ಕಂಗನಾ-ದ ಡೈರೆಕ್ಟರ್
Team Udayavani, May 19, 2017, 3:12 PM IST
ಕೊನೆಗೂ ಕಂಗನಾ ರಣಾವತ್ ಅವರ ಅಭಿಮಾನಿಗಳ ಬಹುಕಾಲದ ಕೋರಿಕೆಯೊಂದು ಈಡೇರುತ್ತಿದೆ. ಈ ವರ್ಷಾಂತ್ಯದಲ್ಲಿ ಅದು ಆಗಲಿದೆ ಎಂಬ ಸುಳಿವನ್ನೂ ಕಂಗನಾ ನೀಡಿದ್ದಾಳೆ. ಇದು ಕಂಗನಾಳ ಮದುವೆ ಸುದ್ದಿ ಎಂದು ನೀವು ಭಾವಿಸಿದರೆ ನಿಮ್ಮ ಎಣಿಕೆ ತಪ್ಪು. ಇದು ಕಂಗನಾ ನಿರ್ದೇಶಕಿಯಾಗುತ್ತಿರುವ ಸುದ್ದಿ !
ಚಿತ್ರರಂಗಕ್ಕೆ ಬಂದು ದಶಕ ಪೂರೈಸಿ ಮೂರು ರಾಷ್ಟ್ರಪ್ರಶಸ್ತಿ, ಅಸಂಖ್ಯಾತ ಇತರ ಪ್ರಶಸ್ತಿಗಳೊಂದಿಗೆ ಯಶಸ್ಸಿನ ತುತ್ತತುದಿಗೇರಿ ವಿರಾಜಮಾನಳಾಗಿರುವ ಕಂಗನಾಳ ಚಿತ್ತ ಈಗ ನಿರ್ದೇಶನದತ್ತ ಹರಿದಿದೆ. ಒಂದು ಕಾಮೆಡಿ ಚಿತ್ರದ ಸ್ಕ್ರಿಪ್ಟ್ ಬಹಳ ಸಮಯದಿಂದ ಅವಳ ಮನಸ್ಸಿನಲ್ಲಿ ಸುಳಿದಾಡುತ್ತಿದೆಯಂತೆ. ಇದನ್ನೇ ನಿರ್ದೇಶಿಸುವ ನಿರ್ಧಾರ ಮಾಡಿದ್ದಾಳೆ ಕಂಗನಾ. ಬಾಲಿವುಡ್‌ನ ಅಪ್ಪಟ ಪ್ರತಿಭಾವಂತ ಹಾಗೂ ಅಷ್ಟೇ ವಿವಾದಿತ ನಟಿಯಾಗಿರುವ ಕಂಗನಾ ಮನಸ್ಸಿಗೆ ತೋಚಿದ್ದನ್ನು ಯಾವುದೇ ಮುಚ್ಚುಮರೆಯಿಲ್ಲದೆ ಹೇಳುವ ಛಾತಿಯ ಹೆಣ್ಣು. ಈ ಸ್ವಭಾವದಿಂದ ಚಿತ್ರರಂಗದ ಘಟಾನುಘಟಿಗಳನ್ನೇ ಎದುರು ಹಾಕಿಕೊಂಡರೂ ಎದೆಗುಂದಲಿಲ್ಲ.
“”ಖಾಲಿ ಕೈಯಲ್ಲಿ ಬಂದ ನಾನು ಪ್ರತಿಭೆಯೊಂದರಿಂದà ಇಲ್ಲಿ ನೆಲೆ ಕಂಡುಕೊಂಡವಳು. ನನಗೆ ಯಾರೂ ಗಾಡ್‌ಫಾದರ್‌ಗಳಿಲ್ಲ. ಹೀಗಾಗಿ ಯಾರ ಮರ್ಜಿಗೂ ನಾನು ಒಳಪಡುವುದಿಲ್ಲ” ಎನ್ನುವ ನಿರ್ಭೀತ ಧೋರಣೆ ಅವಳದ್ದು. ಹೀಗಾಗಿ ಬಾಲಿವುಡ್‌ನಲ್ಲಿ ಕಂಗನಾಳಿಗೆ ಸ್ನೇಹಿತರಿಗಿಂತ ಹೆಚ್ಚು ಶತ್ರುಗಳಿದ್ದಾರೆ. ಪ್ರಸ್ತುತ ರಂಗನ್, ಮಣಿಕರ್ಣಿಕಾ, ದ ಕ್ವೀನ್ ಆಫ್ ಝಾನ್ಸಿ ಚಿತ್ರಗಳಲ್ಲಿ ನಟಿಸುತ್ತಿರುವ ಕಂಗನಾ ಇವುಗಳ ಶೂಟಿಂಗ್ ಮುಕ್ತಾಯವಾದ ಕೂಡಲೇ ನಿರ್ದೇಶಕಿಯ ಕ್ಯಾಪ್ ಧರಿಸಲಿದ್ದಾಳೆ. ಮತ್ತೂ ಒಂದು ವಿಶೇಷವೆಂದರೆ ತಾನು ನಿರ್ದೇಶಿಸುವ ಚಿತ್ರಗಳಿಗೆಲ್ಲ ನಾನೇ ನಾಯಕಿ ಎಂದೂ ಅವಳು ಘೋಷಿಸಿದ್ದಾಳೆ.
ಇತರರಿಗಾಗಿ ನಟಿಸಿದ್ದು ಸಾಕಷ್ಟಾಯಿತು. ಇನ್ನು ನಟಿಸುವುದು ನನಗಾಗಿ. ನನಗಿಷ್ಟವಾದ ಪಾತ್ರಗಳನ್ನು ಸೃಷ್ಟಿಸಿ ನಟಿಸುವ ಖುಷಿಯನ್ನು ಅನುಭವಿಸಲು ಈ ನಿರ್ಧಾರ ಎನ್ನುವುದು ಕಂಗನಾಳ ವಿವರಣೆ. ಉತ್ತಮ ಪಾತ್ರಗಳು ಸಿಕ್ಕಿದರಷ್ಟೇ ಇನ್ನು ಬೇರೆ ನಿರ್ದೇಶಕರ ಚಿತ್ರಗಳಲ್ಲಿ ನಟಿಸುತ್ತಾಳಂತೆ. ಇದೇ ವೇಳೆ ವರ್ಷಕ್ಕೆ ಕನಿಷ್ಠ ಒಂದಾದರೂ ಚಿತ್ರ ನಿರ್ದೇಶಿಸಬೇಕೆನ್ನುವುದು ಅವಳ ಇರಾದೆ. ಕಂಗನಾ ಹೆಚ್ಚಾಗಿ ನಟಿಸಿರುವುದು ವಾಸ್ತವಕ್ಕೆ ಹತ್ತಿರವಿರುವ ಗಂಭೀರ ಪಾತ್ರಗಳಲ್ಲಿ. ಆದರೂ ಅವಳ ಇಷ್ಟದ ವಿಷಯ ಹಾಸ್ಯವಂತೆ. ಹೀಗಾಗಿ, ನಿರ್ದೇಶನಕ್ಕೆ ಶ್ರೀಕಾರ ಹಾಕಲು ಕಾಮೆಡಿ ಸಬೆjಕ್ಟ್ ಆಯ್ದುಕೊಂಡಿದ್ದಾಳೆ. ಬೆಸ್ಟ್ ಲಕ್ ಕಂಗನಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ
Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ
Mangaluru: ಬ್ಯಾರಿ ಅಭಿವೃದ್ಧಿ ನಿಗಮದ ಸಾಧಕ-ಬಾಧಕ ಚರ್ಚೆ ಅಗತ್ಯ: ಸ್ಪೀಕರ್ ಖಾದರ್
ನಕ್ಸಲರಿಗೆ ಕೆಂಪು ಹಾಸು ಸ್ವಾಗತ ಖಂಡನೀಯ: ಹರೀಶ್ ಪೂಂಜಾ
Mangaluru University: ಹೊಸ ಕೋರ್ಸ್ ಆರಂಭಕ್ಕೆ ವಿವಿ ಅನುಮತಿ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.