ನಾರೀಕೇರಳ ಸಾರಿ
Team Udayavani, May 12, 2017, 3:51 PM IST
ಸೀರೆಗಳಲ್ಲಿ ಎಷ್ಟೊಂದು ವಿಧದ ಸೀರೆಗಳು ಇಲ್ಲ ಹೇಳಿ? ರೇಷ್ಮೆ ಸೀರೆಗಳು, ಜರಿಯ ಸೀರೆಗಳು, ಸಿಲ್ಕ್ ಸೀರೆಗಳು, ಶಿಫಾನ್ ಸೀರೆಗಳು, ಜೂಟ್ ಸೀರೆಗಳು, ಕಾಟನ್ ಸೀರೆಗಳು, ಪಾಲಿಸ್ಟರ್ ಸೀರೆಗಳು- ಹೀಗೆ.ಹೆಂಗಳೆಯರ ಸೀರೆಯ ಲೋಕವೆಂದರೆ ಅದೊಂದು ವೈವಿಧ್ಯಮಯ ಜಗತ್ತು. ಹೆಣ್ಮಕ್ಕಳಲ್ಲಿ ವಾರ್ಡ್‌ರೋಬ್ ತುಂಬಾ ನಮೂನೆಯ ಸೀರೆಗಳಿದ್ದರೂ “”ಉಟ್ಟಿದ್ದನ್ನೇ ಉಡಬೇಕಲ್ಲ” ಅಂತ ಆಗಾಗ ಸೀರೆ ಮಳಿಗೆಗಳಿಗೆ ಭೇಟಿ ನೀಡಿ, “”ಹೊಸ ಡಿಸೈನಿನ ಸೀರೆ ಇದ್ದರೆ ತೋರಿಸಿ” ಎಂದು ಟೇಬಲ್ ತುಂಬಾ ಸೀರೆಗಳನ್ನು ಹರಡಿಕೊಂಡು ಹುಡುಕುತ್ತಲೇ ಇರುತ್ತಾರೆ.
ಸೀರೆಯಲ್ಲಿ ಇಂದು ತರಹೇವಾರಿ ಮೆಟಿರೀಯಲ್‌ನ ಸೀರೆಗಳಿದ್ದರೂ ಮಹಿಳೆ ಹೆಚ್ಚು ಮೆಚ್ಚುವ ಸೀರೆ ರೇಷ್ಮೆಯಾಗಿದ್ದು , ರೇಷ್ಮೆ ಸೀರೆಯನ್ನು ಉಟ್ಟು ಮೆರೆಯಬೇಕೆಂಬ ಹೆಬ್ಬಯಕೆ ಆಕೆಯ ಮನದಲ್ಲಿ ಇದ್ದೇ ಇರುತ್ತದೆ. ಈ ರೇಷ್ಮೆ ಸೀರೆಯಷ್ಟೇ ಆಕೆಯ ಮನಸ್ಸನ್ನು ಗೆದ್ದಿರುವ ಸೀರೆಯೆಂದರೆ ಕಾಟನ್ ಸೀರೆ. ಕಾಟನ್‌ನಲ್ಲೂ ಖಾದಿ, ಧಾರವಾಡ ಕಾಟನ್, ಬೆಂಗಾಲಿ ಕಾಟನ್, ಕಲ್ಕತ್ತಾ ಕಾಟನ್, ಫ್ಯಾಬ್ರಿಕ್ ಕಾಟನ್, ಕೋಟಾ, ಜಮದಾನಿ, ಪೋಚಂಪಲ್ಲಿ, ಬೂಮ್ಕಾಯ…, ಕೊಟಿR, ಸಂಬಾಲ್‌ಪುರಿ, ಚಂದೇರಿ, ಪಾಲಿಕಾಟನ್- ಹೀಗೆ ಹಲವಾರು ಜಾತಿ. ಈ ತರಹೇವಾರಿ ಕಾಟನ್ ಸೀರೆಗಳಲ್ಲಿ ಅತ್ಯಂತ ಶ್ರೀಮಂತವಾಗಿರುವ ಕಾಟನ್ ಸೀರೆಯೆಂದರೆ ಕೇರಳ ಕಾಟನ್ ಸೀರೆ. ಕೇರಳ ಕಾಟನ್ ಸೀರೆಗೆ ತನ್ನದೇ ಆದ ಒಂದು ವಿಶಿಷ್ಟತೆ ಮತ್ತು ಸೊಬಗು ಇದೆ.
ಕೇರಳ ಸೀರೆಯ ವಿಶಿಷ್ಟತೆ
ಕಾಟನ್ ಸೀರೆಗಳಲ್ಲಿ ತಿಳಿಬಣ್ಣದ ಕಾಟನ್ ಸೀರೆಗಳು ತುಂಬಾ ಆಕರ್ಷಕವಾಗಿರುತ್ತವೆ. ಅದರಲ್ಲೂ ಬಿಳಿ ವರ್ಣದ ಸೀರೆಗಳು ಎಷ್ಟೊಂದು ಆಕರ್ಷಕವಾಗಿರದು? ಯಾವ ಹೆಣ್ಣಿಗೆ ತಾನೇ ಇಷ್ಟವಾಗದು? ಶ್ವೇತ ಬಣ್ಣದ ಕಾಟನ್ ಸೀರೆಗೆ ಜರಿಯ ಬಾರ್ಡರ್ ಇದ್ದರೆ ಆ ಸೀರೆಯ ಚೆಂದವೇ ಬೇರೆ. ಅಂತಹ ಒಂದು ರಾಯಲ್ ಲುಕ್ ನೀಡುವ ಸೀರೆಯೆಂದರೆ ಅದು ಕೇರಳದ ಸಾಂಪ್ರದಾಯಿಕ ಸೀರೆಯಾದ ಕಾಟನ್ ಸೀರೆಯೇ. ಬಿಳಿ, ನಸು ಹಳದಿ, ಗಂಧ ಬಣ್ಣದ, ಗೋಲ್ಡನ್ ಜರಿಯ ಈ ಸೀರೆ ತುಂಬಾನೆ ಮನಮೋಹಕ ಮತ್ತು ಅತ್ಯಂತ ಆಕರ್ಷಕ! ಇದರ ಮತ್ತೂಂದು ವಿಶೇಷತೆಯೆಂದರೆ, ಈ ಸೀರೆ ಎಲ್ಲಾ ಮೈ ಬಣ್ಣದವರಿಗೂ ಚೆನ್ನಾಗಿಯೇ ಒಪ್ಪುವುದು, ಕೇರಳಿಗರಿಗೆ ಈ ಸೀರೆ ತಮ್ಮ ಸಂಪ್ರದಾಯದ ಒಂದು ಭಾಗವಾಗಿದೆ. ಹಬ್ಬ , ಮದುವೆ ಸಂದರ್ಭಗಳಲ್ಲಿ ಈ ಸೀರೆಯನ್ನು ಹೆಚ್ಚಾಗಿ ಧರಿಸುತ್ತಾರೆ. ಕೇರಳದ ಸ್ತ್ರೀಯರು ಮಾತ್ರವಲ್ಲದೆ ಎಲ್ಲ ಮಹಿಳೆಯರ ಅಚ್ಚುಮೆಚ್ಚಿನ ಸೀರೆಗಳಲ್ಲಿ ಈ ಸೀರೆಯೂ ಒಂದಾಗಿದ್ದು ಮದುವೆ, ಹಬ್ಬ-ಹರಿದಿನಗಳು ಅಲ್ಲದೆ ಎಲ್ಲಾ ಸಂದರ್ಭಗಳಲ್ಲೂ ಎಲ್ಲ ವಯಸ್ಸಿನವರಿಗೂ ಹೇಳಿ ಮಾಡಿಸಿದ ಸೀರೆ. ಅಲ್ಲದೆ ಇದನ್ನು ಉಟ್ಟುಕೊಂಡ ಮಹಿಳೆ ಎಲ್ಲೆಡೆಯೂ ಆಕೆಯನ್ನು ಗುರುತಿಸಿಕೊಳ್ಳುವಂತೆ ಮಾಡುವುದರಲ್ಲಿ ಎರಡು ಮಾತಿಲ್ಲ. ಆಕರ್ಷಕವಾಗಿ ಕಾಣುವುದಷ್ಟೇ ಅಲ್ಲದೇ ಸಾಂಪ್ರದಾಯಿಕವಾಗಿಯೂ ಕಾಣಿಸುತ್ತದೆ.
ವಿವಿಧ ವಿನ್ಯಾಸಗಳು
ಕೇರಳ ಸೀರೆಯಲ್ಲಿ ಬಿಳಿ, ನಸು ಹಳದಿ ಸೀರೆಗೆ ಗೋಲ್ಡನ್ ಬಣ್ಣದ ಜರಿ ಇರುವುದು ಸಾಮಾನ್ಯ. ಅಷ್ಟೇ ಅಲ್ಲದೆ ಕೇರಳ ಸೀರೆಯಲ್ಲಿ ಹಲವಾರು ವಿಧದ ಡಿಸೈನ್‌ನ ಸೀರೆಗಳಿವೆ. ಇದರಲ್ಲಿ ಎಂಬ್ರಾಯxರಿ ಬಾರ್ಡರ್‌ನ ಸೀರೆಗಳು ಮನಮೋಹಕ. ಕಲರ್ ಜರಿ ಪ್ರಿಂಟ್ ಸಾರಿ, ವೆನ್ನೆಕೃಷ್ಣನ್ ಎಂಬ್ರಾಯxರಿ, ಕೇರಳ ಸಿಂಪಲ್ ಜರಿ ಕಸುವು ಇರುವ ಸೀರೆ, ಪಿಕಾಕ್ ಎಂಬ್ರಾಯxರಿ ಕಸುವು ಸೀರೆ, ಫ್ಯಾಬ್ರಿಕ್ ಪ್ರಿಂಟ್ ಡಿಸೈನ್ ಕಸುವು, ಸಿಲ್ವರ್ ಎಂಬ್ರೋಸ್, ವಲ್ಲಿ ಪ್ರಿಂಟ್, ಎಂಬ್ರಾಯಿಡರಿ ಸ್ಲಿàಟ್ ಸೀರೆ, ರಾಧಾಕೃಷ್ಣ ಪ್ರಿಂಟ್, ಸಿಲ್ವರ್ ಕಸುವಿನ ಮನಮೋಹಕ ಜಗತ್ತು!
ಬ್ಲೌಸ್‌ಗಳು
ಹಬ್ಬ-ಹರಿದಿನ, ಮದುವೆಯಂತಹ ಫಂಕ್ಷನ್‌ಗಳಿಗೆ ಹೆಣ್ಮಕ್ಕಳು ಸೀರೆ ಉಡಲು ಇಷ್ಟಪಡುವುದು ಸಹಜ. ಆದರೆ ಸೀರೆ ಜೊತೆ ಧರಿಸುವ ಬ್ಲೌಸ್ ಕೂಡ ಸೀರೆಯ ಅಂದವನ್ನು ಹೆಚ್ಚಿಸಲೂ ಬಹುದು ಅಥವಾ ಅಂದವನ್ನು ಕೆಡಿಸಲೂಬಹುದು. ಹಾಗೆಯೇ ಕೇರಳ ಕಾಟನ್ ಸೀರೆಗಳಿಗೂ ಎಲ್ಲಾ ಬಣ್ಣದ ಬ್ಲೌಸ್‌ಗಳು ಸರಿ ಹೊಂದುವುದಿಲ್ಲ. ಆದ್ದರಿಂದ ಬ್ಲೌಸ್ ಆಯ್ಕೆ ಮಾಡಿಕೊಳ್ಳುವಾಗ ಮುನ್ನ ಕೆಲವೊಂದು ಅಂಶಗಳನ್ನು ಪಾಲಿಸಲೇಬೇಕು.
ಕೆಂಪು ಮತ್ತು ಹಸಿರು ಬಣ್ಣದ ಬ್ಲೌಸ್
ಚಿನ್ನದ ಬಣ್ಣದ ಜರಿ ಇರುವ ಗಂಧದ ಬಣ್ಣದ ಸೀರೆಗೆ ಕಡು ಹಸಿರು ಬಣ್ಣದ ಬ್ಲೌಸ್ ಹಾಕಿದರೆ ತುಂಬಾ ಆಕರ್ಷಕವಾಗಿ ಕಾಣುವುದು. ಬ್ಲೌಸ್‌ಗೆ ಡಿಸೈನ್ ಇಲ್ಲದಿದ್ದರೂ ಸಿಂಪಲ್ ಹಸಿರು ಬಣ್ಣದ ಬ್ಲೌಸ್‌ನಲ್ಲಿ ಸರಳವಾಗಿ, ಆಕರ್ಷಕವಾಗಿ ಕಾಣಿಸುತ್ತದೆ. ಇನ್ನು ಹಸಿರು ಕಲರ್ ಬ್ಲೌಸ್ ಸೀರೆಯ ಬಾರ್ಡರ್ ಹಸಿರು ಕಲರ್ ಇದ್ದರೆ ಅದೇ ಬಣ್ಣದ ಬ್ಲೌಸ್ ಆಕರ್ಷಕವಾಗಿ ಕಾಣುವುದು. ಬಾರ್ಡರ್ ಹಸಿರು ಇದ್ದು, ಬ್ಲೌಸ್ ಕೆಂಪು ಇದ್ದರೆ ಅಷ್ಟೊಂದು ಆಕರ್ಷಕವಾಗಿ ಕಾಣುವುದಿಲ್ಲ. ಕೆಂಪು ಬಣ್ಣದ ಬ್ಲೌಸ್ ಕೆಂಪು ಬಾರ್ಡರ್ ಇರುವ ಸೀರೆಗೆ ಮಾತ್ರವಲ್ಲ, ಗೋಲ್ಡನ್ ಬಾರ್ಡರ್ ಇರುವ ಸೀರೆಗೂ ಆಕರ್ಷಕ ಮ್ಯಾಚಿಂಗ್. ತುಂಬಾ ಗ್ರ್ಯಾಂಡ್ ಕಾಣಿಸಲು ಬ್ಲೌಸ್‌ನ್ನು ಬೇರೆ ಬೇರೆ ಡಿಸೈನ್‌ನಲ್ಲಿ ಹೊಲಿದುಕೊಂಡರೆ ಇನ್ನೂ ಸುಂದರವಾಗಿ ಕಾಣಿಸುತ್ತದೆ. ಮಧ್ಯ ವಯಸ್ಸು ದಾಟಿದವರಿಗೆ ಕೆಂಪು ಮತ್ತು ಹಸಿರು ಬಣ್ಣದ ಬ್ಲೌಸ್ ಸರಳವಾಗಿ, ಆಕರ್ಷಕವಾಗಿ ಕಾಣುವುದು.
ಗೋಲ್ಡನ್ ಕಲರ್ ಬ್ಲೌಸ್
ಕೇರಳ ಸೀರೆಗೆ ಹೇಳಿ ಮಾಡಿಸಿದ ಮ್ಯಾಚಿಂಗ್ ಬ್ಲೌಸ್ ಎಂದರೆ ಗೋಲ್ಡನ್ ಕಲರ್ ಬ್ಲೌಸ್. ಬರೀ ಬಿಳಿ ಬಣ್ಣದ ಬ್ಲೌಸ್ ಅಷ್ಟೊಂದು ಚೆನ್ನಾಗಿ ಕಾಣಿಸುವುದಿಲ್ಲ. ಬದಲು ಗೋಲ್ಡನ್ ಮಿಕÕ… ಗಂಧ ಬಣ್ಣದ ಬ್ಲೌಸ್ ಆಕರ್ಷಕವಾಗಿ ಕಾಣುವುದು. ಬಿಳಿ ಬ್ಲೌಸ್‌ಗೆ ಗೋಲ್ಡನ್ ಬಾರ್ಡರ್ ಇದ್ದರೂ ಆಕರ್ಷಕ. ಆದರೆ, ಫುಲ್ ಗೋಲ್ಡನ್ ಕಲರ್ ಬ್ಲೌಸ್ ಮಾತ್ರ ಬಿಳಿ, ನಸು ಹಳದಿ, ಗಂಧ ಬಣ್ಣದ ಸೀರೆಗೆ ಚೆನ್ನಾಗಿಯೇ ಒಪ್ಪುತ್ತದೆ. ಸಣ್ಣ ಪ್ರಾಯದ ತರುಣಿಯರಿಗೆ ಗೋಲ್ಡನ್ ಬ್ಲೌಸ್‌ಗೆ ಪಫ್ ರೀತಿ ಹೊಲಿಸಿದರೆ ತುಂಬಾ ಆಕರ್ಷಕ. ಜೊತೆಗೆ ಬ್ಲೌಸ್‌ನ ತೋಳಿಗೆ, ಬೆನ್ನಿನ ಭಾಗದಲ್ಲಿ ಗೋಲ್ಡನ್ ಕಲರ್ ಮಣಿಗಳನ್ನು ಇಟ್ಟು ಹೊಲಿಸಿದರೆ ಮತ್ತೂ ಆಕರ್ಷಕವಾಗಿ ಕಾಣುವುದು.
– ಸ್ವಾತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Forest Department: ಇದ್ದಲ್ಲಿಯೇ ಅರಣ್ಯ ಅಪರಾಧಗಳ ದಾಖಲು: “ಗರುಡಾಕ್ಷಿ’ಗೆ ಚಾಲನೆ
Commission: 60 ಪರ್ಸೆಂಟ್ ಕಮಿಷನ್: ಎಚ್‌ಡಿಕೆ ವಿರುದ್ಧ ಮುಗಿಬಿದ್ದ ಆಡಳಿತ ಪಕ್ಷ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.