ನನ್ನ ಪ್ರೀತಿಯ ಚೂಡಿ


Team Udayavani, Nov 9, 2018, 6:00 AM IST

25.jpg

ತೆಳ್ಳಗಿರುವವರು, ದಪ್ಪಗಿರುವವರು, ಮಕ್ಕಳು, ಯುವತಿಯರು, ಆಂಟಿಯರು- ಹೀಗೆ ಎಲ್ಲ ವಯೋಮಾನದವರ ಮೆಚ್ಚಿನ ಉಡುಗೆ ಚೂಡಿದಾರ್‌…

ದೇಶೀ ಸಂಸ್ಕೃತಿ ಎಂದ ಕೂಡಲೇ ನೆನಪಾಗುವುದು ಉಡುಗೆ-ತೊಡುಗೆ, ಸಂಪ್ರದಾಯ, ಆಚಾರ, ಆಚರಣೆಗಳು. ಅದರಲ್ಲೂ ನಾವು ಧರಿಸುವ ದಿರಿಸಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇವೆ. ಕಾಲಕ್ಕೆ ತಕ್ಕಂತೆ ಉಡುಗೆ-ತೊಡುಗೆಗಳು ಬದಲಾಗುತ್ತಿರುತ್ತವೆ. ಆದರೆ, ಕೆಲವೊಂದು ಉಡುಗೆಗಳು ಯಾವತ್ತೂ ಹಳೇ ಫ್ಯಾಷನ್‌ ಆಗುವುದೇ ಇಲ್ಲ. ಸೀರೆ, ಕುರ್ತಾ, ಸಲ್ವಾರ್‌ ಕಮೀಜ್‌ನಂಥ ಉಡುಪುಗಳು ಸಾಂಪ್ರದಾಯಿಕ ಉಡುಪುಗಳೆಂದು ಕರೆಸಿಕೊಂಡರೂ, ಈಗಲೂ ತಮ್ಮ ಜನಪ್ರಿಯತೆಯನ್ನು ಉಳಿಸಿಕೊಂಡಿವೆ.

ಉತ್ತರ ಭಾರತದ ಮಹಿಳೆಯರ ಮೂಲಕ ಸಲ್ವಾರ್‌ ಕಮೀಜ್‌ ಹಾಗೂ ಕುರ್ತಾ ರೂಪದಲ್ಲಿ ಪ್ರಚಲಿತಕ್ಕೆ ಬಂದ ಚೂಡಿದಾರ್‌, ಕ್ರಮೇಣ ದಕ್ಷಿಣ ಭಾರತದ ಹೆಂಗಳೆಯರ ಮನ ಗೆದ್ದಿತು. ಇತ್ತೀಚೆಗೆ ಅತ್ಯಾಧುನಿಕ ಫ್ಯಾಷನ್‌ ಅಂಶಗಳನ್ನು ಹೊಂದಿದ ತರಹೇವಾರಿ ಚೂಡಿದಾರ್‌ಗಳು ಮಾರುಕಟ್ಟೆಗೆ ಬಂದಿವೆ. ಇವಲ್ಲದೆ, ಟಾಪ್‌, ಬಾಟಂ ಬಟ್ಟೆ, ದುಪ್ಪಟ್ಟಾಗಳಲ್ಲೂ ಹೊಸ ವಿನ್ಯಾಸದ ಟ್ರೆಂಡ್‌ ಬರುತ್ತಲೇ ಇವೆ. ವಿವಿಧ ವಿನ್ಯಾಸದ ವರ್ಕ್‌ ಮತ್ತು ಡಿಸೈನ್‌ ಇರುವ ಚೂಡಿದಾರವನ್ನು ಯುವತಿಯರು ಹೆಚ್ಚಾಗಿ ಇಷ್ಟಪಡುತ್ತಾರೆ. ಚೂಡಿದಾರ್‌, ಕುರ್ತಾ, ಟಾಪ್‌ಗ್ಳನ್ನು ಪಟಿಯಾಲ, ಲೆಗ್ಗಿನ್ಸ್‌ ಹಾಗೂ ಜೀನ್ಸ್‌ ಪ್ಯಾಂಟ್‌ ಮೇಲೂ ಧರಿಸಬಹುದು. ಯುವತಿಯರು, ಮಹಿಳೆಯರಷ್ಟೇ ಅಲ್ಲದೆ, ವಯಸ್ಸಾದ ಹಿರಿಯರೂ ಚೂಡಿದಾರವನ್ನು ಸರಳ, ಸುಂದರ, ಆರಾಮದಾಯಕ ಉಡುಗೆ ಎಂದು ಒಪ್ಪಿಕೊಂಡಿದ್ದಾರೆ.

ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರ ಸಮವಸ್ತ್ರ ಸ್ಕರ್ಟ್‌ನಿಂದ ಚೂಡಿದಾರಕ್ಕೆ ಮಾರ್ಪಾಡಾಗಿರುವುದು ಉತ್ತಮ ಬೆಳವಣಿಗೆ. ಸ್ಕರ್ಟ್‌ಗಿಂತ ಹೆಚ್ಚು ಕಂಫ‌ರ್ಟ್‌ ನೀಡುವ, ಇಡೀ ದೇಹವನ್ನು ಸರಿಯಾಗಿ ಕವರ್‌ ಮಾಡುವ ಈ ಉಡುಪು, ಶಾಲೆ-ಕಾಲೇಜಿನಲ್ಲಿ ಧರಿಸಲು ಸುರಕ್ಷ ಭಾವವನ್ನು ನೀಡುತ್ತದೆ.

ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ
ಇತ್ತೀಚೆಗೆ, ಶಾಲಾ-ಕಾಲೇಜಿನ ಶಿಕ್ಷಕಿಯರಿಗೆ ಸಭ್ಯ ಉಡುಗೆ ತೊಡಲು ಸ್ವತಂತ್ರರು ಎಂಬ ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ. ಇದರನ್ವಯ, ಕೆಲ ಶಾಲೆಗಳಲ್ಲಿ ಸಾಂಪ್ರದಾಯಿಕ ಶೈಲಿಯ ಚೂಡಿದಾರ್‌ ಹಾಗೂ ಕುರ್ತಾ ಧರಿಸುವುದನ್ನು ಕಾಣಬಹುದು. ನೌಕರಸ್ಥರಿಗೆ ಇದೊಂದು ವರದಾನವೇ ಆಗಿದೆ. ಆರಾಮದಾಯಕ ಅಲ್ಲದೆ, ಆಗಾಗ ಸೆರಗು, ನೆರಿಗೆ ಸರಿಪಡಿಸುವ ಸಂಕಷ್ಟದಿಂದ ಹೆಣ್ಣುಮಕ್ಕಳು ಪಾರಾಗಿದ್ದಾರೆಂದು ಹೇಳಬಹುದು. ಒಂದೆಡೆ ಬೆಳಗ್ಗಿನ ಧಾವಂತದಲ್ಲಿ ಮಕ್ಕಳನ್ನೂ ರೆಡಿ ಮಾಡಿ, ತಾವೂ ತಯಾರಾಗಿ ಹೊರಡುವುದರೊಳಗೆ ಸಮಯ ಮೀರಿ ಹೋಗುತ್ತದೆ. ಇನ್ನು ಸೀರೆ ಉಡಲು ಕನಿಷ್ಠಪಕ್ಷ ಅರ್ಧ ಗಂಟೆಯಾದರೂ ಬೇಕು. ಆದರೆ, ಚೂಡಿದಾರ್‌ ಧರಿಸಲು ಸರಳ, ಸುಲಭ. ಬಹಳ ಬೇಗ ರೆಡಿಯಾಗಿ, ಸಮಯಕ್ಕೆ ಸರಿಯಾಗಿ ಕಚೇರಿ ತಲುಪಲು ಸಾಧ್ಯವೆನ್ನುತ್ತಾರೆ ಶಿಕ್ಷಕಿಯರು.

ಗೃಹಿಣಿಯರಿಗೂ ಅಚ್ಚುಮೆಚ್ಚು
ದಪ್ಪಗಿರಲಿ, ತೆಳ್ಳಗಿರಲ ಎಲ್ಲರಿಗೂ ಒಪ್ಪುವ, ಒಗ್ಗುವ ಉಡುಪು ಇದಾಗಿದೆ. ಹೊರಗೆ ಹೋಗಬೇಕೆಂದಿದ್ದರೆ ಸ್ವತಂತ್ರವಾಗಿ, ಕಿರಿಕಿರಿ ಇಲ್ಲದೆ ಆರಾಮಾಗಿ ಓಡಾಡುವುದಕ್ಕೆ ಎಲ್ಲರಿಗೂ ಸರಿ ಹೊಂದುವುದಲ್ಲದೆ, ಒಂದೆರಡು ಲೆಗ್ಗಿನ್ಸ್‌ ತೆಗೆದುಕೊಂಡರೆ ಸಾಮಾನ್ಯವಾಗಿ ಎಲ್ಲಾ ಟಾಪ್‌ಗ್ಳಿಗೂ ಮ್ಯಾಚ್‌ ಆಗುತ್ತದೆ ಎನ್ನುವುದು ಎಲ್ಲರ ಅಭಿಪ್ರಾಯ. ಅವರವರ ವಯೋಮಾನಕ್ಕೆ ತಕ್ಕಂಥ ರೆಡಿಮೇಡ್‌ ಟಾಪ್‌ ಹಾಗೂ ಪ್ಯಾಂಟ್‌ಗಳು ಸುಲಭ ಬೆಲೆಗೆ ಮಾರುಕಟ್ಟೆಯಲ್ಲಿ ಸಿಗುವುದರಿಂದ ಎಲ್ಲರಿಗೂ ಅನುಕೂಲಕರ.

ಒಟ್ಟಿನಲ್ಲಿ , ಸಾರ್ವಕಾಲಿಕ ಉಡುಪಾಗಿರುವ ಚೂಡಿದಾರ್‌ ಎಲ್ಲರಿಗೂ ಪ್ರಿಯವೇ. ಇದರ ವಿಸ್ತಾರ ಹೇಗಿದೆಯೆಂದರೆ, ಮದುವೆ ಇನ್ನಿತರ ಸಮಾರಂಭಗಳಲ್ಲಿ ಮದುಮಗ ಹಾಗೂ ಯುವಕರು, ಗಂಡಸರು ಧರಿಸುವ ಕುರ್ತಾ, ಶೇರ್ವಾನಿ, ಜುಬ್ಟಾ , ಪೈಜಾಮಗಳು ಗ್ರ್ಯಾಂಡ್‌ ಲುಕ್‌ ನೀಡುವಲ್ಲಿ ತನ್ನ ಛಾಇಪನ್ನು ಎತ್ತಿ ಹಿಡಿದಿವೆ.

ಇಂದಿರಾ ಪಿ.

ಟಾಪ್ ನ್ಯೂಸ್

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.