ಉಗುರಿನ ಅಂದ ಹೆಚ್ಚಿಸುವ ನೈಲ್‌ ಆರ್ಟ್‌


Team Udayavani, Oct 6, 2017, 1:12 PM IST

06-SAP-13.jpg

ಹಿಂದಿನ ಅಂಕಣದಲ್ಲಿ ಕೆಲವು ನೈಲ್ ಆರ್ಟ್‌ಗಳ ಬಗ್ಗೆ ಹೇಳಿದ್ದೆ.  ನೈಲ್ ಆರ್ಟ್‌ ಇತ್ತೀಚಿಗೆ ಪದೇಪದೇ ಹೊಸತನದೊಂದಿಗೆ ಜನಪ್ರಿಯವಾಗುತ್ತಿರುವುದರಿಂದ ಆಯ್ದ ಇನ್ನಷ್ಟು ಡಿಸೈನ್‌ಗಳ ಬಗೆಗೆ ಇಲ್ಲಿ ತಿಳಿಸಿರುವೆ.

1ಫ್ರಿ ಹ್ಯಾಂಡ್‌ ಫ್ಲವರ್‌ ಡಿಸೈನುಗಳು :  ಈ ಬಗೆಗಳೂ ಕೂಡ ನಾವೇ ಸುಲಭವಾಗಿ ತಯಾರಿಸಿಕೊಳ್ಳಬಹುದಾದ ಡಿಸೈನುಗಳು. ಫ್ರೀ ಹ್ಯಾಂಡ್‌ ಡ್ರಾಯಿಂಗ್‌ ಬರುವವರಿಗೆ ಇವು ಸುಲಭವಾಗುತ್ತದೆ. ನಿಮ್ಮ ಕಲ್ಪನೆಗೆ ಬರುವಂತಹ ಹೂಗಳು, ಎಲೆಗಳು ಅಥವಾ ಇನ್ನಿತರೆ ಯಾವುದೇ ಚಿತ್ರಗಳನ್ನು ಬೇಕಾದ ಬಣ್ಣಗಳ ಬ್ಯಾಕ್‌ಗ್ರೌಂಡ್‌ನ‌ ಬೇಕಾದ ಬಣ್ಣದ ನೈಲ್‌ಪಾಲಿಶ್‌ ಬಳಸಿ ಚಿತ್ರಗಳನ್ನು ಹಾಕಿಕೊಳ್ಳಬಹುದು. ಕಾಂಟ್ರಾಸ್ಟ್ ಬಣ್ಣಗಳನ್ನು ಆಯ್ಕೆ ಮಾಡಿದಾಗ ಆರ್ಟ್‌ ಸುಂದರವಾಗಿ ಮೂಡಿಬರುತ್ತದೆ.

2ಸ್ಟಿಕ್ಕರ್‌ ಡಿಸೈನುಗಳು: ಕೇವಲ ನೈಲ್‌ಪಾಲಿಶ್‌ಗಳನ್ನಷ್ಟೇ ಬಳಸಬೇಕೆಂದಿಲ್ಲ. ನೈಲ್ ಡೆಕೋರೇಶನ್ನಿಗೆಂದೇ ಸ್ಟಿಕ್ಕರುಗಳು ದೊರೆಯುವುದರಿಂದ ಅವುಗಳನ್ನು ಉಗುರುಗಳಿಗೆ ಫಿಕ್ಸ್ ಮಾಡಿಕೊಳ್ಳುವುದರ ಮೂಲಕ ಉಗುರಿನ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಸುಂದರವಾದ ಚಿಕ್ಕ ಚಿಕ್ಕ ಸೀಕ್ವೆನ್ಸ್, ಸ್ಟಾರ್ , ಗ್ಲಿಟ್ಟರ್‌ ಸ್ಟಿಕ್ಕರ್ಸ್‌ ಮುಂತಾದವುಗಳಿಂದ ಅಲಂಕಾರ ಮಾಡಿಕೊಳ್ಳಬಹುದಾಗಿದೆ.

3ಟ್ರೈಬಲ್‌ ನೈಲ್ ಆರ್ಟ್‌ ಡಿಸೈನುಗಳು: ಇತ್ತೀಚೆಗೆ ಬಟ್ಟೆಗಳಲ್ಲಿ, ಆಭರಣಗಳಲ್ಲಿ, ಫ್ಯಾಶನ್‌ ಆಕ್ಸೆಸ್ಸರಿಗಳಲ್ಲಿ ಟ್ರೈಬಲ್ ಟಚ್‌ ಇರುವುದನ್ನು ಕಾಣಬಹುದಾಗಿದೆ. ಅಂತೆಯೇ ನೈಲ್ ಆರ್ಟ್‌ಗೂ ಕೂಡ ಟ್ರೈಬಲ್‌ ಮಾದರಿಯ ಡಿಸೈನುಗಳನ್ನು ಅಳವಡಿಸಿಕೊಂಡು ಈ ಮಾದರಿಯನ್ನು ಸಿದ್ಧಗೊಳಿಸಲಾಗಿದೆ. ಇವುಗಳನ್ನು ತಯಾರಿಸಲು ಸ್ವಲ್ಪ ತರಬೇತಿಯ ಆವಶ್ಯಕತೆಯಿರುತ್ತದೆ. ಫ್ರೀ ಹ್ಯಾಂಡ್‌ ಪೈಂಟಿಂಗ್‌ನ ಸಹಾಯದಿಂದ ಈ ಬಗೆಯ ಡಿಸೈನುಗಳನ್ನು ತಯಾರಿಸಬಹುದು.

4 ನ್ಯೂಸ್‌ ಪೇಪರ್‌ ಡಿಸೈನುಗಳು: ಭಿನ್ನವಾದ ಬಗೆಗಳನ್ನು ಇಷ್ಟಪಡುವವರಿಗೆ ಇದು ಹೇಳಿಮಾಡಿಸಿದ ಬಗೆಯಾಗಿದೆ. ನ್ಯೂಸ್‌ ಪೇಪರ್‌ ಡಿಸೈನಿನ ಟೀಶರ್ಟುಗಳು, ಬ್ಯಾಗುಗಳು, ಶೂಗಳು ಇತ್ಯಾದಿಗಳನ್ನು ನೋಡಿರುತ್ತೇವೆ. ಅಂತೆಯೇ ಬಿಳಿ ಬಣ್ಣದ ಬ್ಯಾಕ್‌ಗ್ರೌಂಡಿನ ಮೇಲೆ ಕಪ್ಪು ಬಣ್ಣದ ನೈಲ್‌ಪಾಲಿಶ್‌ ಅಲ್ಲಿ ಪಾಯಿಂಟ್ ಬ್ರೆಶ್‌ ಬಳಸಿ ಬೇಕಾದ ಅಕ್ಷರಗಳನ್ನು ಬರೆದು ಅದು ಆರಿದ ನಂತರ ಟ್ರಾನ್ಸ್‌ಫ‌ರೆಂಟ್ ಪಾಲಿಶ್‌ ಹಾಕಿ ಡಿಸೈನನ್ನು ಫಿಕ್ಸ್ ಮಾಡಿಕೊಳ್ಳಬಹುದು. ಇದೂ ಕೂಡ ಒಂದು ಯುನಿಕ್‌ ಬಗೆಯೆನಿಸಿದೆ.

5ವೆಬ್ ಮತ್ತು ಸ್ಪೈಡರ್‌ ಡಿಸೈನುಗಳು: ಮೇಲಿನ ಬಗೆಯಂತೆಯೇ ಡಿಫ‌ರೆಂಟ್ ಮತ್ತು ವೈಲ್ಡ… ಲುಕ್ಕನ್ನು ಇಚ್ಛಿಸುವವರು ವೆಬ್ (ಬಲೆ) ಮತ್ತು ಸ್ಪೈಡರ್‌ ಡಿಸೈನುಗಳನ್ನು ಫ್ರೀ ಹ್ಯಾಂಡ್‌ ಡ್ರಾಯಿಂಗ್‌ ಮಾಡಿಕೊಳ್ಳಬಹುದು. ಬಹಳ ಸ್ಟೈಲಿಶ್‌ ಆದ ಲುಕ್ಕನ್ನು ನೀಡುತ್ತವೆ. ಇದು ಕೆಲವು ಮಂದಿಯಷ್ಟೆ ಇಷ್ಟ ಪಡುವಂತಹ ಬಗೆಯಾಗಿದೆ.

6ಪಿಕ್ಚರ್‌ ಡಿಸೈನುಗಳು:  ಪೈಂಟಿಂಗ್‌ನಲ್ಲಿ ಪರಿಣಿತರಾದವರು ಮಾತ್ರ ಮಾಡಬಹುದಾದ ಬಗೆಯಾಗಿದೆ. ಮಾಡರ್ನ್ ಆರ್ಟ್‌ನಲ್ಲಿನ ಡಿಸೈನುಗಳನ್ನು ಬಳಸಿ ತಯಾರಿಸಿಕೊಳ್ಳಬಹುದು. ಮರಗಳು, ನೈಲ… ಪಾಲಿಶ್‌ ಬಾಟಲ್ಲುಗಳು, ಹೀಗೆ ಕಲ್ಪನೆಗೆ ಬಂದಂತಹ ಡಿಸೈನುಗಳನ್ನು ಹಾಕಿಸಿಕೊಳ್ಳಬಹುದು. ಇವುಗಳೂ ಕೂಡ ನಿಮ್ಮದೇ ಆದ ಸ್ಟೈಲ್ ಸ್ಟೇಟೆನ್ನು ಸೃಷ್ಟಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. 

7ರೈನ್‌ಬೋ ಡಿಸೈನುಗಳು: ಬಣ್ಣಗಳೊಂದಿಗೆ ಕುಂಚವನ್ನು ಬಳಸಿ ಆಟವಾಡುವಂತಹ ಬಗೆಯಿದಾಗಿದ್ದು ಇದಕ್ಕೆ ವಿಶೇಷವಾದ ತರಬೇತಿಯ ಅಥವಾ ಕಲಿಕೆಯ ಅಗತ್ಯತೆಯಿರುವುದಿಲ್ಲ. ಕಾಮನಬಿಲ್ಲಿನಂತಹ ಡಿಸೈನುಗಳನ್ನು ಯಾರೂ ಕೂಡ ಸುಲಭವಾಗಿ ಮಾಡಿಕೊಳ್ಳಬಹುದಾಗದೆ. ಟೀನೇಜರ್ಸ್‌ ಬಹಳ ಇಷ್ಟಪಡಬಹುದಾದ ಬಗೆಯಿದಾಗಿದೆ.
 
8ಬ್ಲ್ಯಾಕ್‌ ಬೋರ್ಡ್‌ ನೈಲ್ ಆರ್ಟ್‌: ಇದು ಹೆಸರೇ ಹೇಳುವಂತೆ ಬ್ಲ್ಯಾಕ್‌ ಬ್ಯಾಕ್‌ಗ್ರೌಂಡಿನಲ್ಲಿ ವೈಟ್ ನೈಲ್‌ಪಾಲಿಶ್‌ ಅನ್ನು ಬಳಸಿ ಬೇಕಾದ ಅಕ್ಷರಗಳನ್ನು ಹಿಂದಿ, ಕನ್ನಡ ಅಥವ ಇಂಗ್ಲಿಷ್‌ ಹೀಗೆ ಬೇಕಾದ ಭಾಷೆಯ ಅಕ್ಷರಗಳನ್ನು ಬರೆದುಕೊಳ್ಳಬಹುದು. ಬಹಳ ಡಿಫ‌ರೆಂಟ… ಎನಿಸುವ  ಬಗೆಯಾಗಿದ್ದು ಟ್ರೆಂಡಿ ಲುಕ್ಕನ್ನು ಕೊಡುತ್ತದೆ. 

9ಸ್ಟೈಲಿ ನೈಲ್ ಆರ್ಟ್‌ ಡಿಸೈನುಗಳು: ಈಗಂತು ಮೊಬೈಲುಗಳಲ್ಲಿ ಮೆಸೇಜ್‌ಗಳಲ್ಲಿ ಸ್ಟೈಲಿಗಳದ್ದೇ ಕಾರುಬಾರು. ಈ ಸ್ಟೈಲಿಗಳನ್ನು ಉಗುರುಗಳ ಮೇಲೆ ಬರೆದುಕೊಂಡಾಗ ಮಾಡುವ ನೈಲ್ ಆರ್ಟ್‌ ಬಹಳ ಸುಂದರವಾಗಿರುತ್ತವೆ. ಎಲ್ಲರೂ ಲೈಕ್‌ ಮಾಡುವ ಸ್ಟೈಲಿಗಳನ್ನು ನೋಡಿದಾಗ ಮನಸ್ಸು ಉಲ್ಲಸಿತವಾಗುತ್ತದೆ. ಇಂತಹ ಸ್ಟೈಲಿಗಳು ಉಗುರಿನ ಅಂದವನ್ನ ಹೆಚ್ಚಿಸಬಲ್ಲವು ಎಂಬುದಕ್ಕೆ ಈ ಆರ್ಟ್‌ ಸಾಕ್ಷಿಯೆನಿಸಿದೆ. ಸಾಮಾನ್ಯವಾಗಿ ಕಪ್ಪು ಬ್ಯಾಕ್‌ಗ್ರೌಂಡಿನ ಮೇಲೆ ಹಳದಿ ಬಣ್ಣದ ಸ್ಟೈಲಿಗಳನ್ನು ಉಗುರುಗಳ ಮೇಲೆ ಬಿಡಿಸಿಕೊಳ್ಳಬಹುದು.

10 ಟ್ರೆಡಿಶನಲ್ ನೈಲ್ ಆರ್ಟ್‌ (ಕುಂದನ್ನುಗಳನ್ನ ಬಳಸಿ): ಇವುಗಳನ್ನು ಬ್ರೈಡಲ್ ನೈಲ್ ಆರ್ಟ್‌ ಎಂದೂ ಕರೆಯಬಹುದು. ಗ್ರ್ಯಾಂಡ್‌ ಲುಕ್ಕನ್ನು ಕೊಡುವ ಇವುಗಳು ಟ್ರೆಡಿಶನಲ್ ಕಾರ್ಯಕ್ರಮಗಳಿಗೆ ಸೂಕ್ತವಾದುದಾಗಿದೆ. ಗಾಢವಾದ ನೈಲ್ ಪಾಲಿಶುಗಳನ್ನು ಹಾಕಿ ನಂತರ ಅವುಗಳ ಮೇಲೆ ಕಾಂಟ್ರಾಸ್ಟ್ ಬಣ್ಣಗಳ ಕುಂದನುಗಳು, ಪರ್ಲುಗಳು, ಬೀಡ್ಸುಗಳನ್ನು ಫಿಕ್ಸ್ ಮಾಡುವುದರ ಮೂಲಕ ತಯಾರಾಗುವ ಆರ್ಟ್‌ ಇದಾಗಿದೆ.

11ಬ್ಲ್ಯಾಕ್‌ ನೈಲ್ ಪಾಲಿಶ್‌ ಮತ್ತು ಮುತ್ತುಗಳು: ಇವುಗಳು ಎಲಿಗ್ಯಾಂಟ… ಲುಕ್ಕನ್ನು ಕೊಡುವ ಡಿಸೈನುಗಳಾಗಿವೆ. ಕಪ್ಪು ಬಣ್ಣದ ನೈಲ್ ಪಾಲಿಶ್‌ನ ಮೇಲೆ ಪರ್ಲುಗಳನ್ನು ಫಿಕ್ಸ್ ಮಾಡುವ ಡಿಸೈನ್‌ ಇದಾಗಿದೆ. ನೋಡಲು ಬಹಳ ಸುಂದರವಾಗಿರುತ್ತವೆ. ಮಾಡರ್ನ್ ಬ್ಲ್ಯಾಕ್‌ ಡ್ರೆಸ್ಸುಗಳೊಂದಿಗೆ ಅಥವಾ ಬ್ಲ್ಯಾಕ್‌ ಸೀರೆಯೊಂದಿಗೆ ಬಹಳ ಚೆನ್ನಾಗಿ ಒಪ್ಪುತ್ತವೆ.

12 ಮಕ್ಕಳಿಗೆಂದೇ ಇರುವ ನೈಲ್ ಆರ್ಟುಗಳು: ಮೇಲೆ ತಿಳಿಸಿದ ಎಲ್ಲಾ ಬಗೆಗಳೂ ಮಹಿಳೆಯರಿಗಾದರೆ, ಕೆಲವೊಮ್ಮೆ ನೈಲ್ ಪಾಲಿಶ್‌ ಹಾಕಿಕೊಳ್ಳುವ ಮಕ್ಕಳಿಗೂ ಸೂಟ್ ಆಗುವ ವಿಶೇಷವಾದ ನೈಲ್ ಆರ್ಟ್‌ ಡಿಸೈನುಗಳಿರುತ್ತವೆ. ಸಾದಾ ನೈಲ್ ಪಾಲಿಶ್‌ ಹಾಕುವುದ ಬದಲು ಈ ಕೆಳಗಿನ ಡಿಸೈನುಗಳನ್ನು ನೀವೂ ಮಕ್ಕಳಿಗೆ ಹಾಕಿ ನೋಡಿ. ಮಕ್ಕಳಿಗೆಂದಿರುವ ಡಿಸೈನುಗಳಲ್ಲಿ ಕೆಲವೆಂದರೆ ಸ್ಟೈಲಿ ಡಿಸೈನ್‌, ಬ್ಲ್ಯಾಕ್‌ ಬೋರ್ಡ್‌ ಡಿಸೈನ್‌, ರೈನ್‌ಬೋ ಡಿಸೈನ್‌, ಪಾಂಡ ಡಿಸೈನ್‌, ಸಾಂತಾಕ್ಲಾಸ್‌ ಡಿಸೈನ್‌, ಕ್ಯಾಂಡಿ ಡಿಸೈನ್‌, ಕಪ್‌ ಕೇಕ್‌ ಡಿಸೈನ್‌, ಟೆಡ್ಡೀಬೇರ್‌ ಸ್ಟಿಕರ್‌ ಡಿಸೈನ್‌, ಕ್ಯಾಟ್ ಡಿಸೈನ್‌ ಇತ್ಯಾದಿಗಳು ಮಕ್ಕಳ ಮನಸ್ಸಿಗೆ ಬಹಳ ಮುದ ಕೊಡುವ ಡಿಸೈನುಗಳಾಗಿವೆ.

ಆರ್ಟಿಫಿಶಿಯಲ್ ನೈಲುಗಳು: ಮೇಲೆ ಹೇಳಿದ ಎಲ್ಲಾ ಬಗೆಗಳು ನಿಸರ್ಗದತ್ತವಾದ ಉಗುರುಗಳನ್ನು ಅಲಂಕಾರಗೊಳಿಸುವ ಬಗೆಗಳಾಗಿವೆ. ಇನ್ನು ಉಗುರನ್ನು ಉದ್ದವಾಗಿ ಬಳಸಲು ಇಷ್ಟವಿಲ್ಲದವರೂ ಕೂಡ ನೈಲ್ ಆರ್ಟ್‌ಗಳನ್ನು ಬಳಸಬಹುದು. ಅಂತವರು ಈ ಆರ್ಟಿಫಿಷಯಲ್ ನೈಲುಗಳನ್ನು ಬಳಸಬಹುದು. ಈ ಉಗುರುಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ ಮತ್ತು ಅವುಗಳೊಂದಿಗೆ ನೈಲ್ ಗ್ಲೂ ಕೂಡ ದೊರೆಯುತ್ತವೆ. ಬೇಕಾದ ಅಳತೆಯ ಉಗುರುಗಳು ಲಭ್ಯವಿದ್ದು ಅವುಗಳನ್ನು ನಿಮ್ಮ ಬೆರಳಿಗೆ ನೈಲ್ ಗ್ಲೂಗಳ ಸಹಾಯದಿಂದ ಫಿಕ್ಸ್ ಮಾಡಿಕೊಂಡು ನಂತರ ನಮಗೆ ಬೇಕಾದ ನೈಲ್ ಆರ್ಟನ್ನು ಮಾಡಿಕೊಳ್ಳಬಹುದಾಗಿದೆ. ಈ ಬಗೆಯ ಉಗುರುಗಳ ಅನುಕೂಲವೆಂದರೆ, ಬೇಕೆನಿಸಿದಾಗ ಮಾತ್ರ ಹಾಕಿಕೊಳ್ಳಬಹುದು. ವಿಶೇಷ ಸಂದರ್ಭಗಳಲ್ಲಿ ಮಾತ್ರ ನೈಲ್ ಆರ್ಟ್‌ ಬೇಕೆನಿಸುವವರಿಗೆ ಇವು ಹೆಚ್ಚು ಪ್ರಯೋಜನಕಾರಿಯಾಗಿರುತ್ತವೆ. 

ಪ್ರಭಾ ಭಟ್‌

ಟಾಪ್ ನ್ಯೂಸ್

Gadag-CM-Dcm

Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ

MNG-Zakir

Tabla maestro: ಮಂಗಳೂರಿಗೆ ಮೂರು ಬಾರಿ ಭೇಟಿ ಕೊಟ್ಟಿದ್ದ ತಬಲಾ ಮಾಂತ್ರಿಕ ಜಾಕೀರ್ ಹುಸೇನ್

1-zakir

Ustad; ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ವಿಧಿವಶ

8

CM Siddaramaiah: ಗ್ಯಾರಂಟಿಗಳನ್ನು‌ ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮ‌‌ದು

7

Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ

Aditya

Kaup: ಯುವ ಕ್ರಿಕೆಟಿಗ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

1-maha

Maharashtra: ಫಡ್ನವೀಸ್ ಸಂಪುಟಕ್ಕೆ 39 ಮಂದಿ ಸಚಿವರ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Bel-Bus

Belthangady: ಖಾಸಗಿ ಬಸ್ಸಿನಡಿಗೆ ಬಿದ್ದ ಬೈಕ್‌ ಸವಾರ: ಸಾವು

Gadag-CM-Dcm

Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ

6

Kudremukh: ಹೊತ್ತಿ ಉರಿದ ಟೆಂಪೋದಲ್ಲಿದ್ದದ್ದು ಕಟಪಾಡಿ ಮೂಲದ 8 ಕುಟುಂಬಗಳು  

MNG-Zakir

Tabla maestro: ಮಂಗಳೂರಿಗೆ ಮೂರು ಬಾರಿ ಭೇಟಿ ಕೊಟ್ಟಿದ್ದ ತಬಲಾ ಮಾಂತ್ರಿಕ ಜಾಕೀರ್ ಹುಸೇನ್

missing

Udupi: ಗಾಜಿನ ಉದ್ಯಮಿ ನಾಪತ್ತೆ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.