ಖಾದಿ ಕುರ್ತಾ ಕುರ್ತಿ!
Team Udayavani, Jun 30, 2017, 3:45 AM IST
ಫ್ಯಾಷನ್ ಲೋಕವೆಂದರೆ ಒಂದು ಮಾಯಾಲೋಕ-ಆಕರ್ಷಕ. ಇಂದಿನ ಜಗತ್ತು ಎಲ್ಲದರಲ್ಲೂ ಹೊಸತನ್ನೇ ಬಯಸುತ್ತಿರುತ್ತದೆ. ಅದರಲ್ಲಿ ಉಡುವ ಬಟ್ಟೆಯೂ ಹೊರತಲ್ಲ. ಹೊಸ ಫ್ಯಾಶನ್‌ನತ್ತ ಆಕರ್ಷಿತರಾಗುವ ಜನರು ಬಟ್ಟೆಯ ಮಳಿಗೆಗೆ ಕಾಲಿಟ್ಟರೆಂದರೆ ಮೊದಲು ಹುಡುಕುವುದೇ ಹೊಸ ವಿನ್ಯಾಸದ ಮತ್ತು ವಿಧದ ಬಟ್ಟೆಗಳನ್ನು. ಹಾಗಾಗಿಯೇ ದಿನದಿಂದ ದಿನಕ್ಕೆ ಫ್ಯಾಷನ್ ಲೋಕವು ಹಲವಾರು ಪ್ರಯೋಗಗಳಿಂದ ನಿರಂತರ ಬದಲಾ ವಣೆಗೊಳಪಡುತ್ತಿರುತ್ತದೆ. ಆದ್ದರಿಂದ ಕಾಲಕ್ಕೆ ತಕ್ಕಂತೆ ಹೊಸಹೊಸ ಟ್ರೆಂಡಿಗೆ ಅಪ್‌ಡೇಟ್ ಆಗುವುದೂ ಒಂದು ಕಲೆ.
ಇಂದು ಮಾರುಕಟ್ಟೆಯಲ್ಲಿ ಹಲವಾರು ವಿಧವಾದ ಬಟ್ಟೆಗಳಿಂದ ತಯಾರಾದ ಉಡುಪುಗಳು ದೊರೆಯುತ್ತವೆ. ಇವುಗಳಲ್ಲಿ ಹೆಚ್ಚಿನವು ಕಾರ್ಖಾನೆಗಳಲ್ಲಿ ತಯಾರಾಗುವಂತದ್ದು. ಇವುಗಳ ನಡುವೆ ಒಂದಷ್ಟು ಕಾಲ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡಿ ಈಗ ಟ್ರೆಂಡಿ ಬಟ್ಟೆಗಳಾಗಿ ಎಲ್ಲರಿಂದ ಮೆಚ್ಚುಗೆಗೆ ಪಾತ್ರವಾಗಿರುವುದು ಖಾದಿ ಬಟ್ಟೆಗಳಿಂದ ತಯಾರಾದ ಉಡುಪುಗಳು. ಇವುಗಳಿಂದ ಕೇವಲ ಉಡುಪುಗಳಷ್ಟೇ ಅಲ್ಲದೆ ಬ್ಯಾಗುಗಳು, ಪರ್ಸುಗಳು, ಸೀರೆಗಳು, ಮೊಬೈಲ್ ಪೌಚುಗಳು, ಸೈಡ್ ಬ್ಯಾಗುಗಳು, ವೇಸ್ಟ್ ಕೋಟುಗಳು, ಪುರುಷರ ಶರ್ಟುಗಳು ಇತ್ಯಾದಿ ಹತ್ತು ಹಲವಾರು ಉತ್ಪನ್ನಗಳು ಮಾರುಕಟ್ಟೆಗೆ ಬಂದು ಪ್ರಖ್ಯಾತಗೊಳ್ಳುತ್ತಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಗಮನಿಸೋಣ.
ಮಹಿಳೆಯರ ಉಡುಪುಗಳು
ಖಾದಿ ಸೀರೆಗಳು
ಅನೇಕ ಬಗೆಯ ಆಧುನಿಕ ಉಡುಗೆಗಳ ನಡುವೆಯೂ ಸೀರೆಯು ತನ್ನ ಸಾಂಪ್ರದಾಯಿಕ ಸ್ಥಾನಮಾನಗಳನ್ನು ಉಳಿಸಿಕೊಂಡು ಮಿಂಚುತ್ತಲೇ, ಮಹಿಳೆಯ ಅಂದವನ್ನು ಹೆಚ್ಚಿಸಲು ಸಹಾಯ ಮಾಡುತ್ತಲೇ ಇರುತ್ತದೆ. ಅಂತಹ ಸೀರೆಗಳು ಹಲವಾರು ಬಟ್ಟೆಗಳಲ್ಲಿ ಲಭಿಸುತ್ತವೆ. ಜಾರ್ಜೆಟ್, ಶಿಫಾನ್, ಸಾದಾ ಕಾಟನ್, ರೇಷ್ಮೆ, ಚೈನಾಸಿಲ್ಕ್, ಟೆರಿಕಾಟ್ ಮತ್ತು ಖಾದಿ ಸೀರೆಗಳು. ಈ ಖಾದಿ ಸೀರೆಗಳು ಇಂದು ವಿದೇಶೀಯರಿಂದಲೂ ಆಕರ್ಷಿಸಲ್ಪಡುತ್ತಿದೆ ಎಂಬುದಕ್ಕೆ ಅನೇಕ ಉದಾಹರಣೆಗಳು ಕಾಣಸಿಗುತ್ತವೆ. ಈ ಬಗೆಯ ಸೀರೆಗಳು ತೊಡಲು ಬಹಳ ಆರಾಮದಾಯಕವಾಗಿರುತ್ತದೆ ಮತ್ತು ಬೇಸಿಗೆಯಲ್ಲಿ ಧರಿಸಲು ಸೂಕ್ತವಾದುದಾಗಿರುತ್ತವೆ. ಖಾದಿ ಸೀರೆಗಳೊಂದಿಗೆ ಬಂಜಾರ ಜ್ಯುವೆಲ್ಲರಿಗಳು ಅಥವಾ ಆ್ಯಂಟಿಕ್ ಆಭರಣಗಳನ್ನು ಧರಿಸುವುದರಿಂದ ಬಹಳ ಎಲಿಗೆಂಟ್ ಆಗಿ ಕಾಣಬಹುದು. ಸ್ಟೈಲಿಶ್ ಮತ್ತು ಟ್ರೆಂಡಿ ಲುಕ್ಕನ್ನು ಕೊಡುತ್ತವೆ. ಇವುಗಳು ಹೆಚ್ಚಾಗಿ ಕ್ಯಾಶುವಲ್ ಸಂದರ್ಭಗಳಲ್ಲಿ ಧರಿಸಲು ಸೂಕ್ತವಾದುದು ಎನ್ನಬಹುದಾಗಿದೆ.
ಖಾದಿ ಕುರ್ತಾಗಳು, ಕುರ್ತಿಗಳು, ಖಾದಿ ಸ್ಕರ್ಟುಗಳು ವೇಸ್ಟ್ ಕೋಟುಗಳು ಇವುಗಳು ಎಥಿ°ಕ್ ಉಡುಪುಗಳು. ಕುರ್ತಾಗಳು, ಕುರ್ತಿಗಳು ಮತ್ತು ಸ್ಕರ್ಟುಗಳು ಖಾದಿ ಬಟ್ಟೆಯಲ್ಲಿ ಸುಂದರವಾಗಿ ಸಿದ್ಧವಾಗಿರುತ್ತದೆ. ಈ ಬಟ್ಟೆಯು ಸ್ವಲ್ಪ ಡಲ್ ಶೇಡಿನಲ್ಲಿರುವುದರಿಂದ ಇದನ್ನು ಸುಂದರಗೊಳಿಸಲು ಬೇಕಾದಂತೆ ಥೆÅಡ್ ವರ್ಕ್ ಗಳನ್ನು ಮಾಡಲಾಗಿರುತ್ತದೆ. ಲಾಂಗ್ ಸ್ಕರ್ಟುಗಳೂ ಕೂಡ ಸ್ಟ್ಯಾಂಡರ್ಡ್ ಲುಕ್ಕನ್ನು ಕೊಡುತ್ತವೆ. ಇಷ್ಟೇ ಅಲ್ಲದೆ ಮಹಿಳೆಯರ ವೇಸ್ಟ್ ಕೋಟುಗಳೂ ದೊರೆಯುತ್ತವೆ. ಇವುಗಳಲ್ಲಿ ಟ್ರೈಬಲ್ ಪೈಂಟಿಂಗ್ ಇರುವಂತಹ ಕೋಟುಗಳು, ಥೆÅಡ್ ವರ್ಕ್‌ಗಳಿರುವಂತಹ ಕೋಟುಗಳು, ಸಾದಾ ವೇಸ್ಟ್ ಕೋಟುಗಳು ಲಭಿಸುತ್ತವೆ. ಈ ಬಗೆಯ ಕೋಟುಗಳನ್ನು ಕುರ್ತಾಗಳ ಮೇಲೆ, ಕುರ್ತಿಗಳ ಮೇಲೆ ಅಥವಾ ಮ್ಯಾಕ್ಸಿ ಮಿಡಿ-ಟಾಪುಗಳ ಮೇಲೆ, ಜೀನ್ಸ್ – ಟಾಪಿನೊಂದಿಗೂ ಧರಿಸಬಹುದು.
ಖಾದಿ ಹ್ಯಾಂಡ್ ಬ್ಯಾಗು ಗಳು, ಪರ್ಸುಗಳು, ಮೊಬೈಲ್ ಪೌಚುಗಳು, ಸೈಡ್ ಬ್ಯಾಗುಗಳು
ಯಾವಾಗಲೂ ಲೆದರ್ ಬ್ಯಾಗುಗಳನ್ನೇ ಧರಿಸಿ ಬೇಜಾರೆನಿಸಿದಾಗ ಈ ಬಗೆಯ ಖಾದಿ ಬಟ್ಟೆಯಿಂದ ತಯಾರಾದ ಬ್ಯಾಗುಗಳನ್ನೊಮ್ಮೆ ಪ್ರಯೋಗಿಸಿ ನೋಡಬಹುದು. ಇಂದು ಖಾದಿಯಿಂದ ತಯಾರಿಸಲ್ಪಟ್ಟ ಹ್ಯಾಂಡ್ ಬ್ಯಾಗ್, ಪರ್ಸ್, ಸೈಡ್ ಬ್ಯಾಗ್ ಅಲ್ಲದೆ ಮೊಬೈಲ್ ಪೌಚ್ ಸಹ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಬಣ್ಣಗಳಲ್ಲೂ, ವಿವಿಧ ಸ್ಟೈಲ್‌ಗಳಲ್ಲೂ ದೊರೆಯುತ್ತವೆ. ಈ ರೀತಿಯ ಆಕ್ಸೆಸ್ಸರಿಗಳು ಟ್ರೆಂಡಿ ಮತ್ತು ಸುತ್ತಲಿನವರಿಂದ ನಿಮ್ಮನ್ನು ಭಿನ್ನವಾಗಿಸಿ ಸ್ಟೆçಲ್ ಸ್ಟೇಟ್‌ಮೆಂಟನ್ನು ಸೃಷ್ಟಿಸುವಲ್ಲಿ ಮುಂಚೂಣಿಯಲ್ಲಿವೆ.
ಅನಾರ್ಕಲಿ ಕುರ್ತಾಗಳು ಮತ್ತು ಡ್ರೆಸ್Õ ಮೆಟೀರಿಯಲ್ಲುಗಳು
ಕೇವಲ ಸಾಧಾರಣ ಕುರ್ತಾಗಳಷ್ಟೇ ಅಲ್ಲದೆ ಖಾದಿ ಬಟ್ಟೆಯ ಅನಾರ್ಕಲಿ ಕುರ್ತಾಗಳು ದೊರೆಯುತ್ತವೆ. ಸಿದ್ಧ ಉಡುಪು ಬೇಡವೆಂದಾದಲ್ಲಿ ಇವುಗಳ ಡ್ರೆಸ್ ಮೆಟೀರಿಯಲ್ಲುಗಳೂ ದೊರೆಯುವುದರಿಂದ, ನಮಗೆ ಬೇಕಾದ ರೀತಿಯಲ್ಲಿ ಹೊಲಿಸಿಕೊಳ್ಳಬಹುದಾಗಿದೆ. ಅಲ್ಲದೆ ಇವುಗಳಲ್ಲಿಯೂ ಎಂಬ್ರಾಯಿಡರಿ ವರ್ಕ್ ಇರುವಂತವುಗಳು ದೊರೆಯುತ್ತವೆ.
ಪುರುಷರ ಉಡುಪುಗಳು
ಖಾದಿ ಶರ್ಟುಗಳು, ಜುಬ್ಟಾಗಳು ಮತ್ತು ಖಾದಿ ಪ್ಯಾಂಟುಗಳು
ಈ ಬಗೆಯ ಶರ್ಟುಗಳು ಧರಿಸಲು ಆರಾಮದಾಯಕವಾಗಿರುತ್ತವೆ ಮತ್ತು ಡೀಸೆಂಟ್ ಲುಕ್ಕನ್ನು ಕೊಡುತ್ತವೆ. ಯುವ ಪೀಳಿಗೆಯನ್ನು ಆಕರ್ಷಿಸುವಲ್ಲಿ ಸ್ವಲ್ಪ ಹಿಂದಿದ್ದರೂ ಮಧ್ಯಮ ವಯೋಮಾನದ ಮತ್ತು ಇಳಿವಯಸ್ಸಿನವರು ಈ ಬಗೆಯ ದಿರಿಸುಗಳನ್ನು ಬಹಳ ಇಷ್ಟಪಡುತ್ತಾರೆ.
ಕೋಟುಗಳು ಮತ್ತು ಸೈಡ್ ಬ್ಯಾಗುಗಳು
ಪುರುಷರ ಉಡುಪುಗಳಲ್ಲಿ ಹೆಚ್ಚು ಪ್ರಚಲಿತವಾದುದು ಕೋಟುಗಳು. ಈ ಕೋಟುಗಳು ಧರಿಸಲು ಬಹಳ ಆರಾಮದಾಯಕವಿರುತ್ತವೆ ಮತ್ತು ಯಾವುದೇ ಆಡಂಬರಗಳಿಲ್ಲದೆ ಸಿಂಪಲ್ಲಾದ ಲುಕ್ಕನ್ನು ನೀಡುತ್ತವೆ. ಪುರುಷರು ಬಳಸಬಹುದಾದ ಸೈಡ್ ಬ್ಯಾಗುಗಳೂ ದೊರೆಯುವುದಲ್ಲದೆ ಮೇಲೆ ತಿಳಿಸಿದಂತೆ ಹೆಚ್ಚಾಗಿ ಮಧ್ಯಮ ವಯೋಮಾನದವರಿಂದ ಆಕರ್ಷಿಸಲ್ಪಡುತ್ತದೆ.
ಖಾದಿ ಬಟ್ಟೆಗಳ ಬಳಕೆಯಿಂದಾಗುವ ಪ್ರಯೋಜನಗಳು
ದೇಶೀಯ ಉದ್ಯಮಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಈ ಬಗೆಯ ಬಟ್ಟೆಗಳು ನಮ್ಮ ಚರ್ಮಕ್ಕೆ ಯಾವುದೇ ಬಗೆಯ ಹಾನಿಯನ್ನುಂಟು ಮಾಡುವುದಿಲ್ಲ.ರಾಸಾಯನಿಕಗಳ ಬಳಕೆ ಅತ್ಯಂತ ಕಡಿಮೆ ಇರುವುದರಿಂದ ಪರಿಸರಕ್ಕೆ ಪೂರಕವಾದುದು. ಆಡಂಬರಗಳ ನಡುವೆ ಕೆಲವೊಮ್ಮೆ ಇವುಗಳ ಬಳಕೆಯಿಂದ ಸರಳತೆಯ ಅನುಭವವನ್ನು ಪಡೆಯಬಹುದು. ಸಾಂಪ್ರದಾಯಿಕ ಪದ್ಧತಿಯಿಂದ ತಯಾರಿಸಲ್ಪಟ್ಟಿರುವುದರಿಂದ ಸಾಂಪ್ರದಾಯಿಕ ಪದ್ಧತಿಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ.ಅನೇಕ ಕಾರ್ಮಿಕರ ಜೀವನ ನಿರ್ವಹಣೆಗೆ ಸಹಾಯ ಮಾಡುತ್ತಿರುವ ಖಾದಿ ಉದ್ಯಮವನ್ನು ಪ್ರೋತ್ಸಾಹಿಸಿ ದಂತಾಗುತ್ತದೆ.
ಹೀಗೆ ಫ್ಯಾಷನ್ ಲೋಕದಲ್ಲಿ ನಿಧಾನವಾಗಿ ಸ್ಥಾನ ಮಾನಗಳನ್ನು ಗಳಿಸುತ್ತಿರುವ ಖಾದಿ ಉದ್ಯಮದಲ್ಲಿ ಇನ್ನೂ ಹಲವಾರು ಬಗೆಯ ಆರೋಗ್ಯಕರವಾದ ಬೆಳವಣಿಗೆಗಳಾಗಬೇಕಿದೆ. ಇಂದಿಗೂ ಚರಕಗಳನ್ನು ಬಳಸಿ ಖಾದಿ ಬಟ್ಟೆಗಳನ್ನು ತಯಾರಿಸುವಂತಹ ಅನೇಕ ಸಂಸ್ಥೆಗಳಿವೆ. ಉದಾಹರಣೆಗೆ ಸಾಗರ ತಾಲೂಕಿನ ಹೆಗ್ಗೊàಡು ಎಂಬ ಪುಟ್ಟ ಗ್ರಾಮದಲ್ಲಿ ಚರಕ ಎಂಬ ಹೆಸರಿನಲ್ಲಿ ಖಾದಿ ಸಂಸ್ಥೆಯೊಂದು ಕಾರ್ಯ ನಿರ್ವಹಿಸುತ್ತಿದೆ. ಹಲವಾರು ನಿರುದ್ಯೋಗಿಗಳಿಗೆ ಉದ್ಯೋಗವನ್ನೊದಗಿಸಿದುದಲ್ಲದೆ, ಇಲ್ಲಿ ತಯಾರಾದ ಉಡುಪುಗಳು ದೇಶ-ವಿದೇಶಗಳಲ್ಲಿಯೂ ಪ್ರಸಿದ್ಧಿಯಾಗಿರುವುದು ಖಾದಿ ಬಟ್ಟೆಗಳ ಪ್ರಖ್ಯಾತಿಗೆ ಹಿಡಿದ ಕೈಗನ್ನಡಿಯಾಗಿದೆ. ಆಗಾಗ್ಗೆ ಹಲವಾರು ಫ್ಯಾಷನ್ನುಗಳನ್ನು ಪ್ರಯೋಗಿಸುವ ನಾವು-ನೀವು ಖಾದಿ ಉಡುಪುಗಳನ್ನೊಮ್ಮೆ ಪ್ರಯೋಗಿಸೋಣ.
– ಪ್ರಭಾ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಯಾಗಿ ಕಾರ್ಯನಿರ್ವಹಣೆ
Belagavi; ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ: ಮಾಜಿ ಪ್ರಧಾನಿ ನಿಧನದಿಂದ ಆಘಾತ
Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್ ಪಾವತಿ ಪದ್ಧತಿ ಜಾರಿ
Kabaddi: ಇಂದು ಸೀನಿಯರ್ ಕಬಡ್ಡಿ ತಂಡದ ಆಯ್ಕೆ
BJP ದೂರು ಬೆನ್ನಲ್ಲೇ ಗೆಹ್ಲೋಟ್ ಅಖಾಡಕ್ಕೆ; ಸಿ.ಟಿ.ರವಿಗೆ ರಾಜ್ಯಪಾಲ ಬುಲಾವ್?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.