ಅತ್ತೆ-ಸೊಸೆ ವಿಚಾರ!


Team Udayavani, May 10, 2019, 5:50 AM IST

30

ಪ್ರತಿಯೊಬ್ಬ ಹೆಣ್ಣು ಮಗಳು ತನ್ನ ಮನೆಯಿಂದ ತನ್ನ ಕುಟುಂಬವನ್ನೇ ತೊರೆದು ಗಂಡನ ಮನೆಗೆ ಬಂದಿರುತ್ತಾಳೆ. ಹೊಸ ಮನೆಯಲ್ಲಿ ಎಲ್ಲರನ್ನೂ ತನ್ನವರೆಂದು ಅಂದುಕೊಳ್ಳುತ್ತಾಳೆ. ಅತ್ತೆ ಅಂದರೆ ಅವಳಿಗೆ ಮತ್ತೂಬ್ಬಳು ತಾಯಿ. ಮಗಳು ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳುವಂತೆ ಅತ್ತೆ ತನ್ನ ಸೊಸೆಗೂ ಬುದ್ಧಿ ಹೇಳಬೇಕು.

ಇದು ಒಬ್ಬರಿಬ್ಬರ ದೂರಲ್ಲ. ಎಲ್ಲರ ಮನೆ ದೋಸೆ ತೂತು ಅನ್ನುವಂತೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕಂಡು ಬರುವಂಥಾ ಸಮಸ್ಯೆ. ಅತ್ತೆ-ಸೊಸೆ ನಡುವೆ ಅನ್ಯೋನ್ಯ ಸಂಬಂಧ ಇರುವುದು ಬಹಳ ವಿರಳ. ಹಲವರು ಅನ್ಯೋನ್ಯ ಇರುವಂತೆ ಸಮಾಜಕ್ಕೆ ತೋರಿಸಲು ಇನ್ನಿಲ್ಲದ ಕಷ್ಟಪಡುತ್ತಾರೆ. ಮನೆಯಿಂದ ಹೊರಗಡೆ ಮದುವೆ, ಪೂಜೆ ಎಂದಾಗ ಖುಷಿಯಿಂದ ಓಡಾಡುತ್ತಾರೆ. ಮನೆಯೊಳಗೆ ಮಾತ್ರ ಇಬ್ಬರೂ ಉತ್ತರ-ದಕ್ಷಿಣ. ಒಬ್ಬರನ್ನು ಕಂಡ್ರೆ ಇನ್ನೊಬ್ಬರಿಗಾಗಲ್ಲ.

ಹಾಗಂತ ಮದುವೆಯಾದ ಹೊಸದರಲ್ಲಿ ಹೀಗಿರುವುದಿಲ್ಲ. ಎಲ್ಲಾ ಅತ್ತೆಯಂದಿರೂ ಸೊಸೆಯನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತಾರೆ. ಅಕ್ಕಪಕ್ಕದ ಮನೆಯವರಲ್ಲಿ ಸೊಸೆಯ ಅಂದ-ಚಂದ, ಕೆಲಸದ ಅಚ್ಚುಕಟ್ಟು , ಶಿಸ್ತಿನ ಬಗ್ಗೆ ಗಂಟೆಗಟ್ಟಲೆ ಹೊಗಳುತ್ತಾರೆ. ಆದರೆ, ದಿನದಿಂದ ದಿನಕ್ಕೆ ಒಳ್ಳೆಯ ಗುಣಗಳನ್ನು ಬಿಟ್ಟು, ತಪ್ಪುಗಳೇ ಕಾಣತೊಡಗುತ್ತದೆ. ಯಾವ ಕೆಲಸವನ್ನೂ ನೀಟಾಗಿ ಮುಗಿಸಿಲ್ಲ ಅನ್ನೋದ್ರಿಂದ ತೊಡಗಿ ಹಿರಿಯರ ಮಾತಿಗೆ ಬೆಲೆನೇ ಕೊಡಲ್ಲಪ್ಪಾ ಅನ್ನೋವರೆಗೆ ಬಂದು ನಿಲ್ಲುತ್ತದೆ.

ನೆರೆಮನೆಯವರು ಬಂದರಂತೂ ಅವರ ಬಳಿ ಬರೀ ಸೊಸೆಯ ಕುರಿತಾದ ದೂರುಗಳೇ. “ಏನೂಂತ ನೋಡಿ ಒಪ್ಕೊಂಡ್ವೋ ನಮ್ಮ ಮಗನಿಗೆ ಇದಕ್ಕಿಂದ ಅದೆಷ್ಟೋ ಒಳ್ಳೆಯ ಹುಡುಗಿ ಸಿಗ್ತಾ ಇದ್ಲು’ ಅಂತ ಅಲವತ್ತುಕೊಳ್ಳುತ್ತಾರೆ. ತಮ್ಮ ಸೊಸೆ ಪಫೆìಕ್ಟ್ ಅಲ್ಲ ಅನ್ನೋದನ್ನು ಮತ್ತೆ ಮತ್ತೆ ಮನಸ್ಸಿಗೆ ಖಾತರಿಪಡಿಸುತ್ತಲೇ ಇರುತ್ತಾರೆ. ಇನ್ನು ಮಗಳು ಇದ್ದರಂತೂ ಅವಳ ಜತೆ ಹೋಲಿಕೆ ಮಾಡಿ ಸೊಸೆಯನ್ನು ತೆಗಳುವುದು ನಡೆಯುತ್ತದೆ. ಈ ರೀತಿಯಾಗಿ ಅತ್ತೆ-ಸೊಸೆ ನಡುವೆ ಅಂತರ ಬೆಳೆಯುತ್ತಾ ಹೋಗುತ್ತದೆ.

ಇದೆಲ್ಲದರ ಮಧ್ಯೆ ಮಗ, ಸೊಸೆ ಪರವಾಗೇ ನಿಲ್ತಾನೆ ಅನ್ನೋದು ಮತ್ತಷ್ಟು ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತದೆ. ನೀವು ಸೊಸೆಯಾಗಿದ್ದಾಗ ನಿಮ್ಮ ಗಂಡ ನಿಮ್ಮ ಪರವಾಗಿ ನಿಂತಿದ್ದು ಸರಿಯಾದರೆ ಮಗ ಮಾಡುವುದು ಯಾಕೆ ತಪ್ಪು$. ಎಲ್ಲರೂ ದೂಷಿಸುವವರೇ ಆದಾಗ, ಒಬ್ಬರಿಂದಲಾದರೂ ಪ್ರೀತಿಯ ಆಸರೆ ಬೇಕಿರುತ್ತದಲ್ವಾ.

ಆದರೆ, ಎಲ್ಲಾ ಅತ್ತೆಯಂದಿರೂ ತಿಳಿದುಕೊಳ್ಳಬೇಕು, ಎಲ್ಲರೂ ಸರ್ವಗುಣ ಸಂಪನ್ನರಲ್ಲ. ಎಲ್ಲರ ವ್ಯಕ್ತಿತ್ವದಲ್ಲೂ ಪಾಸಿಟಿವ್‌ ಗುಣಗಳ ಜತೆ ನೆಗೆಟಿವ್‌ ಗುಣಗಳೂ ಇರುತ್ತವೆ. ಎಲ್ಲಾ ಸರಿ-ತಪ್ಪುಗಳನ್ನು ಒಪ್ಪಿಕೊಂಡು ನಮ್ಮವರಾಗಿಸಿಕೊಳ್ಳುವುದೇ ಪರಿಪೂರ್ಣತೆ. ಬಹುತೇಕ ಪ್ರತಿಯೊಬ್ಬ ಅತ್ತೆಯೂ ತಾನೂ ಸೊಸೆಯಾಗಿಯೇ ಬಳಿಕ ಅತ್ತೆಯಾದೆ ಅನ್ನೋದನ್ನೇ ಮರೆತುಬಿಡುತ್ತಾರೆ. ಎಲ್ಲರೂ ಅಲ್ಲ, ಕೆಲವೊಬ್ಬರು. ಹೀಗಾಗಿಯೇ ಸೊಸೆಯ ವ್ಯಕ್ತಿತ್ವದಲ್ಲಿ ಹೊಸ ಹೊಸ ಸಮಸ್ಯೆಗಳು ಕಾಣಿಸಿಕೊಳ್ಳುತ್ತಲೇ ಇರುತ್ತದೆ.

ಹಾಗಂತ ಜಗಳ, ಮುನಿಸು ನಡೆಯಲೇಬಾರದು ಅಂತಲ್ಲ. ಅದ್ಯಾವುದೇ ಇರದ ಸಂಬಂಧಗಳು ಯಾವುದಿವೆ. ಎಲ್ಲಾ ಸಂಬಂಧಗಳು ಪ್ರೀತಿ, ಗೌರವದ ಜತೆ ಅಷ್ಟಿಷ್ಟು ಜಗಳ, ಕಿತ್ತಾಟ ನಡೆದಾಗಲೇ ಸರಿಯಾಗಿದೆ ಎಂದರ್ಥ. ಆದರೆ ಜಗಳ, ಆಗಿನ ಮಾತು ಎಲ್ಲವನ್ನೂ ಮರೆತು, “ಸ್ಸಾರಿ’ ಎಂದು ಮತ್ತೆ ಪ್ರೀತಿಯಿಂದ ಮುನ್ನಡೆಯುವ ಮನಸ್ಸಿರಬೇಕು ಅಷ್ಟೆ.

ಪ್ರತಿಯೊಬ್ಬ ಹೆಣ್ಣುಮಗಳು ತನ್ನ ಮನೆಯಿಂದ ತನ್ನ ಕುಟುಂಬವನ್ನೇ ತೊರೆದು ಗಂಡನ ಮನೆಗೆ ಬಂದಿರುತ್ತಾಳೆ. ಹೊಸ ಮನೆಯಲ್ಲಿ ಎಲ್ಲರನ್ನೂ ತನ್ನವರೆಂದು ಅಂದುಕೊಳ್ಳುತ್ತಾಳೆ. ಅತ್ತೆ ಅಂದರೆ ಅವಳಿಗೆ ಮತ್ತೂಬ್ಬಳು ತಾಯಿ. ಮಗಳು ತಪ್ಪು$ಮಾಡಿದಾಗ ತಿದ್ದಿ ಬುದ್ಧಿ ಹೇಳುವಂತೆ ಅತ್ತೆ ತನ್ನ ಸೊಸೆಗೂ ಬುದ್ಧಿ ಹೇಳಬೇಕು. ಸೊಸೆಯ ತಪ್ಪುಗಳನ್ನು ಎತ್ತಿ ಹಿಡಿದು ದೂಷಿಸುವ ಬದಲು ಸರಿಪಡಿಸಿಕೊಳ್ಳಲು ಸೂಚಿಸಬೇಕು. ಹೀಗಾದಾಗಲಷ್ಟೇ ಎಲ್ಲರ ಸೊಸೆಯೂ ಸರ್ವಗುಣ ಸಂಪನ್ನೆಯಾಗಿ ಬದಲಾಗಲು ಸಾಧ್ಯ.

ವಿನುತಾ ಪೆರ್ಲ

ಟಾಪ್ ನ್ಯೂಸ್

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.