಾ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು
Manmohan Singh: ಮನಮೋಹನ್ ಸಿಂಗ್ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ
Puttur ನಗರಕ್ಕೂ ಬೇಕು ಟ್ರಾಫಿಕ್ ಸಿಗ್ನಲ್
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.