ಮಾಧುರಿಯ ಮರು ಪ್ರವೇಶವು
Team Udayavani, Mar 15, 2019, 12:30 AM IST
ಎಂಬತ್ತು-ತೊಂಬತ್ತರ ದಶಕದಲ್ಲಿ ತನ್ನ ಸೌಂದರ್ಯ ಮತ್ತು ಅಭಿನಯದ ಮೂಲಕ ಬಾಲಿವುಡ್ ಸಿನಿಪ್ರಿಯರ ಆರಾಧ್ಯ ದೇವತೆಯಾಗಿದ್ದ ನಟಿ ಮಾಧುರಿ ದೀಕ್ಷಿತ್. ಸಾಕಷ್ಟು ಬೇಡಿಕೆಯ ನಡುವೆಯೇ ಸಂಜಯ್ ದತ್ ಜೊತೆಗಿನ ಸಂಬಂಧದ ಬಗ್ಗೆ ಗಾಸಿಪ್‌ಗ್ಳೂ, ವಿವಾದಗಳು ಕೂಡ ಮಾಧುರಿ ದೀಕ್ಷಿತ್ ಅವರ ಬೆನ್ನ ಹಿಂದೆಯೇ ಇದ್ದವು. ಆದರೆ ಇವೆಲ್ಲದರ ನಡುವೆ ಯಾರೂ ನಿರೀಕ್ಷಿಸದ ರೀತಿ ಮಾಧುರಿ ದೀಕ್ಷಿತ್, ಡಾ. ಶ್ರೀರಾಮ್ ನೇನೆ ಅವರನ್ನು ವರಿಸುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬಳಿಕ ಚಿತ್ರರಂಗದಿಂದಲೂ ಕೊಂಚ ಅಂತರ ಕಾಯ್ದುಕೊಂಡ ಮಾಧುರಿ, ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುವುದು ಅಪರೂಪವಾಯಿತು. ಕೆಲ ವರ್ಷಗಳ ಬಳಿಕ ಕಿರುತೆರೆಯ ಕಾರ್ಯಕ್ರಮಗಳು, ಆಗೊಮ್ಮೆ ಈಗೊಮ್ಮೆ ತಮಗೆ ತೀರಾ ಹತ್ತಿರವಾದ ಕೆಲವರ ಚಿತ್ರಗಳಲ್ಲಿ ವಿಶೇಷ ಪಾತ್ರಗಳಲ್ಲಿ ಬಂದು ಹೋಗುವುದು ಬಿಟ್ಟರೆ, ಕಳೆದ ಎರಡು ದಶಕಗಳಿಂದ ಮಾಧುರಿಯನ್ನು ಪೂರ್ಣ ಪ್ರಮಾಣದಲ್ಲಿ ಇಡೀ ಚಿತ್ರದಲ್ಲಿ ನೋಡಿದ್ದು ತೀರಾ ವಿರಳ ಎನ್ನಬಹುದು.
ಆದರೆ, ಈಗ ಅಚ್ಚರಿ ಎನ್ನುವಂಥ ಬೆಳವಣಿಗೆಯಲ್ಲಿ ಮತ್ತು ಅಂಥದ್ದೇ ಒಂದು ಪಾತ್ರದಲ್ಲಿ ಮಾಧುರಿ ದೀಕ್ಷಿತ್ ಮತ್ತೆ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಕೂಡ ಸುಮಾರು ಎರಡು ದಶಕಗಳ ಹಿಂದೆ ತಮ್ಮ ಹೆಸರಿನ ಜೊತೆ ತಳುಕು ಹಾಕಿಕೊಂಡು ಸಾಕಷ್ಟು ರೂಮರ್ಗೆ ಕಾರಣವಾಗಿದ್ದ ನಟ ಸಂಜಯ್ ದತ್ ಅವರ ಜೊತೆ ಮಾಧುರಿ ಮತ್ತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಹೌದು, ಬಾಲಿವುಡ್‌ನ ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್ ಜೋಹಾರ್ ನಿರ್ಮಿಸುತ್ತಿರುವ ಬಿಗ್ ಬಜೆಟ್ ಚಿತ್ರ ಕಳಂಕ್‌ನಲ್ಲಿ ಮಾಧುರಿ ದೀಕ್ಷಿತ್ ಹಾಗೂ ಸಂಜಯ್ ದತ್ ಜೊತೆಯಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಉಳಿದಂತೆ ಸೋನಾಕ್ಷಿ ಸಿನ್ಹಾ, ಆದಿತ್ಯಾ ರಾಯ್ ಕಪೂರ್, ಆಲಿಯಾ ಭಟ್, ವರುಣ್ ಧವನ್ ಮೊದಲಾದ ಕಲಾವಿದರು ಚಿತ್ರದ ಇತರ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇತ್ತೀಚೆಗೆ ಕಳಂಕ್ ಚಿತ್ರದ ಫಸ್ಟ್‌ಲುಕ್ ಬಿಡುಗಡೆಗೊಳಿಸಿದ ಬಳಿಕ, ಮಾಧುರಿ ದೀಕ್ಷಿತ್ ಅವರ ಲುಕ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ.
ಇನ್ನು ಕಳಂಕ್ ಒಂದು ಅಮರ ಪ್ರೇಮಕಥೆಯಾಧಾರಿತ ಸಿನಿಮಾವಾಗಿದ್ದು, ಚಿತ್ರದಲ್ಲಿ ಮಾಧುರಿ ಬಾರ್ ಬೇಗಂ ಎಂಬ ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕಳಂಕ್ ಚಿತ್ರದ ಮಾಧುರಿ ದೀಕ್ಷಿತ್ ಲುಕ್ ಸಾಕಷ್ಟು ವೈರಲ್ ಆಗುತ್ತಿದ್ದು, ಮಾಧುರಿ ಮತ್ತು ಸಂಜಯ್ ದತ್ ಮತ್ತೆ ಒಂದಾಗುತ್ತಿರುವ ಬಗ್ಗೆ ಬಾಲಿವುಡ್ ಅಂಗಳಲ್ಲಿ ಗುಸುಗುಸು ಶುರುವಾಗಿದೆ. ಆದರೆ ಇದ್ಯಾವುದರ ಬಗ್ಗೆಯೂ ತುಟಿಬಿಚ್ಚದ ಮಾಧುರಿ ಮಾತ್ರ ಜಾಣ ಮೌನಕ್ಕೆ ಶರಣಾಗಿದ್ದಾರೆ. ಒಟ್ಟಾರೆ ಮಾಧುರಿ, ಸಂಜಯ್ ದತ್ ಕಳಂಕ್ ಚಿತ್ರದಲ್ಲಿ ಒಂದೇ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಾರಾ? ಇಬ್ಬರ ಪಾತ್ರದ ನಡುವಿನ ಲಿಂಕ್ ಏನು? ಅನ್ನೋದು ಚಿತ್ರ ತೆರೆಗೆ ಬಂದ ಮೇಲಷ್ಟೆ ಗೊತ್ತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.