ನನ್ನ ಹೆಸರು ಕಿಶೋರಿ


Team Udayavani, Sep 1, 2017, 6:20 AM IST

Ocean-Woman-1236.jpg

ಪ್ರಕೃತಿ ಎಲ್ಲ ಹೆಣ್ಮಕ್ಕಳಿಗೆ ಸಮಾನ ನೀತಿಯನ್ನು ಅನುಸರಿಸುತ್ತಿದೆ.  ಪ್ರತಿ ಹೆಣ್ಣುಮಕ್ಕಳು ಹದಿಹರೆಯಕ್ಕೆ ಕಾಲಿಡುತ್ತಾರೆ. ಆಗ ಗಮನಿಸಬೇಕಾಗಿರುವುದು ಹತ್ತು, ಹನ್ನೆರಡರ ಕಿಶೋರಿ ಮೈ ನೆರೆಯುವಾಗಿನ ಮನೋಸ್ಥಿತಿಯನ್ನು. ಇದು ಸಹಜವಲ್ಲವೇ ಎಂದರೆ ಅಲ್ಲಿ ಅಸಹಜವಾಗಿರುವುದು ಅವರ ಎಳೆಯತನ ಮಾತ್ರ.

ತಿಂಗಳ ರಜಾ ಸಮಯದಲ್ಲಿ  ಹೆಣ್ಮಕ್ಕಳನ್ನು ಕಾಡುವ ಕೈಕಾಲು ಸೆಳೆತ, ಹೊಟ್ಟೆನೋವು, ವಾಕರಿಕೆಯ ಫೀಲಿಂಗ್‌, ತಲೆನೋವು, ಆಹಾರ ರುಚಿಸದೆ ಇರುವುದು, ವಿಶ್ರಾಂತಿಯ ಹಂಬಲ ಇವೆಲ್ಲದರ ಅರಿವು ಕೇವಲ  ಅನುಭವಿಸಿದ ಸ್ತ್ರೀಯರಿಗೇ ತಿಳಿದಿರುತ್ತದೆ ಹೊರತು ಅನ್ಯರಿಗಲ್ಲ. ಕೆಲವಾರು ಕಡೆಗಳಲ್ಲಿ ಆ ದಿನಗಳಲ್ಲಿ ಋತು ಚಕ್ರದ ರಜಾ ನೀಡಲು ಬೇಡಿಕೆ ಬರುತ್ತಿದೆ. ಪ್ರಶ್ನೆ ಏನೆಂದರೆ, ಅಂಥ ವಿಚಾರಗಳಲ್ಲಿ ರಜಾ ಪ್ರಸ್ತಾಪಕ್ಕೆ ಗಮನ ಸೆಳೆಯುವ ನಿಲುವಳಿ ಬರುವುದು ಪುರುಷರಿಂದಲೇ  ಆಗಬೇಕಾ? ಅದರ ವಿವಿಧ ಆಯಾಮಗಳನ್ನು ಪರಿಶೀಲಿಸುವ ಕಾರ್ಯ ಮಹಿಳಾ ಅಧಿಕಾರಿಗಳು ನಡೆಸಿ ತೀರ್ಮಾನ ಕೈಗೊಂಡರೆ ಫ‌ಲಪ್ರದವಾಗಬಲ್ಲುದು.  ಇಲ್ಲಿ ಸಮಸ್ಯೆ ಏನೆಂದರೆ, ಉದ್ಯೋಗಸ್ಥ ಮಹಿಳೆಯರೆಲ್ಲರ ತಿಂಗಳ ರಜೆ ಒಟ್ಟಿಗೆ ಬಾರದು. ಹಾಗೆಂದು, ಇದರಲ್ಲಿ ಆ ದಿನಗಳ ನೋವು, ಸಂಕಟ ಅರಿತ ಮಹಿಳೆಯರು ಅಗತ್ಯವಾಗಿ ಇರಬೇಕು ಎಂಬುದೇ  ವಾಸ್ತವ. ಅಂಥ ನೋವಿನ ದಿನಗಳಲ್ಲಿ ಮಹಿಳೆ ನಿಸ್ತೇಜವಾಗಿ, ಅಶಕ್ತತೆಯಿಂದ ಕೂಡಿರುವಾಗ ನಿತ್ಯದ ಉಲ್ಲಾಸ, ಆಸಕ್ತಿ ಇರದು. ಹಾಗೆಂದು ಪ್ರತಿಯೊಬ್ಬರಿಗೂ ಇದೇ ಯಾತನೆ ಕಾಡುತ್ತದೆ ಎನ್ನುವಂತಿಲ್ಲ. ಅತೀತರೂ ಇರಬಹುದು. ನೌಕರಿ ಮಾಡುವ ಸ್ತ್ರೀಯರಿಗೆ ರಜಾ ಸೌಲಭ್ಯ ನೀಡಿದರೆ, ಮನೆಯ ಗೃಹಿಣಿಗೆ ರಜಾ ಇಲ್ಲ. ಹೆಚ್ಚೆಚ್ಚು ಕೇಳಿಬರುವ ತಿಂಗಳ ಮುಟ್ಟಿನ ರಜಾದ ಪ್ರಸ್ತಾಪದ ಹಿನ್ನಲೆಯಲ್ಲಿ ಅದರ ತೀರ್ಮಾನಕ್ಕೆ ಮಹಿಳೆಯರೇ ಬೇಕು- ಹೆತ್ತವರಿಗೇ ತಾನೇ ಹೆರಿಗೆ ನೋವು ಗೊತ್ತು ಎಂಬ ಗಾದೆ ಮಾತಿನಂತೆ.ಪ್ರಕೃತಿ  ಈ ಬಗ್ಗೆ ಎಲ್ಲ ಹೆಣ್ಮಕ್ಕಳಿಗೆ ಸಮಾನ ನೀತಿಯನ್ನು ಅನುಸರಿಸುತ್ತಿದೆ.  ಪ್ರತಿ ಹೆಣ್ಮಗಳೂ ಹದಿಹರೆಯಕ್ಕೆ ಕಾಲಿಡುವ ಮುನ್ಸೂಚನೆ ಅದು. 

ಈಗ  ಗಮನಿಸಬೇಕಾಗಿರುವುದು ಹತ್ತು, ಹನ್ನೆರಡರ ಕಿಶೋರಿ ಮೈ ನೆರೆಯುವ ಪ್ರಕ್ರಿಯೆ. ಇದು ಸಹಜವಲ್ಲವೇ ಎಂದರೆ ಅಲ್ಲಿ ಅಸಹಜವಾಗಿರುವುದು ಅವರ ಎಳೆಯತನ. ತಿಳಿಯದ ವಯಸ್ಸು. ಇನ್ನೂ ಅಮ್ಮನ ಮಡಿಲಿಗೊರಗಿ ಹೋಮ್‌ ವರ್ಕ್‌ ಮಾಡಿಕೊಳ್ಳುವ ಮಗುತನ. ಹಿಂದಿನ ದಿನಗಳಲ್ಲಿ ಹೆಚ್ಚುಕಡಿಮೆ ಮನೆ ಮನೆಗಳಲ್ಲಿ  (ಕೆಲವಾರು ಕಡೆ ಇಲ್ಲದೆ ಇದ್ದಿರಬಹುದು.) ಆ ದಿನಗಳಲ್ಲಿ ಹೆಣ್ಮಕ್ಕಳಿಗೆ ಕಡ್ಡಾಯ ವಿಶ್ರಾಂತಿ. ನಿತ್ಯದ ಜಂಜಾಟದಿಂದ ಅಂದಿಗೆ ಬಿಡುಗಡೆ.  ಮುಟ್ಟಿಸಿಕೊಳ್ಳಬಾರದು ಎಂಬ ಸೂಚನೆ ಹಿರಿಯರಿಂದ. ಅದು ಕಡ್ಡಾಯ ವಿಶ್ರಾಂತಿಯ ಉದ್ದೇಶದಿಂದ, ಜೊತೆಗೆ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬಾರದು ಎನ್ನುವುದೂ ಇಲ್ಲವೆನ್ನುವ ಹಾಗಿಲ್ಲ. ದಿನನಿತ್ಯದ ವಿರಾಮವಿಲ್ಲದ ದಿನಚರಿಯಿಂದ ವಿಶ್ರಾಂತಿ. ಬೇಕಾದ ಹೊತ್ತಿಗೆ ಮಲಗಿ, ಬೇಕಾದಾಗ  ಏಳಬಹುದು. ಕೂತ ಕಡೆಗೆ ಬಡಿಸುತ್ತಾರೆ. ಅಂದಿನ ಕಡ್ಡಾಯ ರಜೆಯ ಹಿಂದಿನ ಅರ್ಥ ಇದೇ ಹೊರತು ಮೌಡ್ಯವಲ್ಲ. ಈ ಕಡ್ಡಾಯ ವಿಶ್ರಾಂತಿಯ ಆಸೆಯಿಂದ ಗುಟ್ಟಿನಲ್ಲಿ ಬಹುತೇಕ  ಮಹಿಳೆಯರು ತಿಂಗಳ ರಜೆಗಾಗಿ ಕಾಯುವ ಪರಿಸ್ಥಿತಿ. 

ಅಂದಿಗೂ ಇಂದಿಗೂ ಮುಟ್ಟಿನ ರೀತಿ, ರಿವಾಜು ಬದಲಾಗಿಲ್ಲ; ಬದಲಾಗಿದ್ದು ಜನರು ಮಾತ್ರ. ಕೈಕಾಲು ಸೆಳೆತ, ಮೈಕೈ ನೋವು, ಹೊಟ್ಟೆ ಸಂಕಟ, ವಾಂತಿ, ವಾಕರಿಕೆ ಮುಂಚಿನಿಂದ ಇದ್ದಿದ್ದೇ. ಮನೆಯ ಅತ್ತೆಯೋ, ತಾಯಿಯೋ ಶಮನಕ್ಕೆ ಮನೆಮದ್ದು ಮಾಡಿ ಕೊಡುತ್ತಿದ್ದರು. ಸಹಿಸಲಾಗದ ಸಂಕಟ, ಹೊಟ್ಟೆನೋವು ಕಾಡುವಾಗ ವೈದ್ಯರಲ್ಲಿಗೆ ಹೋಗಿ ಅವರು ಬರಕೊಡುವ ಟ್ಯಾಬ್ಲೆಟ್ಸ್‌ ತೆಗೆದುಕೊಳ್ಳಬಹುದು. ಇದು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಪ್ರತಿ ತಿಂಗಳೂ ಇಂಥ ಟ್ಯಾಬ್ಲೆಟ್ಸ್‌ ಬಳಸಿ ಶಾಲಾ, ಕಾಲೇಜಿಗೆ ಹಾಜರಾತಿ ಹಾಕುವ ದುಸ್ಥಿತಿ ಅನೇಕ ಬಾಲೆಯರಿಗಿದೆ. ಅದನ್ನು ಸೇವಿಸದೆ ಇದ್ದರೆ ನೋವು ನಿವಾರಣೆ ಇಲ್ಲ. ಇಂಥ ನೋವು ನಿವಾರಕಗಳ ಸತತ ಬಳಕೆ ಅಡ್ಡ ಪರಿಣಾಮ ಬೀರುವುದಿಲ್ಲವೆ ಎಂದರೆ ಅದಿಲ್ಲದೆ ಅಸಾಧ್ಯ ಎಂಬಷ್ಟರ ಮಟ್ಟಿಗೆ ದೈಹಿಕ ಯಾತನೆ, ಕೈಕಾಲು ಸೆಳೆತ, ನೋವು ಕಾಡುತ್ತದೆ. ವೈದ್ಯರೂ ಸತತ ಬಳಕೆ ಒಳಿತಲ್ಲವೆಂಬ ಸಲಹೆ, ಸೂಚನೆಯನ್ನು ಕೊಡುತ್ತಾರೆ. ತಾಯಂದಿರು ಮನೆ ಮನೆಗಳಲ್ಲಿ ತಮ್ಮ ಹೆಣ್ಣು ಮಕ್ಕಳ ಈ ಯಾತನೆ ತಗ್ಗಿಸಲು ದಿವೌಷಧಿಯಾಗಿ ಟ್ಯಾಬ್ಲೆಟ್ಸ… ನುಂಗಿಸುತ್ತಾರೆ. ಅದಿದ್ದರೇ ಧೈರ್ಯವಾಗಿ ಶಾಲೆ, ಕಾಲೇಜು ಎಂದು ಹೊರಡಬಹುದು.  ಹತ್ತು, ಹನ್ನೊಂದರ ವಯಸ್ಸಿಗೆ ಮುಟ್ಟಾಗುವ ಬಾಲಕಿಯರಿಗೆ ಸಹಿಸಲಸಾಧ್ಯವಾಗಿ ಕಾಡುವ ಈ ನೋವಿಗೆ ಪರಿಹಾರವಾಗಿ ಇಂಥ ಮಾತ್ರೆಗಳೇ ಆಧಾರ.  ಅಮ್ಮಂದಿರು ತಮ್ಮ ಅಳಲು ತೋಡಿಕೊಂಡಾಗ “ಇದೆಲ್ಲ ಮದುವೆಯಾದ ನಂತರ ಸರಿಹೋಗುತ್ತದೆ’ ಎನ್ನುತ್ತಾರೆ ಹಲವಾರು ವೈದ್ಯರು. ಆದರೆ, ಈ ಬಾಲಕಿಯರು ಕೇವಲ ಹತ್ತು, ಹನ್ನೆರಡರ ವಯಸ್ಸಿನವರು. ಅಷ್ಟರತನಕ ನಿವಾರಣೋಪಾಯವೆಲ್ಲಿದೆ? ಅನುಭವಿಸುವ ಶಕ್ತಿ ಇಲ್ಲದೆ ಹೋದರೆ ಔಷಧಿಯೊಂದೇ ಪರಿಹಾರ. 

ಕ್ರಮೇಣ  ಮೂಢತನ, ಕುರುಡು ನಂಬಿಕೆ ಎನ್ನುವ ಬಲವಾದ ಪ್ರತಿಪಾದನೆಯ ಜೊತೆಗೆ ಅಂಥ ದಿನಗಳಂದು ದೂರವಾಗಿರಿಸದೆ ಎಲ್ಲರ ಜೊತೆ ಒಂದಾಗಿ ಬೆರೆಯುವ ಪ್ರಗತಿಪರ ಧೋರಣೆ ಕಾಲಿಟ್ಟಿತು.  ಅದೆಷ್ಟೇ ವಾದ ಮಾಡಿದರೂ ಇಂದಿಗೂ ಆಹಾರ ತಯಾರಿಯ ಮುಖ್ಯ ಜವಾಬ್ದಾರಿ ಸ್ತ್ರೀಯ ಪಾಲಿಗೆ ಉಳಿದುಕೊಂಡಿದೆ. ಹೆಚ್ಚೆಂದರೆ, ಆಕೆ ವಿಶ್ರಾಂತಿ ಬಯಸಿ ಕಿಚನ್‌ಗೆ ಕಾಲಿಡದೆ ಹೋದ ದಿನ ರೆಸ್ಟುರಾದ ಮೊರೆ ಹೋಗಬಹುದು. ಕಾಲ ಬದಲಾಗಿದೆ; ಆದರೂ ಮುಟ್ಟಿನ ದಿನಗಳ ಸಂಕಟ, ಸುಸ್ತು, ಕೈಕಾಲು ಸೆಳೆತ ಬದಲಾಗಿಲ್ಲ. ಆ ಹೊತ್ತಿಗೆ ಅದನ್ನು ಅನುಭವಿಸುವ ಸ್ತ್ರೀ ದೇಹ ವಿಶ್ರಾಂತಿಗಾಗಿ ಹಪಾಹಪಿಸುತ್ತದೆ. ತಣ್ಣಗೆ ಒಂದು ಲೋಟ  ಹಾಲೋ, ಮಜ್ಜಿಗೆಯೋ ಸಿಕ್ಕಿದ್ದರೆ ಎಂಬ ಹಂಬಲ, ಅದಿಲ್ಲವಾದರೆ  ನೀರು ದೊರೆತರೆ ಒಡಲಲ್ಲಿ ಏಳುವ ಆ ದಿನಗಳ ಯಾತನೆಯನ್ನು ತುಸು ತಗ್ಗಿಸಬಹುದೆಂಬ ಆಸೆ. ಬಯಸಿದಾಗ ಬಯಸಿದ್ದೆಲ್ಲ ಸಿಗುವುದಿಲ್ಲ. ಕಟ್ಟ ಕಡೆಗೆ ಬರಿ ನೆಲಕ್ಕಾದರೂ ಹೊಟ್ಟೆ ಒತ್ತಿ ಹಿಡಿದು ನಿಶ್ಚಲವಾಗಿ ಮಲಗಿದರೆ ತುಸು ತಗ್ಗುತ್ತದೆ ಎನ್ನುವ ಸತ್ಯ ಮುಟ್ಟಾಗುವ ಪ್ರತಿ ಹೆಣ್ಮಗಳಿಗೂ ಪ್ರಕೃತಿ ಕಲಿಸಿಕೊಡುತ್ತದೆ. ನಡು ರಾತ್ರೆಯ ಹೊತ್ತಿಗೆ ಸಂಕಟ ಆರಂಭವಾದರೆ ನಿದ್ದೆ ಎಲ್ಲಿಂದ? ಪರೀಕ್ಷಾ ಸಮಯ ಆದರೆ ಮತ್ತೂ ಕಠಿಣಾವಸ್ಥೆ.

ಮೂರು ದಿನಗಳ ಹಕ್ಕಿ
ಸ್ಯಾನಿಟರಿ ನ್ಯಾಪಿನ್‌ಗಳ ಜಾಹೀರಾತುಗಳಲ್ಲಿ ತೋರಿಸುವಂತೆ ಆ ಮೂರು ದಿನಗಳಲ್ಲಿ ಹಕ್ಕಿಯಂತೆ ಹಾರಿಕೊಂಡು ಇರಲು ಸಾಧ್ಯವಾಗುವುದು ಬೆರೆಳೆಣಿಕೆಯ ಬಾಲೆಯರಿಗೆ ಮಾತ್ರ. ಸಂಪ್ರದಾಯಸ್ಥ ಮನೆಗಳಲ್ಲಿ ಮೊದಲಿನ ದಿನದಲ್ಲಿ ದೂರವಾಗಿದ್ದುಕೊಂಡು, ನಾಲ್ಕನೆ ದಿನ ಬೆಳಗ್ಗೆದ್ದು ತಣ್ಣೀರಾಭಿಷೇಕವಾಗಿ ಮನೆಯ ಎಲ್ಲ ಕಡೆಗೂ ಪ್ರವೇಶ ದೊರೆತರೂ  ಒದ್ದೆ ಒಣಗದ ಕೂದಲು ಬಾಚಿ ಕ್ಲಾಸಿಗೆ ಹೋದರೆ ಗೊತ್ತಿದ್ದೂ ಕಿಚಾಯಿಸುವ  ಹುಡುಗಿಯರಿಗೆ ಕಡಿಮೆಯೇನಿಲ್ಲ. ಅವರಿಗೂ ತಪ್ಪಿದ್ದಲ್ಲ  ನಿಜ. ಆ ದಿನದ ಅವಧಿಯಲ್ಲಿ ಶರೀರದಲ್ಲಿ ಸೂಸುವ ವಿಚಿತ್ರ ಸೆ¾ಲ್‌ ಅನುಭವಸ್ಥ ವಿದ್ಯಾರ್ಥಿನಿಯರಿಗೆ ಗೊತ್ತಾಗಿ ಅವರುಗಳು ಕ್ಲಾಸಿನಲ್ಲಿ ತುಸು ಸರಿದು ಕೂತರೆ ಆಗುವ ನೋವು ಕಡಿಮೆಯಲ್ಲ. ಮೊದಲೆ ಮುಜುಗರ; ಅದರ ಮೇಲಿಂದ ಈ  ಕಣ್ಣಿಗೆ ಕಾಣದ ಹಿಂಸೆ. ಶಾಲೆಗೆ ರಜೆ ಇದ್ದಾಗ ಈ ರಜೆ ಬರಲಿ ಎಂಬಾಸೆ ಇದ್ದರೂ ಅದೆಂತು ಸಾಧ್ಯ? ರಜಾದಿನಗಳ ಈ ರಜೆಯಲ್ಲಿ ಸಿಗುತ್ತಿದ್ದ ಸ್ವಾತಂತ್ರ್ಯವೆಂದರೆ ಬೇಕಾದ ಹೊತ್ತಿಗೆ ಬೆಳಗ್ಗೆದ್ದರೂ ಕೇಳಿದವರಿಲ್ಲ. ತಿಂಡಿ ಮುಗಿಸಿ ಮಗದೊಮ್ಮೆ ಚಾಪೆ ಬಿಡಿಸಿ ಕಾಲು ಚಾಚಿದರೂ ಆಕ್ಷೇಪಿಸುವವರಿಲ್ಲ. ಝರೋì ಎಂದು ಸುರಿಯುವ ಮಳೆಗೆ ಹಾಯಾಗಿ ಮಲಗಿ ಎದ್ದು, ಕೂತ ಕಡೆಗೆ ಊಟ, ತಿಂಡಿ, ಅನ್ಯ ಉಪಚಾರ ಬರುವಾಗ ಯಾವಾಗ ರಜಾ ಸಿಗುತ್ತೋ ಎಂದು ಕಾಯುವಾಸೆ ಇದ್ದರೆ ತಪ್ಪಿಲ್ಲ. 

ಸ್ಯಾನಿಟರಿ ನ್ಯಾಪ್‌ಕಿನ್‌ ಬಳಸಿ ಬಿಸಾಡಬಹುದು (ಎಲ್ಲಿಗೆ?) ಟ್ಯಾಂಪೂನ್‌ಗಳ ಬಳಕೆ ಕಲಿತರೆ ಅದು ವರ ಎಂದರೆ ತಪ್ಪೇನಿಲ್ಲ.ವಿದೇಶಗಳಲ್ಲಿ ಮೆನ್ಸುವಲ್‌ ಕಪ್ಸ್‌  ಬಳಕೆಯಿದೆ ಎಂದು ಕೇಳಿದ್ದಿದೆ. ಇದರ ಅವಧಿ ದೀರ್ಘ‌ಕಾಲಕ್ಕೆ ಉಳಿಯುತ್ತದೆ ಎಂದವರಿದ್ದಾರೆ. ತಿಂಗಳಲ್ಲಿ ಮೂರು-ನಾಲ್ಕು ದಿನ ತಪ್ಪದೆ ಅನುಭವಿಸುವ ಈ ಪ್ರಕ್ರಿಯೆ ಶಾಲಾ, ಕಾಲೇಜು, ನೌಕರಿ  ಎಂದು ಹೊರಗಡೆ ಇರುವಾಗ ಶಾರೀರಿಕ ಹಿಂಸೆ, ಅನ್‌ ಇಸಿನೆಸ್‌ ಕಾಡುವಾಗ  ನಿಭಾಯಿಸಲು ಬಲುಕಷ್ಟ. ಒಬ್ಟಾಕೆ ಸ್ತ್ರೀಯ ಮುಖ ನೋಡಿದರೆ ಇನ್ನೊಬ್ಬ ಹೆಣ್ಣಿಗೆ ಆಕೆಗೆ ಇದು ಮುಟ್ಟಿನ ದಿನಗಳು ಎಂದು ಅರ್ಥವಾಗುವ ಮಟ್ಟಿಗೆ ಮೋರೆಯಲ್ಲಿ ಬದಲಾವಣೆ ಇರುತ್ತದೆ. ಕೆಲವರು ಹೇಳಿಕೊಳ್ತಾರೆ, ಹಲವರು ಮುಚ್ಚಿಟ್ಟುಕೊಳ್ಳುತ್ತಾರೆ. ಇಂದಿಗೆ ಕೂಡ. ಅದೇನಿದ್ದರೂ ಅವರಿಗೆ ಬಿಟ್ಟಿದ್ದು. ಆ ದಿನಗಳಲ್ಲಿ ಕಡ್ಡಾಯವಾಗಿ ಅನುಭವಿಸುವ ಕಿರಿಕಿರಿ, ನೋವು, ಸಂಕಟ ಮುಖದಲ್ಲಿ ಎದ್ದು ಕಾಣುತ್ತಿರುತ್ತದೆ. ಇಂಥ ಶಾರೀರಿಕ ನೋವು ಇಲ್ಲದ ಮಹಿಳೆಯರದು ನಿಸ್ಸಂದೇಹವಾಗಿ ಭಾಗ್ಯ ಎನ್ನಬೇಕು. 

ನಮ್ಮ ದೇಶದಲ್ಲಿ ಇಂಥ ನ್ಯಾಪಿನ್‌ಗಳಿಗೆ 12.5% ಜಿಎಸ್‌ಟಿ ವಿಧಿಸಿದ ಕಾರಣ ಮತ್ತು ಅದು ನಿತ್ಯಾವಶ್ಯಕವಾಗಿದ್ದರಿಂದ ತುಟ್ಟಿದರವಾಯಿತು ಎಂಬ ದನಿಯೆದ್ದಿದೆ. ಅದು  ಸಹಜ. ಸೂಕ್ತ ಪ್ರತಿಭಟನೆ. ಒಂದಾನೊಂದು ಕಾಲದಲ್ಲಿ ಬಾಲೆಯೊಬ್ಬಳು ತಾನು ಮುಟ್ಟಾಗಿದ್ದೇನೆ ಎಂದು  ಅಮ್ಮನಿಗೆ ಹೇಳುವಾಗ ದನಿ ತಗ್ಗಿಸಿ, ಅಕ್ಕಪಕ್ಕ ಯಾರಿಲ್ಲವೆಂದು ಖಚಿತಪಡಿಸಿ ಪಿಸುಗುಟ್ಟುವ ದಿನಗಳು ಮುಗಿದಿದೆ. ಇಂದಿಗೆ ದನಿಯೆತ್ತಿ ಸ್ಯಾನಿಟರಿ ನ್ಯಾಪಿನ್‌ಗಳ ಬಗ್ಗೆ, ಬಳಕೆಯ ಬಗ್ಗೆ, ದುಬಾರಿಯಾಗುವ ಬೆಲೆಯ ಬಗ್ಗೆ ಸ್ತ್ರೀ ದನಿ ಎತ್ತುವ ಮುಕ್ತ ವಾತಾವರಣದಲ್ಲಿದ್ದೇವೆ. ಪ್ಯಾಡುಗಳು ಅದ್ಯಾವುದೇ ಇದ್ದರೂ, ಕಡ್ಡಾಯವಾಗಿ ಅನುಭವಿಸಲೇಬೇಕಾದ  ನೋವು (ಕೆಳಹೊಟ್ಟೆಯ ನುಲಿತ, ಯಾತನೆ) ಇರದ ಸ್ತ್ರೀಯರೇ ಪುಣ್ಯವಂತೆಯರು.  ಆದರೆ ಆ ತೊಂದರೆ ಇದ್ದ ಕನ್ಯೆಯರಿಗೆ (ಮಹಿಳೆಯರು ಸೇರಿ) ಅನುಭವಿಸಲೇಬೇಕು. ಯಾವುದೇ ಅಡ್ಡ ಪರಿಣಾಮಗಳಿಲ್ಲದ, ತಾತ್ಕಾಲಿಕವಲ್ಲದ ನಿವಾರಣೆ ಈ ಸೆಳೆತ, ನೋವಿಗೆ ಇದ್ದರೆ ಅದು ನಿಜವಾಗಿ ಹಕ್ಕಿಯ ಹಾಗೆ ಸ್ವತ್ಛಂದವಾಗಿ ಹಾರುವಂಥ ದಿನಗಳಾಗಬಲ್ಲುದು. 

– ಕೃಷ್ಣವೇಣಿ ಕಿದೂರು 

ಟಾಪ್ ನ್ಯೂಸ್

ಪ್ರೀತಿಯಲ್ಲಿ ಬಿದ್ದ ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್: 2ನೇ ಮದುವೆಗೆ ರೆಡಿ

ಪ್ರೀತಿಯಲ್ಲಿ ಬಿದ್ದ ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್: 2ನೇ ಮದುವೆಗೆ ರೆಡಿ

Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ

Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ

Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು

Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು

Borewell Tragedy: ಹತ್ತು ದಿನಗಳ ಕಾರ್ಯಾಚರಣೆ… ಕೊನೆಗೂ ಬದುಕಿ ಉಳಿಯಲಿಲ್ಲ ಚೇತನಾ

Borewell Tragedy: ಹತ್ತು ದಿನಗಳ ಕಾರ್ಯಾಚರಣೆ… ಕೊನೆಗೂ ಬದುಕಿ ಉಳಿಯಲಿಲ್ಲ ಚೇತನಾ

Raichuru-hospi

ರಾಯಚೂರಲ್ಲಿ ಮತ್ತೋರ್ವ ಬಾಣಂತಿ, ಹಸುಗೂಸು ಸಾವು

Borewell Tragedy: 10 ದಿನದ ಕಾರ್ಯಾಚರಣೆ ಬಳಿಕ ಬದುಕಿ ಬಂದ ಬಾಲೆ, ಇದು ಪವಾಡ ಎಂದ ಪೋಷಕರು

Borewell Tragedy: 10 ದಿನದ ಕಾರ್ಯಾಚರಣೆ ಬಳಿಕ ಬದುಕಿ ಬಂದ ಬಾಲೆ, ಇದು ಪವಾಡ ಎಂದ ಪೋಷಕರು

yoga-nara

Mysuru: ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಪ್ರೀತಿಯಲ್ಲಿ ಬಿದ್ದ ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್: 2ನೇ ಮದುವೆಗೆ ರೆಡಿ

ಪ್ರೀತಿಯಲ್ಲಿ ಬಿದ್ದ ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್: 2ನೇ ಮದುವೆಗೆ ರೆಡಿ

Untitled-1

Kasaragod ಅಪರಾಧ ಸುದ್ದಿಗಳು: ಅಂಗಡಿಗೆ ಲಾರಿ ಢಿಕ್ಕಿ

accident

Kinnigoli: ರಿಕ್ಷಾ ಪಲ್ಟಿ; ಚಾಲಕ ಗಂಭೀರ

Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ

Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ

WhatsApp Image 2025-01-01 at 19.31.55

Udupi: ಅಸ್ವಸ್ಥಗೊಂಡ ರೈಲು ಪ್ರಯಾಣಿಕೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.