ಕನ್ನಡದ “ಪರ್ಲ್ ಬಕ್‌’ ಲಲಿತಾ ರೈ

ಹಿರಿಯ ಲೇಖಕಿಯೊಂದಿಗೆ ಈ ದಿನ

Team Udayavani, Jan 3, 2020, 4:46 AM IST

5

1940ರ ಆಸುಪಾಸಿನಲ್ಲಿ ಭಾರತವು ಅತ್ಯಂತ ದಾರುಣ ಪರಿಸ್ಥಿತಿಯನ್ನು ಎದುರಿಸುತ್ತಿತ್ತು, ಸಮಾಜದ ತುಂಬ ಅನಕ್ಷರತೆ, ಅಜ್ಞಾನ, ಮೂಢನಂಬಿಕೆಗಳಿದ್ದವು, ದಾರಿದ್ರ್ಯ, ಬರಗಾಲ, ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಜನರು ತತ್ತರಿಸಿಹೋಗಿದ್ದರು. ಈ ತಲ್ಲಣಗಳ ನಡುವೆ ಮಹಿಳೆಯರ ಜೀವನವು ಅತಂತ್ರವಾಗಿತ್ತು. ಸಮಾಜದ ಮುಖ್ಯ ಅಂಗವೇ ಆಗಿದ್ದ ಸ್ತ್ರೀಯರಿಗೆ ಶಾಲಾ ಶಿಕ್ಷಣವು ಸುಲಭವಾಗಿರಲಿಲ್ಲ. ಅಡುಗೆ ಮನೆಯೊಳಗೆ ಬಂಧಿಯಾದ ಆಕೆಯ ಕನಸು-ಕಲ್ಪನೆ, ಆಸೆ-ಆಕಾಂಕ್ಷೆಗಳು ಒಲೆಗಿಟ್ಟ ಸೌದೆಯಂತೆ ಉರಿದು ಹೋಗುತ್ತಿತ್ತು. ಇಂತಹ ಸನ್ನಿವೇಶದಲ್ಲಿ ಶಾಲಾ ಶಿಕ್ಷಣವನ್ನು ಪಡೆದು, ಕಥೆಗಾರ್ತಿಯಾಗಿ, ಶಿಕ್ಷಕಿಯಾಗಿ ಗುರುತಿಸಿಕೊಂಡ, ಹೋರಾಟದ ಮೂಲಕವೇ ತಮ್ಮ ಅಸ್ಮಿತೆಯನ್ನು ಹುಡುಕಿಕೊಂಡ ಅಪರೂಪದ ವ್ಯಕ್ತಿಯೇ ಲಲಿತಾ ರೈ. ಸ್ವಾತಂತ್ರ್ಯ ಪೂರ್ವಕಾಲದಲ್ಲೇ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದವರು. ಸ್ವಾತಂತ್ರ್ಯ ಚಳುವಳಿಯಿಂದ ಹಿಡಿದು ಪ್ರಸಕ್ತ ರಾಜಕೀಯ, ಸಾಮಾಜಿಕ ಸನ್ನಿವೇಶಗಳ ಬಗ್ಗೆಯೂ ನಿಖರವಾಗಿ ಮಾತನಾಡಬಲ್ಲವರು. ಇವರ ಕೃತಿಗಳೇ ಅವರ ದಿಟ್ಟ ನಿಲುವಿಗೆ ಸಾಕ್ಷಿಯಾಗಿವೆ. ಅವರೊಂದಿಗಿನ ಮಾತುಕತೆಯ ಆಯ್ದ ಭಾಗ…
.
ಸ್ವಾತಂತ್ರ್ಯ ಪೂರ್ವಕಾಲದಿಂದಲೇ ತಾವು ಬರೆಯ ತೊಡಗಿದವರು. ನಿಮ್ಮ ಈ ಸಾಹಿತ್ಯಾಸಕ್ತಿಗೆ ಪ್ರೇರಣೆ ಏನು? ನಿಮ್ಮ ಬಾಲ್ಯ, ವಿದ್ಯಾಭ್ಯಾಸ, ಸಾಹಿತ್ಯ ಚಟುವಟಿಕೆಗಳ ಬಗ್ಗೆ ತಿಳಿಸುವಿರಾ?
ನಾನು ಹುಟ್ಟಿದ್ದು 1928 ಆಗಸ್ಟ್‌ 22ರಂದು. ತಂದೆತಾಯಿಗೆ ನಾನು ಒಬ್ಬಳೇ ಮಗಳು. ಅಪ್ಪನಿಗೆ ನನ್ನನ್ನು ವಿದ್ಯಾವಂತೆಯನ್ನಾಗಿ ಮಾಡಬೇಕು ಎನ್ನುವ ಆಸೆ ಇತ್ತು. ಆ ಕಾರಣಕ್ಕೆ ನನ್ನನ್ನು ಬೆಸೆಂಟ್‌ ಶಾಲೆಗೆ ಸೇರಿಸಿದರು. ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿದ್ದವರು ಕಡೆಂಗೋಡ್ಲು ಶಂಕರ ಭಟ್ಟರು, ನನಗೆ ಕನ್ನಡ ಮತ್ತು ಇಂಗ್ಲೀಷ್‌ ಬಾಷೆಯಲ್ಲಿದ್ದ ಪ್ರೌಢಿಮೆಯನ್ನು ಗಮನಿಸಿ ಪತ್ರಿಕಾ ಸುದ್ದಿಗಳನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಿಸಿಕೊಡುವಂತೆ ಹೇಳುತ್ತಿದ್ದರು. ಎಳವೆಯಲ್ಲಿಯೇ ದೊರೆತ ಈ ಅವಕಾಶವು ನನ್ನ ಬೆಳವಣಿಗೆಗೆ ತುಂಬಾ ಸಹಾಯಕವಾಯಿತು. ಸಾಹಿತ್ಯಲೋಕಕ್ಕೆ ಬರಲು ಇದು ಪ್ರಚೋದಕವಾಯಿತು. ಮುಂದೆ ಪಿಯುಸಿ ವಿದ್ಯಾಭ್ಯಾಸವನ್ನು ಸೈಂಟ್‌ ಆಗ್ನೆಸ್‌ನಲ್ಲಿ ಮುಗಿಸಿದೆ. ಬಿಎ ಪದವಿಯನ್ನು ಸರಕಾರಿ ಕಾಲೇಜಿನಲ್ಲಿ ಪಡೆದೆ. ಆಗ ಅದು ಎರಡು ವರ್ಷಗಳ ಅವಧಿಯದಾಗಿತ್ತು.

ನೀವು ಪಿಯುಸಿಯ ಲ್ಲಿರುವಾಗಲೇ ಕಥೆಗಾರ್ತಿಯಾಗಿ ಗುರುತಿಸಿಕೊಂಡಿದ್ದೀರಿ. ರಾಷ್ಟ್ರಬಂಧು, ಪ್ರಜಾಮತ, ಸ್ವದೇಶಾಭಿಮಾನಿಯಂತಹ ಪತ್ರಿಕೆಗಳಲ್ಲಿಯೂ ನಿಮ್ಮ ಕಥೆಗಳು ಪ್ರಕಟವಾಗಿದ್ದವು. ಇದಕ್ಕೆ ಪೂರಕವಾದ ವಾತಾವರಣ ನಿಮ್ಮ ಪರಿಸರದಲ್ಲಿತ್ತೇ?
-ಮನೆಯಲ್ಲಿ ಅಪ್ಪ-ಅಮ್ಮನಿಗೆ ಆತಂಕ ಇತ್ತು. ಅವರ ಕಣ್ಗಾವಲಲ್ಲೇ ನನ್ನ ಬರವಣಿಗೆ, ಪತ್ರಿಕೆಗಳಿಗೆ ಕಳುಹಿಸುವುದು ನಡೆಯುತ್ತಿತ್ತು. ಆ ಕಾಲವೇ ಹಾಗಿತ್ತು. ಆದರೂ ನನ್ನ ಆಸಕ್ತಿ- ಅಭಿರುಚಿಗೆ ಅವರೆಂದೂ ಅಡ್ಡಿ ಬರಲಿಲ್ಲ. ಜೊತೆಗೆ ಕೆಲವು ಸಾಹಿತ್ಯಾಭಿರುಚಿ ಇರುವ ಸಮಾನ ಮನಸ್ಕರ ಪರಿಚಯವಾಯಿತು. ಅದೊಂದು ಸಾಹಿತ್ಯ ಕೂಟ ಅಂತಲೇ ಹೇಳಬಹುದು. ಅವರಲ್ಲಿ ಕುಲ್ಕುಂದ ಶಿವರಾಯರು ನನ್ನ ಬರವಣಿಗೆಯನ್ನು ತಿದ್ದಿದವರು, ನನ್ನ ಸಾಹಿತ್ಯದ ಗುರು ಅಂತಲೇ ಹೇಳಬಹುದು, ಇನ್ನೂ ಬಿ. ವಿ. ಕಕ್ಕಿಲ್ಲಾಯರು, ನಿರಂಜನರು, ಪಿ. ಕೆ. ನಾರಾಯಣರು, ಸುಂದರಿಯವರು, ಸದಾಶಿವರು- ಹೀಗೆ ಕೆಲವರು ಸಭೆ ಸೇರಿ ಚರ್ಚೆ, ವಿಮರ್ಶೆ ನಡೆಸುತ್ತಿ ವು. ಓದಿದ ಪುಸ್ತಕಗಳ ಬಗ್ಗೆ, ದೇಶದ ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಿದ್ದೆವು. ಇದು ಕೂಡ ನನ್ನನ್ನು ಬೆಳೆಸಿತು.

ಬರವಣಿಗೆಯ ಕ್ಷೇತ್ರದಲ್ಲಿ ಗುರುತರವಾದ ಸಾಧನೆಯನ್ನು ಮಾಡಿರುವ ನೀವು ಓದುವಿಕೆಯಲ್ಲೂ ಆಸಕ್ತರಿರಬಹುದು. ನಿಮ್ಮ ನೆಚ್ಚಿನ ಸಾಹಿತಿ, ಸಾಹಿತ್ಯ ಕೃತಿಗಳು ಈ ಬಗ್ಗೆ ಹೇಳುವಿರಾ?
-ಇಂಗ್ಲಿಷ್‌ನ ಎಲ್ಲ ಪ್ರಸಿದ್ಧ ಸಾಹಿತಿಗಳ ಕೃತಿಗಳನ್ನು ಓದಿದ್ದೇನೆ. ಕನ್ನಡದಲ್ಲೂ ಆ ಕಾಲದಲ್ಲಿ ಪ್ರಚಲಿತದಲ್ಲಿದ್ದವರೆಲ್ಲರ ಸಾಹಿತ್ಯವನ್ನೂ ಓದುತ್ತಿದ್ದೆ. ಇದರ ಜೊತೆಗೆ ಪುಸ್ತಕಗಳನ್ನು ಸಂಗ್ರಹಿಸುವ ಹವ್ಯಾಸವೂ ಇತ್ತು. ಹಲವಾರು ಭಾಷೆಯ ನಿಘಂಟುಗಳ ಸಂಗ್ರಹವೂ ನನ್ನಲ್ಲಿತ್ತು. ನಾನು ಪದ್ಯಗಳನ್ನು ಓದಿದ್ದು ಕಡಿಮೆ. ನನಗ್ಯಾಕೋ ಅದು ಒಗ್ಗಲಿಲ್ಲ. ಬರೆಯಲೂ ಪ್ರಯತ್ನಿಸಲಿಲ್ಲ. ಭಾವನೆಗಳನ್ನು ತಿಳಿದು ಸಹಜವಾಗಿ ಬರೆಯಬೇಕು, ಒತ್ತಾಯದಿಂದ ಬರೆಯುವುದು ಪದ್ಯವಾಗಲಾರದು. ಕಿರಿದರಲ್ಲಿ ವಿಸ್ತಾರವಾದುದನ್ನು ಹೇಳುವುದು ಸುಲಭವಲ್ಲ. ಹಾಗಾಗಿ, ನಾನು ಕಥಾಪ್ರಕಾರಕ್ಕೆ ಹೊಂದಿಕೊಂಡೆ.

ಹೆಣ್ಣು ಮಗಳ ಬದುಕಿನಲ್ಲಿ ವಿವಾಹವು ಒಂದು ಮುಖ್ಯ ಘಟ್ಟ. ಸಂಸಾರ ಮತ್ತು ಸಾಹಿತ್ಯಗಳನ್ನು ನೀವು ಸರಿದೂಗಿಸಿಕೊಂಡು ಹೋದ ಬಗೆ ಎಂತು?
-ಪದವಿಯ ನಂತರ ಪುತ್ತೂರಿನ ರಘುನಾಥ ರೈ ಅವರ ಜೊತೆ ನನ್ನ ವಿವಾಹ ನಡೆಯಿತು. ಕೃಷಿಭೂಮಿ, ವ್ಯಾಪಾರ ಇವೆಲ್ಲ ಇದ್ದ ಶ್ರೀಮಂತ ಕುಟುಂಬ. ಆಗ ತುಳುನಾಡಿನಲ್ಲಿ ಕಾಡಿಗೆ ಹೋಗಿ ಬೇಟೆಯಾಡುವ ಅಭ್ಯಾಸ ಕೆಲವು ಮನೆತನಗಳಲ್ಲಿ ಇತ್ತು. ನನ್ನ ಗಂಡನಿಗೂ ಬೇಟೆಯಾಡುವುದರಲ್ಲಿ ತುಂಬಾ ಆಸಕ್ತಿ ಇತ್ತು. ಅವರ ಜೊತೆ ನಾನೂ ಜೀಪ್‌ ಹತ್ತಿ ಹೋದದ್ದಿದೆ. ಆ ಅನುಭವದಿಂದಲೇ ಬೋಂಟೆ ದೇರ್‌ಂಡ್‌ ಅನ್ನುವ ತುಳು ಕಾದಂಬರಿ ಬರೆದೆ. ನಾನು ಸೇರಿದ ಮನೆಯಲ್ಲಿ ಸಾಹಿತ್ಯಕ್ಕೆ ಅಂತಹ ಪ್ರೋತ್ಸಾಹವೇನೂ ಇರಲಿಲ್ಲ, ವಿರೋಧ ಅಂತ ಅಲ್ಲ, ಅವರಿಗೆ ಸಾಹಿತ್ಯದ ಬಗ್ಗೆ ತಿಳಿದಿರಲಿಲ್ಲ. ದೊಡ್ಡ ಮನೆತನವಾಗಿದ್ದುದರಿಂದ ನನಗೆ ಬರೆಯುವುದು ಸಾಧ್ಯವೂ ಆಗಲಿಲ್ಲ. ಆದರೆ, ಆಗ ಶಿವರಾಮ ಕಾರಂತರ, ಲೀಲಾ ಕಾರಂತರ ಆತ್ಮೀಯತೆಯು ಸಿಕ್ಕಿತ್ತು. ಅದೊಂದು ಚೆಂದದ ನೆನಪು.

ಮಕ್ಕಳು ಸಣ್ಣವರಿದ್ದಾಗ ಆರ್ಥಿಕವಾಗಿ ತೀವ್ರವಾದ ತೊಂದರೆಯನ್ನು ಅನುಭವಿಸಬೇಕಾಯಿತು. ಮಕ್ಕಳ ಭವಿಷ್ಯಕ್ಕಾಗಿ ನಾನು ಏನಾದರೂ ಮಾಡಲೇಬೇಕಿತ್ತು. ತಂದೆಯೂ ತೀರಿಕೊಂಡಿದ್ದರಿಂದ ಅನಾರೋಗ್ಯದಿಂದಿದ್ದ ವೃದ್ಧ ತಾಯಿಯನ್ನು ನೋಡಿಕೊಳ್ಳುವ ಹೊಣೆಯೂ ನನ್ನ ಮೇಲೆ ಇತ್ತು. ಹಾಗಾಗಿ, ಮತ್ತೆ ಮಂಗಳೂರಿಗೆ ಬಂದೆ. ಆ್ಯಗ್ನೆಸ್‌ನಲ್ಲಿ ನಾನು ಓದುತ್ತಿದ್ದಾಗ ಅಲ್ಲಿದ್ದ ಸಿಸ್ಟರ್‌ ಹೆಡ್‌ವಿಲ್‌ ಅನ್ನುವವರನ್ನು ಭೇಟಿಯಾದೆ, ಅವರು ತುಂಬಾ ಸಹಾಯ ಮಾಡಿದರು. ಪದವಿ ಸರ್ಟಿಫಿಕೇಟ್‌ ಕೂಡ ನನ್ನಲ್ಲಿರಲಿಲ್ಲ. ಅವರೇ ಅದನ್ನೆಲ್ಲ ಹೊಂದಿಸಿ ನನ್ನನ್ನು ಸೈಂಟ್‌ ಆ್ಯನ್ಸ್‌ ನಲ್ಲಿ ಬಿಎಡ್‌ ಪದವಿಗೆ ಸೇರಿಸಿದರು. ಮಕ್ಕಳ ವಿದ್ಯಾಭ್ಯಾಸಕ್ಕೂ ವ್ಯವಸ್ಥೆ ಮಾಡಿದರು. ಮುಂದೆ ಕೆನರಾ ಹೈಸ್ಕೂಲಿನಲ್ಲಿ ಶಿಕ್ಷಕಿಯಾಗಿ ಸೇರಿದೆ. 15 ವರ್ಷಗಳ ಕಾಲ ದುಡಿದು ನಿವೃತ್ತಳಾದೆ. ನನ್ನ ಬದುಕಿನ ಕಷ್ಟದ ದಿನಗಳಲ್ಲಿ ನೆರವಿಗೆ ನಿಂತ ಸಿಸ್ಟರ್‌ ಹೆಡ್‌ವಿಗ್‌ ಮತ್ತು ಸಾಹಿತಿ ಅನುಪಮಾ ನಿರಂಜನರ ಋಣವನ್ನು ನನಗೆ ಯಾವ ಜನ್ಮದಲ್ಲೂ ತೀರಿಸಲು ಸಾಧ್ಯವಿಲ್ಲ. ಜೀವನದ ಅತ್ಯಂತ ಕಷ್ಟದ ಆ ದಿನಗಳಲ್ಲಿ ನಾನು ಬರೆಯಲಿಲ್ಲ, ಬದುಕಿನ ಬವಣೆಗಳು ಅದಕ್ಕೆ ಆಸ್ಪದವೀಯಲಿಲ್ಲ.

ಒಂದಷ್ಟು ಕಾಲ ಸಾಹಿತ್ಯದಿಂದ ದೂರ ಉಳಿದಿದ್ದ ನೀವು ಮತ್ತೆ ಬರೆಯಲು ಆರಂಭಿಸಿದ್ದು ಯಾವಾಗ? ನಿಮ್ಮ ಕೃತಿಗಳ ಬಗ್ಗೆ ಹೇಳಬಹುದೆ?
-ವಿವಾಹ, ಸಂಸಾರ ನಿರ್ವಹಣೆಯ ಹೊಣೆಯೊಳಗೆ ಒಂದಷ್ಟು ಕಾಲ ಸ್ತಬ್ಧವಾಗಿದ್ದರೂ, ಬರೆಯುವ ತುಡಿತವಿತ್ತು, ಓದುವುದನ್ನು ನಿಲ್ಲಿಸಿರಲಿಲ್ಲ. ಬದುಕು ಒಂದು ಹಳಿಗೆ ಬಂದ ಮೇಲೆ ಕರಾವಳಿ ಲೇಖಕಿ-ವಾಚಕಿಯರ ಸಂಘದ ಒಡನಾಟ ಸಿಕ್ಕಿತು. ಆ ಸಂಘಟನೆಯ ಸಭೆ-ಸಮಾರಂಭಗಳಿಗೆ ಪ್ರೇಕ್ಷಕಳಾಗಿ ಹೋಗುತ್ತಿದ್ದೆ. ಒಮ್ಮೆ ಸಭೆ ನಡೆದಾಗ ಅಧ್ಯಕ್ಷೆ ಒಂದು ಮಾತು ಹೇಳಿದರು; ಲಲಿತಾ ರೈ ಅನ್ನುವ ಹಿರಿಯ ಕಥೆಗಾರ್ತಿಯೊಬ್ಬರು ಮಂಗಳೂರಿನಲ್ಲಿ ಇದ್ದರಂತೆ, ಈಗೆಲ್ಲಿ¨ªಾರೋ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ಇದ್ದರೆ ತಿಳಿಸಿ ಎಂದರು. ಆಗ ನಾನು, “ಇಲ್ಲಿದ್ದೇನೆ’ ಎಂದೆ. ಅಲ್ಲಿಯವರೆಗೂ ಹಿಂದೆ ಕಥೆ ಬರೆಯುತ್ತಿದ್ದ ಲಲಿತಾ ರೈ ನಾನೇ ಅಂತ ಅವರ್ಯಾರಿಗೂ ತಿಳಿದಿರಲಿಲ್ಲ. ಆ ಗೆಳತಿಯರ ಒತ್ತಾಸೆಯಿಂದ ಮತ್ತೆ ಬರೆಯತೊಡಗಿದೆ.

ಸಾಮಾಜಿಕ ಸೇವೆಯಲ್ಲೂ ನೀವು ತೊಡಗಿಸಿಕೊಂಡಿದ್ದೀರಿ. ಆ ಅನುಭವವನ್ನು ನಮ್ಮ ಜೊತೆ ಹಂಚಿಕೊಳ್ತೀರಾ?
-ಮಂಗಳೂರಿನಲ್ಲಿ ಇದ್ದಾಗ ಭಗಿನಿ ಸಮಾಜದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೆ. ಎಐಡಬ್ಲ್ಯು ಸಂಘಟನೆಯ ಜೊತೆ ಸೇರಿ ಅನಾಥ ಮಕ್ಕಳ ಶ್ರೇಯಸ್ಸಿಗಾಗಿ ದುಡಿದದ್ದು ಸಂತೋಷ ಕೊಟ್ಟಿದೆ. ಹೀಗೆ ಕೆಲವೊಂದು ಸಂಘಟನೆಗಳ ಜೊತೆ ಬೇರೆ ಬೇರೆ ಸಾಮಾಜಿಕ ಸೇವೆಯಲ್ಲಿ ಸೇರಿ ದುಡಿದದ್ದಿದೆ.

ಅಮ್ಮ, ದೇವರ ಬಗ್ಗೆ ನಿಮ್ಮ ನಿಲುವು ಏನು? ಜೀವನಕ್ಕೆ ಭಕ್ತಿ ಆಧಾರವಾಗ್ತದೆ ಅನ್ನಿಸುತ್ತದಾ?
-ಏನು ಹೇಳಲಿ, ದೇವರು ಇದ್ದಾನೆ ಎಂದರೆ ಇದ್ದಾನೆ, ಇಲ್ಲ ಎಂದರೆ ಇಲ್ಲ. ನಾಸ್ತಿಕ ಮತ್ತು ಆಸ್ತಿಕ ಪಂಥಗಳೇನೇ ಹೇಳಿದರೂ ಚೆನ್ನಾಗಿ ಬದುಕಲು ನಾವು ಮಾಡುವ ಪ್ರಯತ್ನವೇ ನಮಗೆ ಮುಖ್ಯ. ನಾವು ಹೇಗೆ ಬಾಳುತ್ತಿದ್ದೇವೆ, ನಮ್ಮ ಗುಣ-ಸ್ವಭಾವವೇನು ಎನ್ನುವುದೇ ನಮಗೆ ಆಧಾರ.
.
ಲಲಿತಾ ರೈ ಅವರು ಹಲವಾರು ಕಥೆ, ಕಾದಂಬರಿಗಳನ್ನು ಬರೆದಿದ್ದಾರಾದರೂ ಅವುಗಳಲ್ಲಿ ಕೆಲವಷ್ಟೇ ಈಗ ಲಭ್ಯವಿದೆ. 1947ರ ಸುಮಾರಿಗೆ ಬರೆದ ಕೆಲವು ಕಥೆಗಳನ್ನು ಮತ್ತೆ ಬೆಳಗಿತು, ಸೊಡರು ಎಂಬ ಕಥಾಸಂಕಲನದಲ್ಲಿ ಕಾಣಬಹುದಾಗಿದೆ. ಹೀಗೆಯೇ ತ್ರಿವೇಣಿ ಪುರಸ್ಕಾರ ಪಡೆದ ಇಂಟರ್ನೆಟ್‌ ಒಳಗೆ ಮತ್ತು ಇತರ ಕಥೆಗಳು, ಗ್ರಹಣ ಕಳೆಯಿತು ಎಂಬ ಕಥಾ ಸಂಕಲನವು ಕೂಡ ಸಾಹಿತ್ಯ ಲೋಕದಲ್ಲಿ ಅನನ್ಯತೆಯನ್ನು ಉಳಿಸಿಕೊಳ್ಳುವ ಕೃತಿಗಳಾಗಿವೆ. ಕನ್ನಡದಲ್ಲಿ ಬರೆದಿರುವಂತೆಯೇ ತಮ್ಮ ತಾಯ್ನುಡಿ ತುಳುವಿನಲ್ಲಿಯೂ ಇವರು ಕೃತಿ ರಚನೆಯನ್ನು ಮಾಡಿದ್ದಾರೆ. ಕುಲೆ ಪತ್ತುನಾ ಉಡಲುರ್ಕುನಾ? ಎಂಬ ಕಥಾ ಸಂಕಲನ, ಪಣಿಯಾಡಿ ಪ್ರಶಸ್ತಿ ಪಡೆದ ದೇಸಾಂತರ ಎಂಬ ತುಳು ಕಾದಂಬರಿ, ಬೋಂಟೆ ದೇರ್‌ಂಡ್‌ ಎಂಬ ಬೇಟೆಯ ಸುತ್ತ ಹೆಣೆದಿರುವ ಅಪರೂಪದ ತುಳು ಕಾದಂಬರಿಗಳು ಪ್ರಕಟವಾಗಿವೆ. ಇದರ ಜೊತೆಗೆ ಚಿತ್ತಗಾಂಗಿನ ಕ್ರಾಂತಿವೀರರು ಎಂಬ ಅನುವಾದಿತ ಕೃತಿಯನ್ನೂ ರಚಿಸಿದ್ದಾರೆ.

ಲಲಿತಾ ರೈ ಅವರ ಈ ಶೈಲಿಯನ್ನು ಗಮನಿಸಿಯೇ 1947ರ ಸಾಹಿತ್ಯ ಲೋಕ ಅವರನ್ನು ಕನ್ನಡದ ಪರ್ಲ್ ಬಕ್‌ ಎಂದು ಕರೆದಿದ್ದರಂತೆ.
92ರ ಹರೆಯದ ಲಲಿತಾ ರೈ ಮಂಗಳೂರು- ಬಳ್ಳಾಲ್‌ ಬಾಗ್‌ ಬಳಿಯ ಫ್ಲ್ಯಾಟ್‌ ಒಂದರಲ್ಲಿ ವಾಸವಾಗಿದ್ದಾರೆ. ಅವರಿಗೆ ನಾಲ್ಕು ಮಂದಿ ಮಕ್ಕಳು; ಗಾಯತ್ರಿ, ಚಿತ್ರಾ, ಕೃಪಾ ಮತ್ತು ಜಿತೇಂದ್ರ ಮೋಹನ. ಗಾಯತ್ರಿ ಮತ್ತು ಚಿತ್ರಾರನ್ನು ಇತ್ತೀಚೆಗೆ ಕಳೆದುಕೊಂಡಿದ್ದಾರೆ. ಜಿತೇಂದ್ರ ಮೋಹನ ಅಮೆರಿಕದಲ್ಲಿ ಡಾಕ್ಟರ್‌ ಆಗಿದ್ದಾರೆ. ಕೃಪಾ ಇಳಿವಯಸ್ಸಿನಲ್ಲಿ ತಾಯಿಗೆ ಆಸರೆಯಾಗಿದ್ದಾರೆ.

ಅಮೆರಿಕದ ಖ್ಯಾತ ಬರಹಗಾರ್ತಿ ಪರ್ಲ್ ಎಸ್‌. ಬಕ್‌ ಅವರ ಹೆಸರನ್ನು ಕೇಳದವರಿಲ್ಲ. ಮಂಗಳೂರಿನ ಲಲಿತಾ ರೈ ಕನ್ನಡದ ಪರ್ಲ್ ಬಕ್‌ಎಂಬ ಬಿರುದಿಗೆ ಪಾತ್ರರಾದವರು. ಕನ್ನಡದಲ್ಲಿಯೂ ತುಳುವಿನಲ್ಲಿಯೂ ಅನೇಕ ಕೃತಿಗಳನ್ನು ಬರೆದ ಅವರಿಗೆ ಈಗ 92 ಹರೆಯ.
ಲಲಿತಾ ರೈ ಅವರ ಕೃತಿಗಳನ್ನು ಓದಿ ಅಭಿನಂದಿಸೋಣ…
ದೂರವಾಣಿ ಸಂಖ್ಯೆ : 0824 2496155

ಕವಿತಾ ಅಡೂರು

ಟಾಪ್ ನ್ಯೂಸ್

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

4(1

Snuff: ನಶ್ಯ ತಂದಿಟ್ಟ ಸಮಸ್ಯೆ

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

15-

Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

4(1

Snuff: ನಶ್ಯ ತಂದಿಟ್ಟ ಸಮಸ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.