ಸೋಶಿಯಲ್ ಮೀಡಿಯಾದಲ್ಲಿ ಕಹೋನಾ ಪ್ಯಾರ್ ಹೈ ಹುಡುಗಿ
Team Udayavani, Jun 14, 2019, 6:00 AM IST
ಬಾಲಿವುಡ್‌ನ ಸೂಪರ್ ಹಿಟ್ ಚಿತ್ರ ಕಹೋ ನಾ ಪ್ಯಾರ್ ಹೈ ನಿಮಗೆ ನೆನಪಿರಬಹುದು. 2000 ನೇ ಇಸವಿಯಲ್ಲಿ ತೆರೆಕಂಡ ಈ ಚಿತ್ರ ಅಂದಿನ ಕಾಲಕ್ಕೆ ಬಾಕ್ಸಾಫೀಸ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿತ್ತು. ರಾಕೇಶ್ ರೋಷನ್ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ ಹೃತಿಕ್ ರೋಷನ್ ಮತ್ತು ಅಮಿಷಾ ಪಟೇಲ್ ಎನ್ನುವ ನವ ಪ್ರತಿಭೆಗಳನ್ನು ಬಾಲಿವುಡ್ ಅಂಗಳದಲ್ಲಿ ಸೂಪರ್ ಸ್ಟಾರ್ ಪಟ್ಟಕ್ಕೆ ಏರುವಂತೆ ಮಾಡಿತು. ಕಹೋ ನಾ ಪ್ಯಾರ್ ಹೈ ಚಿತ್ರದ ನಂತರ ನಾಯಕ ನಟ ಹೃತಿಕ್ ರೋಷನ್ ಸಾಲು ಸಾಲು ಸೂಪರ್ ಹಿಟ್ ಚಿತ್ರಗಳನ್ನು ನೀಡುವ ಮೂಲಕ ಬಾಲಿವುಡ್‌ನಲ್ಲಿ ಬಹುಬೇಡಿಕೆಯ ಹೀರೋಗಳ ಸಾಲಿನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.
ಅದೇ ರೀತಿ ಕಹೋ ನಾ ಪ್ಯಾರ್ ಹೈ ಚಿತ್ರದ ಯಶಸ್ಸಿನ ನಂತರ ನಾಯಕ ನಟಿ ಅಮಿಷಾ ಪಟೇಲ್‌ಗೂ ಸಾಲು ಸಾಲು ಚಿತ್ರಗಳ ಆಫರ್ ಬರೋದಕ್ಕೆ ಶುರುವಾಯಿತು. ಹಿಂದಿಯ ಜೊತೆಗೆ ತಮಿಳು, ತೆಲುಗು ಚಿತ್ರರಂಗದಲ್ಲೂ ಅಮಿಷಾಗೆ ಒಳ್ಳೆಯ ಚಿತ್ರಗಳ ಆಫರ್ ಬಂದವು. ಅಮಿಷಾ ಚಿತ್ರರಂಗಕ್ಕೆ ಕಾಲಿಟ್ಟ ಸುಮಾರು 18 ವರ್ಷಗಳಲ್ಲಿ ಸರಿಸುಮಾರು 35ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ, ಗೆಸ್ಟ್ ಅಪಿಯರೆನ್ಸ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ, ಇಷ್ಟೊಂದು ದೊಡ್ಡ ಸಂಖ್ಯೆಯ ಚಿತ್ರಗಳಲ್ಲಿ ಅಭಿನಯಿಸಿದ್ದರೂ ಯಾವ ಚಿತ್ರಗಳೂ ಅಮಿಷಾಗೆ ಹೇಳಿಕೊಳ್ಳುವ ಮಟ್ಟಿಗೆ ಯಶಸ್ಸು ತಂದುಕೊಡಲಿಲ್ಲ. ಬಾಲಿವುಡ್, ಟಾಲಿವುಡ್, ಕಾಲಿವುಡ್ ಹೀಗೆ ಎಲ್ಲಾ ಚಿತ್ರರಂಗಗಳಲ್ಲೂ ಒಂದು ರೌಂಡ್ ಹೊಡೆದು ಬಂದರೂ ಅಮಿಷಾಗೆ ಸಕ್ಸಸ್ ರೇಟ್ ತುಂಬಾ ಕಡಿಮೆ ಅನ್ನೋದು ವಾಸ್ತವ ಸತ್ಯ.
ನಿಧಾನವಾಗಿ ನಾಯಕ ನಟಿಯಾಗಿ ಚಿತ್ರರಂಗದಲ್ಲಿ ಬೇಡಿಕೆ ಕಡಿಮೆಯಾಗುತ್ತಿದ್ದಂತೆ, ತಮ್ಮದೇ ಆದ ಪ್ರೊಡಕ್ಷನ್ ಕಂಪೆನಿ ಹುಟ್ಟುಹಾಕಿದ ಅಮಿಷಾ ನಿರ್ಮಾಣದತ್ತ ಮುಖ ಮಾಡಿದರು. ಆದರೆ ಅಲ್ಲೂ ಅಮಿಷಾಗೆ ಸಕ್ಸಸ್ ಅನ್ನೋದು ಮರೀಚಿಕೆಯಾಯಿತು. ತಾನು ಅಂದುಕೊಂಡಂತೆ ಯಾವ ಚಿತ್ರಗಳನ್ನೂ ಹೊರತರಲಾಗಲಿಲ್ಲ.
ಅದಾದ ಬಳಿಕ ಅಮಿಷಾ ಹೆಸರು ಸಿನಿಮಾಗಳಿಗಿಂತ ಬೇರೆ ಬೇರೆ ವಿಷಯಗಳಿಗೆ ಹೆಚ್ಚು ಸುದ್ದಿಯಾಗಲು ಶುರುವಾಯಿತು. ಉದ್ಯಮಿಯೊಬ್ಬರ ಜೊತೆ ಕೆಲಕಾಲ ಸುತ್ತಾಡುವ ಮೂಲಕ ಸುದ್ದಿಯಾದ ಅಮಿಷಾ, ಆನಂತರ “ಪೇಟಾ’ ಸಂಘಟನೆಯಲ್ಲಿ ಗುರುತಿಸಿಕೊಂಡು ಅಲ್ಲೂ ವಿವಾದದ ಮೂಲಕ ಸುದ್ದಿಯಾದರು. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ ವಿಷಯವನ್ನು ಮೈಮೇಲೆ ಎಳೆದುಕೊಂಡು ಸುದ್ದಿಯಾಗುತ್ತಿದ್ದಾರೆ. ಅದರಲ್ಲೂ ಕಳೆದ ಒಂದೆರಡು ವರ್ಷಗಳಿಂದ ಅಮಿಷಾ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ಅನಗತ್ಯ ವಿಷಯಗಳಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಇತ್ತೀಚೆಗೆ ಅಮಿಷಾ ಪಟೇಲ್ ಮಾಡಿಸಿದ್ದ ಹಾಟ್ ಫೋಟೋಶೂಟ್ ಕೂಡ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿ ಸುದ್ದಿಯಾಗುತ್ತಿದೆ. ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ಅಮಿಷಾ, ಬಟ್ಟೆ ಜಾರುತ್ತಿದ್ದರೂ ಅದರ ಪರಿವೇ ಇಲ್ಲದಂತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ! ಸದ್ಯ ಆ ಲುಕ್ ಎಲ್ಲೆಡೆ ಹರಿದಾಡುತ್ತಿದ್ದು, ಅಮಿಷಾ ಪ್ರಚಾರಕ್ಕಾಗಿಯೇ ಇಂಥ ಗಿಮಿಕ್ ಮಾಡುತ್ತಿದ್ದಾರೆ ಅಂತ ಫ್ಯಾನ್ಸ್ ಕಾಲೆಳೆಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
GST: ಪರೀಕ್ಷಾ ಫಾರಂ ಮೇಲೆ ಜಿಎಸ್‌ಟಿ: ಸರಕಾರ ವಿರುದ್ಧ ಪ್ರಿಯಾಂಕಾ ವಾಗ್ಧಾಳಿ
JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ
Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು
Nitish Kumar ನೇತೃತ್ವದಲ್ಲೇ ಬಿಹಾರ ಚುನಾವಣೆಗೆ ಎನ್‌ಡಿಎ ಸ್ಪರ್ಧೆ: ಬಿಜೆಪಿ
Hindu Temple: ಸಂಭಲ್ ಬಳಿಕ ಬುಲಂದ್‌ಶಹರ್‌ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.