ಮಾನಸಿಕ ವ್ಯಭಿಚಾರ


Team Udayavani, Nov 17, 2017, 6:30 PM IST

17-10.jpg

ಮೈಥಿಲೀ,
ಪಂಚವಟಿಯ ಕುಟೀರದಲ್ಲಿದ್ದ ಒಂಟಿಯಾದ ನಿನ್ನನ್ನು ಬಲವಂತವಾಗಿ ಎಳೆದೊಯ್ಯಲು ಕಪಟಿ ರಾವಣ ತೊಟ್ಟಿದ್ದು ಸನ್ಯಾಸಿಯ ವೇಷವನ್ನು. ನಂತರದ ಆ ಹತ್ತು ತಿಂಗಳು ನಿನ್ನನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿ ನಿನ್ನ ಕುರಿತು ಅವನು ನಿಜದ ಸನ್ಯಾಸಿಯಾಗಿಯೇ ಉಳಿಯಬೇಕಾದದ್ದು ದೊಡ್ಡ ವಿಪರ್ಯಾಸ, ಆಶ್ಚರ್ಯ! ದುಂಬಿಗಾಗಿ ಕಾಯುವ ಪರಾಗ ಮೌನದ ಅರಿವಿತ್ತೇ ಅವನಿಗೆ? ಅಥವಾ ನಿನ್ನ ಕಾಠಿಣ್ಯದ ತೀವ್ರತೆಗೆ ಹೆದರಿದನೆ? ರಾಮನ ಸೇನೆ ತನ್ನವರನ್ನೆಲ್ಲ ಮಣ್ಣು ಮುಕ್ಕಿಸುತ್ತಿದ್ದ ಆ ಕೊನೆಯ ಕ್ಷಣಗಳಲ್ಲೂ ನಿನ್ನ ಮೈ ಮುಟ್ಟಲಿಲ್ಲ ಅವನು!

ಆದರೆ, ಪ್ರತಿ ಗಳಿಗೆಯೂ ನಿನ್ನ ಅಂತರಾತ್ಮ ಅತ್ಯಾಚಾರಕ್ಕೆ ಒಳಗಾಗುತ್ತಲೇ ಇತ್ತು. ನೀನು ನಿನ್ನೊಲವಿನಿಂದ ದೂರಾಗಿ, ರಾವಣನನ್ನೊಪ್ಪಲೇಬೇಕೆಂಬ ರಾಕ್ಷಸರ ಅಪರಿಮಿತ ಒತ್ತಡಕ್ಕೆ ನಲುಗಿ, ಅನುಭವಿಸಿದ ನೋವು, ಆತಂಕಕ್ಕೆ ಎಣೆಯುಂಟೇ? ನಿನ್ನೊಂದಿಗೆ ಹೃದಯ ಕಲ್ಲಾಗಿಸಿಕೊಂಡ ಇನ್ನೊಂದು ಹೆಣ್ಣುಜೀವವೂ ಅಲ್ಲಿತ್ತಲ್ಲವೇ ಸೀತೆ? ತನ್ನೆದುರಲ್ಲೇ ಗಂಡ ಇನ್ನೊಬ್ಬಳನ್ನು ಕಾಮಕೇಳಿಗೆ ಒತ್ತಾಯಿಸುವ ಆ ವಿಷ ಗಳಿಗೆಗಳು ರಾವಣನ ಮಡದಿ ಮಂಡೋದರಿಗೆ ಅದೆಷ್ಟು ಚುಚ್ಚಿರಬಹುದು?

ದ್ವಾಪರಕ್ಕೆ ಬರುವಾಗ “ಅತ್ಯಾಚಾರ’ದ ಪರಂಪರೆ ಇನ್ನಷ್ಟು ಗಟ್ಟಿಯಾಗುತ್ತ ಹೋದದ್ದು ಕುತೂಹಲ ಮೂಡಿಸುತ್ತದೆ. ಕಾಲು ಜಾರಿ ಬಿದ್ದ ಸುಯೋಧನನನ್ನು ಕಂಡು ನಕ್ಕದ್ದೇ ದ್ರೌಪದಿಯ ದೊಡ್ಡ ಅಪರಾಧವಾಗಿ ಪರಿಗಣಿತವಾಗಿ, ಜೂಜಿನ ನೆಪದಲ್ಲಿ ಅವಳ ಸೀರೆಯನ್ನು ಸೆಳೆಯಲಾಯ್ತು. ಅದೂ ಪ್ರಾಜ್ಞರು ತುಂಬಿದ ಸಭೆಯಲ್ಲಿ, ಅವಳ ಐದು ಜನ ಗಂಡಂದಿರ ಎದುರಲ್ಲಿ. ಇಲ್ಲಿ, ಸುಯೋಧನ, ದುಶಾÏಸನರು ಮಾತ್ರವಲ್ಲ, ಅನ್ಯಾಯ ಸಹಿಷ್ಣುಗಳಾದ ಪ್ರತಿಯೊಬ್ಬ ಸಭಾಸದನೂ ಅತ್ಯಾಚಾರಿಯೇ! ಕೃಷ್ಣ ಅಕ್ಷಯಾಂಬರವನ್ನು ಕರುಣಿಸಿದನೋ ಇಲ್ಲವೋ ಎಂಬುದು ಇಲ್ಲಿ ಅಮುಖ್ಯ. ದ್ರೌಪದಿಯನ್ನು ಅಸಹಾಯಕಳನ್ನಾಗಿಸಿ ಸಾರ್ವಜನಿಕವಾಗಿ ಬೆತ್ತಲುಗೊಳಿಸಲು ಹೊರಟ ಕ್ರೂರ ಮನಸ್ಥಿತಿಯೇ ಮುಖ್ಯವಾಗುತ್ತದೆ. ಸುಯೋಧನನೊಬ್ಬನ ಅಹಂಕಾರ, ಪ್ರತಿಷ್ಠೆ, ಸೇಡು, ರಾಜಕೀಯ ಈ ಎಲ್ಲವುಗಳಿಗಾಗಿ ಅತ್ಯಾಚಾರವೆಂಬುದೊಂದು ಇಲ್ಲಿಯೂ ಸಾಧನವಾಗಿದೆ. ರಾವಣನ ಕಾಯುವಿಕೆ ಇಲ್ಲಿ ಇಲ್ಲವಾಗಿದೆ, ಅಶೋಕವನದ ಬದಲು ರಾಜಸಭೆಯಲ್ಲೇ ಅವಳು ನಗ್ನಳಾಗಬೇಕಾಯ್ತು; ಅಂತರಂಗ ಬಹಿರಂಗಗಳೆರಡರಲ್ಲೂ!

ಹೆಣ್ಣೊಬ್ಬಳ “ಅನಪೇಕ್ಷಿತ ಕಾರ್ಯಕ್ಕೆ’ ಸಾರ್ವಜನಿಕವಾಗಿ ಅವಳನ್ನು ಅತ್ಯಾಚಾರಗೈಯುವುದೇ ಅವಳಿಗೆ ಕೊಡಬಹುದಾದ ಸೂಕ್ತ ಶಿಕ್ಷೆ ಎಂಬ ಉಡಾಫೆ ಇಂದಿಗೂ ಪ್ರಚಲಿತದಲ್ಲಿದೆ ತಾಯೀ, ಜಾತಿ-ವರ್ಗ ಸಂಘರ್ಷಗಳಲ್ಲಿಯೂ ಒಂದು ಸಮುದಾಯ ಇನ್ನೊಂದು ಸಮುದಾಯದ ವಿರುದ್ಧ ಸೇಡು ತೀರಿಸಿಕೊಳ್ಳುವ ಬಗೆ ಅಲ್ಲಿಯ ಹೆಣ್ಣುಗಳನ್ನು ಬಲಾತ್ಕಾರವಾಗಿ ಭೋಗಿಸುವುದು! ನಮ್ಮ ದಲಿತ ಸೋದರಿಯರಲ್ಲಿ ದಿನಕ್ಕೊಬ್ಬರಾದರೂ ಇಂತಹ ಅನ್ಯಾಯಕ್ಕೆ ಒಳಗಾಗುತ್ತಿರುವುದೇ ಇದಕ್ಕೆ ಸಾಕ್ಷಿ. ಇದೆಂಥ ವಿಲಕ್ಷಣವಾದ ಸಂಸ್ಕೃತಿ! ಇದು ಆಕೆಯನ್ನು ದೈಹಿಕವಾಗಿ, ಮಾನಸಿಕವಾಗಿ ಜರ್ಜರಿತಗೊಳಿಸುವುದರ ಜೊತೆಗೆ ಅವಳ ಸಂಗಡಿಗರ ಅಭಿಮಾನ ಭಂಜನೆಯ ಸುಲಭ ಮಾರ್ಗವೂ ಹೌದು ಎಂಬುದು ಇದರ ಹಿಂದಿನ ತರ್ಕವಲ್ಲವೆ?

ಕೂಡುವಿಕೆ ಎನ್ನುವುದು ಆತ್ಮಸಂಗಾತದಂತಿರಬೇಕು. ಆದರೆ, ದೈಹಿಕ ಭೋಗವೇ ಆತ್ಯಂತಿಕ ಎಂದು ಕುಣಿಯುವ ವಿಕೃತ ಮನಸ್ಸುಗಳಿಗೆ ಆತ್ಮಗಳ ಪಿಸುಮಾತೂ ಕೇಳಿಸುವುದಿಲ್ಲ, ನರಳುವಿಕೆಯೂ ಕಾಡುವುದಿಲ್ಲ. ಹಾದಿ-ಬೀದಿಗಳಲ್ಲಿ ಕಾಣುವ ಅಂತಹ ಮನಸ್ಸುಗಳು ಒಂಟಿ ಹೆಣ್ಣನ್ನು ಕಂಡರೆ ಅವಳನ್ನು  ಅಟ್ಟಾಡಿಸಿಕೊಂಡು ಲೈಂಗಿಕವಾಗಿ ಹಿಂಸಿಸುತ್ತವೆ. ಬೇಟ ಇಲ್ಲಿ ಸಂತಸದ ಆಟವಾಗದೇ ಬೇಟೆಯ ಖುಷಿಗಾಗಿದೆ.

ಹೆಣ್ಣುಗಳ ರಕ್ಷಣೆಯ ಹೊಣೆ ಹೊತ್ತ ಈ ಲೋಕ ಅವಳನ್ನು “ಮುಚ್ಚಿಟ್ಟು ಕಾಪಾಡುವ’ ಒಳ ದಾರಿ ಕಂಡುಕೊಂಡಿದೆ. ಅವಳ ಮೇಲೆ ವಸ್ತ್ರಸಂಹಿತೆ, ನೀತಿಸಂಹಿತೆಯ ಕಟು ನಿಷ್ಠುರತೆಯ ಕಾವಲು ನೇಮಿಸಿಬಿಡುತ್ತದೆ. ಆದರೆ ಈ ಮುಚ್ಚುಗೆಯೊಳಗಾದರೂ ಅವಳು ಸುರಕ್ಷಿತಳೇ? ತನ್ನವರೆಂದು ನಂಬಿರುವ ಬಂಧು-ಬಾಂಧವರೇ ಆಕೆಯ ದೇಹಕ್ಕೆ ಹಸಿದಿರುತ್ತಾರೆ. ಈ ಹಿಂಸೆಯನ್ನು ಹೊರ ಪ್ರಪಂಚಕ್ಕೆ ತಿಳಿಸಲೂ ಆಗದ ತಬ್ಬಲಿ ಮೌನವನ್ನೂ ಅವಳು ಧರಿಸಬೇಕು!

ಇಲ್ಲಿ ದಿನನಿತ್ಯ ಸೀತಾಪಹರಣ, ವಸ್ತ್ರಾಪಹರಣದ ಭಯದ ನೆರಳಲ್ಲೇ ಹೆಣ್ಣುಗಳು ಬದುಕಬೇಕು. ಇದರಿಂದ ಹೇಗೆಲ್ಲಾ ತಪ್ಪಿಸಿಕೊಳ್ಳಬಹುದು ಎಂಬುದಕ್ಕೆ ನಮ್ಮ ಸ್ತ್ರೀವರ್ಗವನ್ನು ಸಿದ್ಧಪಡಿಸುವ ಈ ಲೋಕ ಇದಕ್ಕೆ ಹೇತುವಾದ ಕೆಟ್ಟ ಮನಸ್ಸುಗಳನ್ನು ತಿದ್ದುವ ಜವಾಬ್ದಾರಿಯನ್ನೂ ಹೊರಬೇಕಲ್ಲವೆ? ತನ್ನ ಮೇಲಾಗುವ ದೈಹಿಕ ಆಕ್ರಮಣವನ್ನು ಧಿಕ್ಕರಿಸುವ ದಿಟ್ಟತನ, ಮಾನಸಿಕ ಸ್ಥೈರ್ಯವನ್ನು ಹೆಣ್ಣಿಗೆ ತುಂಬಿದರೆ ಶಕ್ತಿಶಾಲಿ ಕಾಮುಕ ಗಂಡನನ್ನೂ ಅವಳು ದೈಹಿಕವಾಗಿ ಮಣಿಸಬಹುದೇನೋ!

ದೇಹ-ಆತ್ಮಗಳೆಂದು ಅವಳ ವ್ಯಕ್ತಿತ್ವವನ್ನು ಹೋಳಾಗಿಸದೇ ಇಡಿಯಾಗಿ ಕಂಡರೆ, ಅವಳ ಬೇಕು-ಬೇಡಗಳನ್ನು ಗೌರವಿಸುವ ಗಂಡುಕುಲ ವೃದ್ಧಿಯಾದೀತು. ಆಗ ಯಾರ ಭಯವಿಲ್ಲದೇ, ತನ್ನ ಯಾವ ಆಕಾಂಕ್ಷೆಯನ್ನೂ ಬೂದಿಗೊಳಿಸದೇ ಅವಳು ಸ್ವತ್ಛಂದವಾಗಿ ಇಲ್ಲಿರುವುದು ಸಾಧ್ಯ. ಹೇಳು ಸೀತೆ, ಅಂತಹ ರಾಮರಾಜ್ಯವನ್ನು ನಾವು ಎಂದಾದರೂ ಕಂಡೇವೇ?

ಅಭಿಲಾಷಾ ಎಸ್‌.

ಟಾಪ್ ನ್ಯೂಸ್

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

1-dharma

Dharmasthala;ಇಂದಿನಿಂದ ಲಕ್ಷದೀಪೋತ್ಸವ ಕಾರ್ಯಕ್ರಮಗಳು

Jammu-Vaishnodevi

Jammu: ವೈಷ್ಣೋದೇವಿ ರೋಪ್‌ವೇ ವಿರೋಧಿ ಪ್ರತಿಭಟನೆ ವೇಳೆ ಭಾರೀ ಘರ್ಷಣೆ

court

Manipal: ಲಂಚ ಸ್ವೀಕಾರ ಆರೋಪದಲ್ಲಿ ಬಂಧಿತರಿಗೆ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.