ಚಳಿಗಾಲದಲ್ಲಿ ಮನೆ ಬೆಚ್ಚಗಿರಲಿ
Team Udayavani, Nov 15, 2019, 5:02 AM IST
ಬೇಸಿಗೆಗಾಲದಲ್ಲಿ ತಂಪಾಗಿಯೂ ಚಳಿಗಾಲದಲ್ಲಿ ಬೆಚ್ಚಗೂ ಇಡುವ ಮನೆ ಯಾವುದು ತಿಳಿದಿದೆಯೇ? ಅದು ಮಣ್ಣಿನ ಗೋಡೆಯ ಹುಲ್ಲಿನ ಮನೆ. ಆದರೆ ಇಂದಿನ ದಿನಗಳಲ್ಲಿ ಕಾಂಕ್ರೀಟಿನ ಎತ್ತರದ ಕಟ್ಟಡದ ಗೋಡೆಗಳ ನಡುವೆ ವಾಸಿಸುವ ನಮಗೆ ಹವಮಾನದ ವೈಪರೀತ್ಯವನ್ನು ತಡೆಯಲು ಸಾಧ್ಯವಿಲ್ಲ.
ಹೀಗಾಗಿ ಬೇಸಿಗೆಗಾಲದಲ್ಲಿ ಫ್ಯಾನ್, ಎಸಿಗಳ ಮೊರೆ ಹೋದರೆ, ಚಳಿಗಾಲದಲ್ಲಿ ರೂಮ್ ಹೀಟರ್‌ಗಳನ್ನು ಬಳಸುತ್ತೇವೆ. ಚಳಿಗಾಲ ಸಮೀಪಿಸುತ್ತಿದ್ದಂತೆ ಮನೆಯನ್ನು ಹೇಗೆ ಬೆಚ್ಚಗಿರಿಸುವುದು ಹೇಗೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಬಹುದು. ಹೀಗಿರುವಾಗ ಕೆಲವೊಂದು ಸುಲಭ ಉಪಾಯದಿಂದ ನಮ್ಮ ಮನೆಯನ್ನು ಬೆಚ್ಚಗಿರಿಸಿಕೊಳ್ಳಬಹುದು.
ದಪ್ಪನೆಯ, ಭಾರದ ಪರದೆ ಅಡ್ಡಬಿಡಿ
ಚಳಿಗಾಲದಲ್ಲಿ ನಮ್ಮ ಮನೆಯ ಕಿಟಕಿ ಪರದೆಗಳನ್ನು ದಪ್ಪನೆಯ, ಭಾರದ ಮತ್ತು ಗಾಢವರ್ಣದ ಬಟ್ಟೆಯಿಂದ ಮಾಡಿದ ಪರದೆಗಳನ್ನು ಹಾಕಿ. ಇದು ಸೂರ್ಯನ ಬೆಳಕನ್ನು ಹೀರಿ ಬೆಚ್ಚಗಿರುವುದು ಮಾತ್ರವಲ್ಲದೇ ಹೊರಗಿನ ತಣ್ಣನೆಯ ಗಾಳಿ ಮನೆಯೊಳಗೆ ಬಾರದಂತೆ ತಡೆಯುತ್ತದೆ.
ಗವಾಕ್ಷಿಗಳನ್ನು ತೆರೆದಿಡಿ
ಕಿಟಕಿಯ ಮೇಲ್ಭಾಗದ ಗವಾಕ್ಷಿಗಳನ್ನು ದಿನದ ಹೊತ್ತಿನಲ್ಲಿ ತೆರೆದಿಡುವ ಮೂಲಕ ಸಾಕಷ್ಟು ಸೂರ್ಯನ ಬೆಳಕು ಮನೆಯೊಳಗೆ ಬರುವಂತೆ ಮಾಡಬೇಕು. ಇದು ಮನೆಯೊಳಗಿನ ವಾತಾವರಣವನ್ನು ಬಿಸಿ ಮಾಡಿ ರಾತ್ರಿಯಿಡೀ ಬೆಚ್ಚಗಿರಿಸಲು ಸಹಕರಿಸುತ್ತದೆ.
ಕಾರ್ಪೆಟ್ ಹಾಸಿ
ಮನೆಯ ನೆಲದ ಮೇಲೆ ದಪ್ಪನೆಯ ಮತ್ತು ಭಾರದ ರತ್ನಗಂಬಳಿಯನ್ನು ಹರಡುವ ಮೂಲಕವು ಮನೆಯನ್ನು ಬೆಚ್ಚಗಿಡಬಹುದು. ಇದು ನೆಲದ ಮಣ್ಣಿನಿಂದ ಮೇಲಕ್ಕೇರುವ ತಣ್ಣನೆಯ ತಾಪಮಾನವನ್ನು ಮನೆಯೊಳಗೆ ಬಾರದಂತೆ ತಡೆಯುತ್ತದೆ. ಆದರೆ ಈ ದುಬಾರಿ ಕಾಪೆìಟ್ ಮೇಲೆ ಹೊರಗಿನ ಪಾದರಕ್ಷೆ ಅಥವಾ ಕೊಳಕು ಪಾದಗಳಿಂದ ತುಳಿಯಬಾರದಂತೆ ಎಚ್ಚರವಹಿಸಬೇಕು.
ಮೇಣದ ಬತ್ತಿ ಹಚ್ಚಿ
ಸಂಜೆಯಾಗುತ್ತಿಂದಂತೆ ಮನೆಯ ವಿವಿಧ ಕೋಣೆಯಳಲ್ಲಿ ಒಂದೆರಡು ಮೇಣದ ಬತ್ತಿಗಳನ್ನು ಹಚ್ಚಬೇಕು. ಅವುಗಳಲ್ಲಿ ಒಂದೆರಡು ಸುವಾಸಿತ ಮೇಣದ ಬತ್ತಿ ಇದ್ದರೆ ಉತ್ತಮ. ಮೇಣದ ಬತ್ತಿ ಅಲ್ಲದೆ ಎಣ್ಣೆಯ ದೀಪವನ್ನೂ ಉಪಯೋಗಿಸಬಹುದು. ಇದು ಮನೆಯನ್ನು ಬೆಚ್ಚಗಿಡುವಲ್ಲಿ ಸಹಕರಿಸುತ್ತದೆ.
ಸೂಕ್ತ ವಿದ್ಯುತ್ ದೀಪಗಳನ್ನು ಬೆಳಗಿಸಿ
ಟ್ಯೂಬ್‌ಲೈಟ್ ಮತ್ತು ಎಲ್ಲಿಡಿ ಬಲ್ಬ್ಗಳು ಶಾಖರಹಿತ ಅಥವಾ ಕಡಿಮೆ ಶಾಖ ನೀಡುವುದರಿಂದ ಅವುಗಳ ಬದಲಿಗೆ ಸಾಂಪ್ರದಾಯಿಕ ಟಂಗ್ಸ್‌ಟನ್ ಫಿಲಮೆಂಟ್‌ಬಲ್ಬ್ಗಳು ಉಪಯೋಗಿಸಿ ಇದು ಕೋಣೆಗೆ ಬೆಳಕಿನ ಜೊತೆಗೆ ಶಾಖವನ್ನು ನೀಡುತ್ತದೆ. ಈ ಬಲ್ಬ್ಗಳಿರುವಲ್ಲಿ ಸೀಲಿಂಗ್ ಫ್ಯಾನ್ನು ನಿಧಾನಗತಿಯಲ್ಲಿ ಚಲಾಯಿಸುವ ಮೂಲಕ ಬೆಚ್ಚನೆಯ ಗಾಳಿ ಇಡಿ ಕೋಣೆಗೆ ಹರಡುವಂತೆ ಮಾಡಬಹುದು.
ಸುಲಭಾ ಆರ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.