ಕಂಗನಾ ಎಂಬ ಅಂಗನಾ ಮತ್ತು ಇತರ ಕತೆಗಳು


Team Udayavani, Feb 22, 2019, 12:30 AM IST

19.jpg

ಬಾಲಿವುಡ್‌ನ‌ಲ್ಲಿ ನಟಿ ಕಂಗನಾ ರಣಾವುತ್‌ ಸದ್ಯಕ್ಕೆ ಏಕಾಂಗಿ ಅನ್ನೋದು ಹಿಂದಿ ಚಿತ್ರರಂಗದಲ್ಲಿ ಜೋರಾಗಿ ಕೇಳಿ ಬರುತ್ತಿರುವ ಮಾತು. ಇಂತಹ ಮಾತು ಕೇಳಿಬರಲು ಬಲವಾದ ಕಾರಣವೂ ಇದೆ. ಕಳೆದ ಎರಡು- ಮೂರು ವರ್ಷಗಳಿಂದ ಕಂಗನಾ ತನ್ನ ಸಿನಿಮಾ ವಿಷಯಗಳಿಗೆ ಸುದ್ದಿಯಾಗಿದ್ದಕ್ಕಿಂತ, ಚಿತ್ರೋದ್ಯಮದ ಮೇಲೆ, ಸಹ ನಟರ ಮೇಲೆ, ನಿರ್ಮಾಪಕರು-ನಿರ್ದೇಶಕರ ಮೇಲೆ ಸಾಲು ಸಾಲು ಆರೋಪಗಳನ್ನು ಮಾಡುವ ಮೂಲಕ ಸುದ್ದಿಯಾಗಿದ್ದೇ ಹೆಚ್ಚು.

ಆರಂಭದಲ್ಲಿ ಕಂಗನಾ ಮಾಡಿದ ಆರೋಪಗಳಿಗೆ ಬಾಲಿವುಡ್‌ನಿಂದ ಒಂದಷ್ಟು ಬೆಂಬಲ ವ್ಯಕ್ತವಾದರೂ, ಕಂಗನಾ ತಾವು ಮಾಡಿದ ಆರೋಪಗಳನ್ನು ನಿರೂಪಿಸುವಲ್ಲಿ ವಿಫ‌ಲವಾದರು. ಇದೇ ವೇಳೆ ಬಾಲಿವುಡ್‌ನ‌ಲ್ಲಿ ಆರಂಭವಾದ ಮಿ ಟೂ… ಅಭಿಯಾನದಲ್ಲೂ, ತಮ್ಮ ಇದೇ ವರ್ತನೆಯನ್ನು ಮುಂದುವರೆಸಿದ ಕಂಗನಾ, ಹಿಂದಿನ ತಮ್ಮ ಸಿನೆಮಾಗಳಲ್ಲಿ ಕೆಲಸ ಮಾಡಿದ ಅನೇಕ ಸಹ ನಟರು, ನಿರ್ಮಾಪಕರು, ನಿರ್ದೇಶಕರು ಕೊನೆಗೆ ಒಂದಷ್ಟು ಪತ್ರಕರ್ತರ ಮೇಲೂ ಆರೋಪಗಳ ಸುರಿಮಳೆಯನ್ನೇ ಮಾಡಿದರು. ಆದರೆ ಇಲ್ಲಿಯವರೆಗೂ ಕಂಗನಾ, ತಾವು ಮಾಡಿರುವ ಆರೋಪಗಳಲ್ಲಿ ಒಂದೇ ಒಂದು ಆರೋಪವನ್ನು ಕೂಡ ಸತ್ಯ ಎಂದು ನಿರೂಪಿಸಲು ಸಾಧ್ಯವಾಗಿಲ್ಲ.

ಹೀಗಾಗಿ, ತಮಗೆ ಆಗದವರ ವಿರುದ್ಧ ಕಂಗನಾ, ವೃಥಾ ಆರೋಪ ಮಾಡುತ್ತ ಅವರ ತೇಜೋವಧೆ ಮಾಡುತ್ತ, ಪ್ರಚಾರ ಪಡೆದುಕೊಳ್ಳುವುದು ಅವರ ಪ್ರವೃತ್ತಿಯಾಗುತ್ತಿದೆ ಅನ್ನೋದು ಬಾಲಿವುಡ್‌ ಮಾತು. ಈ ಎಲ್ಲ ಕಾರಣಗಳಿಂದ, ಇತ್ತೀಚೆಗೆ ಬಾಲಿವುಡ್‌ ಕಂಗನಾ ರಣಾವುತ್‌ ಆರೋಪಗಳ ಬಗ್ಗೆಯಾಗಲಿ, ಅವರ ಮಾತುಗಳನ್ನಾಗಲಿ ಗಂಭೀರವಾಗಿ ಪರಿಗಣಿಸುತ್ತಿಲ್ಲ ಅನ್ನೋದು ಬಾಲಿವುಡ್‌ ಮೂಲಗಳ ಮಾತು.

ಇದರ ನಡುವೆಯೇ, ಈ ವರ್ಷದ ಆರಂಭದಲ್ಲಿಯೇ ಕಂಗನಾ ರಣಾವುತ್‌ ಅಭಿನಯದ ಮಣಿಕರ್ಣಿಕಾ  ಜೋರಾಗಿಯೇ ಸದ್ದು ಮಾಡುತ್ತ ತೆರೆಗೆ ಬಂದಿತ್ತು. ಮಣಿಕರ್ಣಿಕಾ ಬಿಡುಗಡೆಗೂ ಮುನ್ನ ಚಿತ್ರತಂಡದ ಜೊತೆ ಕಿರಿಕ್‌ ಮಾಡಿಕೊಂಡಿದ್ದ ಕಂಗನಾ, ಕೊನೆಗೆ ತಾವೇ ಚಿತ್ರವನ್ನು ತೆರೆಗೆ ತಂದಿದ್ದರು. ಆದರೆ ಮಣಿಕರ್ಣಿಕಾ  ಬಾಕ್ಸಾಫೀಸ್‌ನಲ್ಲಿ ನಿರೀಕ್ಷಿತ ಗೆಲುವು ಕಾಣಲಿಲ್ಲ. ಅಲ್ಲದೆ, ಬಾಲಿವುಡ್‌ನಿಂದಲೂ ಚಿತ್ರಕ್ಕೆ ನಿರೀಕ್ಷಿತ ಬೆಂಬಲ ನೀಡಲಿಲ್ಲ. ಹೀಗಾಗಿ ಈಗ ಮತ್ತೆ ಕಂಗನಾ, ಬಾಲಿವುಡ್‌ ವಿರುದ್ಧ ತಮ್ಮ ಕೋಪವನ್ನು ಹೊರಹಾಕಿದ್ದಾರೆ.

“”ಮಣಿಕರ್ಣಿಕಾ  ಉತ್ತಮ ಚಿತ್ರವಾದರೂ, ಅದಕ್ಕೆ ಬೆಂಬಲ ನೀಡಲಿಲ್ಲ. ಝಾನ್ಸಿ ರಾಣಿ ಲಕ್ಷ್ಮೀಬಾಯಿ ನನ್ನ ಚಿಕ್ಕಮ್ಮ ಅಲ್ಲ, ನಿಮಗೆಲ್ಲ ಹೇಗೋ ನನಗೂ ಕೂಡ ಆಕೆ ಹಾಗೆಯೇ. ನಾನು ನಿಮ್ಮ ಸ್ವಜನಪಕ್ಷಪಾತ, ಲೈಂಗಿಕ ಕಿರುಕುಳ, ಹುಳುಕುಗಳನ್ನು ಬಹಿರಂಗಪಡಿಸಿದೆ ಅನ್ನೋ ಒಂದೇ ಕಾರಣಕ್ಕೆ, ಸ್ವಾತಂತ್ರ ಹೋರಾಟಗಾರ್ತಿ ಚಿತ್ರವನ್ನು ಬೆಂಬಲಿಸಲು ಏಕೆ ಹಿಂದೇಟು ಹಾಕ್ತಿದ್ದಿರಾ?” ಅಂತ ಪ್ರಶ್ನಿಸಿ¨ªಾರೆ. “”ಒಂದು ಕ್ಲಾಸ್‌ರೂಮಿನಲ್ಲಿರುವ ವಿದ್ಯಾರ್ಥಿಗಳು ಒಬ್ಬ ವಿದ್ಯಾರ್ಥಿ ವಿರುದ್ಧ ಗುಂಪು ಕಟ್ಟಿದ ರೀತಿ ಇವರೆಲ್ಲರೂ ನನ್ನ ವಿರುದ್ಧ ಒಂದಾಗಿ ನಿಂತಿ¨ªಾರೆ. ಆದರೆ, ಇದಕ್ಕೆಲ್ಲ ನಾನು ಕೇರ್‌ ಮಾಡೋದಿಲ್ಲ. ಇಂಥವರನ್ನೆಲ್ಲ ಸುಮ್ಮನೆ ಬಿಡಲ್ಲ. ಇವರ ಮತ್ತಷ್ಟು ಅಕ್ರಮಗಳನ್ನು ಬಯಲಿಗೆ ಎಳೆಯುತ್ತೇನೆ” ಅಂತ ಕಂಗನಾ ಅಬ್ಬರಿಸಿ¨ªಾರೆ.

ಅಲ್ಲದೆ ಇತ್ತೀಚೆಗೆ, ಪುಲ್ವಾಮಾ ದಾಳಿಯ ನಂತರ ಹಿರಿಯ ನಟಿ ಶಬಾನಾ ಅಜ್ಮಿ ಅವರ ನಡೆಯನ್ನು ವಿರೋಧಿ ಸಿದ ಕಂಗನಾ, ಶಬಾನಾ ಅಜ್ಮಿ ಅವರನ್ನು ದೇಶ ವಿರೋಧಿ ಎಂದು ಜರೆದಿ¨ªಾರೆ. ಇನ್ನು ಕಂಗಾನಾ ಹೇಳಿಕೆಗೆ ಪ್ರತಿಕ್ರಿಯಿಸಿ ರುವ ಶಬಾನಾ, “”ಇಡೀ ದೇಶವೇ ದುಃಖದಲ್ಲಿ¨ªಾಗ, ಪುಲ್ವಾಮಾ ಘಟನೆ ಖಂಡಿಸುತ್ತಿರುವ ಸಮಯದಲ್ಲಿ ನನ್ನ ಮೇಲೆ ವೈಯಕ್ತಿಕ ದಾಳಿ ಮಾಡಿ, ಏನನ್ನು ಪಡೆಯಲು ಯೋಚಿಸುತ್ತೀರಿ ಎಂದು ಪ್ರಶ್ನಿಸಿ¨ªಾರೆ”. ಒಟ್ಟಾರೆ ತನ್ನ ನೇರ ಮಾತುಗಳಿಂದ ಬಾಲಿವುಡ್‌ ಮಂದಿಯ ವಿರೋಧ ಕಟ್ಟಿಕೊಳ್ಳುತ್ತಿರುವ ಕಂಗನಾ ರಣಾವುತ್‌ಗೆ ಯಾರೂ ಬೆಂಬಲವಾಗಿ ನಿಲ್ಲುತ್ತಿಲ್ಲ. ಕಂಗನಾ ಅವರದ್ದು ಬಾಲಿವುಡ್‌ನ‌ಲ್ಲಿ ಸದ್ಯಕ್ಕೆ ಏಕಾಂಗಿ ಹೋರಾಟ ಅನ್ನೋದು ಬಾಲಿವುಡ್‌ ಮಂದಿಯ ಮಾತು.

ಟಾಪ್ ನ್ಯೂಸ್

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ

Hockey

Hockey: ಇಂದಿನಿಂದ ಜೂ. ಏಷ್ಯಾ ಕಪ್‌ ಹಾಕಿ; ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.