ಮತ್ತೆ ಕರೀನಾ!
Team Udayavani, Feb 1, 2019, 12:30 AM IST
ಚಿತ್ರರಂಗದಲ್ಲಿ ನಾಯಕ ನಟರಿಗಿಂತ, ನಾಯಕ ನಟಿಯರಿಗೆ ಭವಿಷ್ಯ ಕಡಿಮೆ. ಸುದೀರ್ಘ ಅವಧಿಯಲ್ಲಿ ಒಂದೇ ಥರದ ಬೇಡಿಕೆಯನ್ನು ಉಳಿಸಿಕೊಂಡ ನಾಯಕಿಯರ ಸಂಖ್ಯೆ ವಿರಳ. ಇನ್ನು ಬಾಲಿವುಡ್‌ನಲ್ಲಿ ನಾಯಕಿಯರಿಗೆ ಮದುವೆಯಾದ ಮೇಲೆ, ಅದರಲ್ಲೂ ಮಕ್ಕಳಾದ ಮೇಲೆ ಇರುವ ಬೇಡಿಕೆಯೂ ಕಡಿಮೆಯಾಗುತ್ತದೆ ಅನ್ನೋದು ಚಾಲ್ತಿಯಲ್ಲಿರುವ ಮಾತು. ಆದರೆ, ಈ ಮಾತು ಕರೀನಾ ಕಪೂರ್ ವಿಷಯದಲ್ಲಿ ಮಾತ್ರ ಹುಸಿಯಾಗುತ್ತಿದೆ. ನೀವು ನಂಬಿದ್ರೆ ನಂಬಿ! ಮದುವೆಯಾಗಿ, ಮಗುವಾದ ನಂತರವೂ ಕರೀನಾಗೆ ಬಾಲಿವುಡ್‌ನಲ್ಲಿ ಬೇಡಿಕೆ ಕಡಿಮೆಯಾಗಿಲ್ಲ ಎನ್ನುತ್ತಿವೆ ಬಾಲಿವುಡ್ ಮೂಲಗಳು. ಅದಕ್ಕೊಂದು ತಾಜಾ ಉದಾಹರಣೆ ಇತ್ತೀಚೆಗೆ ಸೆಟ್ಟೇರಿರುವ ಗುಡ್ ನ್ಯೂಸ್ ಸಿನಿಮಾ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್‌ಗೆ ನಾಯಕಿಯಾಗಿ ಕರೀನಾ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನು ಈ ಚಿತ್ರದ ಪಾತ್ರವನ್ನು ಕರೀನಾ ಅವರಿಂದಲೇ ಮಾಡಿಸಬೇಕು ಎಂದುಕೊಂಡಿದ್ದ ಚಿತ್ರತಂಡ ಸುಮಾರು ಎರಡು ವರ್ಷ ಕರೀನಾಗಾಗಿ ಕಾದು ಬಳಿಕ ಈ ಸಿನಿಮಾವನ್ನು ಮಾಡುತ್ತಿದೆಯಂತೆ. ಸುಮಾರು ಹತ್ತು ವರ್ಷಗಳ ಹಿಂದೆ ತೆರೆಕಂಡಿದ್ದ ಕಂಬಕ್¤ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಕರೀನಾ ಮತ್ತು ಅಕ್ಷಯ್ ಕುಮಾರ್ ಜೋಡಿ ಈಗ ಮತ್ತೆ ಗುಡ್ ನ್ಯೂಸ್ ಚಿತ್ರದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದೆ. ಸದ್ಯ ಕಳೆದ ಜನವರಿ 20ರಿಂದ ಚಿತ್ರದ ಶೂಟಿಂಗ್ ಆರಂಭವಾಗಿದ್ದು, ಎರಡು ಜನರೇಷನ್ ಪ್ರೇಮಿಗಳ ನಡುವಿನ ಲವ್ ಕಂ ಸೆಂಟಿಮೆಂಟ್ ಕಥಾಹಂದರವಿರುವ ಈ ಚಿತ್ರಕ್ಕೆ ರಾಜ್ ಮೆಹ್ತಾ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಈ ಚಿತ್ರವನ್ನು ಕರಣ್ ಜೋಹರ್ ನಿರ್ಮಿಸುತ್ತಿದ್ದು, ಮುಂಬರುವ ಸೆಪ್ಟೆಂಬರ್ ವೇಳೆಗೆ ಈ ಸಿನಿಮಾ ತೆರೆಗೆ ಬರಲಿದೆ. ಮತ್ತೂಂದೆಡೆ ರಾಜಕೀಯ ವಲಯದಲ್ಲೂ ಕರೀನಾಗೆ ಭರ್ಜರಿ ಡಿಮ್ಯಾಂಡ್ ಇದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭೂಪಾಲ್ ಲೋಕಸಭಾ ಕ್ಷೇತ್ರದಿಂದ ಕರೀನಾ ಕಪೂರ್‌ಗೆ ಟಿಕೆಟ್ ಕೊಡಲು ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿತ್ತು ಎನ್ನಲಾಗಿದೆ. ಕರೀನಾ ಕೂಡ ರಾಜಕೀಯಕ್ಕೆ ಧುಮುಕುತ್ತಾರೆ ಎಂದು ಎಲ್ಲರೂ ಭಾವಿಸಿರುವಾಗಲೇ, ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಕರೀನಾ, “”ನಾನು ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನನ್ನ ಗುರಿ ಏನಿದ್ದರೂ ಸಿನಿಮಾ ರಂಗ ಮಾತ್ರ” ಎಂದು ಹಲವರಿಗೆ ಅಚ್ಚರಿ ಮೂಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Narendra Modi: ನಾನು ಯಾರದ್ದೇ ಅಧಿಕಾರ ವ್ಯಾಪ್ತಿ ಅತಿಕ್ರಮಿಸಿಕೊಂಡಿಲ್ಲ: ಮೋದಿ
US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್!
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.